logo
ಕನ್ನಡ ಸುದ್ದಿ  /  ಜೀವನಶೈಲಿ  /  Sbi: ಎಸ್‌ಬಿಐ ಅಪ್ರೆಂಟಿಸ್ ಪರೀಕ್ಷೆ ಎದುರಿಸುತ್ತಿದ್ದೀರಾ? ಅದರ ಪ್ರಯೋಜನ, ಆಯ್ಕೆ ಪ್ರಕ್ರಿಯೆ ಮತ್ತು ಪರೀಕ್ಷೆಯ ಮಾದರಿ ಇಲ್ಲಿದೆ

SBI: ಎಸ್‌ಬಿಐ ಅಪ್ರೆಂಟಿಸ್ ಪರೀಕ್ಷೆ ಎದುರಿಸುತ್ತಿದ್ದೀರಾ? ಅದರ ಪ್ರಯೋಜನ, ಆಯ್ಕೆ ಪ್ರಕ್ರಿಯೆ ಮತ್ತು ಪರೀಕ್ಷೆಯ ಮಾದರಿ ಇಲ್ಲಿದೆ

HT Kannada Desk HT Kannada

Nov 26, 2023 07:00 AM IST

ಎಸ್‌ಬಿಐ ಅಪ್ರೆಂಟಿಸ್ ಪರೀಕ್ಷೆಗಾಗಿ ಮಾಹಿತಿ

    • SBI Apprentice Exam 2023: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) 6,160 ಅಪ್ರೆಂಟಿಸ್‌ಗಳ ನೇಮಕಾತಿಗಾಗಿ ಡಿಸೆಂಬರ್ 4 ಮತ್ತು 7 ರಂದು ಅಪ್ರೆಂಟಿಸ್ ಪರೀಕ್ಷೆ–2023 ನಡೆಸಲಿದೆ. ಈ ಪರೀಕ್ಷೆ ಹೇಗೆ ಪ್ರಯೋಜನಕಾರಿಯಾಗಿದೆ ಮತ್ತು ಆಯ್ಕೆ ಪ್ರಕ್ರಿಯೆ ಹಾಗೂ ಪರೀಕ್ಷೆಯ ಮಾದರಿ ಹೇಗೆ ಇಲ್ಲಿದೆ ಓದಿ.
ಎಸ್‌ಬಿಐ ಅಪ್ರೆಂಟಿಸ್ ಪರೀಕ್ಷೆಗಾಗಿ ಮಾಹಿತಿ
ಎಸ್‌ಬಿಐ ಅಪ್ರೆಂಟಿಸ್ ಪರೀಕ್ಷೆಗಾಗಿ ಮಾಹಿತಿ

ಭಾರತದ ಪ್ರತಿಷ್ಠಿತ ಬ್ಯಾಂಕ್‌ ಆದ ಎಸ್‌ಬಿಐ (SBI) ವಿವಿಧ ಬ್ಯಾಂಕ್‌ ಶಾಖೆಗಳಲ್ಲಿ ಪದವೀಧರರನ್ನು ಅಪ್ರೆಂಟಿಸ್‌ ಆಗಿ ನೇಮಿಸಿಕೊಳ್ಳಲಿದೆ. ಇದು ಒಂದು ವರ್ಷದ ಅವಧಿಗೆ ನೇಮಿಸಿಕೊಳ್ಳುವ ಅಪ್ರೆಂಟಿಸ್‌ಶಿಪ್‌ ಕಾರ್ಯಕ್ರಮವಾಗಿದೆ. ಪ್ರತಿ ವರ್ಷ ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ ಅಪ್ರೆಂಟಿಸ್‌ ಕ್ಲರ್ಕ್‌ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳನ್ನು ನೇಮಕಾತಿ ಮಾಡಿಕೊಳ್ಳುವ ಸಲುವಾಗಿ ಎಸ್‌ಬಿಐ ಅಪ್ರೆಂಟಿಸ್‌ ಎಕ್ಸಾಮ್‌ ನಡೆಸುತ್ತದೆ. ಈ ವರ್ಷ ಅದು 6,160 ಅಪ್ರೆಂಟಿಸ್‌ಗಳ ನೇಮಕಾತಿಗಾಗಿ ಡಿಸೆಂಬರ್‌ 4 ಮತ್ತು 7 ರಂದು ಪರೀಕ್ಷೆ ನಡೆಸಲಿದೆ. ಈ ಪರೀಕ್ಷೆಯಲ್ಲಿ ಪಾಲ್ಗೊಳ್ಳುವವರಿಗೆ ಸೂಕ್ತ ಮಾಹಿತಿ ಇಲ್ಲಿದೆ.

