logo
ಕನ್ನಡ ಸುದ್ದಿ  /  ಜೀವನಶೈಲಿ  /  Ayudha Pooja 2023: ನವರಾತ್ರಿಯ 9ನೇ ದಿನ ಮನೆಯಲ್ಲೇ ಮಾಡಿ ಆಯುಧ ಪೂಜೆ, ವಾಹನ ಪೂಜೆ ಮಾಡುವ ವಿಧಾನ, ಮುಹೂರ್ತ ತಿಳಿಯಿರಿ

Ayudha Pooja 2023: ನವರಾತ್ರಿಯ 9ನೇ ದಿನ ಮನೆಯಲ್ಲೇ ಮಾಡಿ ಆಯುಧ ಪೂಜೆ, ವಾಹನ ಪೂಜೆ ಮಾಡುವ ವಿಧಾನ, ಮುಹೂರ್ತ ತಿಳಿಯಿರಿ

Praveen Chandra B HT Kannada

Oct 22, 2023 07:08 PM IST

ವಾಹನ ಪೂಜೆಯ ಸಾಂದರ್ಭಿಕ ಚಿತ್ರ (Photo Credit- twitter @Gsjanardhana)

    • Ayudha pooja date 2023: ನವರಾತ್ರಿಯ 9ನೇ ದಿನ ಎಲ್ಲೆಡೆ ಆಯುಧ ಪೂಜೆ, ವಾಹನ ಪೂಜೆಗಳ ಸಂಭ್ರಮ. ಇಂದು ಸಾಕಷ್ಟು ಜನರು ಮನೆಯಲ್ಲೇ ವಾಹನ ಪೂಜೆ, ಆಯುಧ ಪೂಜೆ ಮಾಡುತ್ತಾರೆ. ಆಯುಧ ಪೂಜೆ ಮಾಡುವುದು ಹೇಗೆ? ಆಯುಧ ಪೂಜೆ ಏಕೆ ಮಾಡಬೇಕು, ಮುಹೂರ್ತ ಇತ್ಯಾದಿ ವಿವರ ಇಲ್ಲಿ ನೀಡಲಾಗಿದೆ.
ವಾಹನ ಪೂಜೆಯ ಸಾಂದರ್ಭಿಕ ಚಿತ್ರ (Photo Credit- twitter @Gsjanardhana)
ವಾಹನ ಪೂಜೆಯ ಸಾಂದರ್ಭಿಕ ಚಿತ್ರ (Photo Credit- twitter @Gsjanardhana)

How to perform ayudha pooja at home: ನವರಾತ್ರಿಯ 9ನೇ ದಿನ ಆಯುಧ ಪೂಜೆ ಮಾಡಲು ಈಗಲೇ ಎಲ್ಲೆಡೆ ಸಡಗರ ಆರಂಭವಾಗಿದೆ. ಜನರು ತಮ್ಮ ಪ್ರೀತಿಯ ಕಾರು ಸೈಕಲ್‌ ಲಾರಿ ಆಟೋ ರಿಕ್ಷಾಗಳನ್ನು ತೊಳೆದು ವಾಹನ ಪೂಜೆಗೆ ಸಿದ್ಧರಾಗುತ್ತಿದ್ದಾರೆ. ಮನೆಯ ದೊಡ್ಡವರ ಉತ್ಸಾಹ ನೋಡಿದ ಮನೆಯ ಮಕ್ಕಳು ತಮ್ಮ ಸೈಕಲ್‌, ಆಟಿಕೆ ಇತ್ಯಾದಿಗಳನ್ನು ತೊಳೆದು ಪೂಜೆಗೆ ರೆಡಿ ಮಾಡುತ್ತಿರಬಹುದು. ಮನೆಯಲ್ಲಿ ಇರುವ ಕಂಪ್ಯೂಟರ್‌, ಲ್ಯಾಪ್‌ಟಾಪ್‌, ಮನೆಯ ಬಳಕೆಯ ಯಂತ್ರಗಳನ್ನೂ ಪೂಜೆಗೆ ಸಿದ್ಧಪಡಿಸುತ್ತಿರಬಹುದು.

