logo
ಕನ್ನಡ ಸುದ್ದಿ  /  Nation And-world  /  13 Indians Trapped In Job Rackets Rescued From Myanmar, Mea Cautions Against Fake Offers

fake job offers: ಉದ್ಯೋಗ ವಂಚಕರ ನಂಬಿ ಮಯನ್ಮಾರ್‌ನಲ್ಲಿ ಸಿಲುಕಿಕೊಂಡ 13 ಭಾರತೀಯರು, ಎಚ್ಚರದಿಂದ ಇರುವಂತೆ ಎಲ್ಲರಿಗೂ ಸರಕಾರದಿಂದ ಸೂಚನೆ

Praveen Chandra B HT Kannada

Oct 05, 2022 06:14 PM IST

fake job offers: ಉದ್ಯೋಗ ವಂಚಕರ ನಂಬಿ ಮಯನ್ಮಾರ್‌ನಲ್ಲಿ ಸಿಲುಕಿಕೊಂಡ 13 ಭಾರತೀಯರು

    • ಮಯನ್ಮಾರ್‌ಗೆ ಅಕ್ರಮವಾಗಿ ಪ್ರವೇಶಿಸಿರುವ ಕಾರಣಕ್ಕಾಗಿ ಇನ್ನೂ ಹಲವು ಭಾರತೀಯರು ಅಲ್ಲಿನ ಸರಕಾರದ ವಶದಲ್ಲಿದ್ದಾರೆ. ಅವರನ್ನು ಭಾರತಕ್ಕೆ ಶೀಘ್ರ ಹೊರತರಲು ಬೇಕಾದ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ವಿದೇಶಾಂಗ ಸಚಿವಾಲಯ ಟ್ವೀಟ್‌ ಮಾಡಿದೆ. 
fake job offers: ಉದ್ಯೋಗ ವಂಚಕರ ನಂಬಿ ಮಯನ್ಮಾರ್‌ನಲ್ಲಿ ಸಿಲುಕಿಕೊಂಡ 13 ಭಾರತೀಯರು
fake job offers: ಉದ್ಯೋಗ ವಂಚಕರ ನಂಬಿ ಮಯನ್ಮಾರ್‌ನಲ್ಲಿ ಸಿಲುಕಿಕೊಂಡ 13 ಭಾರತೀಯರು

ಉದ್ಯೋಗ ವಂಚಕರ ಮಾತು ನಂಬಿ ಮಯನ್ಮಾರ್‌ನಲ್ಲಿ ಸಿಲುಕಿಕೊಂಡು ಪರಿತಪಿಸಿದ್ದ 13 ಭಾರತೀಯರನ್ನು ಭಾರತೀಯ ವಿದೇಶಾಂಗ ವ್ಯವಹಾರಗಳ ಸಚಿವಾಲಯವು ರಕ್ಷಣೆ ಮಾಡಿದೆ. ಈ ಹಿಂದೆ ಸುಮಾರು 32 ಜನರನ್ನು ರಕ್ಷಿಸಲಾಗಿತ್ತು. ಇನ್ನೂ ಹಲವು ಭಾರತೀಯರು ಮಯಾನ್ಮಾರ್‌ ಸರಕಾರದ ಬಂಧನದಲ್ಲಿದ್ದಾರೆ.

ಟ್ರೆಂಡಿಂಗ್​ ಸುದ್ದಿ

Gold Rate: ಬಡವರಿಗೆ ಗಗನ ಕುಸುಮವಾಯ್ತು ಚಿನ್ನ; ಮತ್ತಷ್ಟು ಹೆಚ್ಚಾಯ್ತು ಬೆಳ್ಳಿ , ಬಂಗಾರದ ಬೆಲೆ

ಇವಿಎಂ ವಿವಿಪ್ಯಾಟ್ ಪ್ರಕರಣ; ಅಡ್ಡ ಪರಿಶೀಲನೆ ಮಾಡಿ ಎಂದವರ ವಿರುದ್ಧ ಸುಪ್ರೀಂ ಕೋರ್ಟ್ ಗರಂ, ಎಲ್ಲಾ ಅರ್ಜಿಗಳು ವಜಾ

