Kannada News  /  Nation And-world  /  Andaman And Nicobar: Why Are Andaman And Nicobar Islands A Key Indian Military Asset And What Are Other Importance
ಪೋರ್ಟ್ ಬ್ಲೇರ್‌ನಲ್ಲಿ ಎಸ್‌ಯು 30 ಯುದ್ಧವಿಮಾನ
ಪೋರ್ಟ್ ಬ್ಲೇರ್‌ನಲ್ಲಿ ಎಸ್‌ಯು 30 ಯುದ್ಧವಿಮಾನ

Andaman and Nicobar: ನಮ್ಮ ದೇಶದ ಮಟ್ಟಿಗೆ ಅಂಡಮಾನ್‌-ನಿಕೋಬಾರ್‌ ಆಯಕಟ್ಟಿನ ದ್ವೀಪಗಳು ಯಾಕೆ? ಏನಿದು ಲೆಕ್ಕಾಚಾರ?

24 January 2023, 10:16 ISTHT Kannada Desk
24 January 2023, 10:16 IST

Andaman and Nicobar: ಪುಟ್ಟದಾಗಿರುವ ಅಂಡಮಾನ್‌ ಮತ್ತು ನಿಕೋಬಾರ್‌ ದ್ವೀಪಗಳ ಸರಪಳಿಯ ದಕ್ಷಿಣದ ತುದಿಯು ಇಂಡೋನೇಷ್ಯಾದ ಬಂದಾ ಅಚೆಹ್‌ನಿಂದ ಕೇವಲ 237 ಕಿ.ಮೀ. ದೂರದಲ್ಲಿದೆ. ದಕ್ಷಿಣ ಚೀನಾ ಸಮುದ್ರಕ್ಕೆ ಎರಡು ಪ್ರವೇಶ ಮಾರ್ಗಗಳಾದ ಸುಂದಾ ಮತ್ತು ಲೊಂಭಾಕ್‌ ಜಲಸಂಧಿಗಳ ತನಕದ ಸಮುದ್ರ ಮಾರ್ಗದಲ್ಲಿ ಈ ದ್ವೀಪ ಸರಪಳಿಯದ್ದೇ ಪ್ರಾಬಲ್ಯ.

ಅಂಡಮಾನ್‌ ಮತ್ತು ನಿಕೋಬಾರ್‌ ದ್ವೀಪಗಳು ಸದ್ಯ ಸುದ್ದಿಯಲ್ಲಿವೆ. ಇಲ್ಲಿರುವ 21 ದ್ವೀಪಗಳಿಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು 21 ಪರಮ ವೀರ ಚಕ್ರ ಪ್ರಶಸ್ತಿ ಪುರಸ್ಕೃತರ ಹೆಸರುಗಳನ್ನು ನಾಮಕರಣ ಮಾಡುವ ಮೂಲಕ ಸೇನಾ ನೆಲೆಗಳನ್ನಾಗಿ ಮಾಡಿದರು. ಆಜಾದ್‌ ಹಿಂದ್‌ ಫೌಜ್‌ (ಐಎನ್‌ಎ) ರೂವಾರಿ ನೇತಾಜಿ ಸುಭಾಷ್‌ಚಂದ್ರ ಬೋಸ್‌ ಅವರನ್ನು ಮತ್ತು ಪಿವಿಸಿ ವಿಜೇತರನ್ನು ಗೌರವಿಸುವ ಮೂಲಕ, ಪ್ರಧಾನಿ ಮೋದಿಯವರು ಭಾರತೀಯ ಸೇನೆಯ ನೈತಿಕತೆಯನ್ನು ರಾಷ್ಟ್ರೀಯ ಪ್ರಜ್ಞೆಯ ಮುಂದಿನ ಹಂತಕ್ಕೆ ಏರಿಸಿದ್ದಾರೆ.

