logo
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Bihar News: ಬಿಹಾರ ಸರ್ಕಾರ ಪತನ, ಮುಖ್ಯಮಂತ್ರಿ ಸ್ಥಾನಕ್ಕೆ ನಿತೀಶ್ ರಾಜೀನಾಮೆ, ಇಂಡಿಯಾ ಬ್ಲಾಕ್‌ನಿಂದ ಜೆಡಿಯು ಹೊರಕ್ಕೆ

Bihar News: ಬಿಹಾರ ಸರ್ಕಾರ ಪತನ, ಮುಖ್ಯಮಂತ್ರಿ ಸ್ಥಾನಕ್ಕೆ ನಿತೀಶ್ ರಾಜೀನಾಮೆ, ಇಂಡಿಯಾ ಬ್ಲಾಕ್‌ನಿಂದ ಜೆಡಿಯು ಹೊರಕ್ಕೆ

Umesh Kumar S HT Kannada

Jan 28, 2024 01:54 PM IST

ಸಂಯುಕ್ತ ಜನತಾದಳದ ಅಧ್ಯಕ್ಷ ನಿತೀಶ್ ಕುಮಾರ್ ಅವರು ಬಿಹಾರದ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದರು. ಪಾಟ್ನಾದ ರಾಜಭವನಕ್ಕೆ ಭಾನುವಾರ ತೆರಳಿದ ಅವರು, ರಾಜ್ಯಪಾಲ ರಾಜೇಂದ್ರ ವಿಶ್ವನಾಥ್ ಅರ್ಲೇಕರ್ ಅವರಿಗೆ ರಾಜೀನಾಮೆ ಪತ್ರ ಸಲ್ಲಿಸಿದರು.

  • ಬಿಹಾರ ಮುಖ್ಯಮಂತ್ರಿ ಸ್ಥಾನಕ್ಕೆ ನಿತೀಶ್ ಕುಮಾರ್ ಅವರು ಭಾನುವಾರ ರಾಜೀನಾಮೆ ಸಲ್ಲಿಸಿದರು. ಇದರೊಂದಿಗೆ ಜೆಡಿಯು, ಆರ್‌ಜೆಡಿ, ಕಾಂಗ್ರೆಸ್‌ ಮಹಾಮೈತ್ರಿಯ ಸರ್ಕಾರ ಪತನವಾಗಿದೆ. ಬಿಜೆಪಿ ಜತೆ ಸೇರಿ ಮತ್ತೊಮ್ಮೆ ಸರ್ಕಾರ ರಚನೆಗೆ ನಿತೀಶ್ ಕುಮಾರ್ ಮುಂದಾಗಿದ್ದಾರೆ. ಬಿಜೆಪಿ ಕೂಡ ಶಾಸಕಾಂಗ ಪಕ್ಷದ ನಾಯಕ, ಉಪನಾಯಕರನ್ನು ಆರಿಸಿ ಸರ್ಕಾರ ರಚನೆಗೆ ತುದಿಗಾಲಲ್ಲಿ ನಿಂತಿದೆ. 

ಸಂಯುಕ್ತ ಜನತಾದಳದ ಅಧ್ಯಕ್ಷ ನಿತೀಶ್ ಕುಮಾರ್ ಅವರು ಬಿಹಾರದ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದರು. ಪಾಟ್ನಾದ ರಾಜಭವನಕ್ಕೆ ಭಾನುವಾರ ತೆರಳಿದ ಅವರು, ರಾಜ್ಯಪಾಲ ರಾಜೇಂದ್ರ ವಿಶ್ವನಾಥ್ ಅರ್ಲೇಕರ್ ಅವರಿಗೆ ರಾಜೀನಾಮೆ ಪತ್ರ ಸಲ್ಲಿಸಿದರು.
ಸಂಯುಕ್ತ ಜನತಾದಳದ ಅಧ್ಯಕ್ಷ ನಿತೀಶ್ ಕುಮಾರ್ ಅವರು ಬಿಹಾರದ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದರು. ಪಾಟ್ನಾದ ರಾಜಭವನಕ್ಕೆ ಭಾನುವಾರ ತೆರಳಿದ ಅವರು, ರಾಜ್ಯಪಾಲ ರಾಜೇಂದ್ರ ವಿಶ್ವನಾಥ್ ಅರ್ಲೇಕರ್ ಅವರಿಗೆ ರಾಜೀನಾಮೆ ಪತ್ರ ಸಲ್ಲಿಸಿದರು. (ANI)

