logo
ಕನ್ನಡ ಸುದ್ದಿ  /  ಜೀವನಶೈಲಿ  /  Maruti Alto K10: ಹೊಸ ಮಾರುತಿ Alto K10 ಮಾರುಕಟ್ಟೆಗೆ; ಯಾವ ಕಾರು ಖರೀದಿಸ್ತೀರಿ ನೀವು?

Maruti Alto K10: ಹೊಸ ಮಾರುತಿ Alto K10 ಮಾರುಕಟ್ಟೆಗೆ; ಯಾವ ಕಾರು ಖರೀದಿಸ್ತೀರಿ ನೀವು?

HT Kannada Desk HT Kannada

Aug 23, 2022 11:09 AM IST

ಹೊಸ ಆಲ್ಟೊ ಕೆ10 ಬಿಡುಗಡೆ ಸಮಾರಂಭದಲ್ಲಿ, ಗುರುವಾರ, ಆಗಸ್ಟ್ 18ರಂದು ಮಾರುತಿ ಸುಜುಕಿ ಇಂಡಿಯಾ (ಎಂಎಸ್‌ಐಎಲ್) ಎಂಡಿ ಮತ್ತು ಸಿಇಒ ಹಿಸಾಶಿ ಟೇಕುಚಿ ಅವರು ಕಾರಿನ ಜತೆಗೆ (PTI Photo/Vijay Verma)

    • Maruti Alto K10: ಮಾರುತಿ ಆಲ್ಟೊ ಕೆ10 ಬೆಲೆ ಬಹಿರಂಗಗೊಂಡಿದೆ. ಮಾರುತಿ ಆಲ್ಟೊ ಕೆ10 ಕಾರು 1.0 ಲೀಟರ್ ಕೆ10ಸಿ ಪೆಟ್ರೋಲ್ ಎಂಜಿನ್ ಹೊಂದಿದ್ದು, 65.7 ಅಶ್ವಶಕ್ತಿಯ ಶಕ್ತಿಯ ಸಾಮರ್ಥ್ಯವನ್ನು ಹೊಂದಿದೆ. ಇದು ಐದು-ವೇಗದ AMT ಗೇರ್‌ಬಾಕ್ಸ್ ಟಾಪ್-ಸ್ಪೆಕ್ VXi ಮತ್ತು VXi+ ಟ್ರಿಮ್‌ಗಳೊಂದಿಗೆ ಮಾತ್ರ ಲಭ್ಯವಿದೆ. ನೀವು ಯಾವ ಕಾರನ್ನು ಖರೀದಿಸಲು ಯೋಜಿಸುತ್ತಿದ್ದೀರಿ?
ಹೊಸ ಆಲ್ಟೊ ಕೆ10 ಬಿಡುಗಡೆ ಸಮಾರಂಭದಲ್ಲಿ, ಗುರುವಾರ, ಆಗಸ್ಟ್ 18ರಂದು ಮಾರುತಿ ಸುಜುಕಿ ಇಂಡಿಯಾ (ಎಂಎಸ್‌ಐಎಲ್) ಎಂಡಿ ಮತ್ತು ಸಿಇಒ ಹಿಸಾಶಿ ಟೇಕುಚಿ ಅವರು ಕಾರಿನ ಜತೆಗೆ (PTI Photo/Vijay Verma)
ಹೊಸ ಆಲ್ಟೊ ಕೆ10 ಬಿಡುಗಡೆ ಸಮಾರಂಭದಲ್ಲಿ, ಗುರುವಾರ, ಆಗಸ್ಟ್ 18ರಂದು ಮಾರುತಿ ಸುಜುಕಿ ಇಂಡಿಯಾ (ಎಂಎಸ್‌ಐಎಲ್) ಎಂಡಿ ಮತ್ತು ಸಿಇಒ ಹಿಸಾಶಿ ಟೇಕುಚಿ ಅವರು ಕಾರಿನ ಜತೆಗೆ (PTI Photo/Vijay Verma) (PTI)

ಭಾರತದ ಮಟ್ಟಿಗೆ ಹೆಚ್ಚು ಚಾಲ್ತಿಯಲ್ಲಿರುವ ಕಾರು ಅಂದರೆ ಮಾರುತಿ ಸುಜುಕಿ ಕಂಪನಿಯದ್ದು. ಜನ ಸಾಮಾನ್ಯರ ಬಳಕೆಯ ಸೆಗ್ಮೆಂಟ್‌ನಲ್ಲಿ ಈ ಕಂಪನಿಯ ಮಾರುಕಟ್ಟೆ ಪಾಲು ಗರಿಷ್ಠ ಮಟ್ಟದ್ದು. ಆಲ್ಟೋ ಸರಣಿ ಅತ್ಯಂತ ಜನಪ್ರಿಯವಾದುದು.

