logo
ಕನ್ನಡ ಸುದ್ದಿ  /  ಜೀವನಶೈಲಿ  /  Jataka Kathegalu: ಜಿಪಿ ರಾಜರತ್ನಂ ಅವರ ಬುದ್ಧನ ಜಾತಕ ಕಥೆಗಳು: ಕಥೆ ಹೇಳು ಎಂದು ಕಾಡುವ ಮಕ್ಕಳಿದ್ದರೆ ಇದು ಉತ್ತಮ ಆಯ್ಕೆ

Jataka Kathegalu: ಜಿಪಿ ರಾಜರತ್ನಂ ಅವರ ಬುದ್ಧನ ಜಾತಕ ಕಥೆಗಳು: ಕಥೆ ಹೇಳು ಎಂದು ಕಾಡುವ ಮಕ್ಕಳಿದ್ದರೆ ಇದು ಉತ್ತಮ ಆಯ್ಕೆ

Rakshitha Sowmya HT Kannada

Mar 29, 2024 01:18 PM IST

ಬುದ್ಧನ ಜಾತಕ ಕಥೆಗಳು

  • Jataka Kathegalu: ಕವಿ ಜಿಪಿ ರಾಜರತ್ನಂ ಅವರು ಪಾಳಿ ಭಾಷೆಯಿಂದ ಕನ್ನಡಕ್ಕೆ ಅನುವಾದ ಮಾಡಿರುವ ಬುದ್ದನ ಜಾತಕ ಕಥೆಗಳು ಮಕ್ಕಳಿಗೆ ಕಥೆ ಹೇಳಲು ಬೆಸ್ಟ್‌ ಆಯ್ಕೆ. ಈ ಕಥೆಗಳಲ್ಲಿ ಬೌದ್ಧ ಪ್ರಪಂಚದ ಶಿಲ್ಪಕಲೆ ಮತ್ತು ಚಿತ್ರಕಲೆ ಬಗ್ಗೆ ಕೂಡಾ ವಿವರಿಸಲಾಗಿದೆ. ಕೆಲವೊಂದು ಕಥೆಗಳು ಚಿಕ್ಕದಾಗಿದ್ದರೆ, ಕೆಲವು ಕಾದಂಬರಿ ರೂಪದಲ್ಲಿವೆ. 

ಬುದ್ಧನ ಜಾತಕ ಕಥೆಗಳು
ಬುದ್ಧನ ಜಾತಕ ಕಥೆಗಳು (PC: Unsplash)

Jataka Kathegalu: ಹಿಂದಿನ ಕಾಲದಲ್ಲಿ ಅಜ್ಜಿಯಂದಿರು ತಮ್ಮ ಮೊಮ್ಮಕ್ಕಳನ್ನು ಮಲಗಿಸಲು ಕಥೆ ಹೇಳುತ್ತಿದ್ದರು. ಮೊಮ್ಮಕ್ಕಳು ಕೂಡಾ ನಿದ್ರೆ ಮಾಡಲು, ಬೇಸರ ಕಳೆಯಲು ಮನೆಯಲ್ಲಿ ಅಜ್ಜಿ ತಾತಂದಿರನ್ನು ಕಥೆ ಹೇಳುವಂತೆ ಕಾಡುತ್ತಿದ್ದರು. ಆದರೆ ಈಗ ಕಥೆ ಹೇಳುವುದು, ಕೇಳುವುದು ಎಲ್ಲವೂ ಮಾಯವಾಗಿದೆ. ಕಾಲ ಬದಲಾದಂತೆ ಎಲ್ಲರೂ ಆಧುನಿಕತೆಗೆ ಒಗ್ಗಿಕೊಳ್ಳುತ್ತಿದ್ದಾರೆ. ಮೊಬೈಲ್‌, ಲ್ಯಾಪ್‌ಟಾಪ್‌, ಟ್ಯಾಬ್‌ಗಳನ್ನು ನೋಡಿ ಟೈಂ ಪಾಸ್‌ ಮಾಡುತ್ತಿದ್ದಾರೆ.

