logo
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Gold Loan Limit: ಈ ಬ್ಯಾಂಕುಗಳಲ್ಲಿ ಗ್ರಾಹಕರಿಗೆ ನೀಡುವ ಗೋಲ್ಡ್ ಲೋನ್ ಮಿತಿ ದುಪ್ಪಟ್ಟುಗೊಳಿಸಿದೆ ಆರ್‌ಬಿಐ

Gold Loan Limit: ಈ ಬ್ಯಾಂಕುಗಳಲ್ಲಿ ಗ್ರಾಹಕರಿಗೆ ನೀಡುವ ಗೋಲ್ಡ್ ಲೋನ್ ಮಿತಿ ದುಪ್ಪಟ್ಟುಗೊಳಿಸಿದೆ ಆರ್‌ಬಿಐ

Umesh Kumar S HT Kannada

Oct 06, 2023 01:04 PM IST

ನಗರ ಸಹಕಾರ ಬ್ಯಾಂಕ್‌ಗಳಿಗೆ (ಯುಸಿಬಿಗಳು) ಸಂಬಂಧಿಸಿ ಬುಲೆಟ್ ಮರುಪಾವತಿ ಯೋಜನೆಯ ಗೋಲ್ಡ್ ಲೋನ್ ಮಿತಿಯನ್ನು ದುಪ್ಪಟ್ಟುಗೊಳಿಸಲಾಗಿದೆ ಎಂದು ಆರ್‌ಬಿಐ ತಿಳಿಸಿದೆ.

  • ಭಾರತೀಯ ರಿಸರ್ವ್ ಬ್ಯಾಂಕ್‌ (ಆರ್‌ಬಿಐ) ಕೆಲವು ಬ್ಯಾಂಕುಗಳಲ್ಲಿ ಗ್ರಾಹಕರಿಗೆ ನೀಡುವ ಗೋಲ್ಡ್ ಲೋನ್ ಮಿತಿಯನ್ನು ದುಪ್ಪಟ್ಟುಗೊಳಿಸಿದೆ. ಇದು ಬುಲೆಟ್ ರೀಪೇಮೆಂಟ್‌ ಸ್ಕೀಮ್‌ನಲ್ಲಿ ನೀಡಲಾಗುವ ಸಾಲವಾಗಿದ್ದು, ವಿವರ ಹೀಗಿದೆ.

ನಗರ ಸಹಕಾರ ಬ್ಯಾಂಕ್‌ಗಳಿಗೆ (ಯುಸಿಬಿಗಳು) ಸಂಬಂಧಿಸಿ ಬುಲೆಟ್ ಮರುಪಾವತಿ ಯೋಜನೆಯ ಗೋಲ್ಡ್ ಲೋನ್ ಮಿತಿಯನ್ನು ದುಪ್ಪಟ್ಟುಗೊಳಿಸಲಾಗಿದೆ ಎಂದು ಆರ್‌ಬಿಐ ತಿಳಿಸಿದೆ.
ನಗರ ಸಹಕಾರ ಬ್ಯಾಂಕ್‌ಗಳಿಗೆ (ಯುಸಿಬಿಗಳು) ಸಂಬಂಧಿಸಿ ಬುಲೆಟ್ ಮರುಪಾವತಿ ಯೋಜನೆಯ ಗೋಲ್ಡ್ ಲೋನ್ ಮಿತಿಯನ್ನು ದುಪ್ಪಟ್ಟುಗೊಳಿಸಲಾಗಿದೆ ಎಂದು ಆರ್‌ಬಿಐ ತಿಳಿಸಿದೆ.

ಬುಲೆಟ್ ರೀಪೇಮೆಂಟ್‌ ಸ್ಕೀಮ್‌ ಪ್ರಕಾರ ನೀಡುವ ಗೋಲ್ಡ್ ಲೋನ್‌ನ (Gold loan limit under bullet repayment scheme) ಮಿತಿಯನ್ನು ಭಾರತೀಯ ರಿಸರ್ವ್ ಬ್ಯಾಂಕ್ (RBI) ಹೆಚ್ಚು ಮಾಡಿದೆ. ಕೆಲವು ಬ್ಯಾಂಕುಗಳಿಗೆ ಅನ್ವಯವಾಗುವಂತೆ ಈ ಗೋಲ್ಡ್ ಲೋನ್ ಮಿತಿಯನ್ನು ದುಪ್ಪಟ್ಟುಗೊಳಿಸಲಾಗಿದೆ.

