logo
ಕನ್ನಡ ಸುದ್ದಿ  /  Lifestyle  /  Uses Of Camphor To Skin And Hair

Uses of Camphor: ಪೂಜೆಗೆ ಮಾತ್ರವಲ್ಲ, ಚರ್ಮ, ಕೂದಲಿನ ಸಮಸ್ಯೆಗೂ ಬಹಳ ಪ್ರಯೋಜನಕಾರಿ ಈ ಕರ್ಪೂರ..ಇಲ್ಲಿದೆ ಮಾಹಿತಿ

HT Kannada Desk HT Kannada

Oct 16, 2022 02:03 PM IST

ಕರ್ಪೂರದ ಉಪಯೋಗಗಳು

    • ಬಾಲನೆರೆಗೆ ಕೂಡಾ ಕರ್ಪೂರ ಪರಿಣಾಮಕಾರಿ ಔಷಧವಾಗಿದೆ. ವಯಸ್ಸಿಗೂ ಮುನ್ನ ಹಲವರಿಗೆ ಬಿಳಿ ಕೂದಲಿನ ಸಮಸ್ಯೆ ಕಾಡುತ್ತದೆ. ಇದಕ್ಕೆ ತೆಂಗಿನೆಣ್ಣೆಯಲ್ಲಿ ಸ್ವಲ್ಪ ಕರ್ಪೂರ ಬೆರೆಸಿ ಕೂದಲಿಗೆ ಹಚ್ಚುತ್ತಾ ಬಂದರೆ ಸಮಸ್ಯೆ ನಿವಾರಣೆಯಾಗುತ್ತದೆ.
ಕರ್ಪೂರದ ಉಪಯೋಗಗಳು
ಕರ್ಪೂರದ ಉಪಯೋಗಗಳು (PC: Megha Sagar)

ಪ್ರತಿದಿನ ಪೂಜೆಗೆ ನಾವು ಕರ್ಪೂರ ಬಳಸುತ್ತೇವೆ. ಅದರೆ ಈ ಕರ್ಪೂರವು ಪೂಜೆಗೆ ಮಾತ್ರವಲ್ಲ ಚರ್ಮ ಹಾಗೂ ಕೂದಲಿಗೆ ಸಂಬಂಧಿಸಿದ ಅನೇಕ ಸಮಸ್ಯೆಗಳನ್ನು ನಿವಾರಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಎಂದು ಬಹಳ ಜನರಿಗೆ ತಿಳಿದಿಲ್ಲ. ಜಪಾನ್‌, ಇಂಡೊನೇಷ್ಯಾ, ಏಷ್ಯಾ ಸೇರಿದಂತೆ ಇನ್ನಿತರ ಕಡೆಗಳಲ್ಲಿ ಕಂಡುಬರುವ ಕ್ಯಾಂಪರ್‌ ಲಾರೆಲ್‌ ಎಂಬ ಮರದ ತೊಗಟೆಯಿಂದ ಕರ್ಪೂರವನ್ನು ತಯಾರಿಸಲಾಗುತ್ತದೆ.

ಟ್ರೆಂಡಿಂಗ್​ ಸುದ್ದಿ

Vitamin D Deficiency: ವಿಟಮಿನ್‌ ಡಿ ಕೊರತೆಯಿಂದ ಕಾಡಬಹುದು ಫ್ಯಾಟಿ ಲಿವರ್‌ ಸಮಸ್ಯೆ, ಸಮತೋಲಿತ ಆಹಾರ ಸೇವನೆಗೆ ನೀಡಿ ಒತ್ತು

Vampire Facials: ವಾಂಪೈರ್‌ ಫೇಶಿಯಲ್‌ ಮಾಡಿಸೋದ್ರಿಂದ ಎಚ್‌ಐವಿ ಸೋಂಕು ಹರಡಬಹುದು ಎಚ್ಚರ, ಸೌಂದರ್ಯಕ್ಕಿಂತ ಆರೋಗ್ಯ ಮುಖ್ಯ ಮರಿಬೇಡಿ

Nail Health: ಉಗುರಿನ ಬಣ್ಣ-ಆಕಾರ ಬದಲಾದ್ರೆ ನಿರ್ಲಕ್ಷ್ಯ ಮಾಡ್ಬೇಡಿ, ಈ ಆರೋಗ್ಯ ಸಮಸ್ಯೆಗಳನ್ನು ಸೂಚಿಸಬಹುದು ಗಮನಿಸಿ

