logo
ಕನ್ನಡ ಸುದ್ದಿ  /  Lifestyle  /  How To Be A Smart Worker: Here Are The Some Tips To Follow

Smart work: ʼಸ್ಮಾರ್ಟ್‌ ವರ್ಕರ್‌ʼ ಆಗುವ ಹಂಬಲವೇ? ಈ ಸೂತ್ರಗಳನ್ನು ಅನುಸರಿಸಿ

HT Kannada Desk HT Kannada

Feb 28, 2023 08:47 AM IST

ಕಚೇರಿ ಕೆಲಸ

    • ಉತ್ಪಾದಕತೆ ಎಂದರೆ ಬೆಳಗಿನ ಜಾವದಲ್ಲೇ ಎದ್ದು ಕೆಲಸ ಆರಂಭಿಸಿ, ರಾತ್ರಿ ಮಲಗುವವರೆಗೂ ಕೆಲಸ ಮಾಡುವುದು ಎಂದರ್ಥವಲ್ಲ. ಜಾಣ್ಮೆಯಿಂದ ಕೆಲಸಗಳನ್ನು ನಿಭಾಯಿಸುವ ತಂತ್ರಗಳನ್ನು ಕಲಿಯಬೇಕು. ಪ್ರತಿಯೊಂದು ವಿಚಾರದಲ್ಲಿ ಜಾಣತನ ತೋರಿದಾಗ ಕೆಲಸದಲ್ಲಿ ಮಾತ್ರವಲ್ಲ, ಜೀವನದಲ್ಲೂ ಯಶಸ್ಸು ಗಳಿಸಬಹುದು.
ಕಚೇರಿ ಕೆಲಸ
ಕಚೇರಿ ಕೆಲಸ

ಮನುಷ್ಯ ಕ್ರಿಯಾಶೀಲನಾಗಿದಷ್ಟು ಮನಸ್ಸು, ದೇಹ ಎರಡೂ ಚುರುಕಾಗಿರುತ್ತದೆ. ಮನಸ್ಸಿನ ಜಡತ್ವ ಎನ್ನುವುದು ದೇಹವನ್ನೂ ಬಾಧಿಸಬಹುದು. ಹಾಗಾಗಿ ಮನಸ್ಸಿಗೆ ಮೊದಲು ಸಾಣೆ ಹಿಡಿಯಬೇಕು. ಆ ಮೂಲಕ ವೃತ್ತಿ, ವೈಯಕ್ತಿಕ ಜೀವನ ಹಾಗೂ ಸಾಮಾಜಿಕ ಜೀವನದಲ್ಲಿ ಯಶಸ್ಸು ಗಳಿಸಲು ಸಾಧ್ಯ.

ಟ್ರೆಂಡಿಂಗ್​ ಸುದ್ದಿ

Vitamin D Deficiency: ವಿಟಮಿನ್‌ ಡಿ ಕೊರತೆಯಿಂದ ಕಾಡಬಹುದು ಫ್ಯಾಟಿ ಲಿವರ್‌ ಸಮಸ್ಯೆ, ಸಮತೋಲಿತ ಆಹಾರ ಸೇವನೆಗೆ ನೀಡಿ ಒತ್ತು

Vampire Facials: ವಾಂಪೈರ್‌ ಫೇಶಿಯಲ್‌ ಮಾಡಿಸೋದ್ರಿಂದ ಎಚ್‌ಐವಿ ಸೋಂಕು ಹರಡಬಹುದು ಎಚ್ಚರ, ಸೌಂದರ್ಯಕ್ಕಿಂತ ಆರೋಗ್ಯ ಮುಖ್ಯ ಮರಿಬೇಡಿ

Nail Health: ಉಗುರಿನ ಬಣ್ಣ-ಆಕಾರ ಬದಲಾದ್ರೆ ನಿರ್ಲಕ್ಷ್ಯ ಮಾಡ್ಬೇಡಿ, ಈ ಆರೋಗ್ಯ ಸಮಸ್ಯೆಗಳನ್ನು ಸೂಚಿಸಬಹುದು ಗಮನಿಸಿ

