logo
ಕನ್ನಡ ಸುದ್ದಿ  /  Lifestyle  /  Skin Care Mango Face Pack For Beauty And Skin Summer Hydrate Brightening And Glowing Skin Beauty Tips In Kannada Rst

Mango Face Pack: ಮಾವಿನ ತಿರುಳಿನಲ್ಲಿದೆ ತ್ವಚೆಯ ಅಂದದ ಗುಟ್ಟು; ಮ್ಯಾಂಗೊ ಫೇಸ್‌ಪ್ಯಾಕ್‌ನಿಂದ ಸೌಂದರ್ಯ ಹೆಚ್ಚಿಸಿಕೊಳ್ಳುವುದು ಹೇಗೆ ನೋಡಿ

Reshma HT Kannada

Jun 02, 2023 05:23 PM IST

ಬೇಸಿಗೆಯ ಸೌಂದರ್ಯಕ್ಕೆ ಮ್ಯಾಂಗೊ ಫೇಸ್‌ಪ್ಯಾಕ್‌

    • Beauty Tips: ಬೇಸಿಗೆಯಲ್ಲಿ ಹೇರಳವಾಗಿ ಸಿಗುವ ಮಾವಿನಹಣ್ಣು ಆರೋಗ್ಯ ವೃದ್ಧಿಸುವ ಜೊತೆಗೆ ತ್ವಚೆಯ ಅಂದವನ್ನೂ ಹೆಚ್ಚಿಸುತ್ತದೆ. ಬೇಸಿಗೆಯಲ್ಲಿ ಮ್ಯಾಂಗೋ ಫೇಸ್‌ಪ್ಯಾಕ್‌ ಹಚ್ಚುವುದರಿಂದ ತ್ವಚೆಯ ಹಲವು ರೀತಿಯ ಪ್ರಯೋಜನಗಳಿವೆ. ಹಾಗಾದರೆ ಇದರ ಉಪಯೋಗಗಳ ಬಗ್ಗೆ ನೀವು ತಿಳಿಯಿರಿ.
ಬೇಸಿಗೆಯ ಸೌಂದರ್ಯಕ್ಕೆ ಮ್ಯಾಂಗೊ ಫೇಸ್‌ಪ್ಯಾಕ್‌
ಬೇಸಿಗೆಯ ಸೌಂದರ್ಯಕ್ಕೆ ಮ್ಯಾಂಗೊ ಫೇಸ್‌ಪ್ಯಾಕ್‌

ಮಾವಿನಹಣ್ಣು ಆರೋಗ್ಯದೊಂದಿಗೆ ಸೌಂದರ್ಯಕ್ಕೂ ಮದ್ದು. ಬೇಸಿಗೆಯಲ್ಲಿ ಹೇರಳವಾಗಿ ಸಿಗುವ ಮಾವಿನಹಣ್ಣು ತ್ವಚೆಯ ಅಂದವನ್ನೂ ಹೆಚ್ಚಿಸುತ್ತದೆ. ಇದರ ಫೇಸ್‌ಪ್ಯಾಕ್‌ ಮುಖಕ್ಕೆ ಹಚ್ಚುವುದರಿಂದ ಚರ್ಮದ ಕಾಂತಿ ಹೆಚ್ಚುವ ಜೊತೆಗೆ, ಸೌಂದರ್ಯವರ್ಧನೆಯೂ ಸಾಧ್ಯ. ಇದರಿಂದ ಚರ್ಮದ ಆರೋಗ್ಯ ಸಲಹೆ ರೀತಿಯ ಪ್ರಯೋಜನಗಳಿವೆ.

ಟ್ರೆಂಡಿಂಗ್​ ಸುದ್ದಿ

Tea History: ಚಾಯ್‌ ಪ್ರೇಮಿಗಳೇ, ಆಹಾ ಎಂದು ಹೀರುವ ಮುನ್ನ ಭಾರತಕ್ಕೆ ಟೀ ಬಂದ ಕಥೆಯನ್ನೊಮ್ಮೆ ತಿಳಿದುಕೊಳ್ಳಿ

Calcium Deficiency: ದೇಹದಲ್ಲಿ ಕ್ಯಾಲ್ಸಿಯಂ ಕೊರತೆಯನ್ನು ಸೂಚಿಸುವ ಲಕ್ಷಣಗಳಿವು, ಇವುಗಳನ್ನು ತಪ್ಪಿಯೂ ನಿರ್ಲಕ್ಷ್ಯ ಮಾಡ್ಬೇಡಿ

Drumstick Biryani: ಹೊಸ ರುಚಿಯ ಬಿರಿಯಾನಿ ಮಾಡ್ಬೇಕು ಅಂತ ಯೋಚಿಸಿದ್ರೆ ನುಗ್ಗೆಕಾಯಿ ಬಿರಿಯಾನಿ ಟ್ರೈ ಮಾಡಿ, ರೆಸಿಪಿ ಇಲ್ಲಿದೆ

