logo
ಕನ್ನಡ ಸುದ್ದಿ  /  ಜೀವನಶೈಲಿ  /  Viral: ಒಂದು ಪ್ಲೇಟ್​ ದೋಸೆ-ಇಡ್ಲಿಗೆ 1 ಸಾವಿರ ರೂ​ ಬಿಲ್​ ಕಂಡು ದಂಗಾದ ಯುವಕ; ಬೆಂಗಳೂರಿಗೆ ಬನ್ನಿ ಅಂದ್ರು ನೆಟ್ಟಿಗರು

Viral: ಒಂದು ಪ್ಲೇಟ್​ ದೋಸೆ-ಇಡ್ಲಿಗೆ 1 ಸಾವಿರ ರೂ​ ಬಿಲ್​ ಕಂಡು ದಂಗಾದ ಯುವಕ; ಬೆಂಗಳೂರಿಗೆ ಬನ್ನಿ ಅಂದ್ರು ನೆಟ್ಟಿಗರು

Meghana B HT Kannada

Dec 07, 2023 10:07 AM IST

ಒಂದು ಪ್ಲೇಟ್​ ದೋಸೆ-ಇಡ್ಲಿಗೆ 1 ಸಾವಿರ ರೂ​ ಬಿಲ್​

  • Costly Dosa-Idli: ಸಣ್ಣಪುಟ್ಟ ಹೋಟೆಲ್​​ಗಳಲ್ಲಿ 100 ರೂಪಾಯಿ ಒಳಗೆ ನೀವು ಒಂದು ಪ್ಲೇಟ್​ ದೋಸೆ, ಇಡ್ಲಿಯನ್ನು ಸವಿಯಬಹುದು. ರೆಸ್ಟಾರೆಂಟ್​​ಗಳಲ್ಲಿ ತುಸು ಜಾಸ್ತಿ ಇರತ್ತೆ ಬಿಡಿ. ಹಾಗಂತ ಅದಕ್ಕೆ ಸಾವಿರ ರೂಪಾಯಿಯಲ್ಲ ಬಿಲ್​ ಆಗೋದಿಲ್ಲ ಅಲ್ವಾ? ಆದರೆ ಇಲ್ಲೊಬ್ಬ 2 ದೋಸೆ ಮತ್ತು ಒಂದು ಪ್ಲೇಟ್ ಇಡ್ಲಿ ತಿಂದಿದ್ದಕ್ಕೆ 1 ಸಾವಿರ ರೂಪಾಯಿ ಬಿಲ್​ ಪಾವತಿಸಿದ್ದಾನೆ.

ಒಂದು ಪ್ಲೇಟ್​ ದೋಸೆ-ಇಡ್ಲಿಗೆ 1 ಸಾವಿರ ರೂ​ ಬಿಲ್​
ಒಂದು ಪ್ಲೇಟ್​ ದೋಸೆ-ಇಡ್ಲಿಗೆ 1 ಸಾವಿರ ರೂ​ ಬಿಲ್​

ಹೋಟೆಲ್ ಅಥವಾ​ ರೆಸ್ಟಾರೆಂಟ್​​ಗಳಲ್ಲಿ ದಕ್ಷಿಣ ಭಾರತದ ಖ್ಯಾತ ತಿಂಡಿಗಳಾದ ದೋಸೆ-ಇಡ್ಲಿಯನ್ನು ಸಾಮಾನ್ಯವಾಗಿ ಎಲ್ಲರೂ ತಿಂದೇ ಇರ್ತೀರಾ ಅಲ್ವಾ? ಸಣ್ಣಪುಟ್ಟ ಹೋಟೆಲ್​​ಗಳಲ್ಲಿ 100 ರೂಪಾಯಿ ಒಳಗೆ ನೀವು ಒಂದು ಪ್ಲೇಟ್​ ದೋಸೆ, ಇಡ್ಲಿಯನ್ನು ಸವಿಯಬಹುದು. ರೆಸ್ಟಾರೆಂಟ್​​ಗಳಲ್ಲಿ ತುಸು ಜಾಸ್ತಿ ಇರತ್ತೆ ಬಿಡಿ. ಹಾಗಂತ ಅದಕ್ಕೆ ಸಾವಿರ ರೂಪಾಯಿಯಲ್ಲ ಬಿಲ್​ ಆಗೋದಿಲ್ಲ ಅಲ್ವಾ? ಆದರೆ ಇಲ್ಲೊಬ್ಬ ವ್ಯಕ್ತಿ 2 ದೋಸೆ ಮತ್ತು ಒಂದು ಪ್ಲೇಟ್ ಇಡ್ಲಿ ತಿಂದಿದ್ದಕ್ಕೆ 1 ಸಾವಿರ ರೂಪಾಯಿ ಬಿಲ್​ ಪಾವತಿಸಿದ್ದಾನೆ.

