logo
ಕನ್ನಡ ಸುದ್ದಿ  /  ಜೀವನಶೈಲಿ  /  ನಿಮ್ಮ ಸಂಗಾತಿಯೊಂದಿಗೆ ವಿವಾಹ ವಾರ್ಷಿಕೋತ್ಸವ ಹೀಗೆಲ್ಲಾ ಆಚರಿಸಬಹುದು; ಇಲ್ಲಿವೆ 14 ಸಿಂಪಲ್ ಐಡಿಯಾ

ನಿಮ್ಮ ಸಂಗಾತಿಯೊಂದಿಗೆ ವಿವಾಹ ವಾರ್ಷಿಕೋತ್ಸವ ಹೀಗೆಲ್ಲಾ ಆಚರಿಸಬಹುದು; ಇಲ್ಲಿವೆ 14 ಸಿಂಪಲ್ ಐಡಿಯಾ

HT Kannada Desk HT Kannada

May 08, 2024 12:11 PM IST

ನಿಮ್ಮ ಸಂಗಾತಿಯೊಂದಿಗೆ ವಿವಾಹ ವಾರ್ಷಿಕೋತ್ಸವ ಹೀಗೆಲ್ಲಾ ಆಚರಿಸಬಹುದು

    • ಮದುವೆಯಾಗಿ ಒಂದು ವರ್ಷ ಪೂರೈಸುತ್ತಿದ್ದಂತೆ ಬಹುತೇಕರು ವಿವಾಹ ವಾರ್ಷಿಕೋತ್ಸವ ಆಚರಿಸುತ್ತಾರೆ. ಆದರೆ, ಮುಂದಿನ ವರ್ಷಕ್ಕೆ ಮರೆತೇ ಬಿಡುವವರು ಅನೇಕರು. ಪ್ರತಿ ವರ್ಷದ ವಿವಾಹ ವಾರ್ಷಿಕೋತ್ಸವವನ್ನು ಮರೆಯದೆ ವಿಶಿಷ್ಟವಾಗಿ, ರೊಮ್ಯಾಂಟಿಕ್ ಆಗಿ ಆಚರಿಸುವ ಮೂಲಕ ಪತಿ-ಪತ್ನಿಯರ ನಡುವಿನ ಭಾಂದವ್ಯ ಮತ್ತಷ್ಟು ಗಟ್ಟಿಯಾಗಬಹುದು.
ನಿಮ್ಮ ಸಂಗಾತಿಯೊಂದಿಗೆ ವಿವಾಹ ವಾರ್ಷಿಕೋತ್ಸವ ಹೀಗೆಲ್ಲಾ ಆಚರಿಸಬಹುದು
ನಿಮ್ಮ ಸಂಗಾತಿಯೊಂದಿಗೆ ವಿವಾಹ ವಾರ್ಷಿಕೋತ್ಸವ ಹೀಗೆಲ್ಲಾ ಆಚರಿಸಬಹುದು (Pixel)

ಮದುವೆ ಅನ್ನೋದು ಪ್ರತಿಯೊಬ್ಬರ ಬದುಕಿನಲ್ಲಿ ಬರುವ ಹೊರ ಭರವಸೆ. ವಿವಾಹವಾಗಿ ಒಂದು ವರ್ಷವಾಗುತ್ತಿದ್ದಂತೆ ಬಹುತೇಕರು ತಮ್ಮ ವಿವಾಹ ವಾರ್ಷಿಕೋತ್ಸವವನ್ನು ಆಚರಿಸಿಕೊಳ್ಳುತ್ತಾರೆ. ಕೇವಲ ಒಂದು ವರ್ಷದ ವಿವಾಹ ವಾರ್ಷಿಕೋತ್ಸವ ಮಾತ್ರವಲ್ಲ, ಪ್ರತಿ ವರ್ಷ ತಮ್ಮ ವಿವಾಹ ವಾರ್ಷಿಕೋತ್ಸವದ ದಿನವನ್ನು ನೆನಪಿನಲ್ಲಿಟ್ಟುಕೊಳ್ಳುವುದು ಮತ್ತು ಅದನ್ನು ಆಚರಿಸುವುದು ನಿಮ್ಮ ಸಂಗಾತಿಯ ನಡುವೆ ಹಂಚಿಕೊಂಡಿರುವ ಪ್ರೀತಿ ಮತ್ತು ಬದ್ಧತೆಯನ್ನು ಗೌರವಿಸುವ ಒಂದು ವಿಶೇಷ ದಿನ. ಹೌದು, ಅದು ಮೊದಲ ವಿವಾಹ ವಾರ್ಷಿಕೋತ್ಸವವೇ ಇರಲಿ ಅಥವಾ 25ನೇ ವಾರ್ಷಿಕೋತ್ಸವವಾಗಲಿ, ಇದನ್ನು ಮತ್ತಷ್ಟು ಸ್ಮರಣೀಯವಾಗಿಸಬಹುದು. ನಿಮ್ಮ ಪ್ರೀತಿಯ ಪತಿ ಅಥವಾ ಪತ್ನಿಗೆ ಯಾವ ರೀತಿಯಾಗಿ ವಾರ್ಷಿಕೋತ್ಸವಕ್ಕೆ ಸರ್ಪೈಸ್ ಕೊಡಬಹುದು, ಅಥವಾ ಯಾವ ರೀತಿ ವಿಶೇಷವಾಗಿ ಆಚರಿಸಬಹುದು ಅನ್ನೋ ಐಡಿಯಾ ಇಲ್ಲಿದೆ.

