logo
ಕನ್ನಡ ಸುದ್ದಿ  /  ಜೀವನಶೈಲಿ  /  Fd Rates: ಈ ಬ್ಯಾಂಕ್​​ಗಳಲ್ಲಿ 3 ವರ್ಷದ ಎಫ್​ಡಿ ಮಾಡಿದ್ರೆ ನಿಮಗೆ ಸಿಗತ್ತೆ ಅಧಿಕ ಬಡ್ಡಿ

FD rates: ಈ ಬ್ಯಾಂಕ್​​ಗಳಲ್ಲಿ 3 ವರ್ಷದ ಎಫ್​ಡಿ ಮಾಡಿದ್ರೆ ನಿಮಗೆ ಸಿಗತ್ತೆ ಅಧಿಕ ಬಡ್ಡಿ

Meghana B HT Kannada

Jan 10, 2024 07:00 AM IST

ಬ್ಯಾಂಕ್ ಆಫ್ ಬರೋಡಾ (ಎಡಚಿತ್ರ), ಆ್ಯಕ್ಸಿಸ್​ ಬ್ಯಾಂಕ್ (ಬಲಚಿತ್ರ)

    • Fixed deposits: ಸಾರ್ವಜನಿಕ ಹಾಗೂ ಖಾಸಗಿ ವಲಯದ ಬ್ಯಾಂಕುಗಳ ಪೈಕಿ 3 ವರ್ಷದ ಸ್ಥಿರ ಠೇವಣಿಗೆ ಹೆಚ್ಚು ಬಡ್ಡಿದರ ನೀಡುವ ಬ್ಯಾಂಕ್​ ಯಾವುದು? ಯಾವ್ಯಾವ ಬ್ಯಾಂಕ್​​ಗಳಳು ಎಷ್ಟು ಬಡ್ಡಿ ನೀಡುತ್ತೆ ಎಂಬುದರ ಮಾಹಿತಿ ಇಲ್ಲಿದೆ. 
ಬ್ಯಾಂಕ್ ಆಫ್ ಬರೋಡಾ (ಎಡಚಿತ್ರ), ಆ್ಯಕ್ಸಿಸ್​ ಬ್ಯಾಂಕ್ (ಬಲಚಿತ್ರ)
ಬ್ಯಾಂಕ್ ಆಫ್ ಬರೋಡಾ (ಎಡಚಿತ್ರ), ಆ್ಯಕ್ಸಿಸ್​ ಬ್ಯಾಂಕ್ (ಬಲಚಿತ್ರ)

ನೀವು ಬ್ಯಾಂಕ್​​ಗಳಲ್ಲಿ ಹಣ ಉಳಿತಾಯ ಮಾಡಬೇಕೆಂದು ಯೋಚಿಸುತ್ತಿದ್ದರೆ ಈ ಕೆಳಕಂಡ ಬ್ಯಾಂಕ್​​ಗಳಲ್ಲಿನ ಸ್ಥಿರ ಠೇವಣಿ (Fixed deposits) ಬಗ್ಗೆ ತಿಳಿದುಕೊಳ್ಳಿ. ಇಲ್ಲಿ ನೀವು 3 ವರ್ಷದ ಎಫ್​ಡಿ ಮಾಡಿದ್ರೆ ನಿಮಗೆ ಶೇ 7.25 ವರೆಗೆ ಬಡ್ಡಿ ಸಿಗತ್ತೆ. ಹೆಚ್ಚು ಬಡ್ಡಿ ನೀಡುವ 10 ಬ್ಯಾಂಕ್​​ಗಳ ಲಿಸ್ಟ್ ಇಲ್ಲಿದೆ. ಭವಿಷ್ಯದಲ್ಲಿ ಸ್ಥಿರ ಠೇವಣಿಗಳು ನಿಮಗೆ ಸಹಾಯಕ್ಕೆ ಬರುತ್ತದೆ.

