logo
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Lamborghini: ಲಾಂಬೋರ್ಗನಿ ಮಾರಾಟದಲ್ಲಿ ಹೊಸ ದಾಖಲೆ, ಈ ಕಾರು ಅಂದ್ರೆ ಜನರಿಗೆ ಅಷ್ಟೇಕೆ ಇಷ್ಟ? ಇಲ್ಲಿದೆ ವಿವರ

Lamborghini: ಲಾಂಬೋರ್ಗನಿ ಮಾರಾಟದಲ್ಲಿ ಹೊಸ ದಾಖಲೆ, ಈ ಕಾರು ಅಂದ್ರೆ ಜನರಿಗೆ ಅಷ್ಟೇಕೆ ಇಷ್ಟ? ಇಲ್ಲಿದೆ ವಿವರ

Raghavendra M Y HT Kannada

Jan 18, 2024 09:35 AM IST

8.89 ಕೋಟಿ ರೂಪಾಯಿಯ ಲಾಂಬೋರ್ಗನಿ ರಿವಲ್ಟೊ ಹೊಸ ಕಾರನ್ನು ಬಿಡುಗಡೆ ಮಾಡಲಾಗಿದೆ.

  • 2023ರಲ್ಲಿ 10,000 ಲಾಂಬೋರ್ಗನಿ ಕಾರುಗಳನ್ನ ಮಾರಾಟ ಮಾಡಿ ಹೊಸ ದಾಖಲೆ ಬರೆದಿದೆ. ದುಬಾರಿ ಬೆಲೆಯ ಈ ಕಾರನ್ನು ಜನ ಯಾಕೆ ಅಷ್ಟು ಇಷ್ಟ ಪಡ್ತಾರೆ?

8.89 ಕೋಟಿ ರೂಪಾಯಿಯ ಲಾಂಬೋರ್ಗನಿ ರಿವಲ್ಟೊ ಹೊಸ ಕಾರನ್ನು ಬಿಡುಗಡೆ ಮಾಡಲಾಗಿದೆ.
8.89 ಕೋಟಿ ರೂಪಾಯಿಯ ಲಾಂಬೋರ್ಗನಿ ರಿವಲ್ಟೊ ಹೊಸ ಕಾರನ್ನು ಬಿಡುಗಡೆ ಮಾಡಲಾಗಿದೆ.

‘ಲಾಂಬೋರ್ಗನಿ’... ಈ ಕಾರಿನ ಹೆಸರು ಕೇಳಿದರೆ ಸಾರು ರಸ್ತೆಯಲ್ಲಿ ಹೋಗುವಾಗ ಕೇಳಿಸುವ ಕಾರಿನ ಸೌಂಡ್, ವೇಗ, ಸ್ಟೈಲ್ ಕಣ್ಮುಂದೆ ಬರುತ್ತದೆ. ಜಗತ್ತಿನ ದುಬಾರಿ ಬೆಲೆಯ ಐಷಾರಾಮಿ ಕಾರುಗಳ ಪೈಕಿ ಲಾಂಬೋರ್ಗನಿ ಕೂಡ ಒಂದಾಗಿದ್ದು, ಸದ್ಯ ಕಳೆದ ವರ್ಷ ಸಾರ್ವಕಾಲಿಕ ದಾಖಲೆಯೊಂದನ್ನ ಬರೆದಿದೆ.

ಟ್ರೆಂಡಿಂಗ್​ ಸುದ್ದಿ

ಸಾಯಿ ಬಾಬಾ ಮತ್ತೆ ಹುಟ್ಟಿದ್ರಾ, ಈ ಬಾಲಕ ಅವರ ಪುನರವತಾರವೇ, ಏನಿದು ವಿದೇಶೀಯರ ವರ್ತನೆ! - ವೈರಲ್ ವಿಡಿಯೋ

Gold Rate Today: ವಾರಾಂತ್ಯದಲ್ಲಿ ತುಸು ಇಳಿಕೆಯಾದ ಹಳದಿ ಲೋಹದ ಬೆಲೆ; ಶನಿವಾರ ಬೆಳ್ಳಿ ದರ ತಟಸ್ಥ

Gold Rate Today: ಶುಕ್ರವಾರವೂ ಏರಿಕೆಯಾದ ಚಿನ್ನ, ಬೆಳ್ಳಿ ದರ; ದೇಶದಲ್ಲಿಂದು ಆಭರಣ ದರ ಎಷ್ಟಾಗಿದೆ ಗಮನಿಸಿ