ಟ್ರೆಂಡಿಂಗ್​ ಸುದ್ದಿ

Brain Teaser: ವೃತ್ತದಲ್ಲಿ ಮಿಸ್‌ ಆಗಿರುವ ನಂಬರ್‌ ಯಾವುದು? ಗಣಿತ ಪ್ರಿಯರು ಥಟ್ಟಂತ ಉತ್ತರ ಹೇಳಿ ನೋಡೋಣ

Personality Test: ಚಿತ್ರದಲ್ಲಿ ಮೊದಲು ಕಂಡಿದ್ದೇನು? ನೀವು ನೇರ ಸ್ವಭಾವದವರಾ, ಮೌನಪ್ರೇಮಿಯೇ, ನಿಮ್ಮ ವ್ಯಕ್ತಿತ್ವ ತಿಳಿಸುವ ಚಿತ್ರವಿದು

ಪ್ರತಿನಿತ್ಯ ಕೇವಲ 10 ನಿಮಿಷ ಧ್ಯಾನ ಮಾಡಿದ್ರೆ ಸಾಕು, ನಿಮಗೆ ಈ 10 ರೀತಿಯ ಆರೋಗ್ಯ ಲಾಭಗಳು ಸಿಗಲಿದೆ

Mango Recipe: ಇಲ್ಲಿದೆ ಮ್ಯಾಂಗೋ ಮಲೈ ಖಾಂಡ್ವಿ ರೋಲ್‌ ರೆಸಿಪಿ; ಹೆಸರಷ್ಟೇ ಅಲ್ಲ ಈ ತಿಂಡಿಯ ರುಚಿಯೂ ಡಿಫ್ರೆಂಟ್‌

ಕಥೆಗಳನ್ನು ಹೇಳುವ, ಕೇಳುವ ದಿನ ಮತ್ತೆ ಬರಲಿ

ಕೆಲವು ಪೋಷಕರು ಕೂಡಾ ಮಕ್ಕಳು ಹಿಂಸೆ ಕೊಡದಿರಲಿ ಎಂದು ಅವರ ಕೈಗೆ ವಿಡಿಯೋ ಗೇಮ್‌ ಅಥವಾ ಮೊಬೈಲ್‌ ಕೊಟ್ಟು ತಮ್ಮ ಪಾಡಿಗೆ ತಾವು ಮಗ್ನರಾಗಿಬಿಡುತ್ತಾರೆ. ಆದರೆ ಅಲ್ಲೋ ಇಲ್ಲೋ ಎಂಬಂತೆ ಇಂದಿಗೂ ಕೆಲವರು ಕಥೆಗಳನ್ನು ಹೇಳುವತ್ತ, ಕೇಳುವತ್ತ ಆಸಕ್ತಿ ತೋರುತ್ತಿದ್ದಾರೆ. ರಾಜರ ಕಥೆಗಳು, ಹಾರರ್‌ ಕಥೆಗಳು, ಪ್ರಾಣಿ ಪಕ್ಷಿಗಳ ನೀತಿ ಕಥೆಗಳು ಮಕ್ಕಳಲ್ಲಿ ಬಹಳ ಆಸಕ್ತಿ ಮೂಡಿಸುತ್ತವೆ. ಜೊತೆಗೆ ಆ ಕಥೆಗಳು ಮಕ್ಕಳಿಗೆ ಪಾಠ ಕಲಿಸುತ್ತವೆ. ನಿಮ್ಮ ಮನೆಯಲ್ಲೂ ಮಕ್ಕಳು ಕಥೆ ಕೇಳಲು ಆಸಕ್ತಿ ಹೊಂದಿದ್ದರೆ ಬುದ್ಧನ ಕಥೆಗಳನ್ನು ಕೂಡಾ ಹೇಳಬಹುದು.