ಟ್ರೆಂಡಿಂಗ್​ ಸುದ್ದಿ

ಮಾವಿನಹಣ್ಣಿನಿಂದ ತಯಾರಿಸಬಹುದು ಒಂದಲ್ಲ, ಎರಡಲ್ಲ ಮೂರು ಬಗೆಯ ಪಾಯಸ; ಈ ಭಾನುವಾರ ನೀವೂ ಮನೆಯಲ್ಲಿ ಟ್ರೈ ಮಾಡಿ, ರೆಸಿಪಿ ಇಲ್ಲಿದೆ

Relationship tips: ವರ್ಷಗಳು ಸರಿದರೂ ದಾಂಪತ್ಯದಲ್ಲಿ ಪ್ರೀತಿಯ ತಾಜಾತನ ಉಳಿಬೇಕು ಅಂದ್ರೆ ಈ 4 ನಿಯಮಗಳನ್ನು ತಪ್ಪದೇ ಪಾಲಿಸಿ

Personality Test: ಚಿತ್ರವನ್ನು ಕಂಡಾಕ್ಷಣ ನಿಮಗೆ ಮೊದಲು ಕಂಡಿದ್ದೇನು? ನಿಮ್ಮ ವ್ಯಕ್ತಿತ್ವದ ಕುರಿತ ರಹಸ್ಯ ವಿಚಾರ ತಿಳಿಸುತ್ತೆ ಈ ಚಿತ್ರ

Brain Teaser: 212=25, 214=47 ಆದ್ರೆ, 215 = ಎಷ್ಟು? ಗಣಿತದಲ್ಲಿ ನೀವು ಜಾಣರಾದ್ರೆ 10 ಸೆಕೆಂಡ್‌ನಲ್ಲಿ ಉತ್ತರ ಹೇಳಿ

ಆಶಿಶ್ ಸಿಂಗ್ ಎಂಬವರು ಹರಿಯಾಣದ ಗುರುಂಗಾವ್​​ನ 32ನೇ ಅವೆನ್ಯೂನಲ್ಲಿರುವ ದಕ್ಷಿಣ ಭಾರತದ ತಿನಿಸು ಸಿಗುವ​ "ಕರ್ನಾಟಿಕ್ ಕೆಫೆ"ಗೆ ಹೋಗಿದ್ದಾರೆ. ಅಲ್ಲಿ 2 ದೋಸೆ ಮತ್ತು ಒಂದು ಪ್ಲೇಟ್ ಇಡ್ಲಿ ಆರ್ಡರ್​ ಮಾಡಿದ್ದಾರೆ. ಅರ್ಧ ಗಂಟೆ ಕಾದ ಬಳಿಕ ದೋಸೆ-ಇಡ್ಲಿ ಸಿಕ್ಕಿದೆ. ತಿಂದ ಬಳಿಕ ಬಿಲ್​ ನೋಡಿ ಆಶಿಶ್ ದಂಗಾಗಿದ್ದಾರೆ. ಏಕೆಂದರೆ ಕೇವಲ ದೋಸೆ-ಇಡ್ಲಿಗೆ ಒಂದು ಸಾವಿರ ರೂಪಾಯಿ ಬಿಲ್​ ಆಗಿದೆ. ತಿಂದ ಮೇಲೆ ಬಿಲ್​ ಕಟ್ಟಲ್ಲ ಅನ್ನೋಕಾಗುತ್ತಾ? ಪಾವತಿಸಿ ಹೊರಬಂದಿದ್ದಾರೆ.

ಈ ವಿಚಾರವನ್ನ ಆಶಿಶ್ ಸಿಂಗ್ ತಮ್ಮ ಎಕ್ಸ್ (ಟ್ವಿಟರ್) ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಗುರುಂಗಾವ್​​ ಕ್ರೇಝಿ (ಹುಚ್ಚು) ಆಗಿರುವುದರಿಂದ 30 ನಿಮಿಷ ಕಾದ ಬಳಿಕ 2 ದೋಸೆ ಮತ್ತು ಇಡ್ಲಿಗೆ ಒಂದು ಸಾವಿರ ರೂ, ಖರ್ಚು ಮಾಡಿದ್ದೇನೆ. ಉತ್ತಮ ಮತ್ತು ಸಮಂಜಸವಾದ ಬೆಲೆಯಲ್ಲಿ ದೋಸೆ ಸಿಗುವ ಸ್ಥಳಗಳನ್ನು ಸೂಚಿಸಿ ಎಂದು ಬರೆದುಕೊಂಡಿದ್ದಾರೆ.

