Brain Stroke: ಬಿರು ಬಿಸಿಲಿನ ನಡುವೆ ಹೆಚ್ಚುತ್ತಿದೆ ಮೆದುಳಿನ ಸ್ಟ್ರೋಕ್ ಪ್ರಕರಣ; ಇದಕ್ಕೆ ಕಾರಣವೇನು, ಇದರಿಂದ ಪಾರಾಗೋದು ಹೇಗೆ?
ಕನ್ನಡ ಸುದ್ದಿ  /  ಜೀವನಶೈಲಿ  /  Brain Stroke: ಬಿರು ಬಿಸಿಲಿನ ನಡುವೆ ಹೆಚ್ಚುತ್ತಿದೆ ಮೆದುಳಿನ ಸ್ಟ್ರೋಕ್ ಪ್ರಕರಣ; ಇದಕ್ಕೆ ಕಾರಣವೇನು, ಇದರಿಂದ ಪಾರಾಗೋದು ಹೇಗೆ?

Brain Stroke: ಬಿರು ಬಿಸಿಲಿನ ನಡುವೆ ಹೆಚ್ಚುತ್ತಿದೆ ಮೆದುಳಿನ ಸ್ಟ್ರೋಕ್ ಪ್ರಕರಣ; ಇದಕ್ಕೆ ಕಾರಣವೇನು, ಇದರಿಂದ ಪಾರಾಗೋದು ಹೇಗೆ?

ದಿನೇ ದಿನೇ ಏರುತ್ತಿರುವ ತಾಪಮಾನವು ಪ್ರಾಣಕ್ಕೂ ಕಂಟಕವಾಗಿದೆ. ಅತಿಯಾದ ಬಿಸಿಲಿನ ಕಾರಣಕ್ಕೆ ಮೆದುಳಿನ ಸ್ಟ್ರೋಕ್‌ ಪ್ರಕರಣಗಳು ಇದ್ದಕ್ಕಿದ್ದಂತೆ ಏರಿಕೆಯಾಗಿದೆ. ಏಸಿಯಲ್ಲಿ ಹೆಚ್ಚು ಸಮಯ ಕಳೆಯುವ ಹೈಬಿಪಿ ಹಾಗೂ ಡಯಾಬಿಟಿಸ್‌ ರೋಗಿಗಳು ಇದಕ್ಕೆ ಹೆಚ್ಚು ಬಲಿಯಾಗುತ್ತಿದ್ದಾರೆ. ಬ್ರೈನ್‌ ಸ್ಟ್ರೋಕ್‌ ಸಂಭವಿಸುತ್ತಿರುವುದಕ್ಕೆ ಕಾರಣವೇನು, ಇದರ ಲಕ್ಷಣಗಳ ಕುರಿತ ಮಾಹಿತಿ.

ಬೇಸಿಗೆಯಲ್ಲಿ ಮೆದುಳಿನ ಸ್ಟ್ರೋಕ್ ಅಪಾಯ ಹೆಚ್ಚು ಯಾಕೆ?
ಬೇಸಿಗೆಯಲ್ಲಿ ಮೆದುಳಿನ ಸ್ಟ್ರೋಕ್ ಅಪಾಯ ಹೆಚ್ಚು ಯಾಕೆ?

