logo
ಕನ್ನಡ ಸುದ್ದಿ  /  ಜೀವನಶೈಲಿ  /  ಹೊಸ ವರ್ಷಕ್ಕೆ ಬಂಪರ್‌ ರೀಚಾರ್ಜ್‌ ಆಫರ್‌ ಘೋಷಿಸಿದೆ ರಿಲಯನ್ಸ್‌ ಜಿಯೋ; ಉಳಿದೆಲ್ಲಾ ನೆಟ್‌ವರ್ಕ್‌ಗಿಂತ ಈ ಆಫರ್‌ ಹೇಗೆ ಭಿನ್ನ, ಇಲ್ಲಿದೆ ವಿವರ

ಹೊಸ ವರ್ಷಕ್ಕೆ ಬಂಪರ್‌ ರೀಚಾರ್ಜ್‌ ಆಫರ್‌ ಘೋಷಿಸಿದೆ ರಿಲಯನ್ಸ್‌ ಜಿಯೋ; ಉಳಿದೆಲ್ಲಾ ನೆಟ್‌ವರ್ಕ್‌ಗಿಂತ ಈ ಆಫರ್‌ ಹೇಗೆ ಭಿನ್ನ, ಇಲ್ಲಿದೆ ವಿವರ

Reshma HT Kannada

Dec 29, 2023 01:23 PM IST

ಜಿಯೊ

    • ವರ್ಷಕ್ಕಿರೋದು 365 ದಿನಗಳು. ಆದ್ರೆ ಜಿಯೋ ನಿಮಗಾಗಿ ನೀಡಿದೆ 389 ದಿನಗಳ ವ್ಯಾಲಿಡಿಟಿಯ ವಿಶೇಷ ಬಂಪರ್‌ ಆಫರ್‌. ಉಳಿದೆಲ್ಲಾ ಸಿಮ್‌ಗಳಿಗೆ ಹೋಲಿಸಿದ್ರೆ ಈ ಆಫರ್‌ನ ವಿಶೇಷವೇನು, ಇದರ ಮೊತ್ತ, ಏನೆಲ್ಲಾ ಸೌಲಭ್ಯಗಳು ಸಿಗಲಿವೆ ಎಂಬುದರ ವಿವರ ಇಲ್ಲಿದೆ.
ಜಿಯೊ
ಜಿಯೊ

ಭಾರತದಲ್ಲಿ ಸದ್ಯ ಬೆಸ್ಟ್‌ ಮೊಬೈಲ್‌ ಎನ್ನಿಸಿಕೊಂಡಿರುವುದು ರಿಯಲನ್ಸ್‌ ಜಿಯೋ. ಸಾಮಾನ್ಯವಾಗಿ ಹಳ್ಳಿ ಹಳ್ಳಿಗಳಲ್ಲೂ ಜಿಯೋ ಸಿಮ್‌ ಬಳಕೆ ಮಾಡುತ್ತಿದ್ದಾರೆ. ಅದಕ್ಕೆ ಕಾರಣ ವಿಶೇಷ ಆಫರ್‌ಗಳು ಹಾಗೂ ನೆಟ್‌ವರ್ಕ್‌ ಸಾಮರ್ಥ್ಯ. ಇದೀಗ ಜಿಯೋ ಮತ್ತೊಮ್ಮೆ ವಿಶೇಷ ಆಫರ್‌ ಘೋಷಿಸಿದೆ. 2024ರ ಹೊಸ ವರ್ಷಕ್ಕಾಗಿ ಏರ್‌ಟೆಲ್‌ ಫೋಷಿಸಿರುವ ಈ ಆಫರ್‌ ಭಾರತದ ಬಳಕೆದಾರರಿಗೆ ಲಭ್ಯವಿರುತ್ತದೆ. ಆದರೆ ಆಫರ್‌ ವಿರೋಧಿ ಕಂಪನಿಗಳಾದ ಏರ್‌ಟೆಲ್‌, ವೋಡಾಫೋನ್‌-ಐಡಿಯಾ ನೀಡಿದ ಆಫರ್‌ಗಳಿಗಿಂತ ಸಾಕಷ್ಟು ಭಿನ್ನವಾಗಿದೆ. ಹಾಗಾದ್ರೆ ಏನದು ವಿಶೇಷ ಆಫರ್‌ ಅಂತೀರಾ, ಮುಂದೆ ಓದಿ.