ಟ್ರೆಂಡಿಂಗ್​ ಸುದ್ದಿ

ಮಳೆಗಾಲದಲ್ಲಿ ಕೇರಳಕ್ಕೆ ಟ್ರಿಪ್‌ ಹೋಗುವ ಪ್ಲಾನ್‌ ಇದ್ರೆ, ಈ 10 ಸಾಂಪ್ರದಾಯಿಕ ತಿನಿಸುಗಳನ್ನು ಟೇಸ್ಟ್‌ ಮಾಡದೇ ಬರಬೇಡಿ

Yoga Asanas: ತೂಕ ಇಳಿಯುವ ಜೊತೆಗೆ ದೇಹ ಫಿಟ್‌ ಆಗಿರಬೇಕಾ? ಈ ಸರಳ ಯೋಗಾಸನಗಳನ್ನ ಮನೆಯಲ್ಲೇ ಅಭ್ಯಾಸ ಮಾಡಿ

ಡಯಾಬಿಟಿಸ್‌ ಬಗ್ಗೆ ಚಿಂತೆ ಬೇಡ; ಸಕ್ಕರೆ ಮಟ್ಟವನ್ನು ನಿಯಂತ್ರಿಸಿ, ಆರೋಗ್ಯ ಕಾಪಾಡಿಕೊಳ್ಳಲು ಮಧುಮೇಹಿಗಳು ತಪ್ಪದೇ ಪಾಲಿಸಬೇಕಾದ ನಿಯಮಗಳಿವು

ಮಾವಿನಹಣ್ಣಿನಿಂದ ತಯಾರಿಸಬಹುದು ಒಂದಲ್ಲ, ಎರಡಲ್ಲ ಮೂರು ಬಗೆಯ ಪಾಯಸ; ಈ ಭಾನುವಾರ ನೀವೂ ಮನೆಯಲ್ಲಿ ಟ್ರೈ ಮಾಡಿ, ರೆಸಿಪಿ ಇಲ್ಲಿದೆ

ಎಸ್‌ಬಿಐ ಅಪ್ರೆಂಟಿಸ್‌ ಪರೀಕ್ಷೆ 2023 ಯ ವಿವರ

ಸಂಸ್ಥೆ: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ

ಹುದ್ದೆಯ ಹೆಸರು: ಅಪ್ರೆಂಟಿಸ್‌ಶಿಪ್

ಎಸ್‌ಬಿಐ ಅಪ್ರೆಂಟಿಸ್ ಪರೀಕ್ಷೆಯ ದಿನಾಂಕ: ಡಿಸೆಂಬರ್ 4 ಮತ್ತು 7

ಉದ್ಯೋಗ ಸ್ಥಳ: ಭಾರತದ ವಿವಿಧ ರಾಜ್ಯಗಳು

ಅವಧಿ: 1 ವರ್ಷ

ಸ್ಟೈಪೆಂಡ್: ತಿಂಗಳಿಗೆ 15,000 ರೂ

ಅಧಿಕೃತ ವೆಬ್‌ಸೈಟ್: www.sbi.co.in

ಎಸ್‌ಬಿಐ ಅಪ್ರೆಂಟಿಸ್ ಪ್ರೋಗ್ರಾಂ ಎಂದರೇನು ಮತ್ತು ಅದು ಹೇಗೆ ಪ್ರಯೋಜನಕಾರಿಯಾಗಿದೆ?

ಎಸ್‌ಬಿಐ ನಡೆಸುವ ಅಪ್ರೆಂಟಿಸ್ ಪ್ರೋಗ್ರಾಂನಲ್ಲಿ ಉತ್ತೀರ್ಣರಾಗುವುದರಿಂದ ನೀವು ಎಸ್‌ಬಿಐನಲ್ಲಿ ಖಾಯಂ ಉದ್ಯೋಗಿಯಾಗುವುದಿಲ್ಲ. ಇದು ಇಂಟರ್ನ್‌ಶಿಪ್‌ನ ಸ್ವರೂಪದಲ್ಲಿರುತ್ತದೆ. ಈ ಇಂಟರ್ನ್‌ಶಿಪ್ ವಿದ್ಯಾರ್ಥಿಗಳಿಗೆ ಬ್ಯಾಂಕಿಂಗ್ ಉದ್ಯೋಗಗಳ ಕೆಲಸ ಕಾರ್ಯಗಳನ್ನು ಅರ್ಥಮಾಡಿಕೊಳ್ಳಲು ಮತ್ತು ಗ್ರಾಹಕರಿಗೆ ಸೇವೆಗಳನ್ನು ಹೇಗೆ ತಲುಪಿಸಲಾಗುತ್ತದೆ ಎಂಬುದನ್ನು ತಿಳಿದುಕೊಳ್ಳಲು ಇದು ಒಂದು ಅಮೂಲ್ಯ ಅವಕಾಶವಾಗಿದೆ. ಎಸ್‌ ಬಿಐ ಅಪ್ರೆಂಟಿಸ್ ತರಬೇತಿಯನ್ನು ಒಮ್ಮೆ ನೀವು ಯಶಸ್ವಿಯಾಗಿ ಪೂರ್ಣಗೊಳಿಸಿದ ನಂತರ ನಿಮಗೆ ಸಿಗುವ ಪ್ರಮಾಣಪತ್ರವು, ನೀವು ಇತರ ಬ್ಯಾಂಕ್ ಪರೀಕ್ಷೆಗಳು ಅಥವಾ ಉದ್ಯೋಗಗಳಿಗೆ ಅರ್ಜಿ ಸಲ್ಲಿಸಿದಾಗ ಅದನ್ನು ನಿಮ್ಮ ರೆಸ್ಯೂಮ್‌ಗೆ ಸೇರಿಸಿಕೊಳ್ಳಬಹುದು. ಆಗ ನಿಮ್ಮ ರೆಸ್ಯೂಮ್‌ನ ಮೌಲ್ಯ ಹೆಚ್ಚಾಗುತ್ತದೆ.

