logo
ಕನ್ನಡ ಸುದ್ದಿ  /  Nation And-world  /  Bjp Minority Outreach: Bjp S Outreach To Muslims Aimed At Countering Community S Push Against Party

BJP minority outreach:: ಮುಸಲ್ಮಾನ ವಿರೋಧಿ ಇಮೇಜ್‌ ಕಳಚಲು ಬಿಜೆಪಿ ಪ್ರಯತ್ನ; ಹಲವು ಉಪಕ್ರಮಗಳಿಗೆ ಪಕ್ಷದ ವರಿಷ್ಠರ ಹಸಿರು ನಿಶಾನೆ

HT Kannada Desk HT Kannada

Jan 24, 2023 12:16 PM IST

ಪ್ರಧಾನಿ ನರೇಂದ್ರ ಮೋದಿ

  • BJP minority outreach: ಭಾರತೀಯ ಜನತಾ ಪಾರ್ಟಿ (ಬಿಜೆಪಿ) ಎಂದ ಕೂಡಲೇ ಅಲ್ಪಸಂ‍ಖ್ಯಾತ ವಿಶೇಷವಾಗಿ ಮುಸಲ್ಮಾನ ವಿರೋಧಿ ಪಕ್ಷ ಎಂಬ ಇಮೇಜ್‌ ಸಾಮಾನ್ಯ ಆಲೋಚನೆಯ ಮನಸ್ಸಿನವರಲ್ಲಿ ಮೂಡುವಂಥದ್ದು. ಈ ಇಮೇಜ್‌ನಿಂದ ಹೊರಬರಬೇಕು ಎಂಬ ಪ್ರಯತ್ನವನ್ನು ಬಿಜೆಪಿ ಮಾಡುತ್ತಲೇ ಇದೆ. ಇದಕ್ಕೆ ಪೂರಕ ವಿವರ ಒಂದು ಬಹಿರಂಗವಾಗಿದೆ.

ಪ್ರಧಾನಿ ನರೇಂದ್ರ ಮೋದಿ
ಪ್ರಧಾನಿ ನರೇಂದ್ರ ಮೋದಿ (PTI File Photo)

ಭಾರತೀಯ ಜನತಾ ಪಕ್ಷದ (ಬಿಜೆಪಿ) ಅಲ್ಪಸಂಖ್ಯಾತರಿಗೆ, ವಿಶೇಷವಾಗಿ ಮುಸ್ಲಿಮರಿಗೆ, ಎಲ್ಲ ಸಾಮಾಜಿಕ ಕಲ್ಯಾಣ ಕಾರ್ಯಕ್ರಮಗಳಲ್ಲಿ ಸಮಾನ ಪ್ರಾತಿನಿಧ್ಯವನ್ನು ಖಚಿತಪಡಿಸಿಕೊಳ್ಳಲು ಕೇಂದ್ರ ಸರ್ಕಾರದ ಬದ್ಧತೆಯನ್ನು ಬಲಪಡಿಸಲು ವಿನ್ಯಾಸಗೊಳಿಸಲಾಗುತ್ತಿದೆ. ಇದು ಅಲ್ಪಸಂಖ್ಯಾತ ಸಮುದಾಯವನ್ನು ಬಿಜೆಪಿ ವಿರೋಧಿ ಭಾವನೆಯಿಂದ ಹೊರತರಲು ಸಹಾಯ ಮಾಡುತ್ತದೆ ಎಂದು ಈ ವಿದ್ಯಮಾನಗಳ ಅರಿವು ಇರುವಂಥವರು ತಿಳಿಸಿದ್ದಾರೆ ಎಂದು HT ಕನ್ನಡದ ಮಾತೃಸಂಸ್ಥೆ ಹಿಂದುಸ್ತಾನ್‌ ಟೈಮ್ಸ್‌ ವರದಿ ಮಾಡಿದೆ.