ಈ ವರ್ಷ ಭಾರತದಲ್ಲಿ ಬಿಸಿಲಿನ ತಾಪ ಬಹಳ ಜೋರಾಗಿದೆ. ಹಿಂದೆಂದೂ ಇಲ್ಲದಷ್ಟು ಉಷ್ಣಾಂಶ ಏರಿಕೆಯಾಗಿದೆ. ಸೂರ್ಯನೇ ಧರೆಗಿಳಿದು ಬಂದಂತಹ ಅನುಭವ. ಈ ಕಾರಣದಿಂದ ಹೊರಗಡೆ ಓಡಾಡುವುದು ಕಷ್ಟಸಾಧ್ಯವಾಗಿದೆ. ಬಿಸಿಗಾಳಿ, ಬಿಸಿಲಿನ ಕಾರಣದಿಂದ ಹೀಟ್‌ ಸ್ಟ್ರೋಕ್‌ (ಶಾಖಾಘಾತ) ಪ್ರಕರಣಗಳು ಮಾತ್ರವಲ್ಲ, ಬ್ರೈನ್‌ ಸ್ಟ್ರೋಕ್‌ (ಮೆದುಳಿನ ಸ್ಟ್ರೋಕ್‌) ಪ್ರಕರಣಗಳೂ ಹೆಚ್ಚುತ್ತಿವೆ. ಕಳೆದ ಕೆಲವು ದಿನಗಳಿಂದ ಆಸ್ಪತ್ರೆಗಳಲ್ಲಿ ಬ್ರೈನ್‌ ಸ್ಟ್ರೋಕ್‌ ರೋಗಿಗಳ ಸಂಖ್ಯೆ ಹೆಚ್ಚುತ್ತಿದೆ. ವೈದ್ಯರ ಪ್ರಕಾರ ಅಧಿಕ ರಕ್ತದೊತ್ತಡ ಹಾಗೂ ಮಧುಮೇಹ ಇರುವ ರೋಗಿಗಳು ಹೆಚ್ಚು ಮೆದುಳಿನ ಸ್ಟ್ರೋಕ್‌ಗೆ ಒಳಗಾಗುತ್ತಿದ್ದಾರೆ. ಇದಕ್ಕೆ ಪ್ರಮುಖ ಕಾರಣ ತೀವ್ರವಾದ ಶಾಖ ಮತ್ತು ಇದ್ದಕ್ಕಿದ್ದಂತೆ ಬದಲಾಗುವ ತಾಪಮಾನ. ಎಸಿ ಕೋಣೆ ಅಥವಾ ಕಾರಿನ ಏಸಿಯಲ್ಲಿ ಬಹಳಷ್ಟು ಹೊತ್ತು ಇದ್ದು, ಇದಕ್ಕಿದ್ದಂತೆ ಸೂರ್ಯನ ಬಿಸಿಲಿಗೆ ಒಡ್ಡಿಕೊಳ್ಳುವುದು ಅಥವಾ ಸೂರ್ಯನ ಬಿಸಿಲಿನಲ್ಲಿ ಬಹಳಷ್ಟು ಹೊತ್ತು ಇದ್ದು, ಇದ್ದಕ್ಕಿದ್ದಂತೆ ಏಸಿಯಲ್ಲಿ ಕುಳಿತವರಿಗೆ ಹೆಚ್ಚು ಮೆದುಳಿನ ಸ್ಟ್ರೋಕ್‌ ಆಗುತ್ತಿದೆ.

ಹೃದಯಾಘಾತದ ನಂತರ ಹೆಚ್ಚು ಸಾಯುತ್ತಿರುವವರ ಸಂಖ್ಯೆಯಲ್ಲಿ ಬ್ರೈನ್‌ ಸ್ಟ್ರೋಕ್‌ ಎರಡನೇ ಸ್ಥಾನ ಪಡೆದಿದೆ. ಅದರಲ್ಲೂ ಇತ್ತೀಚಿಗೆ ಮಹಿಳೆಯರೇ ಹೆಚ್ಚು ಬ್ರೈನ್‌ ಸ್ಟ್ರೋಕ್‌ಗೆ ಒಳಗಾಗುತ್ತಿದ್ದಾರೆ. ಜೊತೆಗೆ ಅಧಿಕ ರಕ್ತದೊತ್ತಡ ಅಥವಾ ಮಧುಮೇಹದಿಂದ ಬಳಲುತ್ತಿರುವ 50 ರಿಂದ 60 ವರ್ಷ ವಯಸ್ಸಿನವರಲ್ಲಿ ಈ ಸಮಸ್ಯೆ ಹೆಚ್ಚುತ್ತಿದೆ.

ಮೆದುಳಿನ ಸ್ಟ್ರೋಕ್‌ನ ಲಕ್ಷಣಗಳು

* ದೇಹದ ಒಂದು ಭಾಗದಲ್ಲಿ ವ್ಯತ್ಯಾಸಗಳು ಕಾಣಿಸುವುದು

* ಮುಖ, ಕೈ ಮತ್ತು ಕಾಲುಗಳ ಮರಗಟ್ಟುವಿಕೆ

* ಮಾತನಾಡಲು ತೊಂದರೆಯಾಗುವುದು

* ದೃಷ್ಟಿ ಸಮಸ್ಯೆ

* ತೀವ್ರ ತಲೆನೋವು

* ವಾಂತಿ ಮತ್ತು ವಾಕರಿಕೆ

* ದೇಹ ತೀವ್ರ ಬಿಗಿದಂತಹ ಅನುಭವ

ಮೆದುಳಿನ ಸ್ಟ್ರೋಕ್‌ನಲ್ಲಿ ಎಷ್ಟು ವಿಧಗಳಿವೆ?