Travel Tips: ಬೇಸಿಗೆಯಲ್ಲಿ ಪ್ರವಾಸ ಮಾಡುವವರು ತಪ್ಪದೇ ಪಾಲಿಸಬೇಕಾದ ಮಹತ್ವದ ಸಲಹೆಗಳಿವು

ಆಯುರ್ವೇದ ಚಿಕಿತ್ಸೆಯಲ್ಲಿ ಕರ್ಪೂರವನ್ನು ಬಳಸಲಾಗುತ್ತದೆ. ಇದನ್ನು ಬಳಸಿ ವಿವಿಧ ಔಷಧಗಳನ್ನು ತಯಾರಿಸಲಾಗುತ್ತದೆ. ಕರ್ಪೂರದ ಎಣ್ಣೆಯನ್ನು ಬಾಲ್ಮ್ಸ್, ಸ್ಟೀಮ್ ರಬ್ಸ್ ಮತ್ತು ಲಿನಿಮೆಂಟ್ಸ್‌ಗಳಲ್ಲಿ ಬಳಸಲಾಗುತ್ತದೆ. ಕರ್ಪೂರದ ಎಣ್ಣೆ, ತುರಿಕೆ ಮತ್ತು ನೋವನ್ನು ಕಡಿಮೆ ಮಾಡುತ್ತದೆ. ಕೀಟಗಳು ಮತ್ತು ಜಿರಳೆಗಳನ್ನು ಮನೆಗೆ ಪ್ರವೇಶಿಸದಂತೆ ತಡೆಯಲು ಇದನ್ನು ಬಳಸಲಾಗುತ್ತದೆ. ಕರ್ಪೂರವನ್ನು ಪೂಜೆಗಳಲ್ಲಿ ಬಳಸಲಾಗುತ್ತದೆ. ಇದನ್ನು ಹೊರತುಪಡಿಸಿ ಕರ್ಪೂರ ಕೂದಲು ಮತ್ತು ಚರ್ಮಕ್ಕೆ ತುಂಬಾ ಉಪಯುಕ್ತವಾಗಿದೆ. ಒಂದೇ ಮಾತಿನಲ್ಲಿ ಹೇಳುವುದಾದರೆ,ಕರ್ಪೂರ ಆಲ್ ರೌಂಡರ್. ಇದು ಸ್ನಾಯು ನೋವನ್ನು ನಿವಾರಿಸುತ್ತದೆ, ತೂಕ ನಷ್ಟಕ್ಕೆ ಸಹಾಯ ಮಾಡುತ್ತದೆ, ರಕ್ತ ಪರಿಚಲನೆ ಸುಧಾರಿಸುತ್ತದೆ. ಶೀತ ಮತ್ತು ಕೆಮ್ಮಿಗೆ ಚಿಕಿತ್ಸೆ ನೀಡುತ್ತದೆ.

ಕರ್ಪೂರದ ಆಂಟಿಫಂಗಲ್ ಮತ್ತು ಬ್ಯಾಕ್ಟೀರಿಯಾ ವಿರೋಧಿ ಗುಣಲಕ್ಷಣಗಳು ತುರಿಕೆ, ಕಿರಿಕಿರಿಯಂತಹ ಚರ್ಮಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಕರ್ಪೂರವು ಕಾಲಜನ್ ಮತ್ತು ಎಲಾಸ್ಟಿನ್ ಉತ್ಪಾದನೆಯನ್ನು ಹೆಚ್ಚಿಸುತ್ತದೆ ಎಂದು ತಿಳಿದುಬಂದಿದೆ. ಕರ್ಪೂರದ ಮೇಲೆ ಇನ್ನೂ ಹೆಚ್ಚಿನ ಸಂಶೋಧನೆ ನಡೆಯುತ್ತಿದೆ.

ಬಾಲನೆರೆಗೆ ಕೂಡಾ ಕರ್ಪೂರ ಪರಿಣಾಮಕಾರಿ ಔಷಧವಾಗಿದೆ. ವಯಸ್ಸಿಗೂ ಮುನ್ನ ಹಲವರಿಗೆ ಬಿಳಿ ಕೂದಲಿನ ಸಮಸ್ಯೆ ಕಾಡುತ್ತದೆ. ಇದಕ್ಕೆ ತೆಂಗಿನೆಣ್ಣೆಯಲ್ಲಿ ಸ್ವಲ್ಪ ಕರ್ಪೂರ ಬೆರೆಸಿ ಕೂದಲಿಗೆ ಹಚ್ಚುತ್ತಾ ಬಂದರೆ ಸಮಸ್ಯೆ ನಿವಾರಣೆಯಾಗುತ್ತದೆ.

