logo
ಕನ್ನಡ ಸುದ್ದಿ  /  ಜೀವನಶೈಲಿ  /  Text Message: ಆತ್ಮೀಯರ, ಪ್ರಮುಖ ಮಾಹಿತಿಗಳ ಟೆಕ್ಟ್ಸ್‌ ಮೆಸೇಜ್‌ಗಳನ್ನು ಈ ರೀತಿ ಸುರಕ್ಷಿತವಾಗಿ ಸೇವ್‌ ಮಾಡಿಕೊಳ್ಳಿ

Text Message: ಆತ್ಮೀಯರ, ಪ್ರಮುಖ ಮಾಹಿತಿಗಳ ಟೆಕ್ಟ್ಸ್‌ ಮೆಸೇಜ್‌ಗಳನ್ನು ಈ ರೀತಿ ಸುರಕ್ಷಿತವಾಗಿ ಸೇವ್‌ ಮಾಡಿಕೊಳ್ಳಿ

HT Kannada Desk HT Kannada

Dec 05, 2023 06:00 PM IST

ಟೆಕ್ಸ್ಟ್‌ ಮೆಸೇಜ್‌ ಸೇವ್‌ ಮಾಡಿಕೊಳ್ಳುವ ವಿಧಾನ

  • Text Message: ಟೆಕ್ಸ್ಟ್‌ ಮೆಸೇಜ್‌ ಸೇವ್‌ ಮಾಡಿಕೊಳ್ಳುವ ಆಪ್‌ಗಳು ಕೂಡಾ ಲಭ್ಯವಿದೆ. ಗೂಗಲ್‌ ಪ್ಲೇ ಸ್ಟೋರ್‌ನಲ್ಲಿ SMS Backup & Restore ಆಪ್‌ ಡೌನ್‌ಲೋಡ್‌ ಮಾಡಿಕೊಂಡು ನಿಮ್ಮ ಪ್ರಮುಖ ಟೆಕ್ಸ್ಟ್‌ ಮೆಸೇಜ್‌ಗಳನ್ನು ಅಲ್ಲಿ ಎಕ್ಸ್‌ಪೋರ್ಟ್‌ ಮಾಡುವ ಮೂಲಕ ಸೇವ್‌ ಮಾಡಿಕೊಳ್ಳಬಹುದು.

ಟೆಕ್ಸ್ಟ್‌ ಮೆಸೇಜ್‌ ಸೇವ್‌ ಮಾಡಿಕೊಳ್ಳುವ ವಿಧಾನ
ಟೆಕ್ಸ್ಟ್‌ ಮೆಸೇಜ್‌ ಸೇವ್‌ ಮಾಡಿಕೊಳ್ಳುವ ವಿಧಾನ (PC: Pixabay)

Text Message: ಈ ಡಿಜಿಟಲ್‌ ಯುಗದಲ್ಲಿ ಪ್ರತಿದಿನ ಆತ್ಮೀಯರಿಗೆ, ಕಚೇರಿ ಕೆಲಸಕ್ಕೆ ಟೆಕ್ಟ್ಸ್‌ ಮೆಸೇಜ್‌ ಬಳಸುವುದು ಸಾಮಾನ್ಯವಾಗಿದೆ. ಆದರೆ ಕೆಲವೊಮ್ಮೆ ಅಚಾಚುರ್ಯದಿಂದಲೋ, ಹೊಸ ಮೆಸೇಜ್‌ಗಳಿಗೆ ಸ್ಪೇಸ್‌ ಮಾಡಿಕೊಡುವ ಉದ್ದೇಶದಂದಲೋ ಟೆಕ್ಟ್ಸ್‌ ಮೆಸೇಜ್‌ ಡಿಲೀಟ್‌ ಆಗುವ ಸಾಧ್ಯತೆ ಇದೆ. ಆದರೆ ಅದರಲ್ಲಿರುವ ಮಾಹಿತಿಗಳು ನಮಗೆ ಮುಖ್ಯವಾಗಿದ್ದರೆ ಮುಂದೆ ಸಮಸ್ಯೆ ಆಗಬಹುದು. ಆದ್ದರಿಂದ ಟೆಕ್ಟ್ಸ್‌ ಮೆಸೇಜ್‌ ಸೇವ್‌ ಮಾಡಿಕೊಳ್ಳುವುದು ಮುಖ್ಯವಾಗಿದೆ.