ಟ್ರೆಂಡಿಂಗ್​ ಸುದ್ದಿ

ಪ್ರತಿನಿತ್ಯ ಕೇವಲ 10 ನಿಮಿಷ ಧ್ಯಾನ ಮಾಡಿದ್ರೆ ಸಾಕು, ನಿಮಗೆ ಈ 10 ರೀತಿಯ ಆರೋಗ್ಯ ಲಾಭಗಳು ಸಿಗಲಿದೆ

Mango Recipe: ಇಲ್ಲಿದೆ ಮ್ಯಾಂಗೋ ಮಲೈ ಖಾಂಡ್ವಿ ರೋಲ್‌ ರೆಸಿಪಿ; ಹೆಸರಷ್ಟೇ ಅಲ್ಲ ಈ ತಿಂಡಿಯ ರುಚಿಯೂ ಡಿಫ್ರೆಂಟ್‌

ಗಂಡು ಹೆಣ್ಣಿನ ಲಿಂಗ ತಾರತಮ್ಯ ನಿವಾರಣೆಗೆ ಪೋಷಕರ ವ್ಯಕ್ತಿತ್ವ, ಆಲೋಚನಾ ಕ್ರಮ ಹೇಗಿರಬೇಕು? ಮಕ್ಕಳ ಉತ್ತಮ ಮನಸ್ಥಿತಿಗೆ ಅಗತ್ಯ ವಿಧಾನಗಳಿವು

ಹಾಲು-ಮೀನು, ಪಾಲಕ್‌-ಪನೀರ್‌ ಆಯುರ್ವೇದದ ಪ್ರಕಾರ ಯಾವೆಲ್ಲಾ ಪದಾರ್ಥಗಳನ್ನು ಒಟ್ಟಿಗೆ ಸೇವಿಸಬಾರದು, ಇದರ ಪರಿಣಾಮ ಏನಾಗುತ್ತೆ ನೋಡಿ

ಮದುವೆ ವಾರ್ಷಿಕೋತ್ಸವ ಆಚರಣೆಯ ಐಡಿಯಾಗಳು

1. ವಿಶೇಷ ಕ್ಷಣವನ್ನು ಮರುಸೃಷ್ಟಿಸುವುದು

ನೀವು ಮದುವೆಗಿಂತ ಮುಂಚೆ ಮೊದಲ ಬಾರಿ ಭೇಟಿಯಾದ ಜಾಗಕ್ಕೆ ಮತ್ತೆ ಭೇಟಿ ನೀಡಬಹುದು. ಈಗೆಲ್ಲಾ ವಿಶೇಷ ಸಂದರ್ಭಕ್ಕಾಗಿ ಮದುವೆಯನ್ನು ಮರುಸೃಷ್ಟಿಸುವಂಥ ಈವೆಂಟ್ ಗಳು ಕೂಡ ಇವೆ. ಇಂಥ ಸ್ಥಳಗಳಿಗೆ ಭೇಟಿ ನೀಡಿ ಮತ್ತೆ ಮದುಮಗ-ಮದುಮಗಳಂತೆ ರೆಡಿಯಾಗಿ ಫೋಟೋ ತೆಗೆಸಿಕೊಳ್ಳಬಹುದು. ನಿಮ್ಮ ಪ್ರೀತಿ-ಪಾತ್ರರನ್ನು ಕೂಡ ಈ ವಿಶೇಷ ಸಂದರ್ಭಕ್ಕೆ ಆಮಂತ್ರಿಸಬಹುದು. ಇದು ನಿಮ್ಮ ಸಂತೋಷದ ಕ್ಷಣವನ್ನು ಮತ್ತಷ್ಟು ಇಮ್ಮಡಿಗೊಳ್ಳಿಸುತ್ತದೆ.