ಟ್ರೆಂಡಿಂಗ್​ ಸುದ್ದಿ

ಇದೇ ವೇಳೆ, ಗೃಹ ಸಚಿವ ಅಮಿತ್ ಶಾ ಸೋಮವಾರ ಪೋರ್ಟ್ ಬ್ಲೇರ್‌ನಲ್ಲಿ ಮಾತನಾಡುತ್ತ, 2001ರಲ್ಲಿ ಅಟಲ್ ಬಿಹಾರಿ ವಾಜಪೇಯಿ ಸರ್ಕಾರದಿಂದ ರಚಿಸಲ್ಪಟ್ಟ ತ್ರಿ-ಸೇವಾ ಅಂಡಮಾನ್ ಮತ್ತು ನಿಕೋಬಾರ್ ಕಮಾಂಡ್, ಅದನ್ನು ಮೊದಲು ರಚಿಸಿದ ದೃಷ್ಟಿಕೋನಕ್ಕೆ ಅನುಗುಣವಾಗಿ ಬದುಕಬೇಕು. ಮೋದಿ ಸರ್ಕಾರವು ದ್ವೀಪ ಸರಪಳಿಯನ್ನು ಅಭಿವೃದ್ಧಿಪಡಿಸಲು ಬದ್ಧವಾಗಿದೆ. ಸರ್ಕಾರವು ಇದನ್ನು ತ್ವರಿತವಾಗಿ ಕಾರ್ಯರೂಪಕ್ಕೆ ತರಬೇಕು. ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳನ್ನು ಇಂಡೋ-ಪೆಸಿಫಿಕ್‌ನ ಯುದ್ಧತಂತ್ರದ ಮಿಲಿಟರಿ ಆಸ್ತಿಯನ್ನಾಗಿ ಮಾಡಬೇಕಾಗಿದೆ ಎಂದು ಹೇಳಿದರು.

ಅಂಡಮಾನ್‌ ಮತ್ತು ನಿಕೋಬಾರ್‌ ದ್ವೀಪ ಸರಪಳಿಗೆ ಯಾಕಿಷ್ಟು ಪ್ರಾಮುಖ್ಯತೆ?

ಈ ದ್ವೀಪಗಳ ಸರಪಳಿಯು ಮಲಕ್ಕಾ ಜಲಸಂಧಿ ಮತ್ತು ಟೆನ್‌ ಡಿಗ್ರಿ ಚಾನೆಲ್‌ನ ಬಾಯಿಯಲ್ಲೇ ಇದೆ. ಈ ಜಲ ಸಂಧಿ ಮತ್ತು ಕಾಲುವೆಯ ಮೂಲಕ ಆಗ್ನೇಯ ಏಷ್ಯಾ ಮತ್ತು ಉತ್ತರ ಏಷ್ಯಾ ನಡುವೆ ಕೋಟ್ಯಂತರ ಅಮೆರಿಕನ್‌ ಡಾಲರ್‌ ವಹಿವಾಟು ನಡೆಯುತ್ತದೆ. ಇದು ಪುಟ್ಟದಾಗಿರುವ ಅಂಡಮಾನ್‌ ಮತ್ತು ನಿಕೋಬಾರ್‌ ದ್ವೀಪಗಳನ್ನು ವಿಭಜಿಸುತ್ತದೆ. ದ್ವೀಪ ಸರಪಳಿಯ ದಕ್ಷಿಣದ ತುದಿಯು ಇಂಡೋನೇಷ್ಯಾದ ಬಂದಾ ಅಚೆಹ್‌ನಿಂದ ಕೇವಲ 237 ಕಿ.ಮೀ. ದೂರದಲ್ಲಿದೆ. ದಕ್ಷಿಣ ಚೀನಾ ಸಮುದ್ರಕ್ಕೆ ಎರಡು ಪ್ರವೇಶ ಮಾರ್ಗಗಳಾದ ಸುಂದಾ ಮತ್ತು ಲೊಂಭಾಕ್‌ ಜಲಸಂಧಿಗಳ ತನಕದ ಸಮುದ್ರ ಮಾರ್ಗದಲ್ಲಿ ಈ ದ್ವೀಪ ಸರಪಳಿಯದ್ದೇ ಪ್ರಾಬಲ್ಯ.