Travel Tips: ಬೇಸಿಗೆಯಲ್ಲಿ ಪ್ರವಾಸ ಮಾಡುವವರು ತಪ್ಪದೇ ಪಾಲಿಸಬೇಕಾದ ಮಹತ್ವದ ಸಲಹೆಗಳಿವು

ಉತ್ಪಾದಕತೆ ಎಂದರೆ ಬೆಳಗಿನ ಜಾವದಲ್ಲೇ ಎದ್ದು ಕೆಲಸ ಆರಂಭಿಸಿ, ರಾತ್ರಿ ಮಲಗುವವರೆಗೂ ಕೆಲಸ ಮಾಡುವುದು ಎಂದರ್ಥವಲ್ಲ. ಜಾಣ್ಮೆಯಿಂದ ಕೆಲಸಗಳನ್ನು ನಿಭಾಯಿಸುವ ತಂತ್ರಗಳನ್ನು ಕಲಿಯಬೇಕು. ಪ್ರತಿಯೊಂದು ವಿಚಾರದಲ್ಲಿ ಜಾಣತನ ತೋರಿದಾಗ ಕೆಲಸದಲ್ಲಿ ಮಾತ್ರವಲ್ಲ, ಜೀವನದಲ್ಲೂ ಯಶಸ್ಸು ಗಳಿಸಬಹುದು. ನೀವು ಜೀವನದಲ್ಲಿ ಜಾಣತನ ಅಥವಾ ಸ್ಮಾರ್ಟ್‌ ಆಗಿರುವ ಮೂಲಕ ಬದುಕಿನಲ್ಲಿ ಯಶಸ್ಸು ಗಳಿಸಬೇಕಾ? ಹಾಗಾದರೆ ಈ ತಂತ್ರಗಳನ್ನು ರೂಢಿಸಿಕೊಳ್ಳಿ.

ʼನೋʼ ಹೇಳುವುದಕ್ಕೆ ಅಭ್ಯಾಸ ಮಾಡಿಕೊಳ್ಳಿ

ಕೆಲಸದ ವಿಷಯದಲ್ಲಿ ಹೆಚ್ಚಿನ ಕೆಲಸಗಳು ಬಂದಾಗ ನೋ ಅಥವಾ ಸಾಧ್ಯವಿಲ್ಲ ಹೇಳಲು ಕಲಿಯಬೇಕು. ಆ ಮೂಲಕ ಉತ್ಪಾದಕತೆಯನ್ನು ಹೆಚ್ಚಿಸಿಕೊಳ್ಳಬಹುದು ಎನ್ನುತ್ತದೆ ಒಂದು ಅಧ್ಯಯನ. ಇದರಿಂದ ನಮಗೆ ಮೊದಲೇ ಇರುವ ಜವಾಬ್ದಾರಿಯನ್ನು ಸುಲಭವಾಗಿ ನಿಭಾಯಿಸಲು ಹಾಗೂ ಆ ಕೆಲಸದ ಮೇಲೆ ಹೆಚ್ಚು ಗಮನ ಹರಿಸಲು ಸಾಧ್ಯವಾಗುತ್ತದೆ. ನಮ್ಮಲ್ಲಿ ಹಲವರು ನೋ ಹೇಳಲು ಸಾಧ್ಯವಾಗದೆ ಒತ್ತಡ, ಖಿನ್ನತೆ ಎದುರಿಸುವ ಜೊತೆಗೆ ಕೆಲಸದಲ್ಲಿನ ಉತ್ಸಾಹವನ್ನೂ ಕಳೆದುಕೊಳ್ಳುತ್ತಾರೆ. ಕೆಲವರಲ್ಲಿ ನಾವು ಹೆಚ್ಚಿನ ಸಮಯ ಕಂಪ್ಯೂಟರ್‌ ಮುಂದೆ ಕುಳಿತುಕೊಳ್ಳುವುದರಿಂದ ಅಥವಾ ಹೆಚ್ಚು ಹೆಚ್ಚು ಪ್ರಾಜೆಕ್ಟ್‌ಗಳನ್ನು ನಮ್ಮ ಕೈಯಲ್ಲಿ ಇರಿಸಿಕೊಂಡಾಗ ನಾವು ಹೆಚ್ಚು ಕ್ರಿಯಾಶೀಲರು ಹಾಗೂ ಉತ್ಪಾದಕರಾಗಿದ್ದೇವೆ ಎಂದುಕೊಳ್ಳುತ್ತಾರೆ. ಆದರೆ ಅತಿ ಹೆಚ್ಚು ಕಂಪ್ಯೂಟರ್‌ ಮುಂದೆ ಕುಳಿತುಕೊಳ್ಳುವುದಕ್ಕಿಂತ ಸ್ಮಾರ್ಟ್‌ ವರ್ಕ್‌ ಮೂಲಕ ಕೆಲಸ ಮುಗಿಸುವುದು ಉತ್ತಮ. ಇದರಿಂದ ಉತ್ಪಾದಕತೆಯ ಮಟ್ಟ ಹೆಚ್ಚುತ್ತದೆ.