ಟ್ರೆಂಡಿಂಗ್​ ಸುದ್ದಿ

ಮಾವಿನಹಣ್ಣಿನಿಂದ ತಯಾರಿಸಬಹುದು ಒಂದಲ್ಲ, ಎರಡಲ್ಲ ಮೂರು ಬಗೆಯ ಪಾಯಸ; ಈ ಭಾನುವಾರ ನೀವೂ ಮನೆಯಲ್ಲಿ ಟ್ರೈ ಮಾಡಿ, ರೆಸಿಪಿ ಇಲ್ಲಿದೆ

Relationship tips: ವರ್ಷಗಳು ಸರಿದರೂ ದಾಂಪತ್ಯದಲ್ಲಿ ಪ್ರೀತಿಯ ತಾಜಾತನ ಉಳಿಬೇಕು ಅಂದ್ರೆ ಈ 4 ನಿಯಮಗಳನ್ನು ತಪ್ಪದೇ ಪಾಲಿಸಿ

Personality Test: ಚಿತ್ರವನ್ನು ಕಂಡಾಕ್ಷಣ ನಿಮಗೆ ಮೊದಲು ಕಂಡಿದ್ದೇನು? ನಿಮ್ಮ ವ್ಯಕ್ತಿತ್ವದ ಕುರಿತ ರಹಸ್ಯ ವಿಚಾರ ತಿಳಿಸುತ್ತೆ ಈ ಚಿತ್ರ

Brain Teaser: 212=25, 214=47 ಆದ್ರೆ, 215 = ಎಷ್ಟು? ಗಣಿತದಲ್ಲಿ ನೀವು ಜಾಣರಾದ್ರೆ 10 ಸೆಕೆಂಡ್‌ನಲ್ಲಿ ಉತ್ತರ ಹೇಳಿ

ಐಫೋನ್‌, ಆಂಡ್ರಾಯ್ಡ್‌ಗಳಲ್ಲಿ ಟೆಕ್ಟ್ಸ್‌ ಮೆಸೇಜ್‌ ಸೇವ್‌ ಮಾಡಿಕೊಳ್ಳುವ ಆಪ್ಷನ್‌ ಇರುತ್ತದೆ. ಆದರೆ ಅದು ಬಹಳ ಜನರಿಗೆ ಗೊತ್ತಿಲ್ಲದೆ ಮೆಸೇಜ್‌ ಡಿಲೀಟ್‌ ಮಾಡಿ ನಂತರ ಪಶ್ಚಾತಾಪ ಪಡುತ್ತಾರೆ. ಈ ರೀತಿ ನೀವು ಟೆಕ್ಟ್ಸ್‌ ಮೆಸೇಜ್‌ ಸೇವ್‌ ಮಾಡಿಕೊಳ್ಳುವುದರಿಂದ ನೀವು ಪೋನ್‌ ಬದಲಿಸಿದರೂ ಅದು ನಿಮ್ಮ ಬಳಿ ಸುರಕ್ಷಿತವಾಗಿರುತ್ತದೆ.

ಐ ಫೋನ್‌

ಐ ಫೋನಿನಲ್ಲಿ ಟೆಕ್ಟ್ಸ್‌ ಮೆಸೇಜ್‌ ಸೇವ್‌ ಮಾಡಿಕೊಳ್ಳುವ ವಿಧಾನ ಹೀಗಿದೆ.

ಫೋನಿನಲ್ಲಿ ಮೆಸೇಜ್‌ ಆಪ್‌ ಓಪನ್‌ ಮಾಡಿ. ನೀವು ಸೇವ್‌ ಮಾಡಬೇಕು ಎಂದುಕೊಂಡಿರುವ ಮೆಸೇಜನ್ನು ಟ್ಯಾಪ್‌ ಮಾಡಿ ಹೋಲ್ಡ್‌ ಮಾಡಿ. ನಂತರ More ಆಪ್ಷನ್‌ ಕ್ಲಿಕ್‌ ಮಾಡಿ, ಕೆಳಗೆ ಬಲಭಾಗದಲ್ಲಿ arrow ಐಕಾನ್‌ ಸೆಲೆಕ್ಟ್‌ ಮಾಡಿ Save ಕೊಟ್ಟರೆ ನಿಮ್ಮ ಮೆಸೇಜ್‌ ಸೇವ್‌ ಆಗುತ್ತದೆ.