ಟ್ರೆಂಡಿಂಗ್​ ಸುದ್ದಿ

Gold Rate Today: ಶುಕ್ರವಾರವೂ ಏರಿಕೆಯಾದ ಚಿನ್ನ, ಬೆಳ್ಳಿ ದರ; ದೇಶದಲ್ಲಿಂದು ಆಭರಣ ದರ ಎಷ್ಟಾಗಿದೆ ಗಮನಿಸಿ

ಇಪಿಎಫ್‌ಒ; ಈ 3 ಕಾರಣ ನೀಡಿದ್ರೆ ಇಪಿಎಫ್‌ ಹಣ ಬೇಗ ಹಿಂಪಡೆಯಬಹುದು, ಹಂತ ಹಂತದ ಮಾರ್ಗದರ್ಶಿ ಇಲ್ಲಿದೆ ನೋಡಿ

ಗುವಾಹಟಿ ಬೀದಿಯಲ್ಲಿ ಸೋಷಿಯಲ್ ಮೀಡಿಯಾ ಪ್ರಭಾವಿಯ ಮಂಜುಲಿಕಾ ನೃತ್ಯನಾಟಕ, ದಂಗಾಗಿ ನೋಡುತ್ತ ನಿಂತ ಜನ-ವೈರಲ್ ವಿಡಿಯೋ

Gold Rate Today: ಬಂಗಾರ ಪ್ರಿಯರಿಗೆ ಮತ್ತೆ ನಿರಾಸೆ; ತುಸು ಕಡಿಮೆಯಾಗಿ ಪುನಃ ಹೆಚ್ಚಾದ ಚಿನ್ನದ ದರ, ಬೆಳ್ಳಿ ಬೆಲೆಯೂ ಏರಿಕೆ

ಕೆಲವು ಅರ್ಬನ್ ಕೋ ಆಪರೇಟಿವ್‌ ಬ್ಯಾಂಕುಗಳಿಗೆ ಅನ್ವಯವಾಗುವಂತೆ ಈಗ ಇರುವಂತಹ ಗೋಲ್ಡ್ ಲೋನ್ ಮಿತಿಯನ್ನು 2 ಲಕ್ಷ ರೂಪಾಯಿಯಿಂದ 4 ಲಕ್ಷ ರೂಪಾಯಿಗೆ ಏರಿಕೆ ಮಾಡಲಾಗಿದೆ ಎಂದು ಆರ್‌ಬಿಐ ಗವರ್ನರ್ ಶಕ್ತಿಕಾಂತ ದಾಸ್ ಶುಕ್ರವಾರ ಹೇಳಿದ್ದಾರೆ.

ಆದ್ಯತಾ ವಲಯದ ಸಾಲ ನೀಡುವಿಕೆಯ ಪ್ರಕಾರ 2023ರ ಮಾರ್ಚ್ 31ಕ್ಕೆ ಅನ್ವಯಿಸುವಂತೆ ಒಟ್ಟಾರೆ ಗುರಿ ಮತ್ತು ಉಪ-ಗುರಿಗಳನ್ನು ಪೂರೈಸಿದ ನಗರ ಸಹಕಾರ ಬ್ಯಾಂಕ್‌ಗಳಿಗೆ (ಯುಸಿಬಿಗಳು) ಸಂಬಂಧಿಸಿದಂತೆ ಬುಲೆಟ್ ಮರುಪಾವತಿ ಯೋಜನೆಯಡಿಯಲ್ಲಿ ಚಿನ್ನದ ಸಾಲಗಳ ಪ್ರಸ್ತುತ ಮಿತಿಯನ್ನು 2 ಲಕ್ಷ ರೂಪಾಯಿಯಿಂದ 4 ಲಕ್ಷ ರೂಪಾಯಿಗೆ ಹೆಚ್ಚಿಸಲು ನಿರ್ಧರಿಸಲಾಗಿದೆ.