ರಸ್ತೆ ಮೇಲೆ ಕಾಣಸಿಕ್ತು ತಲೆಕೆಳಗಾದ ಕಾರು, ಅಪಘಾತವಾಗಿಲ್ಲ, ಪಲ್ಟಿಯಾಗಿಲ್ಲ, ಕುತೂಹಲ ಕೆರಳಿಸಿದೆ ಈ ವೈರಲ್ ವಿಡಿಯೋ

Chicken or Egg: ಕೋಳಿ ಮೊದಲಾ ಅಥವಾ ಮೊಟ್ಟೆ ಮೊದಲಾ; ದಶಕಗಳ ಪ್ರಶ್ನೆಗೆ ಕೊನೆಗೂ ಸಿಕ್ಕಿದೆ ಉತ್ತರ

"ಮಯನ್ಮಾರ್‌ನಲ್ಲಿ ಉದ್ಯೋಗ ನೀಡುವುದಾಗಿ ಹಲವು ಜನರನ್ನು ಉದ್ಯೋಗ ವಂಚಕರು ವಂಚಿಸಿದ್ದಾರೆ. ಮಯನ್ಮಾರ್‌ ಪ್ರವೇಶಿಸಿದ ಬಳಿಕ ಇವರಿಗೆಲ್ಲ ತಾವು ವಂಚನೆಗೆ ಒಳಗಾಗಿರುವುದು ಗೊತ್ತಾಗಿದೆ. ಈ ಹಿಂದೆ ಸುಮಾರು 32 ಜನರನ್ನು ರಕ್ಷಿಸಲಾಗಿತ್ತು. ಇದೀಗ 13 ಜನರನ್ನು ರಕ್ಷಿಸಿದ್ದೇವೆ. ಇನ್ನೂ ಹಲವು ಜನರು ಅಲ್ಲಿ ಸಿಲುಕಿಕೊಂಡಿದ್ದಾರೆʼʼ ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ಅರಿಂದಮ್‌ ಬಾಗ್ಚಿ ಹೇಳಿದ್ದಾರೆ.

ಮಯನ್ಮಾರ್‌ಗೆ ಅಕ್ರಮವಾಗಿ ಪ್ರವೇಶಿಸಿರುವ ಕಾರಣಕ್ಕಾಗಿ ಇನ್ನೂ ಹಲವು ಭಾರತೀಯರು ಅಲ್ಲಿನ ಸರಕಾರದ ವಶದಲ್ಲಿದ್ದಾರೆ. ಅವರನ್ನು ಭಾರತಕ್ಕೆ ಶೀಘ್ರ ಹೊರತರಲು ಬೇಕಾದ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಅವರು ಟ್ವೀಟ್‌ ಮಾಡಿದ್ದಾರೆ.

ಮಯನ್ಮಾರ್‌ ಮಾತ್ರವಲ್ಲದೆ ವಿವಿಧ ದೇಶಗಳಲ್ಲಿ ಉದ್ಯೋಗವಿದೆ ವಂಚಕರು ಭಾರತದ ಉದ್ಯೋಗಾಕಾಂಕ್ಷಿಗಳನ್ನು ವಂಚಿಸುತ್ತಿದ್ದಾರೆ. ಲಾವೋಸ್‌, ಕೊಲಂಬಿಯಾ ಮುಂತಾದ ದೇಶಗಳಲ್ಲಿ ಉದ್ಯೋಗ ನೀಡುವುದಾಗಿ ಉದ್ಯೋಗ ವಂಚಕರು ವಂಚಿಸುತ್ತಿದ್ದಾರೆ.

