logo
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Asteroid 2023 Jd2: ಭೂಮಿ ಕಡೆಗೆ ಧಾವಿಸುತ್ತಿದೆ ಬೃಹತ್‌ 200 ಅಡಿ ಗಾತ್ರದ ಕ್ಷುದ್ರಗ್ರಹ; ನಾಸಾ ಟ್ರ್ಯಾಕಿಂಗ್‌ ವಿವರ ಇಲ್ಲಿದೆ

Asteroid 2023 JD2: ಭೂಮಿ ಕಡೆಗೆ ಧಾವಿಸುತ್ತಿದೆ ಬೃಹತ್‌ 200 ಅಡಿ ಗಾತ್ರದ ಕ್ಷುದ್ರಗ್ರಹ; ನಾಸಾ ಟ್ರ್ಯಾಕಿಂಗ್‌ ವಿವರ ಇಲ್ಲಿದೆ

HT Kannada Desk HT Kannada

May 17, 2023 07:30 AM IST

ಆಸ್ಟೆರಾಯ್ಡ್‌ 2023 JD2 ಭೂಮಿಯ ಸಮೀಪದ ಕ್ಷುದ್ರಗ್ರಹಗಳ ಅಪೊಲೊ ಗುಂಪಿಗೆ ಸೇರಿದೆ

  • Asteroid 2023 JD2: ಭೂಮಿ ಕಡೆಗೆ ಧಾವಿಸುತ್ತಿರುವ ಬೃಹತ್‌ ಕ್ಷುದ್ರಗ್ರಹ ಆಸ್ಟೆರಾಯ್ಡ್‌ 2023 ಜೆಡಿ2ರ ವಿವರವನ್ನು ನಾಸಾ ಬಹಿರಂಗಪಡಿಸಿದೆ. ಇದರ ವಿವರ ಇಲ್ಲಿದೆ.

ಆಸ್ಟೆರಾಯ್ಡ್‌ 2023 JD2 ಭೂಮಿಯ ಸಮೀಪದ ಕ್ಷುದ್ರಗ್ರಹಗಳ ಅಪೊಲೊ ಗುಂಪಿಗೆ ಸೇರಿದೆ
ಆಸ್ಟೆರಾಯ್ಡ್‌ 2023 JD2 ಭೂಮಿಯ ಸಮೀಪದ ಕ್ಷುದ್ರಗ್ರಹಗಳ ಅಪೊಲೊ ಗುಂಪಿಗೆ ಸೇರಿದೆ (Pixabay)

ಕ್ಷುದ್ರಗ್ರಹಗಳು ಪ್ರಾಚೀನ ಬಾಹ್ಯಾಕಾಶ ಬಂಡೆಗಳಾಗಿದ್ದು, ಸುಮಾರು 4.6 ಶತಕೋಟಿ ವರ್ಷಗಳ ಹಿಂದೆ ನಮ್ಮ ಸೌರವ್ಯೂಹದ ಆರಂಭಿಕ ರಚನೆಯಿಂದ ಉಳಿದಿವೆ ಎಂದು ಪರಿಗಣಿಸಲಾಗಿದೆ. ಆದರೆ ಈ ಬಾಹ್ಯಾಕಾಶ ಬಂಡೆಗಳು ಯಾವುದರಿಂದ ಮಾಡಲ್ಪಟ್ಟಿವೆ?

ಟ್ರೆಂಡಿಂಗ್​ ಸುದ್ದಿ

ತರಗತಿ ವೇಳೆ ಸ್ನೇಹಿತನೊಂದಿಗೆ ಮಾತು, ಕಿವಿ ಕೇಳಿಸದ ಹಾಗೆ ಬಾರಿಸಿದ ಶಿಕ್ಷಕನ ವಿರುದ್ದ ಎಫ್‌ಐಆರ್

Crime News: ಪ್ರೀತಿ ನಿರಾಕರಣೆ, ಪ್ರಿಯತಮೆ ಜತೆಗೆ ಇಡೀ ಕುಟುಂಬವನ್ನೇ ಕೊಂದು ಹಾಕಿದ ಯುವಕ ಆತ್ಮಹತ್ಯೆ!

ಪತಂಜಲಿಯ ಸೋನ್ ಪಾಪಡಿ ಗುಣಮಟ್ಟ ಪರೀಕ್ಷೆ ಫೇಲು; ಬಾಬಾ ರಾಮ್‌ದೇವ್ ಕಂಪನಿಯ ಇಬ್ಬರು ಅಧಿಕಾರಿಗಳ ಬಂಧನ

ತಿರುಮಲ ತಿರುಪತಿ ಶ್ರೀವಾರಿ ಆರ್ಜಿತ ಸೇವಾ ದರ್ಶನ ಟಿಕೆಟ್ ಬಿಡುಗಡೆ, ಆಗಸ್ಟ್‌ ತಿಂಗಳ ಕೋಟಾ ಹಂಚಿಕೆಗೆ ಅರ್ಜಿ ಸಲ್ಲಿಕೆ ಶುರು

ಅಮೆರಿಕದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ನಾಸಾ ಪ್ರಕಾರ, ಕ್ಷುದ್ರಗ್ರಹಗಳು ಅವುಗಳ ಮುಖ್ಯ ವಸ್ತುಗಳ ಸಂಯೋಜನೆಯಲ್ಲಿ ಬದಲಾಗುತ್ತವೆ. ಕೆಲವು ಕ್ಷುದ್ರಗ್ರಹಗಳು ಜೇಡಿಮಣ್ಣು ಮತ್ತು ಸಿಲಿಕೇಟ್‌ನಿಂದ ಮಾಡಲ್ಪಟ್ಟಿವೆ. ಆದರೆ ಇತರವು ಸಿಲಿಕೇಟ್ ವಸ್ತುಗಳು ಮತ್ತು ನಿಕಲ್-ಕಬ್ಬಿಣದಿಂದ ಮಾಡಲ್ಪಟ್ಟಿವೆ.

ಈ ಬಾಹ್ಯಾಕಾಶ ಶಿಲೆಗಳು ನೀರು, ಲೋಹಗಳು ಮತ್ತು ಇತರ ಖನಿಜಗಳಂತಹ ಅಮೂಲ್ಯ ಸಂಪನ್ಮೂಲಗಳನ್ನು ಒದಗಿಸುವುದಲ್ಲ. ಆರಂಭಿಕ ಸೌರವ್ಯೂಹದ ಬಗ್ಗೆ ಮತ್ತು ಗ್ರಹಗಳು ರಚನೆಯಾದಾಗ ಇದ್ದ ಪರಿಸ್ಥಿತಿಗಳ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಲು ವಿಜ್ಞಾನಿಗಳ ಅಧ್ಯಯನಕ್ಕೆ ಇವು ನೆರವಾಗುತ್ತವೆ.

ನಾಸಾ ಇತ್ತೀಚೆಗೆ ಅಂತಹ ಒಂದು ಬೃಹತ್ ಕ್ಷುದ್ರಗ್ರಹದ ಕುರಿತು ಎಚ್ಚರಿಕೆಯನ್ನು ನೀಡಿತ್ತು. ಅದು ಶೀಘ್ರದಲ್ಲೇ ಭೂಮಿಯನ್ನು ಸಮೀಪಿಸಲಿದೆ.

ಆಸ್ಟೆರಾಯ್ಡ್‌ 2023 ಜೆಡಿ2 ವಿವರ

ನಾಸಾದ ಸೆಂಟರ್ ಫಾರ್ ನಿಯರ್ ಅರ್ಥ್ ಆಬ್ಜೆಕ್ಟ್ ಸ್ಟಡೀಸ್ (CNEOS) ನಿಂದ ಆಸ್ಟೆರಾಯ್ಡ್‌ 2023 JD2 ಎಂದು ಗೊತ್ತುಪಡಿಸಿದ ಕ್ಷುದ್ರಗ್ರಹವು ಇಂದು ಮೇ 16 ರಂದು 3.5 ಮಿಲಿಯನ್ ಕಿಲೋಮೀಟರ್ ದೂರದಲ್ಲಿ ಭೂಮಿಗೆ ತನ್ನ ಹತ್ತಿರದ ಮಾರ್ಗದಲ್ಲಿ ಸಂಚರಿಸಲಿದೆ. ಇದು ಗಂಟೆಗೆ 46891 ಕಿಲೋಮೀಟರ್‌ಗಳ ಭಯಾನಕ ವೇಗದಲ್ಲಿ ಭೂಮಿಯ ಕಡೆಗೆ ಧಾವಿಸುತ್ತಿದೆ. ಆಸ್ಟೆರಾಯ್ಡ್‌ 2023 JD2 ಭೂಮಿಯ ಸಮೀಪದ ಕ್ಷುದ್ರಗ್ರಹಗಳ (NEAs) ಅಪೊಲೊ ಗುಂಪಿಗೆ ಸೇರಿದೆ. ಈ ಕ್ಷುದ್ರಗ್ರಹದ ಗಾತ್ರವೇ ಕಳವಳಕಾರಿ. 200 ಅಡಿ ಅಗಲದ ಈ ಬೃಹತ್‌ ಕ್ಷುದ್ರಗ್ರಹವನ್ನು ಬೃಹತ್‌ ವಿಮಾನಕ್ಕೆ ಹೋಲಿಸಬಹುದು!

