logo
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Hyundai Creta 2024: ಭಾರತದ ಮಾರುಕಟ್ಟೆಗೆ ಹ್ಯುಂಡೈ ಕ್ರೆಟಾ ಫೇಸ್‌ಲಿಫ್ಟ್ ಭರ್ಜರಿ ಪ್ರವೇಶ; ಫೀಚರ್ಸ್, ದರ ವಿವರ

Hyundai Creta 2024: ಭಾರತದ ಮಾರುಕಟ್ಟೆಗೆ ಹ್ಯುಂಡೈ ಕ್ರೆಟಾ ಫೇಸ್‌ಲಿಫ್ಟ್ ಭರ್ಜರಿ ಪ್ರವೇಶ; ಫೀಚರ್ಸ್, ದರ ವಿವರ

Umesh Kumar S HT Kannada

Jan 16, 2024 02:52 PM IST

ಭಾರತೀಯ ಎಸ್‌ಯುವಿ ಮಾರುಕಟ್ಟೆಯಲ್ಲಿ ಬಹುನಿರೀಕ್ಷಿತ ಕ್ರೆಟಾ 2024 ಅನ್ನು ಹ್ಯುಂಡೈ ಇಂದು (ಜ.16) ಬಿಡುಗಡೆ ಮಾಡಿದೆ.

  • 2024 Hyundai Creta Facelift: ಭಾರತದ ಎಸ್‌ಯುವಿ ಮಾರುಕಟ್ಟೆಗೆ ಹ್ಯುಂಡೈ ಕ್ರೆಟಾ ಫೇಸ್‌ಲಿಫ್ಟ್ 2024ರ ಮಾಡೆಲ್ ಭರ್ಜರಿಯಾಗಿ ಪ್ರವೇಶ ನೀಡಿದೆ. ಹೊಸ ಕ್ರೆಟಾ ಹಲವು ಸುಧಾರಿತ ಅಂಶಗಳನ್ನು, ಫೀಚರ್‌ಗಳನ್ನು ಒಳಗೊಂಡಿದೆ. ದರದಲ್ಲಿ ಹೆಚ್ಚೇನೂ ಬದಲಾವಣೆ ಇಲ್ಲದೇ ಗ್ರಾಹಕ ನೆಲೆಯನ್ನು ವಿಸ್ತರಿಸಲು ಹ್ಯುಂಡೈ ಯೋಜಿಸಿದ್ದು, ಕ್ರೆಟಾ ಫೀಚರ್ಸ್ ವಿವರ ಹೀಗಿದೆ.

ಭಾರತೀಯ ಎಸ್‌ಯುವಿ ಮಾರುಕಟ್ಟೆಯಲ್ಲಿ ಬಹುನಿರೀಕ್ಷಿತ ಕ್ರೆಟಾ 2024 ಅನ್ನು ಹ್ಯುಂಡೈ ಇಂದು (ಜ.16)  ಬಿಡುಗಡೆ ಮಾಡಿದೆ.
ಭಾರತೀಯ ಎಸ್‌ಯುವಿ ಮಾರುಕಟ್ಟೆಯಲ್ಲಿ ಬಹುನಿರೀಕ್ಷಿತ ಕ್ರೆಟಾ 2024 ಅನ್ನು ಹ್ಯುಂಡೈ ಇಂದು (ಜ.16) ಬಿಡುಗಡೆ ಮಾಡಿದೆ. (Hyundai Motor)

ಭಾರತದಲ್ಲಿ ಬಹು ನಿರೀಕ್ಷಿತ ಕ್ರೆಟಾ ಫೇಸ್‌ಲಿಫ್ಟ್ ಅನ್ನು 11 ಲಕ್ಷ ರೂಪಾಯಿ ಆರಂಭಿಕ ಬೆಲೆಯೊಂದಿಗೆ ಹುಂಡೈ ಬಿಡುಗಡೆ ಮಾಡಿದೆ. 2015 ರಲ್ಲಿ ಮೊದಲ ಬಾರಿಗೆ ಕ್ರೆಟಾವನ್ನು ಪರಿಚಯಿಸಿದ ಹುಂಡೈ, ಕ್ರೆಟಾ ಮೂಲಕ ಒಂಬತ್ತು ವರ್ಷಗಳಲ್ಲಿ 9.80 ಲಕ್ಷಕ್ಕೂ ಹೆಚ್ಚಿನ ಗ್ರಾಹಕರ ನೆಲೆಯನ್ನು ಹೊಂದಿದೆ. ಮಧ್ಯಮ ಗಾತ್ರದ ಎಸ್‌ಯುವಿ ವಿಭಾಗದಲ್ಲಿ ಪ್ರಬಲ ಸ್ಪರ್ಧೆಯನ್ನು ಎದುರಿಸುತ್ತಿದ್ದರೂ, ಮಾರುಕಟ್ಟೆಯಲ್ಲಿ ಕ್ರೆಟಾ ತನ್ನ ನಾಯಕತ್ವದ ಸ್ಥಾನವನ್ನು ಸ್ಥಿರವಾಗಿ ಉಳಿಸಿಕೊಂಡಿದೆ.