ವೈದ್ಯರ ಪ್ರಕಾರ ಮೆದುಳಿನ ಸ್ಟ್ರೋಕ್‌ನಲ್ಲಿ ಎರಡು ವಿಧಗಳಿವೆ. ಅದರಲ್ಲಿ ಮೊದಲನೆಯದು ಭೂಕಂಪನ ಸ್ಟ್ರೋಕ್ (seismic stroke). ಈ ಪರಿಸ್ಥಿತಿಯಲ್ಲಿ, ಕೆಲವು ಕಾರಣಗಳಿಂದಾಗಿ, ಮೆದುಳಿನ ರಕ್ತನಾಳಗಳಲ್ಲಿ ರಕ್ತ ಪರಿಚಲನೆ ನಿಲ್ಲುತ್ತದೆ. ಇದು ಮೆದುಳಿನ ರಕ್ತಸ್ರಾವದ ಅಪಾಯವನ್ನು ಶೇಕಡಾ 99 ರಷ್ಟು ಹೆಚ್ಚಿಸುತ್ತದೆ. ಮತ್ತೊಂದೆಡೆ, ಹೆಮರಾಜಿಕ್ ಸ್ಟ್ರೋಕ್ (hemorrhagic stroke) ಸಂಭವಿಸುತ್ತದೆ, ಇದರಲ್ಲಿ ಮೆದುಳಿನ ಅಭಿಧಮನಿಯ ಛಿದ್ರದಿಂದಾಗಿ ರಕ್ತದ ಹರಿವು ಹೆಚ್ಚಾಗುತ್ತದೆ. ಇದು ದೇಹದ ಯಾವುದೇ ಭಾಗದಲ್ಲಿ ಪಾರ್ಶ್ವವಾಯುವಿಗೆ ಕಾರಣವಾಗಬಹುದು.

ಮೆದುಳಿನ ಸ್ಟ್ರೋಕ್‌ ಆಗದಂತೆ ತಪ್ಪಿಸುವುದು ಹೇಗೆ?

* ಮೆದುಳಿನ ಸ್ಟ್ರೋಕ್ ಸಂಭವಿಸಿದಾಗ, ಮೊದಲ 1 ಗಂಟೆ ಬಹಳ ಮುಖ್ಯವಾಗಿದೆ. ರೋಗಿಯನ್ನು ತಕ್ಷಣ ವೈದ್ಯರ ಬಳಿಗೆ ಕರೆದೊಯ್ಯಿರಿ.

* ಅತಿಯಾದ ಎಸಿ ಮತ್ತು ಅತಿಯಾದ ಬಿಸಿಲಿಗೆ ದೇಹ ಒಡ್ಡಿಕೊಳ್ಳುವುದನ್ನು ತಪ್ಪಿಸಿ.

* ಬಿಸಿಲಿನಿಂದ ಹೊರಬಂದ ತಕ್ಷಣ ಎಸಿಗೆ ಹೋಗಬೇಡಿ.

* ಕಾಲಕಾಲಕ್ಕೆ ನಿಮ್ಮ ರಕ್ತದೊತ್ತಡ ಮತ್ತು ಸಕ್ಕರೆಯನ್ನು ಪರೀಕ್ಷಿಸಿ. * ಬಿಸಿಲಿನಲ್ಲಿ ಹೆಚ್ಚು ಹೊತ್ತು ಇರಬೇಡಿ, ಅದು ಶಾಖದ ಹೊಡೆತಕ್ಕೆ ಕಾರಣವಾಗಬಹುದು.

* ನಿಮಗೆ ನೋಡಲು ಅಥವಾ ಅರ್ಥಮಾಡಿಕೊಳ್ಳಲು ತೊಂದರೆ ಇದ್ದರೆ ವೈದ್ಯರನ್ನು ಸಂಪರ್ಕಿಸಿ.

Whats_app_banner