logo
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Asaduddin Owaisi On Hijab Wear: ಹಿಜಾಬ್‌ ಧರಿಸಿದ ಮಹಿಳೆ ನಿಮ್ಮ ಪಕ್ಷದ ಅಧ್ಯಕ್ಷೆಯಾಗೋದು ಯಾವಾಗ?: ಒವೈಸಿಗೆ ಬಿಜೆಪಿ ಸವಾಲ್!

Asaduddin Owaisi on Hijab Wear: ಹಿಜಾಬ್‌ ಧರಿಸಿದ ಮಹಿಳೆ ನಿಮ್ಮ ಪಕ್ಷದ ಅಧ್ಯಕ್ಷೆಯಾಗೋದು ಯಾವಾಗ?: ಒವೈಸಿಗೆ ಬಿಜೆಪಿ ಸವಾಲ್!

HT Kannada Desk HT Kannada

Oct 26, 2022 04:18 PM IST

ಅಸಾದುದ್ದೀನ್‌ ಒವೈಸಿ(ಸಂಗ್ರಹ ಚಿತ್ರ)

    • ಹಿಜಾಬ್‌ ಧರಿಸುವ ಮಹಿಳೆಯೋರ್ವಳು ಒಂದು ದಿನ ಈ ದೇಶದ ಪ್ರಧಾನಮಂತ್ರಿಯಾಗುವುದು ಖಚಿತ ಎಂದು ಹೇಳಿಕೆ ನೀಡಿರುವ ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್‌ ಒವೈಸಿ ಹೇಳಿಕೆಗೆ ಇದೀಗ ಬಿಜೆಪಿ ತಿರುಗೇಟು ನೀಡಿದೆ. ಪ್ರಜಾತಂತ್ರ ವ್ಯವಸ್ಥೆಯಲ್ಲಿ ಯಾರು ಬೇಕಾದರೂ ಪ್ರಧಾನಿಯಾಗಬಹುದು. ಆದರೆ ಹಿಜಾಬ್‌ ಧರಿಸುವ ಮಹಿಳೆಯೋರ್ವಳು ಎಐಎಂಐಎಂ ಪಕ್ಷದ ಅಧ್ಯಕ್ಷೆಯಾಗುವುದು ಯಾವಾಗ ಎಂದು ಬಿಜೆಪಿ ನಾಯಕ ಶೆಹಜಾದ್‌ ಪೂನಾವಾಲಾ ಪ್ರಶ್ನಿಸಿದ್ದಾರೆ.
ಅಸಾದುದ್ದೀನ್‌ ಒವೈಸಿ(ಸಂಗ್ರಹ ಚಿತ್ರ)
ಅಸಾದುದ್ದೀನ್‌ ಒವೈಸಿ(ಸಂಗ್ರಹ ಚಿತ್ರ) (ANI)

ನವದೆಹಲಿ: ಹಿಜಾಬ್‌ ವಿವಾದ ಸದ್ಯಕ್ಕೆ ತಣ್ಣಗಾಗಾಗುವ ಯಾವುದೇ ಲಕ್ಷಣ ಕಂಡುಬರುತ್ತಿಲ್ಲ. ಶಾಲಾ-ಕಾಲೇಜುಗಳಲ್ಲಿ ಹಿಜಾಬ್‌ ನಿಷೇಧ ಮಾಡಿರುವ ಕರ್ನಾಟಕ ಸರ್ಕಾರದ ನಿರ್ಧಾರದ ಕುರಿತು ಸುಪ್ರೀಂಕೋರ್ಟ್‌ ನೀಡಿರುವ ವಿಭಜಿತ ತೀರ್ಪು ಒಂದೆಡೆಯಾದರೆ, ಈ ಕುರಿತು ರಅಜಕೀಯ ಪಕ್ಷಗಳ ನಡುವೆ ನಡೆಯುತ್ತಿರುವ ವಾಕ್ಸಮರ ಮತ್ತೊಂದೆಡೆ.