ಟ್ರೆಂಡಿಂಗ್​ ಸುದ್ದಿ

ಗಂಡು ಹೆಣ್ಣಿನ ಲಿಂಗ ತಾರತಮ್ಯ ನಿವಾರಣೆಗೆ ಪೋಷಕರ ವ್ಯಕ್ತಿತ್ವ, ಆಲೋಚನಾ ಕ್ರಮ ಹೇಗಿರಬೇಕು? ಮಕ್ಕಳ ಉತ್ತಮ ಮನಸ್ಥಿತಿಗೆ ಅಗತ್ಯ ವಿಧಾನಗಳಿವು

ಹಾಲು-ಮೀನು, ಪಾಲಕ್‌-ಪನೀರ್‌ ಆಯುರ್ವೇದದ ಪ್ರಕಾರ ಯಾವೆಲ್ಲಾ ಪದಾರ್ಥಗಳನ್ನು ಒಟ್ಟಿಗೆ ಸೇವಿಸಬಾರದು, ಇದರ ಪರಿಣಾಮ ಏನಾಗುತ್ತೆ ನೋಡಿ

ಮಳೆಗಾಲದಲ್ಲಿ ಕೇರಳಕ್ಕೆ ಟ್ರಿಪ್‌ ಹೋಗುವ ಪ್ಲಾನ್‌ ಇದ್ರೆ, ಈ 10 ಸಾಂಪ್ರದಾಯಿಕ ತಿನಿಸುಗಳನ್ನು ಟೇಸ್ಟ್‌ ಮಾಡದೇ ಬರಬೇಡಿ

Yoga Asanas: ತೂಕ ಇಳಿಯುವ ಜೊತೆಗೆ ದೇಹ ಫಿಟ್‌ ಆಗಿರಬೇಕಾ? ಈ ಸರಳ ಯೋಗಾಸನಗಳನ್ನ ಮನೆಯಲ್ಲೇ ಅಭ್ಯಾಸ ಮಾಡಿ

ಬ್ಯಾಂಕ್ ಆಫ್ ಬರೋಡಾ: ಸಾರ್ವಜನಿಕ ವಲಯದ ಬ್ಯಾಂಕುಗಳ ಪೈಕಿ ಬ್ಯಾಂಕ್ ಆಫ್ ಬರೋಡಾ ಅತ್ಯುತ್ತಮ ಬಡ್ಡಿದರ ನೀಡುವ ಬ್ಯಾಂಕ್​ ಆಗಿದೆ. ಇಲ್ಲಿ ನೀವು ಮೂರು ವರ್ಷಗಳ ಎಫ್​ಡಿಗೆ 1 ಲಕ್ಷ ರೂಪಾಯಿ ಡೆಪಾಟಿಟ್​ ಮಾಡಿದರೆ ಮೂರು ವರ್ಷದ ಬಳಿಕ ನಿಮಗೆ ಶೇ 7.25 ವರೆಗೆ ಬಡ್ಡಿ ಸಿಗುತ್ತದೆ. ಅಂದರೆ 1.25 ಲಕ್ಷ ರೂಪಾಯಿ ನಿಮಗೆ ಸಿಗುತ್ತದೆ.

ಆ್ಯಕ್ಸಿಸ್​ ಬ್ಯಾಂಕ್​: ಮೂರು ವರ್ಷಗಳ ಎಫ್​ಡಿ ಮೇಲೆ ಆ್ಯಕ್ಸಿಸ್​ ಬ್ಯಾಂಕ್ 7.10 ಪ್ರತಿಶತದವರೆಗೆ ಬಡ್ಡಿದರಗಳನ್ನು ನೀಡುತ್ತದೆ. ಖಾಸಗಿ ವಲಯದ ಬ್ಯಾಂಕುಗಳಲ್ಲಿ, ಈ ಬ್ಯಾಂಕ್ ಅತ್ಯುತ್ತಮ ಬಡ್ಡಿದರಗಳನ್ನು ನೀಡುತ್ತದೆ. ಇಲ್ಲಿ ಹೂಡಿಕೆ ಮಾಡಿದ 1 ಲಕ್ಷ ರೂಪಾಯಿ ಮೂರು ವರ್ಷಗಳಲ್ಲಿ 1.24 ಲಕ್ಷಕ್ಕೆ ಬೆಳೆಯುತ್ತದೆ.