ಪಾಟ್ನಾ: ಬಿಹಾರದಲ್ಲಿ ಜೆಡಿಯು, ಆರ್‌ಜೆಡಿ, ಕಾಂಗ್ರೆಸ್‌ ಮಹಾಮೈತ್ರಿ ಸರ್ಕಾರ ಪತನವಾಗಿದೆ. ಮುಖ್ಯಮಂತ್ರಿ ಸ್ಥಾನಕ್ಕೆ ಜೆಡಿಯು ಅಧ್ಯಕ್ಷ ನಿತೀಶ್ ಕುಮಾರ್ ಭಾನುವಾರ ರಾಜೀನಾಮೆ ನೀಡಿದರು. ಕೇವಲ 18 ತಿಂಗಳ ಹಿಂದಷ್ಟೇ ಬಿಜೆಪಿ ಜತೆಗಿನ ಮೈತ್ರಿ ಕಡಿದುಕೊಂಡು ಮಹಾಗಟಬಂಧನ್ ಸರ್ಕಾರವನ್ನು ನಿತೀಶ್‌ ಕುಮಾರ್‌ ರಚಿಸಿದ್ದರು.

ಟ್ರೆಂಡಿಂಗ್​ ಸುದ್ದಿ

ಫೋರ್ಬ್ಸ್‌ 30 ಅಂಡರ್ 30 ಏಷ್ಯಾ ಲಿಸ್ಟ್‌ನಲ್ಲಿ ಐವರು ಬೆಂಗಳೂರಿಗರು, ಯುವ ಸಾಧಕರ ವಿವರ ಹೀಗಿದೆ

ಸಾಯಿ ಬಾಬಾ ಮತ್ತೆ ಹುಟ್ಟಿದ್ರಾ, ಈ ಬಾಲಕ ಅವರ ಪುನರವತಾರವೇ, ಏನಿದು ವಿದೇಶೀಯರ ವರ್ತನೆ! - ವೈರಲ್ ವಿಡಿಯೋ

Gold Rate Today: ಶುಕ್ರವಾರವೂ ಏರಿಕೆಯಾದ ಚಿನ್ನ, ಬೆಳ್ಳಿ ದರ; ದೇಶದಲ್ಲಿಂದು ಆಭರಣ ದರ ಎಷ್ಟಾಗಿದೆ ಗಮನಿಸಿ

ಇಪಿಎಫ್‌ಒ; ಈ 3 ಕಾರಣ ನೀಡಿದ್ರೆ ಇಪಿಎಫ್‌ ಹಣ ಬೇಗ ಹಿಂಪಡೆಯಬಹುದು, ಹಂತ ಹಂತದ ಮಾರ್ಗದರ್ಶಿ ಇಲ್ಲಿದೆ ನೋಡಿ

ಭಾರತದಲ್ಲಿ ಮಹಾಗಟಬಂಧನ್ ಮತ್ತು ವಿರೋಧ ಪಕ್ಷ "ಕೆಲಸಗಳು ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ. ಹೀಗಾಗಿ ಬಿಜೆಪಿಯೊಂದಿಗೆ ಹೊಸ ಸರ್ಕಾರ ರಚನೆ ನಡೆಸುವುದಾಗಿ ನಿತೀಶ್ ಕುಮಾರ್ ಘೋ‍ಷಿಸಿದರು.

ರಾಜ್ಯಪಾಲ ರಾಜೇಂದ್ರ ಅರ್ಲೇಕರ್ ಅವರಿಗೆ ರಾಜೀನಾಮೆ ಸಲ್ಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಂಜೆ ವೇಳೆಗೆ ಹೊಸ ಸರ್ಕಾರ ರಚಿಸುವ ಸಾಧ್ಯತೆಯಿದೆ ಎಂದು ಹೇಳಿದರು.