ಟ್ರೆಂಡಿಂಗ್​ ಸುದ್ದಿ

Gold Rate Today: ವಾರಾಂತ್ಯದಲ್ಲಿ ತುಸು ಇಳಿಕೆಯಾದ ಹಳದಿ ಲೋಹದ ಬೆಲೆ; ಶನಿವಾರ ಬೆಳ್ಳಿ ದರ ತಟಸ್ಥ

Gold Rate Today: ಶುಕ್ರವಾರವೂ ಏರಿಕೆಯಾದ ಚಿನ್ನ, ಬೆಳ್ಳಿ ದರ; ದೇಶದಲ್ಲಿಂದು ಆಭರಣ ದರ ಎಷ್ಟಾಗಿದೆ ಗಮನಿಸಿ

ಇಪಿಎಫ್‌ಒ; ಈ 3 ಕಾರಣ ನೀಡಿದ್ರೆ ಇಪಿಎಫ್‌ ಹಣ ಬೇಗ ಹಿಂಪಡೆಯಬಹುದು, ಹಂತ ಹಂತದ ಮಾರ್ಗದರ್ಶಿ ಇಲ್ಲಿದೆ ನೋಡಿ

Gold Rate Today: ಬಂಗಾರ ಪ್ರಿಯರಿಗೆ ಮತ್ತೆ ನಿರಾಸೆ; ತುಸು ಕಡಿಮೆಯಾಗಿ ಪುನಃ ಹೆಚ್ಚಾದ ಚಿನ್ನದ ದರ, ಬೆಳ್ಳಿ ಬೆಲೆಯೂ ಏರಿಕೆ

ಹಿಜಾಬ್‌ ಧರಿಸುವ ಮಹಿಳೆಯೋರ್ವಳು ಒಂದು ದಿನ ಈ ದೇಶದ ಪ್ರಧಾನಮಂತ್ರಿಯಾಗುವುದು ಖಚಿತ ಎಂದು ಹೇಳಿಕೆ ನೀಡಿರುವ ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್‌ ಒವೈಸಿ ಹೇಳಿಕೆಗೆ ಇದೀಗ ಬಿಜೆಪಿ ತಿರುಗೇಟು ನೀಡಿದೆ. ಪ್ರಜಾತಂತ್ರ ವ್ಯವಸ್ಥೆಯಲ್ಲಿ ಯಾರು ಬೇಕಾದರೂ ಪ್ರಧಾನಿಯಾಗಬಹುದು. ಆದರೆ ಹಿಜಾಬ್‌ ಧರಿಸುವ ಮಹಿಳೆಯೋರ್ವಳು ಎಐಎಂಐಎಂ ಪಕ್ಷದ ಅಧ್ಯಕ್ಷೆಯಾಗುವುದು ಯಾವಾಗ ಎಂದು ಬಿಜೆಪಿ ಪ್ರಶ್ನಿಸಿದೆ.

ಈ ಕುರಿತು ಟ್ವೀಟ್‌ ಮಾಡಿರುವ ಬಿಜೆಪಿ ನಾಯಕ ಶೆಹಜಾದ್‌ ಪೂನಾವಾಲಾ, ಭಾರತ ಒಂದು ಪ್ರಜಾತಂತ್ರ ರಾಷ್ಟ್ರವಾಗಿದ್ದು, ಇಲ್ಲಿ ಯಾರೂ ಬೇಕಾದರೂ ದೇಶದ ಪ್ರಧಾನಿಯಾಗಬಹುದು. ಭಾರತದ ಸಂವಿಧಾನ ಎಲ್ಲರಿಗೂ ಸಮಾನ ಹಕ್ಕು ನೀಡುತ್ತದೆ. ಆದರೆ ಹಿಜಾಬ್‌ ಧರಿಸುವ ಮಹಿಳೆಯೋರ್ವಳು ಎಐಎಂಐಎಂ ಪಕ್ಷದ ಅಧ್ಯಕ್ಷೆಯಾಗುವುದು ಯಾವಾಗ ಎಂದು ನಾನು ಒವೈಸಿ ಅವರಿಗೆ ಕೇಳಲು ಬಯಸುತ್ತೇನೆ ಎಂದು ಶೆಹಜಾದ್‌ ತಿರುಗೇಟು ನೀಡಿದ್ದಾರೆ.

