logo
ಕನ್ನಡ ಸುದ್ದಿ  /  Lifestyle  /  Health News Stronger Bones Morning Routine To Increase Bone Density Drinking Water Calcium Food Kannada News Rst

Stronger Bones: ಮೂಳೆಗಳ ಸಾಂದ್ರತೆ ವೃದ್ಧಿಗೆ ಹೀಗಿರಲಿ ನಿಮ್ಮ ಬೆಳಗಿನ ದಿನಚರಿ

Reshma HT Kannada

May 26, 2023 07:24 AM IST

ಮೂಳೆಗಳ ಸಾಂದ್ರತೆ ವೃದ್ದಿಗೆ ಬೆಳಗಿನ ದಿನಚರಿಯಲ್ಲಿ ಈ ಕ್ರಮಗಳನ್ನು ಅನುಸರಿಸಿ

    • Morning Routine Increase Bone Density: ಮೂಳೆಗಳ ಆರೋಗ್ಯ ವೃದ್ಧಿಗೆ ನಮ್ಮ ಬೆಳಗಿನ ದಿನಚರಿಯಲ್ಲಿ ಕೆಲವೊಂದು ಅಭ್ಯಾಸಗಳನ್ನು ರೂಡಿಸಿಕೊಳ್ಳಬೇಕು. ಹದಿ ವಯಸ್ಸಿನಿಂದಲೇ ಈ ದಿನಚರಿಯನ್ನು ಪಾಲಿಸುವುದರಿಂದ ಮೂಳೆಗಳ ಆರೋಗ್ಯ ವೃದ್ಧಿಯಾಗುತ್ತದೆ.  
ಮೂಳೆಗಳ ಸಾಂದ್ರತೆ ವೃದ್ದಿಗೆ ಬೆಳಗಿನ ದಿನಚರಿಯಲ್ಲಿ ಈ ಕ್ರಮಗಳನ್ನು ಅನುಸರಿಸಿ
ಮೂಳೆಗಳ ಸಾಂದ್ರತೆ ವೃದ್ದಿಗೆ ಬೆಳಗಿನ ದಿನಚರಿಯಲ್ಲಿ ಈ ಕ್ರಮಗಳನ್ನು ಅನುಸರಿಸಿ

ದೇಹದ ಪ್ರತಿಯೊಂದು ಭಾಗವನ್ನು ಆರೋಗ್ಯವಾಗಿರಿಸಿಕೊಳ್ಳುವುದು ಬಹಳ ಅವಶ್ಯ. ದೇಹದಲ್ಲಿ ಮೂಳೆಗಳು ಅದ್ಭುತ ಕೆಲಸಗಳನ್ನು ಮಾಡುತ್ತವೆ. ಅವು ನಮಗೆ ಹಲವು ರೀತಿಯಲ್ಲಿ ಸಹಾಯ ಮಾಡುತ್ತವೆ. ಅವು ಚಲನೆಗೆ ಅವಕಾಶ ನೀಡುತ್ತವೆ, ಮೆದುಳು ಹಾಗೂ ಪ್ರಮುಖ ಅಂಗಗಳನ್ನು ರಕ್ಷಿಸುತ್ತವೆ ಹಾಗೂ ಅಗತ್ಯ ಖನಿಜಗಳನ್ನು ಸಂಗ್ರಹಿಸುತ್ತವೆ. ಆದರೆ ವಯಸ್ಸಾದಂತೆ ಮೂಳೆಗಳ ಸಾಂಧ್ರತೆ ಕಡಿಮೆಯಾಗುತ್ತದೆ. ಮೂಳೆಗಳು ದುರ್ಬಲವಾಗಿ, ಮೂಳೆ ಮುರಿತ, ಪೆಟ್ಟಾಗುವುದು ಇಂತಹ ತೊಂದರೆಗಳಿಗೆ ಕಾರಣವಾಗಬಹುದು.

ಟ್ರೆಂಡಿಂಗ್​ ಸುದ್ದಿ

Flax Seeds: ಆರೋಗ್ಯಕಷ್ಟೇ ಅಲ್ಲ, ಅಂದಕ್ಕೂ ಬೇಕು ಅಗಸೆ ಬೀಜ; ಚರ್ಮ, ಕೂದಲಿನ ಕಾಂತಿ ಹೆಚ್ಚಲು ಇದನ್ನು ಹೀಗೆ ಬಳಸಿ

Egg Chat Recipe: ಮೊಟ್ಟೆ ತಿನ್ನೊಲ್ಲ ಅಂತ ಮಕ್ಕಳು ಹಟ ಮಾಡ್ತಾರಾ, ಈ ರೀತಿ ಎಗ್‌ ಚಾಟ್‌ ಮಾಡಿಕೊಡಿ, ಮತ್ತೂ ಬೇಕು ಅಂತ ತಿಂತಾರೆ