ಟ್ರೆಂಡಿಂಗ್​ ಸುದ್ದಿ

Gold Rate Today: ವಾರಾಂತ್ಯದಲ್ಲಿ ತುಸು ಇಳಿಕೆಯಾದ ಹಳದಿ ಲೋಹದ ಬೆಲೆ; ಶನಿವಾರ ಬೆಳ್ಳಿ ದರ ತಟಸ್ಥ

Gold Rate Today: ಶುಕ್ರವಾರವೂ ಏರಿಕೆಯಾದ ಚಿನ್ನ, ಬೆಳ್ಳಿ ದರ; ದೇಶದಲ್ಲಿಂದು ಆಭರಣ ದರ ಎಷ್ಟಾಗಿದೆ ಗಮನಿಸಿ

ಇಪಿಎಫ್‌ಒ; ಈ 3 ಕಾರಣ ನೀಡಿದ್ರೆ ಇಪಿಎಫ್‌ ಹಣ ಬೇಗ ಹಿಂಪಡೆಯಬಹುದು, ಹಂತ ಹಂತದ ಮಾರ್ಗದರ್ಶಿ ಇಲ್ಲಿದೆ ನೋಡಿ

ಗುವಾಹಟಿ ಬೀದಿಯಲ್ಲಿ ಸೋಷಿಯಲ್ ಮೀಡಿಯಾ ಪ್ರಭಾವಿಯ ಮಂಜುಲಿಕಾ ನೃತ್ಯನಾಟಕ, ದಂಗಾಗಿ ನೋಡುತ್ತ ನಿಂತ ಜನ-ವೈರಲ್ ವಿಡಿಯೋ

ಫೇಸ್‌ಲಿಫ್ಟ್ ಮೂಲಕ ಹ್ಯುಂಡೈ ಕ್ರೆಟಾ, ತನ್ನ ಬಾಹ್ಯ ವಿನ್ಯಾಸದಲ್ಲಿ ಗಮನಾರ್ಹ ಬದಲಾವಣೆಗಳನ್ನು ಮಾಡಿಕೊಂಡಿದೆ. ಆಂತರಿಕ ವಿನ್ಯಾಸದಲ್ಲೂ ಸುಧಾರಣೆ, ವೈಶಿಷ್ಟ್ಯಗಳ ವಿಸ್ತರಿತ ಶ್ರೇಣಿ ಮತ್ತು ಲೆವೆಲ್ 2 ಅಡ್ವಾನ್ಸ್ಡ್ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಮ್ಸ್ (ಎಡಿಎಎಸ್‌) ಅನ್ನೂ ಅಳವಡಿಸಿಕೊಂಡಿದೆ.
ಇದನ್ನೂ ಓದಿ| Ram Mandir Scams: ರಾಮಮಂದಿರ ಪ್ರವೇಶಕ್ಕೆ ವಿಐಪಿ ಪಾಸ್ ಸೇರಿ ಹಲವು ಆಮಿಷಗಳೊಂದಿಗೆ ವಂಚನೆ, ಸೈಬರ್ ವಂಚಕರ ಬಗ್ಗೆ ಹುಷಾರು

ಪರಿಷ್ಕೃತ ಕ್ರೆಟಾ ಮಾದರಿಯು 1.5-ಲೀಟರ್ ಪೆಟ್ರೋಲ್, 1.5-ಲೀಟರ್ ಟರ್ಬೊ-ಪೆಟ್ರೋಲ್ ಮತ್ತು 1.5-ಲೀಟರ್ ಡೀಸೆಲ್ ಎಂಜಿನ್ ಸೇರಿದಂತೆ ಮೂರು ಪವರ್‌ಟ್ರೇನ್ ಆಯ್ಕೆಗಳಲ್ಲಿ ಲಭ್ಯವಿರುತ್ತದೆ. 6 ಸ್ಪೀಡ್ ಮ್ಯಾನುವಲ್‌, 6 ಸ್ಪೀಡ್‌ ಐಎಂಟಿ, ಸ್ವಯಂಚಾಲಿತ ಟಾರ್ಕ್ ಪರಿವರ್ತಕ, ಸಿವಿಟಿ ಮತ್ತು 7- ಸ್ಪೀಡ್‌ ಡಿಸಿಟಿ ಗೇರ್‌ಬಾಕ್ಸ್‌ ಹೊಂದಿರುವುದು ವಿಶೇಷ.