ಈ ಕ್ರಮವು 2023ರ ಮಾರ್ಚ್ 31ಕ್ಕೆ ನಿಗದಿತ ಆದ್ಯತಾ ವಲಯದ ಸಾಲ ನೀಡುವಿಕೆಯ ಗುರಿಗಳನ್ನು ಪೂರೈಸಿದ ನಗರ ಸಹಕಾರ ಬ್ಯಾಂಕ್‌ಗಳಿಗೆ ಸೂಕ್ತವಾದ ಪ್ರೋತ್ಸಾಹವನ್ನು ಒದಗಿಸಲಾಗುವುದು ಎಂಬ ನಮ್ಮ ಹಿಂದಿನ ಪ್ರಕಟಣೆಯ ಅನ್ವೇಷಣೆಯಲ್ಲಿದೆ ಎಂದು ದಾಸ್ ಸೇರಿಸಲಾಗಿದೆ.

ಬುಲೆಟ್ ರೀಪೇಮೆಂಟ್ ಸ್ಕೀಮ್ ಪ್ರಕಾರ ಗೋಲ್ಡ್ ಲೋನ್ ಮಿತಿ

ಬುಲೆಟ್ ಮರುಪಾವತಿ ಯೋಜನೆಯಡಿ, ಬ್ಯಾಂಕ್‌ಗಳು ಬಡ್ಡಿ ಸೇರಿ ಸಾಲದ ಮೊತ್ತದ ಮೇಲೆ ಶೇಕಡಾ 75 ರ ಸಾಲದ ಮೌಲ್ಯದ ಅನುಪಾತವನ್ನು ನಿರ್ವಹಿಸಬೇಕಾಗುತ್ತದೆ.

ಈ ಸಾಲದ ಬಡ್ಡಿಯನ್ನು ಮಾಸಿಕ ಆಧಾರದ ಮೇಲೆ ಖಾತೆಗೆ ವಿಧಿಸಲಾಗುತ್ತದೆ. ಆದರೆ ಮಂಜೂರಾದ ದಿನಾಂಕದಿಂದ 12 ತಿಂಗಳ ಕೊನೆಯಲ್ಲಿ ಮಾತ್ರ ಅಸಲಿನ ಜೊತೆಗೆ ಬಡ್ಡಿಯನ್ನೂ ಪಾವತಿ ಮಾಡಬೇಕಾಗಿರತ್ತದೆ. ಈ ಸಾಲದ ಅವಧಿಯು ಮಂಜೂರಾದ ದಿನಾಂಕದಿಂದ 12 ತಿಂಗಳುಗಳನ್ನು ಮೀರಬಾರದು ಎಂದು ಆರ್‌ಬಿಐ 2017ರಲ್ಲಿ ಸುತ್ತೋಲೆಯಲ್ಲಿ ತಿಳಿಸಿದೆ.

ರಾಜ್ಯ ಮತ್ತು ಕೇಂದ್ರ ಸಹಕಾರಿ ಬ್ಯಾಂಕುಗಳು ತಮ್ಮ ಸಾಲ ನೀತಿಯ ಭಾಗವಾಗಿ ಚಿನ್ನ/ಚಿನ್ನದ ಆಭರಣಗಳ ಭದ್ರತೆಯ ವಿರುದ್ಧ ವಿವಿಧ ಉದ್ದೇಶಗಳಿಗಾಗಿ ಗೋಲ್ಡ್ ಲೋನ್‌ ನೀಡುತ್ತವೆ.