ಎಸ್‌ಬಿಐ ಅಪ್ರೆಂಟಿಸ್ 2023 ಆಯ್ಕೆ ಪ್ರಕ್ರಿಯೆ ಹೇಗೆ?

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ನಡೆಸುವ ಎಸ್‌ಬಿಐ ಅಪ್ರೆಂಟಿಸ್ 2023 ನೇಮಕಾತಿ ಆಯ್ಕೆ ಪ್ರಕ್ರಿಯೆಯು 2 ಹಂತಗಳಲ್ಲಿ ನಡೆಯುತ್ತದೆ. ಅದು ಅಪ್ರೆಂಟಿಸ್‌ಗಳ ಕಾರ್ಯಕ್ಷಮತೆಯನ್ನು ಆಧರಿಸಿ ಇರುತ್ತದೆ.

ಮೊದಲನೆಯದು ಆನ್‌ಲೈನ್‌ ಲಿಖಿತ ಪರೀಕ್ಷೆ.

ಎರಡನೆಯದು ಸ್ಥಳೀಯ ಭಾಷೆಯ ಪರೀಕ್ಷೆ(ಅಭ್ಯರ್ಥಿಗಳು ಅರ್ಜಿ ಸಲ್ಲಿಸುವಾಗ ಯಾವ ಭಾಷೆ ನಮೂದಿಸಿರುತ್ತಾರೋ ಆ ಭಾಷೆಯ ಪರೀಕ್ಷೆ ಎದುರಿಸಬೇಕಾಗುತ್ತದೆ.)

ಎಸ್‌ಬಿಐ ಅಪ್ರೆಂಟಿಸ್ 2023 ಪರೀಕ್ಷೆಯ ಮಾದರಿ

ವಿಭಾಗಪ್ರಶ್ನೆಗಳ ಸಂಖ್ಯೆಗರಿಷ್ಠ ಅಂಕಸಮಯ
ಸಾಮಾನ್ಯ/ಫೈನಾನ್ಷಿಯಲ್‌ ಅವೇರ್ನೆಸ್‌252515 ನಿಮಿಷ
ಸಾಮಾನ್ಯ ಇಂಗ್ಲೀಷ್‌252515 ನಿಮಿಷ
ಕ್ವಾಂಟಿಟೇಟಿವ್‌ ಆಪ್ಟಿಟ್ಯೂಡ್‌252515 ನಿಮಿಷ
ರೀಸನಿಂಗ್‌ ಎಬಿಲಿಟಿ/ಕಂಪ್ಯೂಟ್‌ ಆಪ್ಟಿಟ್ಯೂಡ್252515 ನಿಮಿಷ
ಒಟ್ಟು2510060 ನಿಮಿಷ

(ಸೂಚನೆ: ಆಬ್ಜೆಕ್ಟಿವ್ ಪರೀಕ್ಷೆಗಳಲ್ಲಿ ತಪ್ಪು ಉತ್ತರಗಳನ್ನು ಗುರುತಿಸಿದರೆ 1/4 ಅಂಕಗಳನ್ನು ಹೆಚ್ಚುವರಿಯಾಗಿ ಮೈನಸ್‌ ಮಾಡಲಾಗುತ್ತದೆ.)

(ಬರಹ: ಅರ್ಚನಾ ವಿ. ಭಟ್‌)

    ಹಂಚಿಕೊಳ್ಳಲು ಲೇಖನಗಳು