ಟ್ರೆಂಡಿಂಗ್​ ಸುದ್ದಿ

ಮಾವಿನಹಣ್ಣಿನಿಂದ ತಯಾರಿಸಬಹುದು ಒಂದಲ್ಲ, ಎರಡಲ್ಲ ಮೂರು ಬಗೆಯ ಪಾಯಸ; ಈ ಭಾನುವಾರ ನೀವೂ ಮನೆಯಲ್ಲಿ ಟ್ರೈ ಮಾಡಿ, ರೆಸಿಪಿ ಇಲ್ಲಿದೆ

Relationship tips: ವರ್ಷಗಳು ಸರಿದರೂ ದಾಂಪತ್ಯದಲ್ಲಿ ಪ್ರೀತಿಯ ತಾಜಾತನ ಉಳಿಬೇಕು ಅಂದ್ರೆ ಈ 4 ನಿಯಮಗಳನ್ನು ತಪ್ಪದೇ ಪಾಲಿಸಿ

Personality Test: ಚಿತ್ರವನ್ನು ಕಂಡಾಕ್ಷಣ ನಿಮಗೆ ಮೊದಲು ಕಂಡಿದ್ದೇನು? ನಿಮ್ಮ ವ್ಯಕ್ತಿತ್ವದ ಕುರಿತ ರಹಸ್ಯ ವಿಚಾರ ತಿಳಿಸುತ್ತೆ ಈ ಚಿತ್ರ

Brain Teaser: 212=25, 214=47 ಆದ್ರೆ, 215 = ಎಷ್ಟು? ಗಣಿತದಲ್ಲಿ ನೀವು ಜಾಣರಾದ್ರೆ 10 ಸೆಕೆಂಡ್‌ನಲ್ಲಿ ಉತ್ತರ ಹೇಳಿ

ಹೌದು ರಿಲಯನ್ಸ್‌ ಜಿಯೋ ಇದೇ ಬಾರಿಗೆ ತನ್ನ ವಾರ್ಷಿಕ ಪ್ಲಾನ್‌ನಲ್ಲಿ ಭಾರಿ ಬದಲಾವಣೆ ಮಾಡಿದೆ. ವಾರ್ಷಿಕ 365 ದಿನಗಳ ಆಫರ್‌ ಬದಲು 389 ದಿನಗಳ ವ್ಯಾಲಿಡಿಟಿ ಇರುವ ರೀಚಾರ್ಜ್‌ ಪ್ಲಾನ್‌ ಘೋಷಿಸಿದೆ. ಇದು ಖಂಡಿತ ಉಳಿದ ನೆಟ್‌ವರ್ಕ್‌ ಕಂಪನಿಗಳು ಭಾರಿ ಪೈಪೋಟಿ ನೀಡುವುದರಲ್ಲಿ ಅನುಮಾನವಿಲ್ಲ.

ಹಾಗಾದ್ರೆ ಏರ್‌ಟೆಲ್‌, ವೋಡಾಫೋನ್‌-ಐಡಿಯಾಕ್ಕೆ ಹೋಲಿಸಿದರೆ ಈ ವಿಶೇಷ ಆಫರ್‌ನಲ್ಲಿ ಏನೆಲ್ಲಾ ಇರಲಿದೆ ಗಮನಿಸಿ.

