logo
ಕನ್ನಡ ಸುದ್ದಿ  /  ಜೀವನಶೈಲಿ  /  ಕ್ಯಾರೆಟ್​​ ತಿನ್ನುವ ಸರಿಯಾದ ವಿಧಾನ ಯಾವುದು? ಹೆಚ್ಚಿನ ಆರೋಗ್ಯ ಪ್ರಯೋಜನ ಪಡೆಯಲು ಹೀಗೆ ಮಾಡಿ

ಕ್ಯಾರೆಟ್​​ ತಿನ್ನುವ ಸರಿಯಾದ ವಿಧಾನ ಯಾವುದು? ಹೆಚ್ಚಿನ ಆರೋಗ್ಯ ಪ್ರಯೋಜನ ಪಡೆಯಲು ಹೀಗೆ ಮಾಡಿ

HT Kannada Desk HT Kannada

Dec 16, 2023 04:42 PM IST

ಕ್ಯಾರೆಟ್​​ ತಿನ್ನುವ ಸರಿಯಾದ ವಿಧಾನ ಯಾವುದು (istockphoto)

    • Right way to eat carrot: ಕ್ಯಾರೆಟ್​ಗಳು ಆರೋಗ್ಯದ ದೃಷ್ಟಿಯಿಂದ ಉತ್ತಮ ಆಹಾರ ಪದಾರ್ಥಗಳ ಸಾಲಿಗೆ ಸೇರುತ್ತದೆ. ಕ್ಯಾರೆಟ್​ ಅನ್ನು ನಾನಾ ವಿಧದಲ್ಲಿ ಸೇವನೆ ಮಾಡಬಹುದು . ಆದರೆ ಯಾವ ರೀತಿಯಲ್ಲಿ ಕ್ಯಾರೆಟ್​ಗಳನ್ನು ಸೇವನೆ ಮಾಡಿದರೆ ಆರೋಗ್ಯಕ್ಕೆ ಒಳ್ಳೆಯದು ಎನ್ನುವುದಕ್ಕೆ ಮಾಹಿತಿ ಇಲ್ಲಿದೆ ನೋಡಿ
ಕ್ಯಾರೆಟ್​​ ತಿನ್ನುವ ಸರಿಯಾದ ವಿಧಾನ ಯಾವುದು (istockphoto)
ಕ್ಯಾರೆಟ್​​ ತಿನ್ನುವ ಸರಿಯಾದ ವಿಧಾನ ಯಾವುದು (istockphoto)

ಕ್ಯಾರೆಟ್​ ಅತ್ಯಂತ ಉಪಯೋಗಕಾರಿ ಆಹಾರ ಪದಾರ್ಥ ಅನ್ನೋದ್ರಲ್ಲಿ ಎರಡು ಮಾತಿಲ್ಲ. ಈಗ ಚಳಿಗಾಲವಿದ್ದು ಕ್ಯಾರೆಟ್​ಗಳ ಸೀಸನ್​ ಎಂದು ಹೇಳಿದರೆ ತಪ್ಪಾಗುವುದಿಲ್ಲ. ನೀವು ಕ್ಯಾರೆಟ್​ಗಳಲ್ಲಿ ಸಲಾಡ್​, ಜ್ಯೂಸ್​ ಅಥವಾ ಭಾರತೀಯರಿಗೆ ಅತ್ಯಂತ ಪ್ರಿಯವಾದ ಕ್ಯಾರೆಟ್​ ಹಲ್ವಾ ಮಾಡಿ ಸೇವಿಸುತ್ತೀರಾ. ಆದರೆ ಯಾವ ರೀತಿಯಲ್ಲಿ ಕ್ಯಾರೆಟ್​ಗಳನ್ನು ಸೇವಿಸಿದರೆ ನಿಮಗೆ ಹೆಚ್ಚಿನ ಆರೋಗ್ಯ ಪ್ರಯೋಜನ ಸಿಗಬಹುದು ಎಂಬುದನ್ನು ತಿಳಿದುಕೊಳ್ಳೋಣ

ಟ್ರೆಂಡಿಂಗ್​ ಸುದ್ದಿ

ಮಾವಿನಹಣ್ಣಿನಿಂದ ತಯಾರಿಸಬಹುದು ಒಂದಲ್ಲ, ಎರಡಲ್ಲ ಮೂರು ಬಗೆಯ ಪಾಯಸ; ಈ ಭಾನುವಾರ ನೀವೂ ಮನೆಯಲ್ಲಿ ಟ್ರೈ ಮಾಡಿ, ರೆಸಿಪಿ ಇಲ್ಲಿದೆ

