logo
ಕನ್ನಡ ಸುದ್ದಿ  /  Lifestyle  /  Lady Finger Keratin Hari Mask For Straight And Silky Hair

Okra Keratin Hair Mask:ನಿಮ್ಮ ಕೂದಲಿಗೆ ಸ್ಟ್ರೇಟ್ನಿಂಗ್‌,ಹೊಳಪು ಬೇಕಾ? ಹಾಗಿದ್ರೆ ಬೆಂಡೆಕಾಯಿ ಮಾಸ್ಕ್‌ ಹಚ್ಚಿ..ತಯಾರಿಸುವ ವಿಧಾನ ಇಲ್ಲಿದೆ

HT Kannada Desk HT Kannada

Oct 19, 2022 02:34 PM IST

ಕೂದಲಿಗೆ ಬೆಂಡೆಕಾಯಿ ಕೆರಾಟಿನ್‌ ಮಾಸ್ಕ್‌

    • ಬೆಂಡೆಕಾಯಿ ತೊಳೆದು ಸಣ್ಣದಾಗಿ ಹೆಚ್ಚಿಕೊಳ್ಳಿ, ಅದಕ್ಕೆ 1 ದೊಡ್ಡ ಗ್ಲಾಸ್‌ ನೀರು ಸೇರಿಸಿ ಸ್ಟೋವ್‌ ಮೇಲಿಟ್ಟು 10-15 ನಿಮಿಷಗಳ ಕಾಲ ಮಧ್ಯಮ ಉರಿಯಲ್ಲಿ ಕುಕ್‌ ಮಾಡಿ ನಂತರ ಸ್ಟೋವ್‌ ಆಫ್‌ ಮಾಡಿ. ಈ ಮಿಶ್ರಣ ತಣ್ಣಗಾದಾಗ ಅದನ್ನು ಹ್ಯಾಂಡ್‌ ಬ್ಲೆಂಡರ್‌ ಅಥವಾ, ಮಿಕ್ಸಿಯಲ್ಲಿ ಬ್ಲೆಂಡ್‌ ಮಾಡಿ, ಒಂದು ಶುದ್ಧವಾದ ಬಟ್ಟೆಯಿಂದ ಶೋಧಿಸಿಕೊಳ್ಳಿ.
ಕೂದಲಿಗೆ ಬೆಂಡೆಕಾಯಿ ಕೆರಾಟಿನ್‌ ಮಾಸ್ಕ್‌
ಕೂದಲಿಗೆ ಬೆಂಡೆಕಾಯಿ ಕೆರಾಟಿನ್‌ ಮಾಸ್ಕ್‌ (PC: Unsplash,‍ Freepik)

ಜ್ಞಾಪಕಶಕ್ತಿ ಚೆನ್ನಾಗಿರಬೇಕೆಂದರೆ ಏನು ತಿನ್ನಬೇಕು ಎಂಬ ಪ್ರಶ್ನೆ ಎದುರಾದರೆ ತಕ್ಷಣ ನಮಗೆ ನೆನಪಾಗುವುದು ಬೆಂಡೆಕಾಯಿ. ಇದನ್ನು ತಿನ್ನುವುದರಿಂದ ಜ್ಞಾಪಕಶಕ್ತಿ ಸುಧಾರಿಸುತ್ತದೆ ಎಂದು ತಜ್ಞರು ಹೇಳೋದನ್ನು ನಾವು ಕೇಳಿದ್ದೇವೆ. ಅದರಲ್ಲೂ ವಿಶೇಷವಾಗಿ ಮಕ್ಕಳಿಗೆ ಬೆಂಡೆಕಾಯಿ ನೀಡಿದರೆ ಬಹಳ ಒಳ್ಳೆಯದು ಎಂದು ಪೋಷಕರು ತಮ್ಮ ಮಕ್ಕಳಿಗೆ ಅದರಿಂದ ವಿವಿಧ ರೀತಿಯ ತಿಂಡಿ ಮಾಡಿ ಮಕ್ಕಳಿಗೆ ತಿನ್ನಿಸುತ್ತಾರೆ.