ರಿಲಯನ್ಸ್‌ ಜಿಯೋ 2,999ರ ಪ್ಲಾನ್‌: ಜಿಯೋ ಹೊಸ ವರ್ಷಕ್ಕೆ ಹೊಸದಾಗಿ ಪರಿಚಯಿಸಿದ ವಾರ್ಷಿಕ ಪ್ಲಾನ್‌ ಪ್ರಕಾರ ದಿನಕ್ಕೆ 2.5ಜಿಬಿ ಡೇಟಾ ಸಿಗಲಿದೆ. ದಿನದಲ್ಲಿ ಅಷ್ಟೂ ಜಿಬಿ ಖಾಲಿಯಾದ ಮೇಲೆ 64ಕೆಬಿಪಿಎಸ್‌ ಅನ್‌ಲಿಮಿಟೆಡ್‌ ಡೇಟಾ ಸಿಗಲಿದೆ. 5ಜಿ ಸ್ಪೀಡ್‌ನಲ್ಲಿ ಡೇಟಾ ಸಿಗಲಿದ್ದು, ಸದ್ಯ ದೇಶದ ಕೆಲವು ಭಾಗಗಳಲ್ಲಿ ಮಾತ್ರ 5ಜಿ ಸೌಲಭ್ಯವಿದೆ ಎಂಬುದನ್ನು ಮರಿಬೇಡಿ. ಇದರೊಂದಿಗೆ ಬಳಕೆದಾರರು ಅನ್‌ಲಿಮಿಟೆಡ್‌ ಕಾಲ್‌, ದಿನಕ್ಕೆ 100 ಉಚಿತ ಎಸ್‌ಎಂಎಸ್‌, ಇದರೊಂದಿಗೆ ಜಿಯೊಟಿವಿ, ಜಿಯೋ ಸಿನಿಮಾ ಹಾಗೂ ಜಿಯೋ ಕ್ಲಾಡ್‌ಗಳು ಉಚಿತವಾಗಿ ಸಿಗಲಿವೆ.

ಇದನ್ನೂ ಓದಿ: Airtel Annual Plans: ಪದೇ ಪದೇ ರೀಚಾರ್ಜ್‌ ಮಾಡಿ ಬೇಸರ ಆಗಿದ್ಯಾ, ಏರ್‌ಟೆಲ್‌ ನಿಮಗಾಗಿ ಘೋಷಿಸಿದೆ ವಿಶೇಷ ವಾರ್ಷಿಕ ಪ್ಲಾನ್‌, ವಿವರ ಹೀಗಿದೆ

ಇದು ಆರಂಭದಲ್ಲಿ 365 ದಿನಗಳ ವ್ಯಾಲಿಡಿಟಿಯನ್ನು ಹೊಂದಿದ್ದರೂ ಕೂಡ, ನಂತರ 24 ದಿನಗಳ ವ್ಯಾಲಿಡಿಟಿ ವೋಚರ್‌ ಹೊಂದಿರುತ್ತದೆ. ಹೀಗಾಗಿ ಒಟ್ಟು 389 ದಿನಗಳ ವ್ಯಾಲಿಡಿಟಿ ಇರುವ ಆಫರ್‌ ಇದಾಗಿದೆ.