ಅತಿಕಾಮದ ದೌರ್ಬಲ್ಯ: ಲೈಂಗಿಕ ಶೋಷಣೆಯನ್ನೇ ವ್ಯಸನವಾಗಿಸಿಕೊಳ್ಳುವ ಕಾಮಪಿಪಾಸೆಯೂ ರೋಗ, ಚಿಕಿತ್ಸೆಯ ಜೊತೆಗೆ ಶಿಕ್ಷೆಯೂ ಕೊಡಬೇಕು

Summer Tips: ಬೇಸಿಗೆಯಲ್ಲಿ ಪ್ರತಿದಿನ ಮಾವಿನಕಾಯಿ ತಿಂದ್ರೆ ದೇಹದಲ್ಲಿ ಏನೆಲ್ಲಾ ಬದಲಾವಣೆಗಳಾಗುತ್ತವೆ ನೋಡಿ

ಆದರೆ ಬೆಳಗಿನ ದಿನಚರಿಯಲ್ಲಿ ಕೆಲವು ಕ್ರಮಗಳನ್ನು ಅನುಸರಿಸುವ ಮೂಲಕ ಮೂಳೆಗಳ ಆರೋಗ್ಯವನ್ನು ಸಂರಕ್ಷಿಸಬಹುದು ಮತ್ತು ಮೂಳೆಗಳ ಸಾಂದ್ರತೆಯನ್ನು ಸುಧಾರಿಸಬಹುದು.

ತಜ್ಞರ ಪ್ರಕಾರ, ಪ್ರತಿದಿನ ಬೆಳಿಗ್ಗೆ ನೀವು ಈ ಸೂತ್ರಗಳನ್ನು ಅನುಸರಿಸಬೇಕು. ಇದನ್ನು ತಪ್ಪದೇ ಮಾಡುವುದರಿಂದ ಮೂಳೆಗಳ ಸಾಂದ್ರತೆ ವೃದ್ಧಿಯಾಗುತ್ತದೆ. ಈ ಸರಳ ವಿಧಾನಗಳು ಮೂಳೆಗಳ ಆರೋಗ್ಯ ವೃದ್ಧಿಯ ಜೊತೆಗೆ ಒಟ್ಟಾರೆ ಆರೋಗ್ಯಕ್ಕೂ ಉತ್ತಮ.

ಒಂದು ಲೋಟ ನೀರಿನೊಂದಿಗೆ ದಿನ ಆರಂಭಿಸಿ

ಬೆಳಿಗ್ಗೆ ಎದ್ದ ಕೂಡಲೇ ಒಂದು ಲೋಟ ನೀರು ಕುಡಿಯಬೇಕು. ಇದು ನಿಮ್ಮ ಒಟ್ಟಾರೆ ಆರೋಗ್ಯಕ್ಕೆ ಮಾತ್ರವಲ್ಲ; ಮೂಳೆ ಆರೋಗ್ಯಕ್ಕೂ ಬಹಳ ಉತ್ತಮ. ಯುನೈಟೆಡ್ ಸ್ಟೇಟ್ಸ್ ಜಿಯೋಲಾಜಿಕಲ್ ಸರ್ವೆ ಪ್ರಕಾರ, ಮೂಳೆಗಳು ಭಾಗಶಃ ನೀರಿನಿಂದ ರಚಿಸ್ಪಟ್ಟಿವೆ. ಇವು ಖನಿಜಗಳನ್ನು ಸಂಗ್ರಹಿಸುವುದು ಮತ್ತು ಮೂಳೆ ಮಜ್ಜೆಯೊಳಗೆ ಕೆಂಪು ರಕ್ತ ಕಣಗಳನ್ನು ತಯಾರಿಸುವಂತಹ ನಿರ್ದಿಷ್ಟ ಕೆಲಸಗಳನ್ನು ಮಾಡಲು ಅವುಗಳಿಗೆ ನೀರಿನ ಅಗತ್ಯವಿದೆ. ನ್ಯಾಷನಲ್ ಲೈಬ್ರರಿ ಆಫ್ ಮೆಡಿಸಿನ್ (NLM) ಪ್ರಕಾರ, ನೀವು ಸೇವಿಸುವ ಆಹಾರಗಳಲ್ಲಿನ ಕ್ಯಾಲ್ಸಿಯಂನ 99 ಪ್ರತಿಶತವನ್ನು ನೀರು ನಿಮ್ಮ ಮೂಳೆಗಳಿಗೆ ಸಾಗಿಸುತ್ತದೆ, ಆದ್ದರಿಂದ ಉತ್ತಮ ಸರಿಯಾಗಿ ನೀರು ಕುಡಿಯುವುದರಿಂದ ಮೂಳೆಗಳ ಸಾಮರ್ಥ್ಯ ವೃದ್ಧಿಯಾಗುತ್ತದೆ.