ಟ್ರೆಂಡಿಂಗ್​ ಸುದ್ದಿ

Pregnancy Plan: ಪ್ರೆಗ್ನೆನ್ಸಿ ಪ್ಲಾನ್‌ ಇದ್ಯಾ? ಗರ್ಭಧಾರಣೆಗೆ ನಿಮ್ಮ ದೇಹವನ್ನು ಹೀಗೆ ತಯಾರು ಮಾಡಿ

ನೀವು ಪ್ರತಿದಿನ ಸೇವಿಸುವ ಔಷಧಿಗಳ ಅಡ್ಡಪರಿಣಾಮ ಗುರುತಿಸುವುದು ಹೇಗೆ? ಮೆಡಿಸಿನ್‌ಗಳಿಂದ ಈ ಅಪಾಯವೂ ಇವೆ

ಮಹಾರಾಜ ಮಟನ್‌ ಕರಿಯಿಂದ ಫಿಶ್‌ ಬಿರಿಯಾನಿವರೆಗೆ ಬೇಸಿಗೆಯಲ್ಲಿ ಮಾಡಬಹುದಾದ 5 ಬೆಸ್ಟ್‌ ನಾನ್‌ವೆಜ್ ಅಡುಗೆಗಳಿವು; ರೆಸಿಪಿ ಇಲ್ಲಿದೆ

Parenting: ಮುಷ್ಟಿ ಮೈಥುನ, ಹಸ್ತ ಮೈಥುನ ಯಾವಾಗ ಅಪಾಯಕಾರಿ? ಕಾಮದ ಆಸೆಗೆ ಕಡಿವಾಣ ಹಾಕಲು ಏನು ಮಾಡಬೇಕು? ಎಲ್ಲರೂ ತಿಳಿಯಬೇಕಾದ ವಿವರಗಳಿವು

ಆದರೆ ಬೆಂಡೆಕಾಯಿ ಕೇವಲ ಜ್ಞಾಪಕಶಕ್ತಿ ಹೆಚ್ಚಿಸುವುದು ಮಾತ್ರವಲ್ಲ, ಕೂದಲ ಸೌಂದರ್ಯಕ್ಕೂ ಸಹಾಯ ಮಾಡುತ್ತದೆ ಎಂಬುದು ಬಹಳ ಜನರಿಗೆ ಗೊತ್ತಿಲ್ಲ. ಕೂದಲು ಆರೋಗ್ಯಕರವಾಗಿ ಮತ್ತು ಕೂದಲನ್ನು ಸುಂದರವಾಗಿಡಲು ಕೆರಾಟಿನ್ ಬಹಳಷ್ಟು ಸಹಾಯ ಮಾಡುತ್ತದೆ. ಕೆರಾಟಿನ್ ನೈಸರ್ಗಿಕ ಪ್ರೋಟೀನ್ ಆಗಿದೆ. ಆದರೆ ನೀವು ರಾಸಾಯನಿಕಗಳಿಲ್ಲದೆ ಕೆರಾಟಿನ್ ಚಿಕಿತ್ಸೆಯನ್ನು ಪಡೆಯಬಹುದು. ಬೆಂಡೆಕಾಯಿಂದ ನೀವು ನಿಮ್ಮ ಕೂದಲಿಗೆ ನಯ ಹಾಗೂ ಹೊಳಪು ನೀಡಬಹುದು.