ಹುಂಡೈ ಕ್ರೆಟಾ 2024ರಲ್ಲಿ ಬದಲಾದ ಫೀಚರ್‌ಗಳೇನು?

ಸುಧಾರಿತ ಹುಂಡೈ ಕ್ರೆಟಾ ಮಾಡೆಲ್‌ನಲ್ಲಿ ಮರುವಿನ್ಯಾಸಗೊಳಿಸಲಾದ ಗ್ರಿಲ್, ಹೊಸ ಎಲ್‌ಇಡಿ ಹೆಡ್‌ಲೈಟ್‌ಗಳು ಮತ್ತು ಹೊಸ ಎಲ್‌ಇಡಿ ಡಿಆರ್‌ಎಲ್ ಸ್ಟ್ರಿಪ್‌ಗಳಿವೆ. ಇದಲ್ಲದೆ, ಕಾರಿನ ಹೊರಭಾಗ ಮತ್ತು ಒಳಭಾಗಕ್ಕೆ ಸುಧಾರಿತ ರೂಪದ ಅನೇಕ ಬದಲಾವಣೆಗಳನ್ನು ಹೊಸ ಕ್ರೆಟಾದಲ್ಲಿ ಮಾಡಲಾಗಿದೆ. ಮಧ್ಯಮ ಶ್ರೇಣಿಯ ಎಸ್‌ಯುವಿ ಈಗ ಹೊಸ ಸ್ಕಿಡ್ ಪ್ಲೇಟ್‌ನಲ್ಲಿ ಹೆಚ್ಚು ಅಕ್ಷರ ಸಾಲುಗಳನ್ನು ಹೊಂದಿದೆ. ಕ್ರೆಟಾ ಫೇಸ್‌ಲಿಫ್ಟ್ ಕೂಡ ಮಿಶ್ರಲೋಹದ ಚಕ್ರಗಳನ್ನು ಹೊಂದಿದೆ. ಆರು ಏರ್‌ಬ್ಯಾಗ್‌ಗಳ ಸೆಟ್ ಸೇರಿ ಸುರಕ್ಷತಾ ವೈಶಿಷ್ಟ್ಯಗಳನ್ನು ಒಳಗೊಂಡಿದೆ.

ಹ್ಯುಂಡೈ ಕ್ರೆಟಾ 2024 ಈಗ ಹೊಸ ದೃಢವೆನಿಸುವ ಎಮರಾಲ್ಡ್ ಪರ್ಲ್ ರೂಪಾಂತರಗಳಲ್ಲಿ ಲಭ್ಯವಿದೆ. ಇದಲ್ಲದೆ, ಆರು ಬಣ್ಣಗಳಲ್ಲಿ ಅಂದರೆ, ಫಿಯರಿ ರೆಡ್, ರೇಂಜರ್ ಖಾಕಿ, ಅಬಿಸ್ ಬ್ಲ್ಯಾಕ್, ಅಟ್ಲಾಸ್ ವೈಟ್, ಟೈಟಾನ್ ಗ್ರೇ ಮತ್ತು ಅಟ್ಲಾಸ್ ವೈಟ್ ಜೊತೆಗೆ ಕಪ್ಪು ಛಾವಣಿಯ ಬಣ್ಣಗಳಲ್ಲಿ ಲಭ್ಯವಿರುತ್ತದೆ.

ಕ್ರೆಟಾ ಫೇಸ್‌ಲಿಫ್ಟ್ ಸುಧಾರಿತ ಕಾರಾದರೂ, ಹೆಚ್ಚಿನ ಬೆಲೆ ಏರಿಕೆ ಆಗಿಲ್ಲ. ಮೂಲ ಮಾದರಿಯ ಕಾರಿನ ಆರಂಭಿಕ ಬೆಲೆ 10.99 ಲಕ್ಷ ರೂಪಾಯಿ (ಎಕ್ಸ್‌ ಶೋರೂಂ ಬೆಲೆ), ಟಾಪ್‌ ಎಂಡ್ ರೂಪಾಂತರದ ಎಕ್ಸ್‌ಶೋರೂಂ ದರ 17.24 ಲಕ್ಷ ರೂಪಾಯಿ ಆಗಿದೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