ನೋವು ಮತ್ತು ಊತವನ್ನು ನಿವಾರಿಸಲು ಕೂಡಾ ಇದನ್ನು ಬಳಸಬಹುದು. ಮೆಂಥಾಲ್, ಯೂಕಲಿಪ್ಟಸ್, ಲವಂಗ ಹಾಗೂ ಕರ್ಪೂರ ಸೇರಿಸಿ ತಯಾರಿಸಲಾದ ಸ್ಪ್ರೇ ನೋವು ನಿವಾರಕ ಮತ್ತು ಉರಿಯೂತದ ಗುಣಲಕ್ಷಣಗಳನ್ನು ಹೊಂದಿದೆ. ಇದು ನೋವನ್ನು ಕಡಿಮೆ ಮಾಡುತ್ತದೆ ಎಂದು ಅಧ್ಯಯನದಿಂದ ತಿಳಿದುಬಂದಿದೆ.

ಮೊಡವೆವನ್ನು ಹೋಗಲಾಡಿಸಲು ಕೂಡಾ ಕರ್ಪೂರ ಬಹಳ ಪ್ರಯೋಜನಕಾರಿ. ನೀವು ಮೊಡವೆ ಸಮಸ್ಯೆಗಳಿಂದ ಬೇಸತ್ತಿದ್ದರೆ, ಕರ್ಪೂರದಲ್ಲಿರುವ ಜೈವಿಕ ಸಕ್ರಿಯ ಸಂಯುಕ್ತಗಳ ಬ್ಯಾಕ್ಟೀರಿಯಾ ವಿರೋಧಿ ಕ್ರಿಯೆಯು ಮೊಡವೆ ಚಿಕಿತ್ಸೆಗೆ ಪ್ರಯೋಜನಕಾರಿಯಾಗಿದೆ. ಆದ್ದರಿಂದ ಮೊಡವೆಗೆ ಒಮ್ಮೆ ಕರ್ಪೂರವನ್ನು ಟ್ರೈ ಮಾಡಿ.

ಒಡೆದ ಹಿಮ್ಮಡಿಗಳಿಗೆ ಪರಿಹಾರ. ಕರ್ಪೂರವು, ಒಡೆದ ಹಿಮ್ಮಡಿಗಳನ್ನೂ ಮೃದುಗೊಳಿಸಬಲ್ಲದು. ಕರ್ಪೂರ ದ್ರಾವಣದಲ್ಲಿ ನಿಮ್ಮ ಪಾದಗಳನ್ನು ನೆನೆಸಿ. ನಿಮ್ಮ ಪಾದಗಳನ್ನು ಸ್ಕ್ರಬ್ ಮಾಡಿ ಮತ್ತು ಮಾಯಿಶ್ಚರೈಸರ್ ಅಥವಾ ಪೆಟ್ರೋಲಿಯಂ ಜೆಲ್ಲಿಯನ್ನು ಅನ್ವಯಿಸಿ. ಈ ರೀತಿ 4-5 ಬಾರಿ ಮಾಡಿದರೆ ನೀವೇ ಬದಲಾವಣೆಯನ್ನು ಗಮನಿಸಬಹುದು.

ಶಿಲೀಂಧ್ರ ಮತ್ತು ಬ್ಯಾಕ್ಟೀರಿಯಾದ ಸೋಂಕುಗಳಿಂದ ಕರ್ಪೂರ ಮುಕ್ತಿ ನೀಡುತ್ತದೆ. ಕರ್ಪೂರದಲ್ಲಿರುವ ಫಂಗಲ್ ವಿರೋಧಿ ಮತ್ತು ಬ್ಯಾಕ್ಟೀರಿಯಾ ವಿರೋಧಿ ಗುಣಗಳು ಇರುವುದರಿಂದ ಶಿಲೀಂಧ್ರ ಮತ್ತು ಬ್ಯಾಕ್ಟೀರಿಯಾದ ಸೋಂಕುಗಳಿಗೆ ಚಿಕಿತ್ಸೆ ನೀಡಲು ಚರ್ಮದ ಮುಲಾಮುಗಳಲ್ಲಿ ಕರ್ಪೂರವನ್ನು ಬಳಸಲಾಗುತ್ತದೆ.

    ಹಂಚಿಕೊಳ್ಳಲು ಲೇಖನಗಳು