ಬುಲೆಟ್ ಮರುಪಾವತಿ ಯೋಜನೆ (ಬುಲೆಟ್ ರೀಪೇಮೆಂಟ್ ಸ್ಕೀಮ್) ಎಂದರೇನು

ಬುಲೆಟ್ ಮರುಪಾವತಿ ಯೋಜನೆಯು ನಗರ ಸಹಕಾರ ಬ್ಯಾಂಕುಗಳಲ್ಲಿ ಚಾಲ್ತಿಯಲ್ಲಿರುವಂಥ ಸಾಲ ಸೌಲಭ್ಯವಾಗಿದೆ. ಇದರಂತೆ, ಬುಲೆಟ್ ಮರುಪಾವತಿ ಆಯ್ಕೆಯ ಅಡಿಯಲ್ಲಿ ಚಿನ್ನದ ಸಾಲ ಪಡೆದ ಸಾಲಗಾರರು ಸಂಪೂರ್ಣ ಅಸಲು ಮತ್ತು ಬಡ್ಡಿ ಮೊತ್ತವನ್ನು ಸಾಲದ ಅವಧಿಯ ಕೊನೆಯಲ್ಲಿ ಮರುಪಾವತಿ ಮಾಡಬೇಕಾಗುತ್ತದೆ. ಮಾಸಿಕ ಇಎಂಐ ವೇಳಾಪಟ್ಟಿಗಳೊಂದಿಗೆ ಸಾಂಪ್ರದಾಯಿಕ ಸಾಲಗಳಿಗಿಂತ ಭಿನ್ನವಾಗಿ, ಈ ಆಯ್ಕೆಯು ಸಾಲದ ಅವಧಿಯಲ್ಲಿ ಆವರ್ತಕ ಪಾವತಿಗಳ ಅಗತ್ಯವನ್ನು ನಿವಾರಿಸುತ್ತದೆ.

ವಿತ್ತೀಯ ನೀತಿ, ರೆಪೋ ದರ ಸ್ಥಿರವಾಗಿಟ್ಟ ಆರ್‌ಬಿಐ

ಭಾರತೀಯ ರಿಸರ್ವ್ ಬ್ಯಾಂಕ್‌ನ ವಿತ್ತೀಯ ನೀತಿ ಸಮಿತಿಯು ತನ್ನ ಅಕ್ಟೋಬರ್ ಪರಿಶೀಲನಾ ಸಭೆಯಲ್ಲಿ ಸರ್ವಾನುಮತದಿಂದ ಪಾಲಿಸಿ ರೆಪೊ ದರವನ್ನು 6.5 ಶೇಕಡಾದಲ್ಲಿ ಇರಿಸಲು ನಿರ್ಧರಿಸಿತು. ಹೀಗಾಗಿ ನಾಲ್ಕನೇ ಬಾರಿಗೆ ರೆಪೋ ದರವನ್ನು ಯಥಾಸ್ಥಿತಿ ಇಟ್ಟುಕೊಂಡಂತಾಗಿದೆ.

ಆರ್‌ಬಿಐನ ವಿತ್ತೀಯ ನೀತಿ ಸಮಿತಿಯ 6 ಸದಸ್ಯರ ಪೈಕಿ 5 ಸದಸ್ಯರು ವಿತ್ತೀಯ ನೀತಿ ಸ್ಥಿರವಾಗಿ ಇಟ್ಟುಕೊಳ್ಳುವುದಕ್ಕೆ ವಿತ್‌ ಡ್ರಾವಲ್ ಆಫ್ ಅಕಮೊಡೇಶನ್‌ ಪರವಾದ ನಿಲುವು ವ್ಯಕ್ತಪಡಿಸಿದರು. ಹಣದುಬ್ಬರವನ್ನು 4 ಪ್ರತಿಶತ ಗುರಿಯಲ್ಲಿ ಹೊಂದಿಸುವುದರ ಕಡೆಗೆ ವಿತ್ತೀಯ ನೀತಿಯು ಗಮನಹರಿಸಿದೆ ಎಂದು ಶಕ್ತಿಕಾಂತ್ ದಾಸ್‌ ಎಂಪಿಸಿ ಸಭೆಯ ಬಳಿಕ ಘೋಷಿಸಿದರು.

‘ಎಚ್‌ಟಿ ಕನ್ನಡ' ವಾಟ್ಸಾಪ್ ಚಾನೆಲ್‌

“ತಾಜಾ ಸುದ್ದಿ, ಜ್ಯೋತಿಷ್ಯ, ಮನರಂಜನೆ, ಕ್ರೀಡೆ ಸೇರಿದಂತೆ ನಿಮ್ಮಿಷ್ಟದ ವಿಷಯಗಳ ತ್ವರಿತ ಅಪ್‌ಡೇಟ್ ಪಡೆಯಲು 'ಎಚ್‌ಟಿ ಕನ್ನಡ' ವಾಟ್ಸಾಪ್ ಚಾನೆಲ್‌ 🚀 ಫಾಲೊ ಮಾಡಿ. ಮರೆಯದಿರಿ, ಇದು ಪಕ್ಕಾ ಲೋಕಲ್” ಕ್ಲಿಕ್ ಮಾಡಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