“ನಾನು ಮುಖ್ಯಮಂತ್ರಿ ಸ್ಥಾನಕ್ಕೆ ನನ್ನ ರಾಜೀನಾಮೆಯನ್ನು ರಾಜ್ಯಪಾಲರಿಗೆ ಸಲ್ಲಿಸಿದ್ದೇನೆ, ಈಗ ಅಸ್ತಿತ್ವದಲ್ಲಿದ್ದ ಸರ್ಕಾರವು ಅಂತ್ಯಗೊಂಡಿದೆ. ನಾನು ಹಾಲಿ ಸರ್ಕಾರವನ್ನು ವಿಸರ್ಜಿಸಿದ್ದೇನೆ" ಎಂದು ನಿತೀಶ್ ಕುಮಾರ್‌ ಹೇಳಿದರು.

ಇದೇ ವೇಳೆ, ಬಿಹಾರದ ಬಿಜೆಪಿ ಪ್ರಧಾನ ಕಚೇರಿಯಲ್ಲಿ ಪಕ್ಷದ ಉಸ್ತುವಾರಿ ವಿನೋದ್ ತಾವ್ಡೆ, “ಪ್ರಧಾನಿ ನರೇಂದ್ರ ಮೋದಿಯವರ ಮನ್ ಕಿ ಬಾತ್ ಕೇಳಲು ನಾವು ಇಲ್ಲಿ ಸೇರಿದ್ದೇವೆ. ಕಾರ್ಯಕ್ರಮದ ನಂತರ ಜೆಡಿಯು ಅನ್ನು ಬೆಂಬಲಿಸುವ ಮತ್ತು ರಚಿಸುವ ಪ್ರಸ್ತಾಪವನ್ನು ಮುಂದಿಡಲಾಯಿತು. ಎನ್‌ಡಿಎ ಸರ್ಕಾರವನ್ನು ರಚಿಸುವುದಕ್ಕೆ ಎಲ್ಲ ಶಾಸಕರು ಸರ್ವಾನುಮತದಿಂದ ಒಪ್ಪಿಕೊಂಡಿದ್ದಾರೆ. ರಾಜ್ಯ ಬಿಜೆಪಿ ಅಧ್ಯಕ್ಷ ಸಾಮ್ರಾಟ್ ಚೌಧರಿ ಮತ್ತು ಮಾಜಿ ಸ್ಪೀಕರ್ ವಿಜಯ್ ಕುಮಾರ್ ಸಿನ್ಹಾ ಅವರನ್ನು ಕ್ರಮವಾಗಿ ಶಾಸಕಾಂಗ ಪಕ್ಷದ ನಾಯಕ ಮತ್ತು ಉಪನಾಯಕರಾಗಿ ಹೆಸರಿಸಲಾಗಿದೆ ” ಎಂದು ತಿಳಿಸಿದರು.

ಹೊಸ ಸರ್ಕಾರದಲ್ಲಿ ಉಪಮುಖ್ಯಮಂತ್ರಿಗಳಾಗುವ ಸುಳಿವನ್ನು ಹೊಂದಿರುವ ಇಬ್ಬರೂ ನಾಯಕರು, ಅವಕಾಶಕ್ಕಾಗಿ ಉನ್ನತ ನಾಯಕತ್ವಕ್ಕೆ ಧನ್ಯವಾದ ಅರ್ಪಿಸಿದರು. ಲಾಲು ಪ್ರಸಾದ್ ಅವರ ಆರ್‌ಜೆಡಿಯಿಂಂದ ಬಿಹಾರವನ್ನು ರಕ್ಷಿಸುವ ಪ್ರತಿಜ್ಞೆ ಮಾಡಿದರು.

ತಾವ್ಡೆ ಮತ್ತು ಚೌಧರಿ ಬಿಜೆಪಿ ಶಾಸಕಾಂಗ ಪಕ್ಷದ ಸಭೆಯ ನಂತರ ನಿತೀಶ್‌ ಕುಮಾರ್ ಅವರ ನಿವಾಸಕ್ಕೆ ಭೇಟಿ ನೀಡಿದರು. ಅಲ್ಲಿಂದ ಅವರೆಲ್ಲರೂ ರಾಜಭವನಕ್ಕೆ ಹೋದರು. ಹೊಸ ಸರ್ಕಾರವನ್ನು ರಚಿಸಲು ಹಕ್ಕು ಸಾಧಿಸಿದರು.