ನಿನ್ನೆ(ಅ.25-ಮಂಗಳವಾರ) ಕರ್ನಾಟಕದ ವಿಜಯಪುರದಲ್ಲಿ ಮಾತನಾಡಿದ್ದ ಅಸಾದುದ್ದೀನ್‌ ಒವೈಸಿ, ಹಿಜಾಬ್‌ ಧರಿಸುವ ಮಹಿಳೆಯೋರ್ವಳು ಒಂದು ದಿನ ಈ ದೇಶದ ಪ್ರಧಾನಿಯಾಗುತ್ತಾಳೆ ಎಂಬ ತಮ್ಮ ಹಿಂದಿನ ಹೇಳಿಕೆಯನ್ನು ಪುನರುಚ್ಛಿಸಿದ್ದರು. ಅಲ್ಲದೇ ಬಿಜೆಪಿ ದೇಶದ ಜಾತ್ಯಾತೀತ ತತ್ವವನ್ನು ನಾಶಮಾಡಲು ಬಯಸಿದ್ದು, ಎಲ್ಕರಿಗೂ ಸಮಾನ ಹಕ್ಕಿನ ಕಲ್ಪನೆ ವಿರುದ್ಧ ಇದೆ ಎಂದು ಒವೈಸಿ ಗಂಭೀರ ಆರೋಪ ಮಾಡಿದ್ದರು.

ಇದಕ್ಕೆ ಟ್ವೀಟ್‌ ಮೂಲಕ ತಿರುಗೇಟು ನೀಡಿರುವ ಬಿಜೆಪಿ ನಾಯಕ ಶೆಹಜಾದ್‌ ಪೂನಾವಾಲಾ, ಒವೈಸಿ ಅವರು ನಿಜವಾಗಿಯೂ ಮಹಿಳಾ ಸ್ವಾತಂತ್ರ್ಯದ ಪರವಾಗಿ ಇದ್ದಾರೆ ಎನ್ನುವುದಾದರೆ ಹಿಜಾಬ್‌ ಧರಿಸುವ ಮಹಿಳೆಯೋರ್ವಳನ್ನು ತಮ್ಮ ಪಕ್ಷದ ಅಧ್ಯಕ್ಷೆಯನ್ನಾಗಿ ಮಾಡಲಿ ಎಂದು ಸವಾಲು ಹಾಕಿದ್ದಾರೆ.

ಹಿಜಾಬ್‌ ಧರಿಸುವ ಮಹಿಳೆ ಒಂದು ದಿನ ಖಂಡಿತವಾಗಿಯೂ ಈ ದೇಶದ ಪ್ರಧಾನಿಯಾಗಲಿ. ಆದರೆ ಅದಕ್ಕೂ ಮೊದಲು ಹಿಜಾಬ್‌ ಧರಿಸುವ ಮಹಿಳೆ ಎಐಎಂಐಎಂ ಪಕ್ಷದ ಅಧ್ಯಕ್ಷೆಯಾಗಲಿ. ಮಹಿಳಾ ಸ್ವಾತಂತ್ರ್ಯದ ಸಂದೇಶ ಅಲ್ಲಿಂದಲೇ ಆರಂಭವಾಗಲಿ ಎಂದು ಶೆಹಜಾದ್‌ ಪೂನಾವಾಲಾ ಅವರು ಅಸಾದುದ್ದೀನ್‌ ಒವೈಸಿ ಅವರಿಗೆ ನೇರ ಸವಾಲೆಸೆದಿದ್ದಾರೆ.