ಆಟೊಪೈಲಟ್‌ ಮನೋಭಾವ ಬೇಡ

ಆಟೊಪೈಲಟ್‌ ಮನಃಸ್ಥಿತಿಯಲ್ಲಿ ಕೆಲಸ ಮಾಡುವ ಹಂಬಲ ಬೇಡ. ಈ ಮನಃಸ್ಥಿತಿಯ ಹಿಂದೆ ಓಡಿದರೆ ಮೆದುಳು ನಿಷ್ಕ್ರೀಯವಾಗಬಹುದು, ಅಲ್ಲದೇ ಮಾಡುತ್ತಿದ್ದ ಕೆಲಸದ ಮೇಲೆ ಬೇಸರ ಮೂಡಬಹುದು. ಇದು ಹೊಸ ಕೆಲಸ ಮಾತ್ರವಲ್ಲ, ನಮ್ಮ ದೈನಂದಿನ ಕೆಲಸದ ಮೇಲೂ ಬೇಸರ ಮೂಡಿಸುವಂತೆ ಮಾಡಬಹುದು.

ನಾವು ಮಾಡುವ ಕೆಲಸವನ್ನು ಪ್ರೀತಿಸುವವರಿಗೆ ಆ ಕೆಲಸದ ಮೇಲೆ ಬೇಸರ ಮೂಡಲು ಸಾಧ್ಯವೇ ಇಲ್ಲ. ಅವರು ಈ ಹಿಂದೆ 1000 ಬಾರಿ ಮಾಡಿದ ಕೆಲಸವನ್ನೇ ಪುನಃ ನೀಡಿದರೆ ಅದೇ ಶೃದ್ಧೆ, ಭಕ್ತಿಯಿಂದ ಮಾಡುತ್ತಾರೆ. ಇದು ಅವರ ವೈಯಕ್ತಿಕ ಅಭಿವೃದ್ಧಿಯ ಸಂಕೇತವೂ ಹೌದು. ಹಾಗಾಗಿ ಯಾಂತ್ರಿಕೃತವಾಗಿ ಕೆಲಸ ಮಾಡುವ ಮನೋಭಾವದಿಂದ ದೂರವಿರಿ.

ಕೆಲಸದ ಸ್ಥಳದ ನಾಟಕಗಳ ಬಗ್ಗೆ ತಲೆ ಕೆಡಿಸಿಕೊಳ್ಳಬೇಡಿ

ನಾವೆಲ್ಲರೂ ಕೆಲಸದ ಸ್ಥಳದಲ್ಲಿ ಕೆಲವೊಂದು ನಾಟಕೀಯ ಸನ್ನಿವೇಶಗಳನ್ನು ಎದುರಿಸಿಯೇ ಇರುತ್ತೇವೆ. ಕೆಲವು ವ್ಯಕ್ತಿಗಳ ನಾಟಕೀಯ ವರ್ತನೆಗೆ ಅಂತ್ಯವೆಂಬುದು ಇರುವುದಿಲ್ಲ. ಗಾಸಿಪ್‌, ಬದಲಾವಣೆಯನ್ನು ಬಯಸದೇ ಕಿರಿಕಿರಿ ಮಾಡುವುದು, ನಿರಂತರವಾಗಿ ವಾದ ಮಾಡುವುದು, ಜಗಳ ಹೀಗೆ ಕೆಲಸದ ಮೇಲೆ ಅತೃಪ್ತ ಮನೋಭಾವ ಹೊಂದಿರುವವರು ಒಂದಿಲ್ಲಾ ಒಂದು ರೀತಿ ಕೆಲಸಕ್ಕೆ ಭಂಗ ತರುತ್ತಾರೆ. ಆದರೆ ಇದರ ಮೇಲೆ ಗಮನ ಹರಿಸದೆ, ನಿಮಗೆ ಯಾವ ಕೆಲಸ ಮುಖ್ಯ ಅದರ ಮೇಲಷ್ಟೇ ಗಮನ ಹರಿಸಿ. ಇದರಿಂದ ಉತ್ಪಾದಕ ಮಟ್ಟ ಕಡಿಮೆಯಾಗುವ ಜೊತೆಗೆ ಕೆಲಸದ ವಿಷಯದಲ್ಲಿ ಸಮಯದ ಅಭಾವವೂ ಕಾಡಬಹುದು. ಇದು ಮನಸ್ಸಿನಲ್ಲಿ ಅಲ್ಲದ ಭಾವನೆ ಹುಟ್ಟಲು ಕಾರಣವಾಗಬಹುದು.