ಆಂಡ್ರಾಯ್ಡ್‌

ಆಂಡ್ರಾಯ್ಡ್‌ ಫೋನಿನಲ್ಲಿ ಟೆಕ್ಸ್ಟ್‌ ಮೆಸೇಜ್‌ ಸೇವ್‌ ಮಾಡಿಕೊಳ್ಳುವ ವಿಧಾನ

ಮೆಸೇಜ್‌ ಆಪ್‌ ಓಪನ್‌ ಮಾಡಿ. ಟ್ಯಾಪ್‌ ಮಾಡಿ ಹೋಲ್ಡ್‌ ಮಾಡಿ ನಿಮ್ಮ ಡಿವೈಸ್‌ನಲ್ಲಿರುವ ಆಪ್ಷನ್‌ಗೆ ತಕ್ಕಂತೆ Save ಅಥವಾ Archive ಆಯ್ಕೆಯನ್ನು ಸೆಲೆಕ್ಟ್‌ ಮಾಡಿದರೆ ನಿಮ್ಮ ಮೆಸೇಜ್‌ ಸೇವ್‌ ಆಗುತ್ತದೆ.

ಸ್ಕ್ರೀನ್‌ ಶಾಟ್‌ಗಳು

ಮೊಬೈಲ್‌ನಲ್ಲಿ ನಿಮಗೆ ಹೆಚ್ಚು ಆಪ್ಷನ್‌ ಇಲ್ಲದಿದ್ದಲ್ಲಿ ನಿಮ್ಮ ಟೆಕ್ಸ್ಟ್‌ ಮೆಸೇಜ್‌ ಸ್ಕ್ರೀನ್‌ ಶಾಟ್‌ಗಳನ್ನು ತೆಗೆದಿಟ್ಟುಕೊಳ್ಳುವುದು ಬಹಳ ಸುಲಭ. ಯಾವುದೇ ಸ್ಮಾರ್ಟ್‌ಫೋನಿನಲ್ಲಿ ನೀವು ಸ್ಕ್ರೀನ್‌ಶಾಟ್‌ ತೆಗೆದುಕೊಳ್ಳಬಹುದು.

ಆಪ್‌ಗಳು

ಟೆಕ್ಸ್ಟ್‌ ಮೆಸೇಜ್‌ ಸೇವ್‌ ಮಾಡಿಕೊಳ್ಳುವ ಆಪ್‌ಗಳು ಕೂಡಾ ಲಭ್ಯವಿದೆ. ಗೂಗಲ್‌ ಪ್ಲೇ ಸ್ಟೋರ್‌ನಲ್ಲಿ SMS Backup & Restore ಆಪ್‌ ಡೌನ್‌ಲೋಡ್‌ ಮಾಡಿಕೊಂಡು ನಿಮ್ಮ ಪ್ರಮುಖ ಟೆಕ್ಸ್ಟ್‌ ಮೆಸೇಜ್‌ಗಳನ್ನು ಅಲ್ಲಿ ಎಕ್ಸ್‌ಪೋರ್ಟ್‌ ಮಾಡುವ ಮೂಲಕ ಸೇವ್‌ ಮಾಡಿಕೊಳ್ಳಬಹುದು. ಆದರೆ ಕೆಲವೊಂದು ಆಪ್‌ಗಳ ಬಗ್ಗೆ ನೀವು ಬಹಳ ಜಾಗರೂಕರಾಗಿರಬೇಕು.

ಇ-ಮೇಲ್‌ ಮಾಡಿ

ನಿಮ್ಮ ಟೆಕ್ಸ್ಟ್‌ ಮೆಸೇಜ್‌ ಇನ್ನಷ್ಟು ಸೇಫ್‌ ಆಗಿರಬೇಕು ಎಂದರೆ ಅದನ್ನು ಸ್ಕ್ರೀನ್‌ ಶಾಟ್‌ ಅಥವಾ Share ಆಪ್ಷನ್‌ ಮೂಲಕ ಇ ಮೇಲ್‌ಗೆ ಕಳಿಸಿಕೊಳ್ಳಬಹುದು. ಇದು ಬಹಳ ಸುರಕ್ಷಿತ ವಿಧಾನ.

    ಹಂಚಿಕೊಳ್ಳಲು ಲೇಖನಗಳು