ಎಚ್​​ಡಿಎಫ್​ಸಿ ಬ್ಯಾಂಕ್​​, ಪಂಜಾಬ್ ನ್ಯಾಷನಲ್ ಬ್ಯಾಂಕ್ ಮತ್ತು ಐಸಿಐಸಿಐ ಬ್ಯಾಂಕ್​​: ಈ ಮೂರೂ ಬ್ಯಾಂಕ್​​ಗಳು ಮೂರು ವರ್ಷಗಳ FD ಗಳ ಮೇಲೆ 7 ಪ್ರತಿಶತದವರೆಗೆ ಬಡ್ಡಿದರಗಳನ್ನು ನೀಡುತ್ತವೆ. ಇಲ್ಲಿ ಹೂಡಿಕೆ ಮಾಡಿದ 1 ಲಕ್ಷ ರೂ.ಗಳ ಮೊತ್ತವು ಮೂರು ವರ್ಷಗಳಲ್ಲಿ 1.23 ಲಕ್ಷಕ್ಕೆ ಬೆಳೆಯುತ್ತದೆ.

ಕೆನರಾ ಬ್ಯಾಂಕ್: ಇದು ಮೂರು ವರ್ಷಗಳ ಸ್ಥಿರ ಠೇವಣಿ ಮೇಲೆ 6.80 ಪ್ರತಿಶತದವರೆಗೆ ಬಡ್ಡಿದರಗಳನ್ನು ನೀಡುತ್ತದೆ. ಇಲ್ಲಿ 1 ಲಕ್ಷ ರೂ ಹೂಡಿಕೆ ಮಾಡಿದರೆ ಮೂರು ವರ್ಷಗಳಲ್ಲಿ 1.22 ಲಕ್ಷ ರೂ. ನಿಮಗೆ ಸಿಗುತ್ತದೆ.

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್​ಬಿಐ): ಮೂರು ವರ್ಷಗಳ ಫಿಕ್ಸಡ್​ ಡೆಪಾಸಿಟ್​ ಮೇಲೆ 6.75 ಪ್ರತಿಶತದವರೆಗೆ ಬಡ್ಡಿದರಗಳನ್ನು ನೀಡುತ್ತದೆ. ಇಲ್ಲಿ ಹೂಡಿಕೆ ಮಾಡಿದ 1 ಲಕ್ಷ ರೂ.ಗಳ ಮೊತ್ತವು ಮೂರು ವರ್ಷಗಳಲ್ಲಿ 1.22 ಲಕ್ಷಕ್ಕೆ ಬೆಳೆಯುತ್ತದೆ.

ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಮತ್ತು ಬ್ಯಾಂಕ್ ಆಫ್ ಇಂಡಿಯಾ: ಈ ಎರಡೂ ಬ್ಯಾಂಕ್​​ಗಳು ಮೂರು ವರ್ಷಗಳ ಎಫ್​ಡಿ ಮೇಲೆ 6.50 ಪ್ರತಿಶತದವರೆಗೆ ಬಡ್ಡಿದರವನ್ನು ನೀಡುತ್ತವೆ. ಇಲ್ಲಿ ಹೂಡಿಕೆ ಮಾಡಿದ 1 ಲಕ್ಷ ರೂ.ಗಳ ಮೊತ್ತವು ಮೂರು ವರ್ಷಗಳಲ್ಲಿ 1.21 ಲಕ್ಷಕ್ಕೆ ಬೆಳೆಯುತ್ತದೆ.

ಇಂಡಿಯನ್ ಬ್ಯಾಂಕ್: ಮೂರು ವರ್ಷಗಳ ಸ್ಥಿರ ಠೇವಣಿ ಮೇಲೆ ಶೇಕಡಾ 6.25 ರವರೆಗೆ ಬಡ್ಡಿದರಗಳನ್ನು ನೀಡುತ್ತದೆ. ಇಲ್ಲಿ 1 ಲಕ್ಷ ರೂ ಹೂಡಿಕೆ ಮಾಡಿದರೆ ಮೂರು ವರ್ಷಗಳಲ್ಲಿ 1.20 ಲಕ್ಷ ರೂ. ನಿಮಗೆ ಸಿಗುತ್ತದೆ.

    ಹಂಚಿಕೊಳ್ಳಲು ಲೇಖನಗಳು