ಇಪಿಎಫ್‌ಒ; ಈ 3 ಕಾರಣ ನೀಡಿದ್ರೆ ಇಪಿಎಫ್‌ ಹಣ ಬೇಗ ಹಿಂಪಡೆಯಬಹುದು, ಹಂತ ಹಂತದ ಮಾರ್ಗದರ್ಶಿ ಇಲ್ಲಿದೆ ನೋಡಿ

ಐಷಾರಾಮಿ ಸ್ಪೋರ್ಟ್ಸ್ ಕಾರುಗಳ ಉತ್ಪಾದನೆ ಮಾಡುವ ಲಾಂಬೋರ್ಗನಿ 2023ರಲ್ಲಿ 10,112 ಕಾರುಗಳನ್ನು ಮಾರಾಟ ಮಾಡಿ ಇತಿಹಾಸವನ್ನು ಸೃಷ್ಟಿಸಿದೆ. ಇಷ್ಟು ಯೂನಿಟ್‌ಗಳನ್ನು ಮಾರಾಟ ಮಾಡಿರುವುದೇ ಕಂಪನಿಯ ಇತಿಹಾಸದಲ್ಲಿ ಇದೇ ಮೊದಲು. ವರ್ಷದಿಂದ ವರ್ಷಕ್ಕೆ ಶೇಕಡಾ 10 ರಷ್ಟು ಕಾರುಗಳ ನೋಂದಣಿ ಹೆಚ್ಚಾಗುತ್ತಲೇ ಇದೆ ಎಂದು ಹೇಳಿಕೊಂಡಿದೆ.

ಲಾಂಬೋರ್ಗಿನಿ ಕಾರುಗಳ ದಾಖಲೆಯ ಮಾರಾಟದಲ್ಲಿ ಯುರೋಪ್, ಮಧ್ಯಪ್ರಾಚ್ಯ ಹಾಗೂ ಆಫ್ರಿಕಾ ಪ್ರದೇಶದ ಕೊಡುಗೆ ಹೆಚ್ಚಿದೆ. ಈ ಭಾಗದಲ್ಲಿ 3,987 ಕಾರುಗಳ ಮಾರಾಟವಾಗಿದೆ. ಉಳಿದಂತೆ ಅಮೆರಿಕಾದಲ್ಲಿ 3,465 ಹಾಗೂ ಏಷ್ಯಾ ಪೆಸಿಫಿಕ್ ಪ್ರದೇಶದಲ್ಲಿ 2,660 ಯೂನಿಟ್‌ಗಳನ್ನು ಮಾರಾಟ ಮಾಡಿದೆ.

ಯುರೋಪ್, ಮಧ್ಯಪ್ರಾಚ್ಯ ಹಾಗೂ ಆಫ್ರಿಕಾದಲ್ಲಿ 2022ಕ್ಕೆ ಹೋಲಿಸಿದರೆ 2023ರಲ್ಲಿ ಶೇಕಡಾ 14 ರಷ್ಟು ಮಾರಾಟದ ಬೆಳವಣಿಯಾಗಿದೆ. ಅದೇ ರೀತಿಯಾಗಿ ಅಮೆರಿಕಾದಲ್ಲಿ ಶೇಕಡಾ 9 ಹಾಗೂ ಏಷ್ಯಾ ಪೆಸಿಫಿಕ್ ಭಾಗದಲ್ಲಿ ಶೇಕಡಾ 4 ರಷ್ಟು ಮಾರಾಟದ ವೃದ್ಧಿಯಾಗಿದೆ.

ಭಾರತದಲ್ಲಿ ಮಾರಾಟವಾದ ಲಾಂಬೋರ್ಗನಿ ಕಾರುಗಳು ಎಷ್ಟು?