ವಿದೇಶದಲ್ಲಿ ಉದ್ಯೋಗ ಪಡೆಯಲು ಬಹುತೇಕರು ಬಯಸುತ್ತಿದ್ದಾರೆ. ಆನ್‌ಲೈನ್‌ನಲ್ಲಿ ಹಲವು ಆಫರ್‌ಗಳು, ಉದ್ಯೋಗಾವಕಾಶಗಳು ಕಾಣಿಸುತ್ತವೆ. ಇವುಗಳಲ್ಲಿ ಬಹುತೇಕ ಆಫರ್‌ಗಳು ಫೇಕ್‌ ಆಗಿರುತ್ತವೆ. ಉದ್ಯೋಗಾಕಾಂಕ್ಷಿಗಳಿಂದ ಹಣ ಪಡೆದು ವಂಚಿಸುತ್ತವೆ. ಇಂತಹ ವಂಚಕರ ಬಲೆಗೆ ಬೀಳಬಾರದು ಎಂದು ತಜ್ಞರು ಎಚ್ಚರಿಸಿದ್ದಾರೆ.

ಉದ್ಯೋಗ ವಂಚಕರ ಕುರಿತು ಎಚ್ಚರಿಕೆಯಿಂದ ಇರುವಂತೆ ಈ ಹಿಂದೆಯೂ ವಿದೇಶಾಂಗ ಸಚಿವಾಲಯವು ಸಲಹೆ ನೀಡಿತ್ತು.

"ಮುಖ್ಯವಾಗಿ ಐಟಿ ಯುವ ಜನರು ಇಂತಹ ವಂಚಕರ ಪ್ರಮುಖ ಗುರಿಯಾಗಿರುತ್ತಾರೆ. ಥೈಲಾಂಡ್‌ನಲ್ಲಿ ಡೇಟಾ ಎಂಟ್ರಿ ಉದ್ಯೋಗವಿದೆ ಎಂದು ಇತ್ತೀಚೆಗೆ ಸೋಷಿಯಲ್‌ ಮೀಡಿಯಾದಲ್ಲಿ ಪ್ರಚಾರ ಮಾಡಲಾಗಿತ್ತು. ಇದನ್ನು ನಂಬಿ ಸಾಕಷ್ಟು ಜನರು ಹಣ ಕಳೆದುಕೊಂಡಿದ್ದರು ಎಂದು ಸಚಿವಾಲಯವು ಈ ಹಿಂದೆ ಟ್ವೀಟ್‌ ಮಾಡಿತ್ತು.

ಉದ್ಯೋಗಕ್ಕಾಗಿ ಟೂರಿಸ್ಟ್‌ ಅಥವಾ ಉದ್ಯೋಗ ವಿಸಾವನ್ನು ಪಡೆದು ವಿದೇಶಗಳಿಗೆ ಪ್ರಯಾಣ ಬೆಳೆಸುವವರು ಎಚ್ಚರಿಕೆಯಿಂದ ಇರಬೇಕು. ವಿಶೇಷವಾಗಿ, ಈ ರೀತಿ ಉದ್ಯೋಗದ ಆಫರ್‌ ಬಂದರೆ ವಿದೇಶಿ ಕಂಪನಿಗಳಲ್ಲಿ ಈ ಉದ್ಯೋಗ ದೊರಕಿರುವುದನ್ನು ಖಚಿತಪಡಿಸಿಕೊಳ್ಳಬೇಕು. ಬಳಿಕವಷ್ಟೇ ವಿದೇಶಕ್ಕೆ ಪ್ರಯಾಣ ಬೆಳೆಸಬೇಕು. ಉದ್ಯೋಗ ನೀಡುವುದಾಗಿ ತಿಳಿಸುವ ಏಜೆಂಟರ ಕುರಿತು ಎಚ್ಚರಿಕೆ ಅಗತ್ಯ ಎಂದು ವಿದೇಶಾಂಗ ಸಚಿವಾಲಯ ತಿಳಿಸಿದೆ.

ವಿಭಾಗ

    ಹಂಚಿಕೊಳ್ಳಲು ಲೇಖನಗಳು