ನಾಸಾ ಭೂ-ಆಧಾರಿತ ಮತ್ತು ಬಾಹ್ಯಾಕಾಶ-ಆಧಾರಿತ ದೂರದರ್ಶಕಗಳ ಸಂಯೋಜನೆಯನ್ನು ಬಳಸಿಕೊಂಡು ಕ್ಷುದ್ರಗ್ರಹಗಳನ್ನು ಟ್ರ್ಯಾಕ್ ಮಾಡುತ್ತದೆ. ನಾಸಾ-ಧನಸಹಾಯದ ಕ್ಷುದ್ರಗ್ರಹ ಟೆರೆಸ್ಟ್ರಿಯಲ್-ಇಂಪ್ಯಾಕ್ಟ್ ಲಾಸ್ಟ್ ಅಲರ್ಟ್ ಸಿಸ್ಟಮ್ (ATLAS) ಚಲಿಸುವ ವಸ್ತುಗಳಿಗಾಗಿ ರಾತ್ರಿ ಆಕಾಶವನ್ನು ಸ್ಕ್ಯಾನ್ ಮಾಡುತ್ತದೆ. ಯಾವುದೇ ಸಂಭಾವ್ಯ ಕ್ಷುದ್ರಗ್ರಹ ಪತ್ತೆಗಳನ್ನು ವರದಿ ಮಾಡುತ್ತದೆ. ಆದರೆ ಕೆಲವು ಬಾಹ್ಯಾಕಾಶ-ಆಧಾರಿತ ವೀಕ್ಷಣಾಲಯಗಳು ಕ್ಷುದ್ರಗ್ರಹಗಳು ಮತ್ತು ಅವುಗಳ ಗುಣಲಕ್ಷಣಗಳನ್ನು ಪತ್ತೆಹಚ್ಚಲು ಅತಿಗೆಂಪು ಸಂವೇದಕಗಳನ್ನು ಬಳಸುತ್ತವೆ ಎಂಬುದನ್ನು ಗಮನಿಸಬೇಕಾಗುತ್ತದೆ.

ಕ್ಷುದ್ರಗ್ರಹಗಳ ವಿಧಗಳು

ಕ್ಷುದ್ರಗ್ರಹಗಳ ಮೂರು ಪ್ರಾಥಮಿಕ ವರ್ಗೀಕರಣಗಳಿದ್ದು ಸಿ-ಟೈಪ್, ಎಸ್-ಟೈಪ್ ಮತ್ತು ಎಂ-ಟೈಪ್ ಎಂದು ವರ್ಗೀಕರಿಸಬಹುದು. ಈ ಪೈಕಿ, ಸಿ-ಟೈಪ್ ಕ್ಷುದ್ರಗ್ರಹಗಳು, ಪ್ರಾಥಮಿಕವಾಗಿ ಇಂಗಾಲ-ಸಮೃದ್ಧ ಪದಾರ್ಥಗಳಿಂದ ಸಂಯೋಜಿಸಲ್ಪಟ್ಟಿವೆ. ಅವುಗಳು ಹೆಚ್ಚಾಗಿ ಕಂಡುಬರುತ್ತವೆ. ಎಸ್- ಮಾದರಿಯ ಕ್ಷುದ್ರಗ್ರಹಗಳು, ಮುಖ್ಯವಾಗಿ ಸಿಲಿಕೇಟ್ ಖನಿಜಗಳಿಂದ ಮಾಡಲ್ಪಟ್ಟಿವೆ. ಕಡಿಮೆ ಗೋಚರಿಸುತ್ತವೆ. ಇನ್ನು ಎಂ- ಮಾದರಿಯ ಕ್ಷುದ್ರಗ್ರಹಗಳು, ಪ್ರಾಥಮಿಕವಾಗಿ ಲೋಹದಿಂದ ಕೂಡಿರುತ್ತವೆ. ಅವುಗಳು ಕೂಡ ಕಡಿಮೆ ಪ್ರಚಲಿತದಲ್ಲಿವೆ.

ಕ್ಷುದ್ರಗ್ರಹಗಳ ಮೇಲಿನ ಸಂಶೋಧನೆಯು ನಿರ್ಣಾಯಕ. ಏಕೆಂದರೆ ಇದು ಸೌರವ್ಯೂಹದ ಆರಂಭಿಕ ಹಂತಗಳು ಮತ್ತು ಗ್ರಹಗಳ ಅಭಿವೃದ್ಧಿಯ ಬಗ್ಗೆ ಅಮೂಲ್ಯವಾದ ಮಾಹಿತಿಯನ್ನು ಒದಗಿಸುತ್ತದೆ. ಇದಲ್ಲದೆ, ಈ ಆಕಾಶಕಾಯಗಳು ಲೋಹಗಳು ಮತ್ತು ನೀರಿನಂತಹ ಉಪಯುಕ್ತ ಸಂಪನ್ಮೂಲಗಳನ್ನು ಹೊಂದಿರಬಹುದು, ಇದನ್ನು ಮುಂಬರುವ ಬಾಹ್ಯಾಕಾಶ ಕಾರ್ಯಾಚರಣೆಗಳಲ್ಲಿ ಬಳಸಿಕೊಳ್ಳಬಹುದು.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