ಜನರಲ್‌ ಬಿಪಿನ್‌ ರಾವತ್‌ ಅವರ ದೃಷ್ಟಿಕೋನ ಹೀಗಿತ್ತು…

ಇಂಡೋ- ಪೆಸಿಫಿಕ್‌ ಪ್ರಾಂತ್ಯದಲ್ಲಿ ಈ ಅಂಡಮಾನ್‌ ಮತ್ತು ನಿಕೋಬಾರ್‌ ದ್ವೀಪ ಸರಪಳಿಯನ್ನು ಪ್ರಮುಖ ವ್ಯೂಹಾತ್ಮಕ ಅಥವಾ ಆಯಕಟ್ಟಿನ ಪ್ರದೇಶಗಳು ಎಂಬುದು ಮಾನ್ಯವಾಗಿರುವ ವಿಚಾರ. ಹೀಗಿರುವಾಗ ಮಲಕ್ಕಾ ಜಲಸಂಧಿಗೆ ಹೋಗುವ ಸರಕು ಹಡಗುಗಳ ಇಂಧನ ಮರುಪೂರಣಕ್ಕಾಗಿ ಕ್ಯಾಂಪ್‌ಬೆಲ್ ಕೊಲ್ಲಿಯಲ್ಲಿ ಕಂಟೈನರ್ ಟರ್ಮಿನಲ್ ಮಾಡುವ 15 ವರ್ಷ ಹಳೆಯ ಯೋಜನೆಯ ಧೂಳು ಕೊಡವಿ ಕೆಲಸ ಶುರುಮಾಡಬೇಕು. ಇಂದು, ಅದೇ ಸರಕು ಹಡಗುಗಳು ಮಲಕ್ಕಾ ಜಲಸಂಧಿಯನ್ನು ಪ್ರವೇಶಿಸಲು ಕೊಲಂಬೊ ಬಂದರಿನಲ್ಲಿ ಕಾಯಬೇಕಾಗಿದೆ ಎಂಬುದನ್ನು ಗಮನಿಸಬೇಕು ಎಂಬುದು ನಮ್ಮ ದೇಶದ ಮೊದಲ ಸಿಡಿಎಸ್‌ ಜನರಲ್‌ ಬಿಪಿನ್‌ ರಾವತ್‌ ಅವರ ದೃಷ್ಟಿಕೋನವೂ ಆಗಿತ್ತು.

ಚೀನಾದ ಸವಾಲನ್ನು ಎದುರಿಸಬೇಕಾದರೆ ಇದೆಲ್ಲ ಅನಿವಾರ್ಯ…

ಪೋರ್ಟ್ ಬ್ಲೇರ್‌ನಲ್ಲಿ ಟ್ರೈ-ಸರ್ವೀಸ್ ಕಮಾಂಡ್ ಅನ್ನು ರಚಿಸಲಾಗಿದೆ. ಹಾಗಿದ್ದರೂ, ಉತ್ತರ ಅಂಡಮಾನ್‌ನ ಐಎನ್‌ಎಸ್ ಕೊಹಾಸ್ಸಾ ಮತ್ತು ಗ್ರೇಟ್ ನಿಕೋಬಾರ್‌ನ ಐಎನ್‌ಎಸ್ ಬಾಜ್‌ನಲ್ಲಿರುವ ರನ್‌ವೇಗಳನ್ನು ಈ ಪ್ರದೇಶದಲ್ಲಿ ಕಾರ್ಯನಿರ್ವಹಿಸುವಂತೆ ಮಾಡುವ ಅಗತ್ಯ ಇದೆ. ಇದಕ್ಕಾಗಿ ಭಾರತೀಯ ನೌಕಾಪಡೆಯ ಜಲಾಂತರ್ಗಾಮಿ ವಿರೋಧಿ ಮತ್ತು ವಿಚಕ್ಷಣ P 8 I ಗೆ ವಿಸ್ತರಿಸಬೇಕಾಗಿದೆ. ಇಂಡೋ-ಪೆಸಿಫಿಕ್‌ ಪ್ರಾಂತ್ಯದಲ್ಲಿ ಚೀನಾದ ಸವಾಲನ್ನು ಸಮರ್ಥವಾಗಿ ಎದುರಿಸುವುದಕ್ಕೆ ಭಾರತ ಯೋಜಿಸುವುದಾದರೆ, ಕ್ಯಾಂಪ್‌ಬೆಲ್‌ ಕೊಲ್ಲಿಯಲ್ಲಿ ಭಾರತೀಯ ನೌಕಾಪಡೆಯ ಎರಡು ವಿಮಾನ ವಾಹಕ ನೌಕೆಗಳನ್ನು ನಿರ್ವಹಿಸುವುದಕ್ಕೆ ಜೆಟ್ಟಿಯನ್ನು ನಿರ್ಮಿಸುವ ಅಗತ್ಯವೂ ಇದೆ. ಟ್ರೈ ಸರ್ವೀಸ್‌ ಕಮಾಂಡ್‌ ಇಲ್ಲಿ ಪ್ರತ್ಯೇಕ ಪ್ರತ್ಯೇಕವಾಗಿ ಕೆಲಸ ಮಾಡುವುದಲ್ಲ, ಬದಲಾಗಿ ಒಟ್ಟಾಗಿ ಒಂದು ಶಕ್ತಿಯಾಗಿ ಹೊಂದಿಕೊಂಡು ಕೆಲಸ ಮಾಡಬೇಕು. ಸಾಮಾನ್ಯವಾಗಿ ಈ ದ್ವೀಪಗಳ ಪೋಸ್ಟಿಂಗ್‌ ಎಂಬುದು ಶಿಕ್ಷೆಗೆ ಒಳಗಾದ ಅಧಿಕಾರಿಗಳ, ನಿವೃತ್ತಿಗೆ ಕೆಲವೇ ತಿಂಗಳು ಬಾಕಿ ಇರುವವರ ಕಾರ್ಯಸ್ಥಳವಾಗಿದೆ. ಆ ವಾಡಿಕೆಯನ್ನು ಹೋಗಲಾಡಿಸಬೇಕಾದ ಅಗತ್ಯವೂ ಇದೆ.