ಸಮಯವಲ್ಲದ ಸಮಯದಲ್ಲಿ ಕೆಲಸ ಮಾಡುವುದು

ನಮ್ಮ ಉತ್ಪಾದಕತೆಯ ಮಟ್ಟ ಕುಸಿಯಲು ಸಮಯವಲ್ಲದ ಸಮಯದಲ್ಲಿ ಕೆಲಸ ಮಾಡುವುದು ಕಾರಣವಾಗಬಹುದು. ಕೆಲವೊಮ್ಮೆ ನಾವು ಊಟ, ತಿಂಡಿಯ ಸಮಯವನ್ನೂ ಲೆಕ್ಕಿಸದೇ ವಿರಾಮವಿಲ್ಲದ ಕೆಲಸ ಮಾಡುತ್ತೇವೆ. ಆದರೆ ಇದು ತಪ್ಪು, ನಮಗೆ ವಿರಾಮ ಬೇಕು ಎನ್ನಿಸಿದಾಗ ದೇಹ ನಮಗೆ ಸಿಗ್ನಲ್‌ ನೀಡುತ್ತದೆ. ಹಸಿವು, ಆಯಾಸ, ತೂಕಡಿಕೆ ಹಾಗೂ ಗಮನಶಕ್ತಿ ಕಳೆದುಕೊಳ್ಳುವುದು ಈ ಮೂಲಕ ದೇಹಕ್ಕೆ ವಿರಾಮ ಬೇಕು ಎಂಬುದನ್ನು ಸೂಚಿಸುತ್ತದೆ. ಅದನ್ನು ಲೆಕ್ಕಿಸದೇ ಕೆಲಸ ಮಾಡುವುದರಿಂದ ನಾವು ಸ್ಮಾರ್ಟ್‌ ಕೆಲಸಗಾರರು ಎನ್ನಿಸಿಕೊಳ್ಳಲು ಸಾಧ್ಯವಿಲ್ಲ, ಬದಲಾಗಿ ಇದು ನಮ್ಮ ಉತ್ಪಾದಕತೆಯ ಮಟ್ಟ ಕುಸಿಯಲು ಕಾರಣವಾಗಬಹುದು. ನಮ್ಮ ಮನಸ್ಸಿನ ಸಾಮರ್ಥ್ಯವನ್ನು ಅರಿಯಬೇಕು. ಕನಿಷ್ಠ 80 ರಿಂದ 90 ನಿಮಿಷಗಳ ಕಾಲ ವಿರಾಮವಿಲ್ಲದೆ ಕೆಲಸ ಮಾಡಬಹುದು. ಆ ಹೊತ್ತಿನಲ್ಲಿ ಗಮನವಿಟ್ಟು, ಏಕಾಗ್ರತೆಯಿಂದ ಕೆಲಸ ಮಾಡಲು ಕಲಿಯಿರಿ. ನಂತರ ವಿರಾಮ ತೆಗೆದುಕೊಂಡು ಮತ್ತೆ ಕೆಲಸ ಆರಂಭಿಸಿ, ಇದರಿಂದ ಮನಸ್ಸು, ದೇಹ ಎರಡೂ ಚುರುಕಾಗಿರುತ್ತದೆ.

ಸ್ವ ಕಾಳಜಿಯೂ ಬೇಕು

ಕೆಲಸದ ಒತ್ತಡ ನಡುವೆ ಸ್ವ ಕಾಳಜಿಯನ್ನು ಎಂದಿಗೂ ಮರೆಯಬಾರದು. ಸ್ಮಾರ್ಟ್‌ ವರ್ಕ್‌ ಮಾಡುವವರು ಕೆಲಸದ ವಿಷಯದಲ್ಲಿ ಬೌಂಡರಿ ಹಾಕಿಕೊಂಡಿರುತ್ತಾರೆ. ಅಲ್ಲದೇ ಅವರು ಪ್ರಾಶಸ್ತ್ಯಕ್ಕೆ ಅನುಗುಣವಾಗಿ ಕೆಲಸ ಮಾಡುತ್ತಾರೆ. ಸ್ವ ಕಾಳಜಿಗೂ ಗಮನ ನೀಡದೆ ಗಂಟೆಗಟ್ಟಲೆ ಕಂಪ್ಯೂಟರ್‌ ಮುಂದೆ ಕುಳಿತು ಸಮಯ ಹಾಳು ಮಾಡುವ ಬದಲು ಸ್ಮಾರ್ಟ್‌ ವರ್ಕ್‌ ಮಾಡುವ ಮೂಲಕ ವೈಯಕ್ತಿಕ ವಿಷಯದತ್ತಲೂ ಗಮನ ಹರಿಸುತ್ತಾರೆ. ಕೆಲಸದ ವಿಷಯಕ್ಕೆ ಬಂದಾಗ ಸ್ವಯಂ ಕಾಳಜಿಯನ್ನು ನಾವು ಹೊಂದಿರಬೇಕೆ ಹೊರತು ಅದು ತಾನಾಗಿಯೇ ಬರುವುದಿಲ್ಲ.

ವಿಭಾಗ

    ಹಂಚಿಕೊಳ್ಳಲು ಲೇಖನಗಳು