ಟ್ರೆಂಡಿಂಗ್​ ಸುದ್ದಿ

ನುಡಿಯ ನೇತಾರ ನಾಲಿಗೆ: ಉಪ್ಪು, ಹುಳಿ, ಸಿಹಿ ತಿಳಿಯುವ ಜಿಹ್ವೆಗೆ ಖಾರವೇಕೆ ಗೊತ್ತಾಗಲ್ಲ? ನಾಲಿಗೆ ಬಗ್ಗೆ ನಿಮಗೆಷ್ಟು ಗೊತ್ತು? -ಜ್ಞಾನ ವಿಜ್ಞಾನ

World Hypertension Day: ಸೈಲೆಂಟ್‌ ಕಿಲ್ಲರ್‌ ಆಗಿ ಕಾಡುತ್ತಿದೆ ಅಧಿಕ ರಕ್ತದೊತ್ತಡ; ಆರಂಭಿಕ ಹಂತದ ಈ ಚಿಹ್ನೆಗಳನ್ನ ನಿರ್ಲಕ್ಷ್ಯ ಮಾಡದಿರಿ

Personality Test: ಕರಡಿನಾ ಚಾಕುನಾ, ಚಿತ್ರದಲ್ಲಿ ನಿಮಗೆ ಮೊದಲು ಕಾಣಿಸಿದ್ದೇನು? ನಿಮ್ಮ ಸ್ವಭಾವ ಹೇಗೆ ತಿಳಿಸುತ್ತೆ ಈ ಚಿತ್ರ

ಅಂದ ಹೆಚ್ಚುವುದರಿಂದ ತೂಕ ಇಳಿಯುವ ತನಕ; ಬೇಸಿಗೆಯಲ್ಲಿ ಸೌತೆಕಾಯಿ ತಿನ್ನುವುದರಿಂದಾಗುವ ಪ್ರಯೋಜನಗಳಿವು

ಆಯುಧ ಪೂಜೆಯ ಮಹೂರ್ತ

ನವರಾತ್ರಿಯ ಒಂಬತ್ತನೇ ದಿನ ಆಯುಧ ಪೂಜೆ ಮಾಡಿದರೆ ಉತ್ತಮ ಎನ್ನುವ ನಂಬಿಕೆಯಿದೆ. ಕರ್ನಾಟಕದಲ್ಲಿ ಇಂದು ಸಂಜೆ (ಅಕ್ಟೋಬರ್‌ 22) 7:58 ರಿಂದ ಅಶ್ವಿನಿ ಶುಕ್ಲ ನವಮಿ ಆರಂಭವಾಗುತ್ತದೆ. ನಾಳೆ ಸಂಜೆ 05:44 ಗಂಟೆಗೆ ಈ ಅಶ್ವಿನಿ ನವಮಿ ದಿನಾಂಕ ಮುಕ್ತಾಯವಾಗುತ್ತದೆ. ಅಕ್ಟೋಬರ್‌ 23ರಂದು ಮಧ್ಯಾಹ್ನ 01.58 - ಸಂಜೆ 04.43 ರವರೆಗೆ ಆಯುಧ ಪೂಜೆ ಮುಹೂರ್ತವಿದೆ. ನಾಳೆ ಬೆಳಗ್ಗೆಯಿಂದಲೇ ಆಯುಧ ಪೂಜೆ ಮಾಡಬಹುದು.

ಯಾವೆಲ್ಲ ಆಯುಧಗಳಿಗೆ ಪೂಜೆ ಮಾಡಬಹುದು?

ಮೊದಲೆಲ್ಲ ಯುದ್ಧಕ್ಕೆ ಬಳಸುವ ಆಯುಧಗಳಿಗೆ ಪೂಜೆ ಮಾಡಲಾಗುತ್ತಿತ್ತು. ಈ ಕ್ರಮ ಈಗ ಮೈಸೂರು ಅರಮನೆ ಸೇರಿದಂತೆ ಕೆಲವು ಕಡೆಗಳಲ್ಲಿ ಮಾತ್ರವಿದೆ. ಕೊಡಗಿನಲ್ಲೂ ಕೆಲವು ಕಡೆ ಇಂತಹ ಕ್ರಮಗಳನ್ನು ನೋಡಬಹುದು. ಈಗ ಆಯುಧ ಪೂಜೆಯಂದು ವಿಶೇಷವಾಗಿ ವಾಹನಗಳಿಗೆ ಪೂಜೆ ನಡೆಸಲಾಗುತ್ತದೆ. ಇದರೊಂದಿಗೆ ಮನೆಯಲ್ಲಿರುವ ಕಂಪ್ಯೂಟರ್‌, ಲ್ಯಾಪ್‌ಟಾಪ್‌ ಮತ್ತು ಇತರೆ ಗ್ಯಾಡ್ಜೆಟ್‌ಗಳಿಗೂ ಪೂಜೆ ಮಾಡಬಹುದು. ಪೆನ್ನು, ಚಾಕು, ಕತ್ತರಿ, ಸಂಗೀತ ಉಪಕರಣಗಳು, ಗೃಹಬಳಕೆಯ ಉಪಕರಣಗಳು, ಕೃಷಿ ಉಪಕರಣಗಳು ಸೇರಿದಂತೆ ವಿವಿಧ ವಸ್ತುಗಳಿಗೂ ಪೂಜೆ ಸಲ್ಲಿಸಬಹುದು.