ಕ್ಯಾಲ್ಸಿಯಂ ಸಮೃದ್ಧ ಉಪಾಹಾರ ಸೇವಿಸಿ

ಮೂಳೆಗಳ ಆರೋಗ್ಯಕ್ಕೆ ಕ್ಯಾಲ್ಸಿಯಂ ಬಹಳ ಅವಶ್ಯ ಹಾಗೂ ಇದು ಬಹಳ ಮುಖ್ಯವಾದ ಪೋಷಕಾಂಶವೂ ಹೌದು. ಇದು ಮೂಳೆಗಳನ್ನು ಗಟ್ಟಿಯಾಗಿಸುತ್ತದೆ, ಅಲ್ಲದೆ ಬಲಗೊಳಿಸಲು ನೆರವಾಗುತ್ತದೆ. ಅದಕ್ಕಾಗಿ ಪ್ರತಿದಿನ ಕ್ಯಾಲ್ಸಿಯಂ ಸಮೃದ್ಧ ಆಹಾರ ಸೇವನೆ ಅಗತ್ಯ. ನಮ್ಮ ಬೆಳಗಿನ ಉಪಾಹಾರದ ಮೂಲಕವೇ ಕ್ಯಾಲ್ಸಿಯಂ ಯುಕ್ತ ಆಹಾರ ಸೇವಿಸುವುದು ಬಹಳ ಅವಶ್ಯ. ಹಾಲು, ಚೀಸ್‌, ಮೊಸರು ಮುಂತಾದ ಡೇರಿ ಉತ್ಪನ್ನಗಳಲ್ಲಿ ಕ್ಯಾಲ್ಸಿಯಂ ಅಂಶ ಹೆಚ್ಚಿದೆ. ಕಿತ್ತಳೆ ರಸ, ಸೊಪ್ಪು, ಬಾದಾಮಿ, ಸಾಲ್ಮನ್‌ನಂತಹ ಕೊಬ್ಬಿನಾಂಶ ಇರುವ ಮೀನುಗಳಲ್ಲೂ ಕೊಬ್ಬಿನಾಂಶ ಇರುತ್ತವೆ.

ಮೂಳೆಗಳನ್ನು ಬಲಪಡಿಸುವ ವ್ಯಾಯಾಮಗಳನ್ನು ಮಾಡಿ

ವ್ಯಾಯಾಮ ಮಾಡುವುದು ಮೂಳೆಗಳ ಆರೋಗ್ಯಕ್ಕೆ ಉತ್ತಮ. ಆದರೆ ಕೆಲವೊಂದು ನಿರ್ದಿಷ್ಟ ವ್ಯಾಯಾಮಗಳು ಮೂಳೆಗಳ ಸಾಂದ್ರತೆಯನ್ನು ಹೆಚ್ಚಿಸುತ್ತದೆ. ಅವು ಮೂಳೆಗಳನ್ನು ಬಲಪಡಿಸುವ ಜೊತೆಗೆ ಬೆಳವಣಿಗೆಯನ್ನು ಉತ್ತೇಜಿಸುತ್ತದೆ. ವೇಟ್‌ಲಿಫ್ಟಿಂಗ್‌ನಂತಹ ಭಾರ ಎತ್ತುವ ವ್ಯಾಯಾಮಗಳು ಮೂಳೆಗಳನ್ನು ಬಲಪಡಿಸಲು ಸಹಾಯ ಮಾಡುತ್ತವೆ. ಜೊತೆಗೆ ಇವು ಆಸ್ಟಿಯೊಪೊರೋಸಿಸ್‌ ಅಪಾಯವನ್ನು ಕಡಿಮೆ ಮಾಡುತ್ತವೆ.