ಹಲಾಲ್ ಮಾಂಸ, ಮುಸ್ಲಿಮರ ಟೋಪಿ ಮತ್ತು ಅವರ ಗಡ್ಡದಿಂದ ಅಪಾಯವಿದೆ ಎಂದು ಬಿಜೆಪಿ ನಾಯಕರು ಬಿಂಬಿಸುತ್ತಿದ್ದಾರೆ. ನಮ್ಮ ಆಹಾರ ಪದ್ಧತಿಯೂ ಕೂಡ ಅವರ ಪಾಲಿಗೆ ಸಮಸ್ಯೆಯಾಗಿದೆ. ನಮ್ಮ ಹೆಣ್ಣುಮಕ್ಕಳು ಹಿಜಾಬ್‌ ಧರಿಸುವುದಕ್ಕೂ ಬಿಜೆಪಿ ನಾಯಕರು ಆಕ್ಷೇಪ ವ್ಯಕ್ತಪಡಿಸುತ್ತಾರೆ. ಬಿಜೆಪಿ ಮುಸ್ಲಿಂ ಅಸ್ಮಿತೆಗೆ ವಿರುದ್ಧವಾಗಿದೆ ಎಂಬುದಕ್ಕೆ ಇದು ಸಾಕ್ಷಿ ಎಂದು ಅಸಾದುದ್ದೀನ್‌ ಒವೈಸಿ ತೀವ್ರ ವಾಗ್ದಾಳಿ ನಡೆಸಿದ್ದರು.

"ಸಬ್‌ಕಾ ಸಾಥ್, ಸಬ್‌ಕಾ ವಿಕಾಸ್, ಸಬ್‌ಕಾ ವಿಶ್ವಾಸ್" (ಎಲ್ಲರ ಸಹಕಾರ, ಎಲ್ಲರ ವಿಕಾಸ, ಎಲ್ಲರ ವಿಶ್ವಾಸ) ಎಂಬ ಪ್ರಧಾನಿ ಘೋಷಣೆ ಕೇವಲ ಘೋಷಣೆಗಷ್ಟೇ ಸಿಮೀತವಾಗಿದೆ. ಬಿಜೆಪಿಯ ನಿಜವಾದ ಅಜೆಂಡಾ ಭಾರತದ ವೈವಿಧ್ಯತೆ ಮತ್ತು ಮುಸ್ಲಿಂ ಅಸ್ಮಿತೆಯನ್ನು ಕೊನೆಗೊಳಿಸುವುದಾಗಿದೆ ಎಂದು ಒವೈಸಿ ಗಂಭೀರ ಆರೋಪ ಮಾಡಿದ್ದರು.

ಒವೈಸಿ ಅವರ ನಿರಂತರ ವಾಗ್ದಾಳಿಗೆ ಸೂಕ್ತ ತಿರುಗೇಟನ್ನೇ ನೀಡಿರುವ ಬಿಜೆಪಿ ನಾಯಕ ಶೆಹಜಾದ್‌ ಪೂನಾವಾಲಾ, ಒವೈಸಿ ಅವರು ತಮ್ಮ ಪಕ್ಷದ ಅಧ್ಯಕ್ಷೆಯನ್ನಾಗಿ ಹಿಜಾಬ್‌ ಧರಿಸುವ ಮಹಿಳೆಯನ್ನು ಮೊದಲು ನೇಮಿಸಲಿ ಎಂದು ಸವಾಲು ಹಾಕಿದ್ದಾರೆ. ಒವೈಸಿ ಇದಕ್ಕೆ ಏನು ಪ್ರತಿಕ್ರಿಯೆ ನೀಡಲಿದ್ದಾರೆ ಎಂಬುದನ್ನು ಕಾದು ನೋಡಬೇಕಿದೆ.

ವಿಭಾಗ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