Weight Loss: 30ರ ನಂತರವೂ ಮಹಿಳೆಯರು ಫಿಟ್‌ ಆಗಿ, ಬಳುಕೋ ಬಳ್ಳಿಯಂತಿರಲು ಸಹಾಯ ಮಾಡುವ 5 ವ್ಯಾಯಾಮಗಳಿವು

ಮಾವಿನಹಣ್ಣಿನ ಫೇಸ್‌ಪ್ಯಾಕ್‌ನ ಉಪಯೋಗಗಳು

ತೇವಾಂಶ ನೀಡುತ್ತದೆ: ಮಾವಿನಹಣ್ಣಿನಲ್ಲಿ ನೀರಿನಾಂಶ ಸಮೃದ್ಧವಾಗಿರುತ್ತದೆ. ಇದು ಚರ್ಮದ ತೇವಾಂಶ ಹೆಚ್ಚುವಂತೆ ಮಾಡಿ, ಮಾಯಿಶ್ಚರೈಸ್‌ ಮಾಡುತ್ತದೆ. ಇದು ನೈಸರ್ಗಿಕವಾಗಿ ಚರ್ಮವನ್ನು ಹೈಡ್ರೇಟ್‌ ಮಾಡುತ್ತದೆ.

ಅಕಾಲಿಕ ವಯಸ್ಸಿನ ಲಕ್ಷಣಗಳನ್ನು ನಿವಾರಿಸುತ್ತದೆ: ಮಾವಿನಹಣ್ಣಿನಲ್ಲಿ ವಿಟಮಿನ್‌ ಎ ಮತ್ತು ಸಿಯಂತಹ ಆಂಟಿಆಕ್ಸಿಡೆಂಟ್‌ ಅಂಶಗಳಿವೆ. ಇದು ಫ್ರಿ ರಾಡಿಕಲ್ಸ್‌ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ. ಅಲ್ಲದೆ ಅಕಾಲಿಕ ವಯಸ್ಸಿನ ಲಕ್ಷಣಗಳನ್ನು ತಡೆಯುತ್ತದೆ. ನಿರಂತರವಾಗಿ ಮಾವಿನಹಣ್ಣಿನ ಫೇಸ್‌ಪ್ಯಾಕ್‌ ಬಳಸುವುದರಿಂದ ಚರ್ಮದ ಮೇಲಿನ ನೆರಿಗೆ, ಸುಕ್ಕು ಇಂತಹ ಸಮಸ್ಯೆಗಳು ನಿವಾರಣೆಯಾಗುತ್ತವೆ.

ಚರ್ಮದ ಹೊಳಪು ಹಾಗೂ ಕಾಂತಿ ಹೆಚ್ಚಿಸುತ್ತದೆ: ಮಾವಿನಹಣ್ಣಿನ ತಿರುಳಿನಲ್ಲಿರುವ ಕಿಣ್ವಗಳು ಚರ್ಮವನ್ನು ಎಕ್ಸ್‌ಫೋಲಿಯೇಟ್‌ ಮಾಡುತ್ತದೆ. ಚರ್ಮದ ನಿರ್ಜೀವ ಕೋಶಗಳನ್ನು ತೆಗೆದು ಹಾಕಲು ಸಹಾಯ ಮಾಡುತ್ತದೆ. ಅಲ್ಲದೆ ನೈಸರ್ಗಿಕವಾಗಿ ಕಾಂತಿ ಹಾಗೂ ಹೊಳಪು ಹೆಚ್ಚುವಂತೆ ಮಾಡುತ್ತದೆ.

ಮೊಡವೆಗಳ ನಿವಾರಣೆ: ಮಾವು ಆಂಟಿಮೈಕ್ರೊಬಿಯಲ್ ಲಕ್ಷಣಗಳನ್ನು ಹೊಂದಿದೆ ಮತ್ತು ಇದು ಮೊಡವೆಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಮಾವಿನಹಣ್ಣು ಚರ್ಮದ ರಂಧ್ರಗಳನ್ನು ಶುದ್ಧೀಕರಿಸುತ್ತದೆ. ಇದು ಚರ್ಮದ ಉರಿಯೂತವನ್ನು ಕಡಿಮೆ ಮಾಡುತ್ತದೆ.

ಸ್ಕಿನ್‌ ಟೋನ್‌ ಅನ್ನು ಹೆಚ್ಚಿಸುತ್ತದೆ: ಮಾವಿನಹಣ್ಣಿನಲ್ಲಿರುವ ನೈಸರ್ಗಿಕ ಆಸಿಡ್‌ ಅಂಶಗಳು ಚರ್ಮ ಟೋನ್‌ ಅನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಇದು ಕಪ್ಪುಕಲೆಗಳು ಹಾಗೂ ಕಳೆಗುಂದಿದ ಚರ್ಮದ ನಿವಾರಣೆಗೆ ಸಹಾಯ ಮಾಡುತ್ತದೆ.