2023ರಲ್ಲಿ ಲಾಂಬೋರ್ಗನಿ ಕಾರುಗಳನ್ನು ಖರೀದಿಸಿದ ದೇಶಗಳ ಪೈಕಿ ವಿಶ್ವದ ದೊಡ್ಡಣ್ಣ ಅಮೆರಿಕ ಅಗ್ರಸ್ದಾನದಲ್ಲಿದೆ. ಕಳೆದ ವರ್ಷ 3,000 ಲಾಂಬೋರ್ಗನಿ ಕಾರುಗಳನ್ನು ಯುಎಸ್ ಗ್ರಾಹಕರು ಖರೀದಿಸಿದ್ದಾರೆ. ಆ ನಂತರದ ಸ್ಥಾನದಲ್ಲಿ ಜರ್ಮನಿ (961 ಕಾರು), ಚೀನಾ (845 ಕಾರು), ಯುಕೆ (801 ಕಾರು), ಜಪಾನ್ (660 ಕಾರು), ಮದ್ಯಪ್ರಾಚ್ಯ (496 ಕಾರು), ದಕ್ಷಿಣ ಕೊರಿಯಾ (434 ಕಾರು), ಇಟಲಿ (409 ಕಾರು), ಕೆನಡಾ (357 ಕಾರು), ಆಸ್ಟ್ರೇಲಿಯಾ (263 ಕಾರು), ಫ್ರಾನ್ಸ್ ಮತ್ತು ಮೊನಾಕೊ (255 ಕಾರು), ಸ್ವಿಟ್ಜರ್ಲ್ಯಾಂಡ್ (211 ಕಾರು), ತೈವಾನ್ (131 ಕಾರು) ಹಾಗೂ ಭಾರತದಲ್ಲಿ 103 ಕಾರುಗಳು ಮಾರಾಟ ಆಗಿವೆ.

ಇನ್ನ ಲಾಂಬೋರ್ಗನಿ ಮಾಡೆಲ್ ವಿಚಾರದಲ್ಲಿ ನೋಡುವುದಾದರೆ 2023ರಲ್ಲಿ ಮಾರಾಟ ಆಗಿರುವ ಒಟ್ಟು ಕಾರುಗಳ ಪೈಕಿ ಉರುಸ್ ಟಾಪ್‌ನಲ್ಲಿದೆ. ಲಾಂಬೋರ್ಗನಿ ಉರುಸ್ 6,087 ಯೂನಿಟ್‌ಗಳು ಸೇಲ್ ಆಗಿವೆ. ನಂತರದ ಸ್ಥಾನದಲ್ಲಿ ಹುರಾಕನ್ ಇದ್ದು, 3,962 ಯೂನಿಟ್‌ಗಳು ಮಾರಾಟದೊಂದಿಗೆ 2ನೇ ಸ್ಥಾನದಲ್ಲಿದೆ. ಇನ್ನ ಜಗತ್ತಿನಲ್ಲಿ ಎಲೆಕ್ಟ್ರಿಕ್ ಕಾರುಗಳಿಗೆ ಭಾರಿ ಬೇಡಿಕೆ ಹೆಚ್ಚಾಗುತ್ತಿರುವುದರಿಂದ ಲಾಂಬೋರ್ಗನಿ ಕೂಡ ಇವಿಗೆ ಎಂಟ್ರಿ ಕೊಟ್ಟಿದೆ. ತನ್ನ ಮೊದಲ ವಿ12 ಹೈ ಪರ್ಫಾರ್ಮೆನ್ಸ್ ಎಲೆಕ್ಟ್ರಿಫೈಡ್ ವೆಹಿಕಲ್ (ಎಚ್‌ಪಿಇವಿ) ಹೈಬ್ರಿಡ್ ಸೂಪರ್ ಸ್ಪೋರ್ಟ್ಸ್ ಕಾರು ಲಾಂಬೋರ್ಗನಿ ರೆವೆಲ್ಟೊ ಅವನ್ನು 2023ರಲ್ಲಿ ಬಿಡುಗಡೆ ಮಾಡಿದ್ದು, ಗ್ರಾಹಕರಿಂದ ಬೇಡಿಕೆ ಬರುತ್ತಿದ್ದು, ಬುಕಿಂಗ್ ಕೂಡ ಆರಂಭವಾಗಿದೆ ಎಂದು ಹೇಳಿಕೊಂಡಿದೆ. ಲಾಂಬೋರ್ಗನಿ ಎಲೆಕ್ಟ್ರಿಕ್ ಕಾರು 2026ಕ್ಕೆ ಗ್ರಾಹಕರ ಕೈಸೇರುವ ಸಾಧ್ಯತೆ ಇದೆ.

'ಮನೆ-ಮನದಲ್ಲಿ ಶ್ರೀರಾಮ' ಸರಣಿಗೆ ನೀವೂ ಬರೆಯಿರಿ. ಇಮೇಲ್: ht.kannada@htdigital.in

ವಿಭಾಗ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