ಮನೆಯಲ್ಲೇ ಆಯುಧ ಪೂಜೆ ಮಾಡಿ

ನಾಳೆ ಸಾಕಷ್ಟು ಜನರು ದೇಗುಲಕ್ಕೆ ಹೋಗಿ ವಾಹನ ಪೂಜೆ ಕೈಗೊಳ್ಳಬಹುದು. ದೇವಾಲಯಗಳಲ್ಲಿ ನಾಳೆ ಸಖತ್‌ ರಶ್‌ ಇರುತ್ತದೆ, ಮನೆಯಲ್ಲೇ ಮಾಡೋಣ ಇಂದು ಇನ್ನೂ ಸಾಕಷ್ಟು ಜನರು ಮನೆಯಲ್ಲೇ ವಾಹನ ಪೂಜೆ ಕೈಗೊಳ್ಳುತ್ತಾರೆ. ಬೆಂಗಳೂರಿನಂತಹ ನಗರಗಳ ಬೀದಿಬೀದಿಗಳಲ್ಲಿ ವಾಹನ ತೊಳೆಯುವುದು, ಕುಂಬಳಕಾಯಿ ಒಡೆಯುವುದು, ವಾಹನ ಪೂಜೆ ಮಾಡುವುದು ಇತ್ಯಾದಿ ದೃಶ್ಯಗಳು ಸಾಮಾನ್ಯವಾಗಿದೆ.

ಆಯುಧ ಪೂಜೆ/ ವಾಹನ ಪೂಜೆ ಮಾಡುವುದು ಹೇಗೆ?

ಆಯುಧ ಪೂಜೆ ಮಾಡುವ ರೀತಿ ಒಬ್ಬರೊಬ್ಬರು ಒಂದೊಂದು ರೀತಿ ಮಾಡಬಹುದು. ಮೊದಲಿಗೆ ಆಯುಧವನ್ನು ಶುಚಿಗೊಳಿಸಬೇಕು. ವಾಹನಗಳಾದರೆ ತೊಳೆಯಬಹುದು. ಕಂಪ್ಯೂಟರ್‌ನಂತಹ ಸಾಧನಗಳನ್ನು ಒರೆಸಿದರೆ ಸಾಕು. ಬೆಳಗ್ಗೆ ಬೇಗ ಎದ್ದು, ಜಳಕ ಮಾಡಿ ಶುಭ್ರಬಟ್ಟೆ ಧರಿಸಿ, ದೇವರ ಕೋಣೆಯನ್ನು ಸ್ವಚ್ಛಗೊಳಿಸಿ ನಿತ್ಯ ಪೂಜೆ ಮುಗಿಸಿ. ಎಲ್ಲಾ ಆಯುಧಗಳಿಗೆ ಗಂಗಾಜಲ ಸಿಂಪಡಿಸಿ. ಗಂಗಾಜಲ ಇಲ್ಲದೆ ಇದ್ದರೆ ಕುಂಕುಮದ ನೀರು ಸಿಂಪಡಿಸಬಹುದು. ವಾಹನ ಅಥವಾ ಆಯುಧಗಳನ್ನು ಹೂವುಗಳಿಂದ ಅಲಂಕರಿಸಿ. ಆಯುಧಗಳಿಗೆ ಕುಂಕುಮ, ತಿಲಕ ಹಚ್ಚಿ. ಮಹಾಕಾಳಿ ಸ್ತ್ರೋತ್ರ ಪಠಿಸಿ. ಆಯುಧಗಳಿಗೆ ಆರತಿ ಮಾಡಿ. ಆಯುಧ ಪೂಜೆ ಮಾಡಿದ ದಿನ ಆ ಆಯುಧಗಳನ್ನು ಬಳಸಬೇಡಿ.

ಆಯುಧ ಪೂಜೆ ಮಾಡುವ ವಿಧಾನ, ಆಯುಧ ಪೂಜೆ ಮಾಡಲು ಬೇಕಾಗುವ ಸಾಮಾಗ್ರಿಗಳು, ಆಯುಧ ಪೂಜೆ ಮಾಡುವ ಕ್ರಮಗಳ ಕುರಿತು ಈಗಾಗಲೇ ಹಿಂದೂಸ್ತಾನ್‌ ಟೈಮ್ಸ್‌ ಕನ್ನಡವು ವಿವರವಾದ ಲೇಖನ ಬರೆದಿದ್ದು, ಅದನ್ನು ಓದಲು ಇಲ್ಲಿ ಕ್ಲಿಕ್‌ ಮಾಡಬಹುದು.

    ಹಂಚಿಕೊಳ್ಳಲು ಲೇಖನಗಳು