ಟ್ರೆಂಡಿಂಗ್​ ಸುದ್ದಿ

ಮಾವಿನಹಣ್ಣಿನಿಂದ ತಯಾರಿಸಬಹುದು ಒಂದಲ್ಲ, ಎರಡಲ್ಲ ಮೂರು ಬಗೆಯ ಪಾಯಸ; ಈ ಭಾನುವಾರ ನೀವೂ ಮನೆಯಲ್ಲಿ ಟ್ರೈ ಮಾಡಿ, ರೆಸಿಪಿ ಇಲ್ಲಿದೆ

Relationship tips: ವರ್ಷಗಳು ಸರಿದರೂ ದಾಂಪತ್ಯದಲ್ಲಿ ಪ್ರೀತಿಯ ತಾಜಾತನ ಉಳಿಬೇಕು ಅಂದ್ರೆ ಈ 4 ನಿಯಮಗಳನ್ನು ತಪ್ಪದೇ ಪಾಲಿಸಿ

Personality Test: ಚಿತ್ರವನ್ನು ಕಂಡಾಕ್ಷಣ ನಿಮಗೆ ಮೊದಲು ಕಂಡಿದ್ದೇನು? ನಿಮ್ಮ ವ್ಯಕ್ತಿತ್ವದ ಕುರಿತ ರಹಸ್ಯ ವಿಚಾರ ತಿಳಿಸುತ್ತೆ ಈ ಚಿತ್ರ

Brain Teaser: 212=25, 214=47 ಆದ್ರೆ, 215 = ಎಷ್ಟು? ಗಣಿತದಲ್ಲಿ ನೀವು ಜಾಣರಾದ್ರೆ 10 ಸೆಕೆಂಡ್‌ನಲ್ಲಿ ಉತ್ತರ ಹೇಳಿ

ಆಟೋಮೊಬೈಲ್ ದಿಗ್ಗಜ ಕಂಪನಿಗಳ ಪೈಕಿ ಒಂದಾಗಿರುವ ಮಾರುತಿ ಸುಜುಕಿ ಇತ್ತೀಚೆಗೆ ತನ್ನ ಹೊಚ್ಚ ಹೊಸ ಆಲ್ಟೊ ಕೆ10 ಕಾರನ್ನು ಮಾರುಕಟ್ಟೆಗೆ ಪರಿಚಯಿಸಿದೆ. ನೀವು ಈ ಹೊಸ ತಲೆಮಾರಿನ ಆಲ್ಟೊ ಕಾರನ್ನು 11,000 ರೂಪಾಯಿ ಮುಂಗಡ ಪಾವತಿಸಿ ಬುಕ್ ಮಾಡಬಹುದು. ಈ ಕಾರನ್ನು ಮಾರುತಿ ಅರೆನಾ ಡೀಲರ್‌ಶಿಪ್ ಮೂಲಕ ಮಾರಾಟ ಮಾಡಲಾಗುತ್ತಿದೆ ಎಂದು ಹಿಂದುಸ್ತಾನ್ ಟೈಮ್ಸ್ ಕನ್ನಡದ ಸೋದರ ವೆಬ್‌ಸೈಟ್ ಲೈವ್ ಹಿಂದುಸ್ತಾನ್ ವರದಿ ಮಾಡಿದೆ.