2. ಕ್ಯಾಂಡಲ್ ನೈಟ್ ಡಿನ್ನರ್

ಮನೆಯಲ್ಲಿ ಕ್ಯಾಂಡಲ್ ಲೈಟ್ ಡಿನ್ನರ್ ಆಯೋಜಿಸಬಹುದು. ಅಥವಾ ನಿಮ್ಮ ನೆಚ್ಚಿನ ರೆಸ್ಟೋರೆಂಟ್‌ನಲ್ಲಿ ಟೇಬಲ್ ಬುಕ್ ಮಾಡಿ. ಮೇಣದಬತ್ತಿ, ಮೃದುವಾದ ಸಂಗೀತದೊಂದಿಗೆ ಇಬ್ಬರೂ ಕೂತು ಊಟ ಮಾಡುವುದು ಮರೆಯಲಾರದ ಅನುಭವ.

3. ಸರ್ಪ್ರೈಸ್ ಪಾರ್ಟಿ

ಇಬ್ಬರೂ ಸೇರಿ ನಿರ್ಧಾರ ಮಾಡಿ ವಾರ್ಷಿಕೋತ್ಸವ ಆಚರಿಸುವುದಕ್ಕಿಂತ ನಿಮ್ಮ ಸಂಗಾತಿಗೆ ಸಪ್ರೈಸ್ ಕೊಟ್ಟರೆ ನಿಜಕ್ಕೂ ರೋಮಾಂಚಕ ಅನುಭವವಾಗಿರುತ್ತದೆ. ಈ ವಿಚಾರವನ್ನು ರಹಸ್ಯವಾಗಿಡಲು, ನೀವು ಅಂದುಕೊಂಡ ಪಾರ್ಟಿ ಸುಗಮವಾಗಿ ನಡೆಯಲು ನಿಮ್ಮ ಸ್ನೇಹಿತರು ಅಥವಾ ಕುಟುಂಬದ ಸಹಾಯ ತೆಗೆದುಕೊಳ್ಳಿ. ಬಲೂನ್, ನಿಮ್ಮಿಬ್ಬರ ಫೋಟೋಗಳಿಂದ ಸ್ಟೇಜ್ ಅಲಂಕರಿಸಿ. ಖಂಡಿತಾ ಇದು ನಿಮ್ಮ ಸಂಗಾತಿಗೆ ಅಚ್ಚರಿ ಜೊತೆಗೆ ಖುಷಿಯಾಗುವುದು ಪಕ್ಕಾ.

ಇದನ್ನೂ ಓದಿ | Garlic Benefits: ಪ್ರತಿದಿನ ಬೆಳ್ಳುಳ್ಳಿ ತಿಂದ್ರೆ ಕ್ಯಾನ್ಸರ್‌ ಬರೋಲ್ಲ, ಇದ್ರಿಂದ ಇನ್ನೂ ಎಷ್ಟೆಲ್ಲಾ ಪ್ರಯೋಜನಗಳಿವೆ ನೋಡಿ

6. ನಿಮ್ಮಿಬ್ಬರ (ಸಂಗಾತಿ) ಮರೆಯಲಾಗದ ವಿಡಿಯೋ ರಚಿಸಿ

ಮದುವೆಯ ದಿನದಿಂದ ವಾರ್ಷಿಕೋತ್ಸವದವರೆಗೆ ನೀವಿಬ್ಬರು ಸುತ್ತಾಡಿದ, ಪ್ರಯಾಣಿಸಿದ ಫೋಟೋಗಳನ್ನು ಒಟ್ಟುಗೂಡಿಸಿ ವಿಡಿಯೋ ರಚಿಸಿ. ವಿಶೇಷ ಫೋಟೋಗಳಿಗೆ ಅರ್ಥಪೂರ್ಣ ಸಂಗೀತವನ್ನು ಸಂಯೋಜಿಸಿ. ನಿಮ್ಮ ಧ್ವನಿಯಲ್ಲಿ ನಿಮ್ಮ ಸಂಗಾತಿಯ ಬಗ್ಗೆ ಎರಡು ಮಾತುಗಳನ್ನು ವಿಡಿಯೋದಲ್ಲಿ ತಿಳಿಸಿ.