ಟ್ರೆಂಡಿಂಗ್​ ಸುದ್ದಿ

ರಣಬಿಸಿಲಿನಿಂದ ರಕ್ಷಣೆಗೆ ಟ್ರಾಫಿಕ್‌ ಸಿಗ್ನಲ್ ಸಮೀಪ ಹಸಿರು ನೆರಳು ಬಲೆ; ಪುದುಚೇರಿ ಪಿಡಬ್ಲ್ಯುಡಿ ಇಲಾಖೆ ಉಪಕ್ರಮಕ್ಕೆ ವ್ಯಾಪಕ ಮೆಚ್ಚುಗೆ

Gold Rate Today: ಇಳಿಕೆಯ ಬೆನ್ನಲ್ಲೇ ಮತ್ತೆ ಏರಿದ ಚಿನ್ನದ ದರ, ತುಸು ಕಡಿಮೆಯಾದ ಬೆಳ್ಳಿ; ಆಭರಣ ಪ್ರಿಯರಿಗಿಲ್ಲ ನೆಮ್ಮದಿ

Lok Sabha Elections: ಲೈಂಗಿಕ ದೌರ್ಜನ್ಯ ಪ್ರಕರಣ ಆರೋಪಿ ಸಂಸದ ಬದಲು ಮಗನಿಗೆ ಟಿಕೆಟ್‌ ನೀಡಿದ ಬಿಜೆಪಿ

Lok Sabha Election 2024: ಪ್ರಧಾನಿ ಮೋದಿ ವಿರುದ್ಧ ವಾರಣಾಸಿಯಲ್ಲಿ ಸ್ಪರ್ಧಿಸುತ್ತಿರುವ ಶ್ಯಾಮ್ ರಂಗೀಲ ಯಾರು; 10 ಪ್ರಮುಖ ಅಂಶಗಳಿವು

ಬಿಜೆಪಿಯ ಕೇಂದ್ರ ನಾಯಕತ್ವವು ಸಮಾಜ ಕಲ್ಯಾಣ ಯೋಜನೆಗಳಲ್ಲಿ ಮುಸ್ಲಿಮರ ಪಾಲನ್ನು ಎತ್ತಿ ತೋರಿಸಲು ಮತ್ತು ಧರ್ಮದ ಆಧಾರದ ಮೇಲೆ ಅಸಹಿಷ್ಣುತೆಯ ಬಗ್ಗೆ ಪಕ್ಷದ ಕುರಿತಾಗಿ ಅವರಲ್ಲಿರುವ ಗ್ರಹಿಕೆಯನ್ನು ಹೋಗಲಾಡಿಸಲು ಸಂಬಂಧಪಟ್ಟವರಿಗೆ ಸೂಚನೆ ನೀಡಿದೆ.

“ಸಮಾಜ ಕಲ್ಯಾಣ ಯೋಜನೆಗಳಲ್ಲಿ ಮುಸ್ಲಿಮರು ಫಲಾನುಭವಿಗಳಾಗಿದ್ದಾರೆ ಎಂಬ ಅಂಶವು ಬಿಜೆಪಿಗೆ ವರದಾನವಾಗುತ್ತಿದೆ. ಇದು, ಬಿಜೆಪಿ ಮುಸ್ಲಿಂ ವಿರೋಧಿ ಪಕ್ಷ ಎಂಬ ಪ್ರತಿಪಕ್ಷಗಳ ಟೀಕೆಯ ತೀವ್ರತೆಯನ್ನು ಕಡಿಮೆ ಮಾಡುತ್ತದೆ. ಬಹುಕಾಲದಿಂದ ಬಿಜೆಪಿ ಮತ್ತು ಅದರ ಸಿದ್ಧಾಂತದ ಬಗ್ಗೆ ಅಲ್ಪಸಂಖ್ಯಾತರಲ್ಲಿ ವಿಶೇಷವಾಗಿ ಮುಸಲ್ಮಾನರದಲ್ಲಿ ಪ್ರತಿಪಕ್ಷಗಳು ಈ ಭಯವನ್ನು ಹುಟ್ಟುಹಾಕಿವೆ. ಈ ಪ್ರಯತ್ನದ ಫಲವಾಗಿ ಅಲ್ಪಸಂಖ್ಯಾತರು ಬಿಜೆಪಿ ವಿರೋಧಿ ಮತ ಬ್ಯಾಂಕ್‌ ಆಗಿ ಪರಿವರ್ತನೆಗೊಂಡರು ಎಂದು ಬಿಜೆಪಿಯ ಪದಾಧಿಕಾರಿಯೊಬ್ಬರು ತಿಳಿಸಿದ್ದಾರೆ.