ಬೆಂಡೆಕಾಯಿ ಹೇರ್‌ ಕೆರಾಟಿನ್ ಮಾಡಲು ಬೇಕಾಗುವ ಸಾಮಗ್ರಿಗಳು

ಬೆಂಡೆಕಾಯಿ - 6

ಕಾರ್ನ್‌ಸ್ಟಾಚ್‌ - 1 ಸ್ಪೂನ್

ತೆಂಗಿನ ಎಣ್ಣೆ - 1 ಸ್ಪೂನ್

ಬಾದಾಮಿ/ಆಲಿವ್‌ ಎಣ್ಣೆ - 1 ಸ್ಪೂನ್

ಬೆಂಡೆಕಾಯಿ ಹೇರ್‌ ಕೆರಾಟಿನ್ ತಯಾರಿಸುವ ವಿಧಾನ

ಬೆಂಡೆಕಾಯಿ ತೊಳೆದು ಸಣ್ಣದಾಗಿ ಹೆಚ್ಚಿಕೊಳ್ಳಿ, ಅದಕ್ಕೆ 1 ದೊಡ್ಡ ಗ್ಲಾಸ್‌ ನೀರು ಸೇರಿಸಿ ಸ್ಟೋವ್‌ ಮೇಲಿಟ್ಟು 10-15 ನಿಮಿಷಗಳ ಕಾಲ ಮಧ್ಯಮ ಉರಿಯಲ್ಲಿ ಕುಕ್‌ ಮಾಡಿ ನಂತರ ಸ್ಟೋವ್‌ ಆಫ್‌ ಮಾಡಿ. ಈ ಮಿಶ್ರಣ ತಣ್ಣಗಾದಾಗ ಅದನ್ನು ಹ್ಯಾಂಡ್‌ ಬ್ಲೆಂಡರ್‌ ಅಥವಾ, ಮಿಕ್ಸಿಯಲ್ಲಿ ಬ್ಲೆಂಡ್‌ ಮಾಡಿ, ಒಂದು ಶುದ್ಧವಾದ ಬಟ್ಟೆಯಿಂದ ಶೋಧಿಸಿಕೊಳ್ಳಿ. ನಂತರ ಕಾರ್ನ್‌ಸ್ಟಾಚ್‌ಗೆ ಒಂದೆರಡು ಸ್ಪೂನ್‌ ನೀರು ಸೇರಿಸಿ ಗಂಟುಗಳು ಇಲ್ಲದಂತೆ ಮಿಕ್ಸ್‌ ಮಾಡಿ ಅದನ್ನು ಶೋಧಿಸಿಕೊಂಡ ಬೆಂಡೆಕಾಯಿ ಮಿಶ್ರಣಕ್ಕೆ ಸೇರಿಸಿ. ಮತ್ತೆ ಸ್ಟೋವ್‌ ಮೇಲಿಟ್ಟು ಬಿಡದಂತೆ ತಿರುವಿ. ಮಿಶ್ರಣ ಗಟ್ಟಿಯಾದಾಗ ಕೆಳಗಿಳಿಸಿ ತಣ್ಣಗಾಗಲು ಬಿಡಿ. ನಂತರ ಮೇಲೆ ತಿಳಿಸಿದ ಎಣ್ಣೆಗಳನ್ನೂ ಸೇರಿಸಿ ಎಲ್ಲವೂ ಹೊಂದಿಕೊಳ್ಳುವಂತೆ ಮಿಕ್ಸ್‌ ಮಾಡಿ.

ಕೂದಲಿಗೆ ಕೆರಾಟಿನ್‌ ಬಳಸುವುದು ಹೇಗೆ..?

ಕೂದಲನ್ನು ಸಣ್ಣ ಸಣ್ಣ ಭಾಗಗಳನ್ನಾಗಿ ಮಾಡಿಕೊಂಡು ಎಲ್ಲಾ ಕಡೆಗೂ ಕೆರಾಟಿನ್‌ ಪೇಸ್ಟ್‌ ಹಚ್ಚಿ. ಕೈ ಅಥವಾ ಬ್ರಷ್‌ ಯಾವುದನ್ನಾದರೂ ಬಳಸಬಹುದು. ಸುಮಾರು 2 ಗಂಟೆಗಳ ಕಾಲ ನಿಮ್ಮ ಕೂದಲನ್ನು ಯಾವ ಸೋಪು ಅಥವಾ ಶಾಂಪೂ ಬಳಸದೆ ತೊಳೆಯಿರಿ. ಹೇರ್‌ ಡ್ರೈಯರ್‌ ಬಳಸದೆ ನ್ಯಾಚುರಲ್‌ ಆಗಿ ಕೂದಲನ್ನು ಒಣಗಿಸಿ, ಮೊದಲ ವಾಶ್‌ನಲ್ಲೇ ನಿಮ್ಮ ಕೂದಲು ಎಷ್ಟು ಹೊಳಪಾಗಿ ಹಾಗೂ ಸ್ಟ್ರೇಟ್‌ ಆಗಿ ಇರುವುದನ್ನು ನೀವು ಗಮನಿಸಬಹುದು. 15 ದಿನಗಳಿಗೊಮ್ಮೆ ನೀವು ಈ ಹೋಮ್‌ ಮೇಡ್‌ ಕೆರಾಟಿನ್‌ ಪ್ಯಾಕ್‌ ಬಳಸಿದರೆ ಯಾವ ಬ್ಯೂಟಿ ಪಾರ್ಲರ್‌ಗೆ ಹೋಗುವ ಅವಶ್ಯಕತೆ ಇರುವುದಿಲ್ಲ.

ಬೆಂಡೆಕಾಯಿಯಲ್ಲಿ ಫೈಟೊಕೆರಾಟಿನ್ ಅಧಿಕವಾಗಿದೆ. ಇದು ಸೂಕ್ಷ್ಮ ಪೋಷಕಾಂಶಗಳು ಮತ್ತು ವಿಟಮಿನ್‌ಗಳನ್ನು ಕೂಡಾ ಒಳಗೊಂಡಿದೆ. ಕೂದಲಿಗೆ ಹೊಳಪು, ಮೃದುತ್ವ ಬರುವುದಲ್ಲದೆ ತಲೆಹೊಟ್ಟು ಕೂಡಾ ನಿವಾರಣೆಯಾಗುತ್ತದೆ.

 

 

ವಿಭಾಗ

    ಹಂಚಿಕೊಳ್ಳಲು ಲೇಖನಗಳು