ಈ ಪೋಸ್ಟ್​​ಗೆ ನೆಟ್ಟಿಗರು ಪರಿಪರಿಯಾಗಿ ಕಾಮೆಂಟ್​ ಮಾಡಿದ್ದಾರೆ. "ಈ ಕೆಫೆಗೆ ಹೋಲಿಸಿದರೆ ರೆಸ್ಟಾರೆಂಟ್‌ನಲ್ಲಿಲ್ಲೇ ಬೆಲೆಗಳು ತಕ್ಕಮಟ್ಟಿಗೆ ಸಮಂಜಸವಾಗಿದೆ" ಎಂದು ಒಬ್ಬರು ಹೇಳಿದರೆ, ಇನ್ನು ಕೆಲವರು ಬೆಂಗಳೂರಿಗೆ ತೆರಳಿ ಕಡಿಮೆ ದರದಲ್ಲಿ ಪ್ರಸಿದ್ಧ ದೋಸೆಗಳನ್ನು ಸವಿಯುವಂತೆ ಸಲಹೆ ನೀಡಿದ್ದಾರೆ. "ಬೆಂಗಳೂರಿಗೆ ಬನ್ನಿ, ಉತ್ತಮ ರುಚಿಯೊಂದಿಗೆ ಅದೇ ದೋಸೆ-ಇಡ್ಲಿಯನ್ನು ನೀವು 100 ರೂಪಾಯಿಗಳಲ್ಲಿ ಪಡೆಯುತ್ತೀರಿ" ಎಂದಿದ್ದಾರೆ. "ಬೆಂಗಳೂರಿಗೆ ಶಿಫ್ಟ್ ಆಗಿ ರಾಮೇಶ್ವರಂ ಕೆಫೆಯಲ್ಲಿ ದೋಸೆ ಮತ್ತು ಇಡ್ಲಿ ಸವಿಯಿರಿ" ಎಂದು ಮತ್ತೊಬ್ಬರು ಕಾಮೆಂಟ್​ ಮಾಡಿದ್ದಾರೆ.

"ಕರ್ನಾಟಕ ಮತ್ತು ತಮಿಳುನಾಡಿನಲ್ಲಿ ಕೂಡ ಕೆಲವು ಸ್ಥಳಗಳಲ್ಲಿ ದೋಸೆ ಮತ್ತು ಇಡ್ಲಿಗೆ ಇಷ್ಟು ಬೆಲೆ ಇರತ್ತೆ. ಆದರೆ ಅದು ಉತ್ಪನ್ನ (ತಿಂಡಿ)ದ ಮೇಲೆ ಅವಲಂಬಿತವಾಗಿಲ್ಲ, ಬದಲಾಗಿ ಲೊಕೇಶನ್​ ಮೇಲೆ ಡಿಪೆಂಡ್​ ಆಗಿದೆ" ಎಂದಿದ್ದಾರೆ. "ದೋಸೆಗಾಗಿ ಒಂದು ಸಾವಿರ ಕೊಡುವ ಬದಲು ಅದೇ ದುಡ್ಡಲ್ಲಿ ರೈಲಿನಲ್ಲಿ ದಕ್ಷಿಣ ಭಾರತಕ್ಕೆ ಹೋಗಬಹುದಿತ್ತು" ಎಂದು ಮತ್ತೊಬ್ಬರು ನಗೆ ಚಟಾಕಿ ಹಾರಿಸಿದ್ದಾರೆ.

"ಗುರುಂಗಾವ್​​ನ 32ನೇ ಅವೆನ್ಯೂ ತುಂಬಾ ದುಬಾರಿ ಸ್ಥಳವಾಗಿದೆ. ಅಲ್ಲಿ ಏನೇ ತಿಂದರೆ ಹೆಚ್ಚಿನ ಬೆಲೆಯನ್ನೇ ನೀಡಬೇಕಾಗುತ್ತದೆ" ಎಂದು ಮತ್ತೊಬ್ಬರು ಹೇಳಿದ್ದಾರೆ. "ಸೆಕ್ಟರ್ 56 ಹೂಡಾ ಮಾರುಕಟ್ಟೆಯಲ್ಲಿ ಒಂದು ಸ್ಟಾಲ್​ ಇದೆ. ಅಲ್ಲಿ 100 ರೂ. ಒಳಗೆ ಉತ್ತಮವಾದ ದೋಸೆ ಸಿಗುತ್ತದೆ. ಆ ಸ್ಟಾಲ್​ ಹೆಸರು ನೆನಪಿಲ್ಲ, ಆದರೆ ಆ ಸ್ಟಾಲ್ ಕೆಂಪು ಬಣ್ಣದ್ದಾಗಿತ್ತು." ಎಂದು ಇನ್ನೊಬ್ಬರು ಸಲಹೆ ನೀಡಿದ್ದಾರೆ.

    ಹಂಚಿಕೊಳ್ಳಲು ಲೇಖನಗಳು