ಅಲ್ಪ ಸಂಖ್ಯಾತರು ವಿಶೇಷವಾಗಿ ಮುಸಲ್ಮಾನರು ತಮಗೆ ರಾಜಕೀಯ ಬೆಂಬಲ ವ್ಯಕ್ತಪಡಿಸದೇ ಹೋದರೂ ಚಿಂತೆ ಇಲ್ಲ. ಆದರೆ, ಆ ಸಮುದಾಯ ಬಿಜೆಪಿ ವಿರೋಧಿ ಮತ ಬ್ಯಾಂಕ್‌ ಆಗಿ ಪರಿವರ್ತನೆ ಆಗಬಾರದು. ಅವರ ಆಯ್ಕೆಯ ಪಕ್ಷಕ್ಕೆ ಮತ ಚಲಾಯಿಸಲಿ. ಅದು ವಿವೇಚನೆಯಿಂದ ಕೂಡಿದ ಆಯ್ಕೆ ಆಗಿದ್ದರೆ ತೊಂದರೆ ಇಲ್ಲ. ಆದರೆ, ಬಿಜೆಪಿ ದ್ವೇಷ ಅವರ ಆದ್ಯತೆ ಆಗಬಾರದು. ಅದು ಅಪಾಯಕಾರಿ ವಿದ್ಯಮಾನ. ಹೀಗಾಗಿ ಆ ದ್ವೇಷದ ಕಾರಣ ಅದರ ಲಾಭ ಪಡೆಯಲು ಪ್ರಯತ್ನಿಸುವವರ ಮತ ಬ್ಯಾಂಕ್‌ ಆಗಬಾರದು ಎಂಬುದು ಪಕ್ಷದ ವರಿಷ್ಠರ ಕಾಳಜಿ ಎಂದು ಅವರು ವಿವರಿಸಿದರು.

ಅಲ್ಪಸಂಖ್ಯಾತ ವಿರೋಧಿ ನಿಲುವಿನ ಪಕ್ಷ ಎಂಬ ನಿರೂಪಣೆಯನ್ನು ಬದಲಾಯಿಸುವುದಕ್ಕಾಗಿ ಕಳೆದ ವರ್ಷ ಹೈದರಾಬಾದ್‌ನಲ್ಲಿ ನಡೆದ ಪಕ್ಷದ ರಾಷ್ಟ್ರೀಯ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು 'ಪಸ್ಮಾಂಡ' ಎಂದೂ ಕರೆಯಲ್ಪಡುವ ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ಹಿಂದುಳಿದ ಮುಸ್ಲಿಮರನ್ನು ತಲುಪುವಂತೆ ಪಕ್ಷದ ನಾಯಕರಿಗೆ ಸೂಚಿಸಿದ್ದರು.

ಈ ವರ್ಷ ಮತ್ತೆ ಪ್ರಧಾನಿ ಮೋದಿಯವರು, ಪ್ರಚಾರ ನಡೆಸುವಾಗ ಚುನಾವಣಾ ರಾಜಕೀಯ ಗಮನದಲ್ಲಿಟ್ಟಿಕೊ‍ಳ್ಳಬೇಡಿ. ಬದಲಾಗಿ, ಮೂಲಭೂತವಾದ, ಸಾಂಪ್ರದಾಯಿಕತೆ ವಿರೋಧಿಸುವ ಸಮುದಾಯದ ಜತೆಗೆ ಸಂಬಂಧ ಬೆಸೆಯುವಂತೆ ವರ್ತನೆ ಇರಲಿ. ಅವರನ್ನು ಜೋಡಿಸಿಕೊಳ್ಳಬೇಕಾದ ಅಗತ್ಯವನ್ನು ನೆನಪಿಸಿಕೊಟ್ಟರು. ಇದೇ ಸಂದರ್ಭದಲ್ಲಿ, ಮತದಾರರು ಎಂದು ಪರಿಗಣಿಸದಿದ್ದರೂ ಬಿಜೆಪಿಯನ್ನು ವಿರೋಧಿಸದ ಬೊಹ್ರಾ ಮುಸ್ಲಿಮರ ಉದಾಹರಣೆಯನ್ನು ಪ್ರಧಾನಿ ಉಲ್ಲೇಖಿಸಿದ್ದಾರೆ ಎಂದು ವರದಿಯಾಗಿದೆ.

    ಹಂಚಿಕೊಳ್ಳಲು ಲೇಖನಗಳು