ಸೂರ್ಯನ ಎಳೆ ಬಿಸಿಲಿಗೆ ತೆರೆದುಕೊಳ್ಳಿ

ಸೂರ್ಯನ ಎಳೆ ಬಿಸಿಲಿನಲ್ಲಿ ಓಡಾಡುವುದು ಮಾನಸಿಕ ಆರೋಗ್ಯ ವೃದ್ಧಿ, ವಿಟಮಿನ್‌ ಪಡೆಯಲು ಮಾತ್ರವಲ್ಲ, ಮೂಳೆಗಳ ಆರೋಗ್ಯಕ್ಕೂ ಇವು ಉತ್ತಮ. ಸೂರ್ಯನ ಬಿಸಿಲಿನಲ್ಲಿ ವಿಟಮಿನ್‌ ಡಿ ಉತ್ಪತ್ತಿಯಾಗುತ್ತದೆ. ಇದು ಪರೋಕ್ಷವಾಗಿ ಮೂಳೆಯ ಸಾಂದ್ರತೆ ವೃದ್ಧಿಗೆ ಸಹಾಯ ಮಾಡುತ್ತದೆ. ವಿಟಮಿನ್‌ ಡಿ ಕೊರತೆಯಿಂದ ದೇಹವು ಆಹಾರದಿಂದ ಕ್ಯಾಲ್ಸಿಯಂ ಹೀರಿಕೊಳ್ಳುವಲ್ಲಿ ಅಸಮರ್ಥವಾಗಬಹುದು. ಇದರಿಂದ ಮೂಳೆಗಳು ದುರ್ಬಲಗೊಳ್ಳುವ ಸಾಧ್ಯತೆ ಹೆಚ್ಚು.

ಸರಿಯಾದ ಭಂಗಿಯಲ್ಲಿ ಕುಳಿತುಕೊಳ್ಳುವುದನ್ನು ಅಭ್ಯಾಸ ಮಾಡಿ

ಬೆಳಗಿನಿಂದ ಸಂಜೆಯವರೆಗೆ ಭಂಗಿಯಲ್ಲಿ ಕುಳಿತುಕೊಳ್ಳುವುದು ಸಹ ಬಹಳ ಅವಶ್ಯ. ನಾವು ಕುಳಿತುಕೊಳ್ಳುವ ಭಂಗಿಯು ನಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರಬಹುದು. ಆ ಕಾರಣಕ್ಕೆ ಸಾಧ್ಯವಾದಷ್ಟು ಬೆನ್ನುಮೂಳೆ ನೇರವಾಗಿ ಇರುವಂತೆ ಕುಳಿತುಕೊಳ್ಳುವುದು ಬಹಳ ಅವಶ್ಯ. ನಡೆಯುವಾಗ, ಓಡಾಡುವಾಗ ಎಲ್ಲಾ ಸಮಯದಲ್ಲೂ ನಮ್ಮ ಭಂಗಿ ಮುಖ್ಯವಾಗುತ್ತದೆ. ಇದು ಬೆಳಿಗ್ಗೆ ಎದ್ದ ಕ್ಷಣದಿಂದ ರಾತ್ರಿವರೆಗೆ ಅಭ್ಯಾಸ ಮಾಡಬೇಕು.

ಕೆಫಿನ್‌ ಸೇವನೆ ಕಡಿಮೆ ಮಾಡಿ

ಕಾಫಿ ಅಥವಾ ಟೀ ಸೇವನೆ ಬಹುತೇಕ ಬೆಳಗಿನ ದಿನಚರಿಯ ಅವಿಭಾಜ್ಯ ಅಂಗ. ಆದರೆ ಇದು ಖಂಡಿತ ಒಳ್ಳೆಯದಲ್ಲ. ದೇಹದಲ್ಲಿ ಸಂಗ್ರಹವಾಗುವ ಕೆಫಿನ್‌ ಅಂಶವು ಮೂಳೆಗಳ ಆರೋಗ್ಯದ ಮೇಲೆ ಪರಿಣಾಮ ಬೀರುತ್ತವೆ ಎಂದು ಹಲವು ಅಧ್ಯಯನಗಳು ಸಾಬೀತು ಪಡಿಸಿವೆ. ಅಮೆರಿಕದ ಮೇಯೊ ಕ್ಲಿನಿಕ್‌ ಪ್ರಕಾರ ಕೆಫಿನ್‌ ಯುಕ್ತ ಪಾನೀಯಗಳ ಸೇವನೆಯು ಮೂತ್ರದ ಮೂಲಕ ಕ್ಯಾಲ್ಸಿಯಂ ದೇಹದಿಂದ ಹೊರ ಹೋಗುತ್ತದೆ. ಆದರೆ ಪ್ರತಿದಿನ 2 ರಿಂದ 3 ಸಣ್ಣ ಕಪ್‌ ಚಹಾ ಅಥವಾ ಕಾಫಿ ಕುಡಿಯುವುದರಿಂದ ತೊಂದರೆಯಾಗುವುದಿಲ್ಲ ಎಂದು ಅವರು ಹೇಳುತ್ತಾರೆ. ಆ ಕಾರಣಕ್ಕೆ ಸಂಪೂರ್ಣವಾಗಿ ತ್ಯಜಿಸುವುದಕ್ಕಿಂತ ಮಿತವಾಗಿ ಸೇವಿಸುವುದು ಉತ್ತಮ.

ವಿಭಾಗ

    ಹಂಚಿಕೊಳ್ಳಲು ಲೇಖನಗಳು