ಏರ್‌ಟೆಲ್‌ ವಾರ್ಷಿಕ ಪ್ಲಾನ್‌, 3,350 ರೂ: ಏರ್‌ಟೆಲ್‌ 2024ರ ಹೊಸ ವರ್ಷಕ್ಕೆ 3,350 ರೂಗಳ ವಿಶೇಷ ಆಫರ್‌ ಫೋಷಿಸಿದೆ. ಇದರ ಪ್ರಕಾರ 365 ದಿನಗಳ ವ್ಯಾಲಿಡಿಟಿ ಇರಲಿದ್ದು, ಅನ್‌ಲಿಮಿಟೆಡ್‌ ಕಾಲಿಂಗ್‌ ಆಯ್ಕೆ, ದಿನಕ್ಕೆ 100 ಉಚಿತ ಎಸ್‌ಎಂಎಸ್‌, ದಿನಕ್ಕೆ 2.5ಜಿಬಿ ಡೇಟಾ 5ಜಿ ಸ್ಪೀಡ್‌ನಲ್ಲಿ ಸಿಗಲಿದೆ. ಇದರೊಂದಿಗೆ ಬಳಕೆದಾರರು ಫ್ರಿ ಹೆಲೊ ಟ್ಯೂನ್‌ ಹಾಗೂ ವಿಂಕ್‌ ಮ್ಯೂಸಿಕ್‌ ಸಬ್‌ಸ್ಕ್ರಿಪ್ಷನ್‌ ಕೂಡ ಪಡೆಯಬಹುದು. ಜೊತೆಗೆ 500 ರೂ ಮೌಲ್ಯದ 3ತಿಂಗಳ ಕಾಲ ಬಳಸಬಹುದಾದ ಡಿಸ್ನಿ+ ಹಾಟ್‌ಸ್ಟಾರ್‌ ಸಬ್‌ಸ್ಕ್ರಿಪ್ಷನ್‌ ಕೂಡ ಸಿಗಲಿದೆ.

ವೋಡಾಫೋನ್‌-ಐಡಿಯಾ ರೀಚಾರ್ಜ್‌ ಪ್ಲಾನ್‌, ರೂ 3,099: 365 ದಿನಗಳ ವೋಡಾಫೋನ್‌-ಐಡಿಯಾ ರಿಚಾರ್ಜ್‌ ಪ್ಲಾನ್‌ ಇದಾಗಿದ್ದು, ದಿನಕ್ಕೆ 2 ಜಿಬಿ ಡೇಟಾ ನೀಡುತ್ತದೆ. ಇದರಲ್ಲೂ ಅನ್‌ಲಿಮಿಟೆಡ್‌ ಕಾಲ್‌ ಹಾಗೂ 100 ಎಸ್‌ಎಂಎಸ್‌ ಆಯ್ಕೆ ಇರುತ್ತದೆ. ಇದರೊಂದಿಗೆ ಬಳಕೆದಾರರು ಬಿಂಗ್‌ ಆಲ್‌ ನೈಟ್‌ (ರಾತ್ರಿ 12 ರಿಂದ ಬೆಳಿಗ್ಗೆ 6ರವರೆಗೆ ಅನ್‌ಲಿಮಿಟೆಡ್‌ ಡೇಟಾ), ವೀಕೆಂಡ್‌ ಡೇಟಾ ರೂಲ್‌ಓವರ್‌, ವಿಐ ಮೂವೀಸ್‌ ಅಂಡ್‌ ಟಿವಿ, ಪ್ರತಿ ತಿಂಗಳಿಗೆ 2ಜಿಬಿ ಡೇಟಾ ಬ್ಯಾಕ್‌ಅಪ್‌ ಆಯ್ಕೆ ಕೂಡ ಇರುತ್ತದೆ.

ಈ ಮೇಲಿನ ಮೂರು ಆಫರ್‌ಗಳನ್ನು ಗಮನಿಸಿದಾಗ ಜಿಯೊ ವಾರ್ಷಿಕ ಆಫರ್‌ ಅತಿ ಕಡಿಮೆ ದರದಲ್ಲಿ 389ದಿನಗಳ ವ್ಯಾಲಿಡಿಟಿ ಇರುವ ರೀಚಾರ್ಜ್‌ ಪ್ಲಾನ್‌ ಪರಿಚಯಿಸಿದೆ. ಆದರೆ ಏರ್‌ಟೆಲ್‌ ಬಳಕೆದಾರರಿಗೆ ಡಿಸ್ನಿ ಹಾಟ್‌ಸ್ಟಾರ್‌ ವಿಶೇಷ ಸೌಲಭ್ಯ ಸಿಗಲಿದೆ.

ವಿಭಾಗ

    ಹಂಚಿಕೊಳ್ಳಲು ಲೇಖನಗಳು