Relationship tips: ವರ್ಷಗಳು ಸರಿದರೂ ದಾಂಪತ್ಯದಲ್ಲಿ ಪ್ರೀತಿಯ ತಾಜಾತನ ಉಳಿಬೇಕು ಅಂದ್ರೆ ಈ 4 ನಿಯಮಗಳನ್ನು ತಪ್ಪದೇ ಪಾಲಿಸಿ

Personality Test: ಚಿತ್ರವನ್ನು ಕಂಡಾಕ್ಷಣ ನಿಮಗೆ ಮೊದಲು ಕಂಡಿದ್ದೇನು? ನಿಮ್ಮ ವ್ಯಕ್ತಿತ್ವದ ಕುರಿತ ರಹಸ್ಯ ವಿಚಾರ ತಿಳಿಸುತ್ತೆ ಈ ಚಿತ್ರ

Brain Teaser: 212=25, 214=47 ಆದ್ರೆ, 215 = ಎಷ್ಟು? ಗಣಿತದಲ್ಲಿ ನೀವು ಜಾಣರಾದ್ರೆ 10 ಸೆಕೆಂಡ್‌ನಲ್ಲಿ ಉತ್ತರ ಹೇಳಿ

ಕ್ಯಾರೆಟ್​ಗಳನ್ನು ನೀವು ಯಾವ ರೀತಿಯಲ್ಲಿ ಸೇವಿಸುತ್ತೀರಿ ಎಂಬುದರ ಮೇಲೆ ಅದರಲ್ಲಿರುವ ಗ್ಲೈಸಮಿಕ್​ ಅಂಶ ನಿರ್ಧಾರವಾಗುತ್ತದೆ. 16 ರಿಂದ 60ರವರೆಗಿನ ಇಂಡೆಕ್ಸ್​​​ನ ಮೇಲೆ ಕ್ಯಾರೆಟ್​​ಗಳ ಗ್ಲೈಸಮಿಕ್​ ಇಂಡೆಕ್ಸ್​ ಬದಲಾಗುತ್ತಾ ಹೋಗಬಹುದು. ಕ್ಯಾರಟ್​ನಲ್ಲಿ ಸುಮಾರು 10 ಪ್ರತಿಶತ ಕಾರ್ಬೋಹೈಡ್ರೇಟ್​​ಗಳು ಹಾಗೂ 2 ಪ್ರತಿಶತ ಫೈಬರ್​ ಅಂಶ ಇರುತ್ತದೆ.

ನೀವು ಕ್ಯಾರೆಟ್​ಗಳನ್ನು ಹಾಗೆಯೇ ತಿನ್ನಬೇಕು ಎಂದೇನಿಲ್ಲ. ಸಣ್ಣಗೆ ಕತ್ತರಿಸಿ ಅದನ್ನು ಸ್ವಲ್ಪವೇ ಸ್ವಲ್ಪ ಆಲಿವ್​ ಎಣ್ಣೆಯಲ್ಲಿ ಫ್ರೈ ಮಾಡಿ ಕೂಡ ತಿನ್ನಬಹುದಾಗಿದೆ. ಕಚ್ಛಾ ಕ್ಯಾರೆಟ್​ ತಿನ್ನುತ್ತಿದ್ದೀರೆಂದರೆ ಅದರ ಸಿಪ್ಪೆಗಳನ್ನು ತುರಿದು ತಿನ್ನುವುದು ಸರಿಯಾದ ಕ್ರಮವಲ್ಲ. ನಿಮ್ಮ ದೇಹದಲ್ಲಿ ಫೈಬರ್ ಅಂಶ ಹೆಚ್ಚಾಗಬೇಕು ಎಂದರೆ ನೀವು ಅದರ ಚರ್ಮ ಸುಲಿಯದೇ ತಿನ್ನಬೇಕು. ಕ್ಯಾರೆಟ್​ ಹಲ್ವಾ ಇಷ್ಟಪಡುವವರು ಅದರಿಂದ ಆರೋಗ್ಯ ಪ್ರಯೋಜನವನ್ನೂ ಪಡೆಯಬೇಕು ಎಂದುಕೊಂಡಿದ್ದರೆ ಅದಕ್ಕೆ ಅತಿಯಾಗಿ ಸಕ್ಕರೆ ಸೇರಿಸುವುದನ್ನು ನಿಲ್ಲಿಸಬೇಕು. ಒಂದು ಕಪ್​ಗಿಂತ ಜಾಸ್ತಿ ಹಲ್ವಾ ಸೇವನೆ ಆರೋಗ್ಯದ ದೃಷ್ಟಿಯಿಂದ ಒಳ್ಳೆಯದಲ್ಲ.