ರಾಜಭವನದ ಪ್ರಕಾರ, ಹೊಸ ಸರ್ಕಾರ ರಚನೆಯಾಗುವವರೆಗೆ ಹಂಗಾಮಿ ಮುಖ್ಯಮಂತ್ರಿಯಾಗಿ ಮುಂದುವರಿಯಲು ನಿತೀಶ್‌ ಕುಮಾರ್ ಅವರನ್ನು ಕೇಳಲಾಗಿದೆ.

ನೂತನ ಸರ್ಕಾರ ರಚನೆ ಇಂದೇ

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜಗತ್ ಪ್ರಕಾಶ್ ನಡ್ಡಾ ಅವರ ಸಮ್ಮುಖದಲ್ಲಿ ಮಧ್ಯಾಹ್ನ 3 ಗಂಟೆಗೆ ಪ್ರಮಾಣ ವಚನ ಸ್ವೀಕಾರ ನಡೆಯುವ ಸಾಧ್ಯತೆಯಿದೆ. ಅವರು ಇಲ್ಲಿಗೆ ಆಗಮಿಸುವ ನಿರೀಕ್ಷೆಯಿದೆ.

ನಿತೀಶ್ ಕುಮಾರ್ ಅವರು 2022ರ ಆಗಸ್ಟ್‌ನಲ್ಲಿ ಬಿಜೆಪಿ ಮೈತ್ರಿ ತೊರೆದು ಮಹಾಗಟಬಂಧನ್‌ಗೆ ಸೇರಿದರು. ಅವರು ತಮ್ಮ ಜೆಡಿಯು ಅನ್ನು "ವಿಭಜಿಸಲು" ಬಿಜೆಪಿಯವರು ಪ್ರಯತ್ನಿಸುತ್ತಿದ್ದಾರೆ ಎಂದು ಆರೋಪಿಸಿ ಬಿಜೆಪಿ ಜೊತೆಗಿನ ಸಂಬಂಧವನ್ನು ಮುರಿದುಕೊಂಡಿದ್ದರು. ಅವರು ಆರ್‌ಜೆಡಿ, ಕಾಂಗ್ರೆಸ್ ಮತ್ತು ಮೂರು ಎಡ ಪಕ್ಷಗಳನ್ನು ಒಳಗೊಂಡ ಬಹು-ಪಕ್ಷಗಳ ಒಕ್ಕೂಟದೊಂದಿಗೆ ಹೊಸ ಸರ್ಕಾರವನ್ನು ರಚಿಸಿದರು.

ಪ್ರಸ್ತುತ 243-ಸದಸ್ಯ ಬಿಹಾರ ಅಸೆಂಬ್ಲಿಯಲ್ಲಿ, ಜೆಡಿಯು 45 ಮತ್ತು ಬಿಜೆಪಿ 78 ಶಾಸಕರನ್ನು ಹೊಂದಿದೆ. ಕುಮಾರ್ ಒಬ್ಬ ಸ್ವತಂತ್ರ ಶಾಸಕನ ಬೆಂಬಲವನ್ನು ಸಹ ಹೊಂದಿದ್ದಾರೆ. ಈಗಾಗಲೇ ಎನ್‌ಡಿಎಯ ಭಾಗವಾಗಿರುವ ಜಿತನ್ ರಾಮ್ ಮಾಂಝಿ ನೇತೃತ್ವದ ಹಿಂದೂಸ್ತಾನಿ ಅವಾಮ್ ಮೋರ್ಚಾ ನಾಲ್ಕು ಶಾಸಕರನ್ನು ಹೊಂದಿದೆ.

ಕಾಂಗ್ರೆಸ್ (19) ಮತ್ತು ಎಡಪಕ್ಷಗಳು (16) ಜೊತೆಗೆ ಆರ್‌ಜೆಡಿ (79) ಒಟ್ಟು 114 ಶಾಸಕರನ್ನು ಹೊಂದಿದ್ದು, ಬಹುಮತಕ್ಕೆ ಎಂಟು ಶಾಸಕರ ಕೊರತೆಯಿದೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