ಆದರೆ ಕೆಲವರ ಚರ್ಮಕ್ಕೆ ಈ ಫೇಸ್‌ ಪ್ಯಾಕ್‌ ಒಗ್ಗದೇ ಇರಬಹುದು, ಆ ಕಾರಣಕ್ಕೆ ತಜ್ಞರ ಸಲಹೆ ಪಡೆಯುವುದು ಉತ್ತಮ.

ಮಾವಿನಹಣ್ಣಿನ ಫೇಸ್‌ಪ್ಯಾಕ್‌ ತಯಾರಿಸುವುದು

ಮಾವಿನಹಣ್ಣಿನ ತಿರುಳು, ಜೇನುತುಪ್ಪ, ಮೊಸರು. ಮಾವಿನಹಣ್ಣನ್ನು ಚೆನ್ನಾಗಿ ಕಿವುಚಿ ನುಣ್ಣನೆಯ ಪೇಸ್ಟ್‌ ತಯಾರಿಸಿ. ಅದಕ್ಕೆ ಜೇನುತುಪ್ಪ ಹಾಗೂ ಮೊಸರು ಮಿಶ್ರಣ ಮಾಡಿ ಫೇಸ್‌ಪ್ಯಾಕ್‌ ತಯಾರಿಸಿ. ಇದನ್ನು ಮುಖಕ್ಕೆ ಹಚ್ಚಿ 10 ರಿಂದ 15 ನಿಮಿಷ ಬಿಟ್ಟು ಉಗುರು ಬೆಚ್ಚಗಿನ ನೀರಿನಿಂದ ತೊಳೆಯಿರಿ.

ಇದನ್ನೂ ಓದಿ

Green Tea: ತೂಕ ಇಳಿಕೆಗಷ್ಟೇ ಅಲ್ಲ; ತ್ವಚೆಯ ಅಂದಕ್ಕೂ ಬೇಕು ಗ್ರೀನ್‌ ಟೀ; ಆದರೆ ಬಳಕೆಯ ಕ್ರಮ ತಿಳಿದಿರಲಿ

Green Tea For Skin Health: ಗ್ರೀನ್‌ ಟೀ ಕುಡಿಯುವುದರಿಂದ ತೂಕ ಇಳಿಕೆ ಸೇರಿದಂತೆ ಆರೋಗ್ಯಕ್ಕೆ ಹಲವು ರೀತಿಯ ಪ್ರಯೋಜನಗಳಿವೆ. ಚರ್ಮದ ಸಮಸ್ಯೆಗಳಿಗೂ ಗ್ರೀನ್‌ ಟೀ ಮದ್ದು. ತ್ವಚೆಯ ಅಂದಕ್ಕೆ ಗ್ರೀನ್‌ ಬಳಕೆ ಎಷ್ಟು ಅವಶ್ಯ, ಇದರಿಂದ ಅಂದ ಹೆಚ್ಚಿಸಿಕೊಳ್ಳುವುದು ಹೇಗೆ, ಇದರ ಬಳಕೆಯ ವಿಧಾನಗಳ ಬಗ್ಗೆ ಇಲ್ಲಿದೆ ಮಾಹಿತಿ.

ಗ್ರೀನ್‌ ಟೀ ಸೇವನೆಯಿಂದ ಹಲವು ರೀತಿಯ ಆರೋಗ್ಯ ಪ್ರಯೋಜನಗಳಿವೆ. ತೂಕ ಇಳಿಸುವುದರಿಂದ ಹೃದಯದ ಆರೋಗ್ಯದವರೆಗೆ ಇದರ ಸೇವನೆಯಿಂದ ದೇಹಕ್ಕಾಗುವ ಉಪಯೋಗಗಳು ಹಲವು. ಇದರೊಂದಿಗೆ ತ್ವಚೆಯ ಅಂದ ಹೆಚ್ಚಿಸುವ ಗುಣವೂ ಇದರಲ್ಲಿದೆ ಎಂಬುದು ಹಲವರಿಗೆ ತಿಳಿದಿರಕ್ಕಿಲ್ಲ. ಸೌಂದರ್ಯ ಉತ್ಪನ್ನಗಳಲ್ಲಿ ಕೂಡ ಗ್ರೀನ್‌ ಟೀಯನ್ನು ಬಳಸುತ್ತಾರೆ. ತ್ವಚೆಯ ಸೌಂದರ್ಯ ಮತ್ತು ಗ್ರೀನ್‌ ಟೀ ಬಗ್ಗೆ ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಬರೆದುಕೊಂಡಿದ್ದಾರೆ ಚರ್ಮರೋಗ ತಜ್ಞೆ ಡಾ. ಆಂಚಲ್‌ ಪಂಥ್‌.

ವಿಭಾಗ

    ಹಂಚಿಕೊಳ್ಳಲು ಲೇಖನಗಳು