ಸರಿಯಾದ ರೀತಿಯಲ್ಲಿ ನೀವು ರೆಫ್ರಿಜರೇಟರ್​​ನಲ್ಲಿ ಕ್ಯಾರೆಟ್​ಗಳನ್ನು ಸಂಗ್ರಹಿಸಿ ಇಟ್ಟರೆ ಅದನ್ನು ಹೆಚ್ಚು ದಿನಗಳ ಕಾಲ ಬಾಳಿಕೆ ಬರುತ್ತದೆ. ಇದರಿಂದ ನೀವು ಚಳಿಗಾಲದಲ್ಲಿಯೂ ಕ್ಯಾರೆಟ್​ಗಳ ಸೇವನೆ ಮಾಡಲು ಸಾಧ್ಯವಾಗುತ್ತದೆ. ಬೀಟಾ ಕ್ಯಾರೋಟಿನ್​ ಅಂಶಗಳಿಂದ ಸಮೃದ್ಧವಾಗಿರುವ ಕ್ಯಾರೆಟ್​ಗಳು ಕಣ್ಣಿನ ಆರೋಗ್ಯಕ್ಕೆ ಮತ್ತು ದೇಹದಲ್ಲಿ ಪ್ರತಿರಕ್ಷಣಾ ವ್ಯವಸ್ಥೆಯನ್ನು ಸುಧಾರಿಸಲು ತುಂಬಾನೇ ಸಹಕಾರಿಯಾಗಿದೆ.

ರಕ್ತದಲ್ಲಿ ಸಕ್ಕರೆ ಮಟ್ಟ ಹಾಗೂ​ ಗ್ಲೈಸಮಿಕ್​ ಅಂಶವನ್ನು ಕಡಿಮೆಯಾಗಿಯೇ ಇಟ್ಟುಕೊಳ್ಳಬೇಕು ಎಂದರೆ ಕ್ಯಾರೆಟ್​ಗಳನ್ನು ಅತಿಯಾಗಿ ಬೇಯಿಸಬಾರದು. ಜ್ಯೂಸ್​ ಮಾಡುವ ಸಂದರ್ಭದಲ್ಲಿಯೂ ಸಹ ಫೈಬರ್​ ಅಂಶವನ್ನು ಉಳಿಸಿಕೊಳ್ಳಲು ಹಾಗೂ ಗ್ಲೈಸಮಿಕ್​ ಅಂಶ ಹೆಚ್ಚದಂತೆ ತಡೆಯಲು ಅದನ್ನು ನೀವು ಹೆಚ್ಚು ರಸ ತೆಗೆಯಬೇಡಿ ಎಂದು ಆರೋಗ್ಯ ತಜ್ಞರು ಹೇಳುತ್ತಾರೆ.

ನೀವು ತಯಾರಿಸಿದ ಸಲಾಡ್​ಗಳ ಅಂದವನ್ನು ಹೆಚ್ಚಿಸಲು ಅದರ ಮೇಲೆ ನೀವು ಕ್ಯಾರೆಟ್​ಗಳನ್ನು ತುರಿದು ಹಾಕಬಹುದಾಗಿದೆ. ಇದರಿಂದ ಸಲಾಡ್​ಗಳ ಅಂದ ಹೆಚ್ಚುವುದರ ಜೊತೆಯಲ್ಲಿ ನಿಮಗೆ ಆರೋಗ್ಯ ಪ್ರಯೋಜನ ಕೂಡ ಸಿಗಲಿದೆ .

ಕ್ಯಾರೆಟ್​ನ ರಸದಿಂದ ನೀವು ಹೆಚ್ಚಿನ ಆರೋಗ್ಯ ಪ್ರಯೋಜನವನ್ನು ಪಡೆಯಬಹುದಾಗಿದೆ. ಇದಕ್ಕಾಗಿ ನೀವು ವಿವಿಧ ಹಣ್ಣು ಅಥವಾ ತರಕಾರಿಗಳ ಜ್ಯೂಸ್​ ಮಾಡುವಾಗ ಅದರ ಜೊತೆಯಲ್ಲಿ ಕ್ಯಾರೆಟ್​ ರಸವನ್ನು ಸೇರಿಸಬಹುದಾಗಿದೆ.

    ಹಂಚಿಕೊಳ್ಳಲು ಲೇಖನಗಳು