7. ಪ್ರವಾಸ ಯೋಜಿಸಿ

ದೈನಂದಿನ ಒತ್ತಡದಿಂದ ಕೊಂಚ ಬ್ರೇಕ್ ತೆಗೆದುಕೊಂಡು ನಿಮ್ಮ ಸಂಗಾತಿಯೊಂದಿಗೆ ಪ್ರಣಯ ವಿಹಾರ ಕೈಗೊಳ್ಳಿ. ಯಾವುದಾದರೂ ಉತ್ತಮ ಸ್ಥಳದತ್ತ ಪ್ರವಾಸ ಮಾಡಿ. ಬೀಚ್‌ನಲ್ಲಿ ಪರಸ್ಪರ ಕೈ ಹಿಡಿದು ನಡೆಯುವುದು, ಸೂರ್ಯಾಸ್ತದ ವೇಳೆ ವಿಹಾರ ಇತ್ಯಾದಿ ಒಂಥರಾ ರೊಮ್ಯಾಂಟಿಕ್ ಅನುಭವವನ್ನು ನೀಡುತ್ತದೆ.

8. ಇಬ್ಬರೂ ಇಷ್ಟಪಡುವ ಚಟುವಟಿಕೆಗಳನ್ನು ಮಾಡುತ್ತಾ ದಿನ ಕಳೆಯಿರಿ

ನಿಮ್ಮಿಬ್ಬರಿಗೂ ಸಂತೋಷವನ್ನು ತರುವ ಚಟುವಟಿಕೆಗಳನ್ನು ಕೈಗೊಳ್ಳುತ್ತಾ ದಿನ ಕಳೆಯಿರಿ. ಈ ಮೂಲಕ ನಿಮ್ಮ ವಾರ್ಷಿಕೋತ್ಸವವನ್ನು ಆಚರಿಸಿ.

9. ಫೋಟೋಶೂಟ್ ಮಾಡಿ

ವೃತ್ತಿಪರ ಫೋಟೋಗ್ರಾಫರ್ ಅನ್ನು ಆಯ್ಕೆ ಮಾಡಿ ಉತ್ತಮ ಫೋಟೋಶೂಟ್ ಮಾಡಿಸಿ. ಬೆರಗುಗೊಳಿಸುವ ಬಟ್ಟೆಗಳನ್ನು ಧರಿಸಿ, ಉತ್ತಮ ಸ್ಥಳಗಳನ್ನು ಆಯ್ಕೆ ಮಾಡಿ ಫೋಟೋಶೂಟ್ ಮಾಡಿಸಿದರೆ ಇಬ್ಬರಿಗೂ ಖುಷಿಯೆನಿಸುತ್ತದೆ.

10. ಹೂವಿನ ಅಲಂಕಾರ

ಹೂವಿನಲಂಕಾರವನ್ನು ಮಾಡಿ ನಿಮ್ಮ ವಿವಾಹ ವಾರ್ಷಿಕೋತ್ಸವವನ್ನು ಸಡಗರ, ಸಂತೋಷದಿಂದ ಆಚರಿಸಿ. ಇದಕ್ಕಾಗಿ ನಿಮ್ಮ ಸಂಗಾತಿಗೆ ಇಷ್ಟವಾದ ಅಥವಾ ಪ್ರಿಯವಾದ ಹೂವುಗಳನ್ನು ನೀವು ಆಯ್ಕೆ ಮಾಡಬಹುದು. ಗುಲಾಬಿಗಳಿಂದ ಹಿಡಿದು ಮಲ್ಲಿಗೆ, ಸೇವಂತಿಗೆ ಹೂವು ಸೇರಿದಂತೆ ವಿವಿಧ ಬಗೆಯ ಹೂವಿನಲಂಕಾರವನ್ನು ಮಾಡಬಹುದು. ಇದು ನಿಮ್ಮ ವಿಶೇಷ ದಿನಕ್ಕಾಗಿ ರೋಮ್ಯಾಂಟಿಕ್ ವಾತಾವರಣವನ್ನು ಸೃಷ್ಟಿಸುತ್ತದೆ.