Alto K10 STD MT ವೇರಿಯೆಂಟ್‌ನ ಬೆಲೆ 3.99 ಲಕ್ಷ ರೂಪಾಯಿ ಮತ್ತು LXi MT ವೇರಿಯೆಂಟ್‌ನ ಬೆಲೆ 4.82 ಲಕ್ಷ ರೂಪಾಯಿ, Alto K10 VXi MT ಮೌಲ್ಯ 4.99 ಲಕ್ಷ ರೂಪಾಯಿ ಮತ್ತು VXi+MT ಮೌಲ್ಯ 5.33 ಲಕ್ಷ ರೂಪಾಯಿ, VXi AT ಮಾದರಿಯನ್ನು ಖರೀದಿಸಲು ನೀವು 5.49 ಲಕ್ಷ ರೂಪಾಯಿ ಪಾವತಿಸಬೇಕಾಗುತ್ತದೆ. ಆದರೆ VXi + AT ಅನ್ನು 5.83 ಲಕ್ಷ ರೂಪಾಯಿ ಪಾವತಿಸಿ ಖರೀದಿಸಬಹುದು. ಮೇಲಿನ ಎಲ್ಲ ದರಗಳು ಕೂಡ ಎಕ್ಸ್ ಶೋರೂಂ ಬೆಲೆಗಳು ಎಂದು ಲೈವ್ ಹಿಂದೂಸ್ತಾನ್ ವರದಿ ಹೇಳಿದೆ.

ಮಾರುತಿ ಆಲ್ಟೊ K10 1.0 ಲೀಟರ್ K10C ಪೆಟ್ರೋಲ್ ಎಂಜಿನ್ ಹೊಂದಿದ್ದು, 65.7 ಅಶ್ವಶಕ್ತಿಯ ಶಕ್ತಿಯನ್ನು ಉತ್ಪಾದಿಸುತ್ತದೆ. ಇದು ಐದು-ವೇಗದ AMT ಗೇರ್‌ಬಾಕ್ಸ್ ಟಾಪ್-ಸ್ಪೆಕ್ VXi ಮತ್ತು VXi+ ಟ್ರಿಮ್‌ಗಳೊಂದಿಗೆ ಮಾತ್ರ ಲಭ್ಯವಿದೆ.

ಈ ಹೊಸ ಆಲ್ಟೊ ಕಾರು ಮ್ಯಾನುವಲ್ ಮಾದರಿಯಲ್ಲಿ ಲೀಟರ್‌ಗೆ 24.39 ಕಿಲೋ ಮೀಟರ್ ಮತ್ತು ಆಟೋಮ್ಯಾಟಿಕ್‌ ಮಾದರಿಯಲ್ಲಿ ಲೀಟರ್‌ಗೆ 24.90 ಕಿಲೋ ಮೀಟರ್ ಮೈಲೇಜ್ ನೀಡುತ್ತದೆ. ಇದು ಮೆಟಾಲಿಕ್ ಸಿಜ್ಲಿಂಗ್ ರೆಡ್, ಮೆಟಾಲಿಕ್ ಸಿಲ್ಕಿ ಸಿಲ್ವರ್, ಮೆಟಾಲಿಕ್ ಗ್ರಾನೈಟ್ ಗ್ರೇ, ಪರ್ಲ್ ಮೆಟಾಲಿಕ್ ಅರ್ಥ್ ಗೋಲ್ಡ್, ಮೆಟಾಲಿಕ್ ಸ್ಪೀಡಿ ಬ್ಲೂ ಮತ್ತು ಸೋಲ್ಡ್ ವೈಟ್ ಸೇರಿದಂತೆ ಆರು ಮೊನೊಟೋನ್ ಬಣ್ಣದ ಆಯ್ಕೆಗಳಲ್ಲಿ ಲಭ್ಯವಿದೆ.

ಹೊಸ ಆಲ್ಟೊ ಕೆ10 ರೆನಾಲ್ಟ್ ಕ್ವಿಡ್‌ನೊಂದಿಗೆ ನೇರ ಸ್ಪರ್ಧೆಯಲ್ಲಿದೆ. ಇದರ ಬೆಲೆ 4.64 ಲಕ್ಷ ರೂಪಾಯಿಯಿಂದ 5.99 ಲಕ್ಷ ರೂಪಾಯಿ ತನಕ ಇದೆ. ಈ ಹೊಸ ಕಾರು ಮಾರುತಿ ಸುಜುಕಿ S-PRESSO (4.25 ಲಕ್ಷ ರೂಪಾಯಿ- 5.99 ಲಕ್ಷ ರೂಪಾಯಿ) ಮತ್ತು ಆಲ್ಟೊ 800 ( 3.39 ಲಕ್ಷ ರೂಪಾಯಿ-5.03 ಲಕ್ಷ ರೂಪಾಯಿ) ಗಿಂತ ದುಬಾರಿಯಾಗಿದೆ.

    ಹಂಚಿಕೊಳ್ಳಲು ಲೇಖನಗಳು