ಬುದ್ದನ ಜಾತಕ ಕಥೆಗಳು

ಜಾತಕ ಕಥೆಗಳು ಎಂದರೆ ಬುದ್ಧನ ಜೀವನದ ಅತಿ ಜನಪ್ರಿಯ ಕಥೆಗಳು ಎಂದರ್ಥ. ಇವುಗಳನ್ನು ಬೌದ್ಧಧರ್ಮದ ಎಲ್ಲಾ ಶಾಖೆಗಳಲ್ಲಿ ಸಂರಕ್ಷಿಸಲಾಗಿದೆ. ಕೆಲವು ಜಾತಕ ಕಥೆಗಳು ಬೌದ್ಧ ಬರಹಗಳ ಪಾಲಿ ಕ್ಯಾನನ್‌ನ ವಿವಿಧ ವಿಭಾಗಗಳಲ್ಲಿ ಹರಡಿಕೊಂಡಿವೆ, ಇದರಲ್ಲಿ 35 ಗುಂಪುಗಳನ್ನು ನೀತಿಬೋಧಕ ಉದ್ದೇಶಗಳಿಗಾಗಿ ಸಂಗ್ರಹಿಸಲಾಗಿದೆ. ಇದರಲ್ಲಿ ಸುಮಾರು 550 ಕಥೆಗಳಿವೆ. ಅವುಗಳಲ್ಲಿ ಕೆಲವು ಬಹಳ ಸಂಕ್ಷಿಪ್ತವಾದ ಕಥೆಗಳಾದರೆ ಇನ್ನೂ ಕೆಲವು ಕಾದಂಬರಿಗಳಷ್ಟು ದೊಡ್ಡದಾಗಿದೆ. ಪ್ರತಿಯೊಂದು ಕಥೆಯೂ ಅದನ್ನು ಹೇಳಲು ಪ್ರೇರೇಪಿಸಿದ ಸಂದರ್ಭವನ್ನು ಗಮನಿಸುವುದರ ಮೂಲಕ ಪ್ರಾರಂಭವಾಗುತ್ತದೆ ಮತ್ತು ಬುದ್ಧನು ಪರಿಚಯಾತ್ಮಕ ಕಥೆಯಲ್ಲಿನ ಜನರ ಜೀವನವನ್ನು ಹಿಂದಿನ ಕಾಲದ ಜನರೊಂದಿಗೆ ಗುರುತಿಸುವುದರೊಂದಿಗೆ ಕೊನೆಗೊಳ್ಳುತ್ತದೆ. ಈ ಕಥೆಗಳಲ್ಲಿ ಹಾಸ್ಯ ಮತ್ತು ಸಾಕಷ್ಟು ವೈವಿಧ್ಯವಿದೆ. ಬುದ್ಧನು ಯಾವುದೇ ರೂಪದಲ್ಲಿ,ಕಥೆಗಳ ಮೂಲಕ ಕೆಲವು ಸದ್ಗುಣಗಳನ್ನು ಪ್ರದರ್ಶಿಸುತ್ತಾನೆ.

ಪಾಳಿ ಭಾಷೆಯಿಂದ ಕನ್ನಡಕ್ಕೆ ಅನುಮಾದ ಮಾಡಿರುವ ಜಿ.ಪಿ. ರಾಜರತ್ನಂ

ಅನೇಕ ಜಾತಕಗಳಲ್ಲಿ ಮಹಾಭಾರತ, ಪಂಚ-ತಂತ್ರ, ಪುರಾಣಗಳು ಮತ್ತು ಇತರ ಬೌದ್ಧೇತರ ಭಾರತೀಯ ಸಾಹಿತ್ಯದಲ್ಲಿ ಸಮಾನಾಂತರಗಳನ್ನು ಹೊಂದಿವೆ. ಈ ಸೋಪನ ನೀತಿಕಥೆಗಳೂ ಈ ಪಟ್ಟಿಯಲ್ಲಿದೆ. ಬುದ್ಧನ ಜಾತಕ ಕಥೆಗಳಲ್ಲಿ ಬೌದ್ಧ ಪ್ರಪಂಚದ ಶಿಲ್ಪಕಲೆ ಮತ್ತು ಚಿತ್ರಕಲೆ ಬಗ್ಗೆ ಕೂಡಾ ವಿವರಿಸಲಾಗಿದೆ. ಕವಿ ಕಥೆಗಾರ ಜಿ.ಪಿ. ರಾಜರತ್ನಂ ಅವರು ಬರೆದಿರುವ ಅನೇಕ ಕಥೆಗಳಲ್ಲಿ ಬುದ್ಧನ ಜಾತಕಗಳು ಕೂಡಾ ಒಂದು. ಮೂಲ ಕಥೆಗಳು ಪಾಳಿ ಭಾಷೆಯಲ್ಲಿವೆ. ಜಿ.ಪಿ. ರಾಜರತ್ನಂ ಅವರು ಪಾಳಿ ಭಾಷೆಯನ್ನು ಕಲಿತು ಇದನ್ನು ಕನ್ನಡಕ್ಕೆ ಅನುವಾದ ಮಾಡಿದ್ದಾರೆ. ಬಹುತೇಕ ಪುಸ್ತಕ ಅಂಗಡಿಗಳಲ್ಲಿ ಈ ಪುಸ್ತಕ ದೊರೆಯುತ್ತದೆ.

ವಿಭಾಗ

    ಹಂಚಿಕೊಳ್ಳಲು ಲೇಖನಗಳು