11. ಲೈಟಿಂಗ್

ಮೋಡಿಮಾಡುವ ವಾತಾವರಣವನ್ನು ಸೃಷ್ಟಿಸುವ ಸ್ಟ್ರಿಂಗ್ ಲೈಟ್‌ಗಳು, ಲ್ಯಾಂಟರ್ನ್‌ಗಳಂಥ ಆಕರ್ಷಕ ಬೆಳಕನ್ನು ಸಂಯೋಜಿಸುವುದರಿಂದ ವಿವಾಹ ವಾರ್ಷಿಕೋತ್ಸವವನ್ನು ಕಲರ್ ಫುಲ್ ಆಗಿ ಆಚರಿಸಬಹುದು. ವಿಭಿನ್ನ ಬಣ್ಣಗಳ ಬೆಳಕಿನೊಂದಿಗೆ ಸುಂದರವಾದ ಮೇಣದಬತ್ತಿಗಳು ಅಥವಾ ಎಲ್ಇಡಿ ದೀಪಗಳನ್ನು ಕೂಡ ಅಳವಡಿಸಬಹುದು.

12. ಕೇಕ್

ವಿವಾಹ ವಾರ್ಷಿಕೋತ್ಸವಕ್ಕೆ ಕೇಕ್ ಇಲ್ಲಾಂದ್ರೆ ಹೇಗೆ ಹೇಳಿ? ವಿಭಿನ್ನವಾಗಿ ಅಥವಾ ಒಂದೊಳ್ಳೆ ಥೀಮ್ ಇರುವ ಕೇಕ್ ಅನ್ನು ಆರ್ಡರ್ ಮಾಡಿ. ಅಥವಾ ನೀವೇ ಒಂದೊಳ್ಳೆ ಕೇಕ್ ತಯಾರಿಸಬಹುದು. ಇದು ನಿಮ್ಮ ಸಂಗಾತಿಗೆ ಖಂಡಿತಾ ಖುಷಿ ನೀಡುತ್ತದೆ.

13. ಸರ್ಪೈಸ್ ಉಡುಗೊರೆ

ನಿಮ್ಮ ಸಂಗಾತಿಗೆ ಸಪ್ರೈಸ್ ಉಡುಗೊರೆ ನೀಡಬಹುದು. ಬಟ್ಟೆ, ವಾಚ್, ಪರ್ಸ್, ಫೋಟೋ ಫ್ರೇಮ್ ಮುಂತಾದವುಗಳನ್ನು ಗಿಫ್ಟ್ ಆಗಿ ನೀಡಬಹುದು. ದುಬಾರಿ ಉಡುಗೊರೆ ಕೊಡುವಿರಾದರೆ ಮೊಬೈಲ್, ಕಾರು, ಆಭರಣ, ಡೈಮಂಡ್ ಮುಂತಾದವನ್ನು ಕೊಡಬಹುದು.

14. ಮನೆ ಅಲಂಕಾರ

ನಿಮ್ಮ ಮನೆಯನ್ನು ಸುಂದರವಾಗಿ, ಸೊಗಸಾಗಿ ಅಲಂಕಾರ ಮಾಡಬಹುದು. ಸಂಗಾತಿ ಮನೆಗೆ ಪ್ರವೇಶಿಸುತ್ತಿದ್ದಂತೆ ಗೃಹಲಂಕಾರವನ್ನು ನೋಡಿ ಮನಸೂರೆಗೊಳ್ಳುತ್ತದೆ. ಇದರಿಂದ ನಿಮ್ಮ ವಿವಾಹ ವಾರ್ಷಿಕೋತ್ಸವದ ಸಂಭ್ರಮಾಚರಣೆ ಮತ್ತಷ್ಟು ಇಮ್ಮಡಿಗೊಳ್ಳುತ್ತದೆ.

ಒಟ್ಟಿನಲ್ಲಿ ನಿಮ್ಮ ವಿವಾಹ ವಾರ್ಷಿಕೋತ್ಸವವನ್ನು ಪ್ರತಿ ವರ್ಷ ನೆನಪು ತರಿಸುವಂತೆ ಆಚರಿಸಿ. ಕೇವಲ ಮೊದಲನೇ ವರ್ಷ ಆಚರಿಸಿ ಸುಮ್ಮನಿರುವುದಲ್ಲ. ಪ್ರತಿ ವರ್ಷ ಆಚರಿಸುವುದರಿಂದ ಸಂಗಾತಿಗಳ ನಡುವಿನ ಪ್ರೀತಿ ಮತ್ತಷ್ಟು ಹೆಚ್ಚಾಗುತ್ತದೆ.

ವಿಭಾಗ

    ಹಂಚಿಕೊಳ್ಳಲು ಲೇಖನಗಳು