Su-30 MKI ಫೈಟರ್‌ಗಳು ಪೋರ್ಟ್ ಬ್ಲೇರ್‌ನಲ್ಲಿರುವ INS ಉತ್ಕ್ರೋಶ್‌ನಲ್ಲಿ ಮುಂದಕ್ಕೆ ನಿಯೋಜನೆಯ ಭಾಗವಾಗಿ ಬಂದಿಳಿದರೆ, ಆಗ INS ಬಾಜ್‌ನಿಂದ ಯುದ್ಧವಿಮಾನದ ಕಾರ್ಯಾಚರಣೆಗಳು ದಕ್ಷಿಣ ಚೀನಾ ಸಮುದ್ರದಲ್ಲಿನ ಆಟದ ಚಿತ್ರಣವನ್ನೇ ಬದಲಾಯಿಸಬಲ್ಲದು. ಏಕೆಂದರೆ ಅದು ಭಾರತದ ಮಿಲಿಟರಿ ಹೆಜ್ಜೆಗುರುತನ್ನು ಆಗ್ನೇಯ ಏಷ್ಯಾ ಮತ್ತು ಅದರಾಚೆಗೆ ವಿಸ್ತರಿಸಲು ನೆರವಾಗುತ್ತದೆ.

ಸೇನಾ ನೆಲೆಯ ಹೊರತಾದ ಬದುಕು ಕೂಡ ಅಲ್ಲಿದೆ…

ಹೌದು, ಅಂಡಮಾನ್‌ ಮತ್ತು ನಿಕೋಬಾರ್‌ ದ್ವೀಪ ಸರಪಳಿಯಲ್ಲಿ ಸೇನಾ ನೆಲೆಯ ಹೊರತಾದ ಸಾಮಾನ್ಯರ ಬದುಕು ಕೂಡ ಇದೆ. ಅದನ್ನು ಮರೆಯುವಂತೆ ಇಲ್ಲ. ಬುಡಕಟ್ಟು ಪ್ರದೇಶಗಳನ್ನು ಪ್ರವಾಸೋದ್ಯಮಕ್ಕೆ ಬಳಸಬಾರದು. ಆ ಮಿತಿಯಿಂದ ಅವುಗಳನ್ನು ಹೊರಗಿಡಬೇಕು. ಹೀಗಾಗಿ ದ್ವೀಪ ಸರಪಳಿಯು ಪರಿಸರ-ಪ್ರವಾಸೋದ್ಯಮ ಮತ್ತು ಸಮುದ್ರ ಕ್ರೀಡೆಗಳಿಗೆ ಗರಿಷ್ಠ ಅವಕಾಶಗಳನ್ನು ಒದಗಿಸಬೇಕು. ಅದಕ್ಕಾಗಿ, ದ್ವೀಪಗಳು ತನ್ನದೇ ಆದ ವಿದ್ಯುತ್ ಉತ್ಪಾದನಾ ಘಟಕಗಳನ್ನು ಹೊಂದಿರಬೇಕು ಮತ್ತು ಡೀಸೆಲ್ ಜನರೇಟರ್‌ಗಳನ್ನು ಅವಲಂಬಿಸಿರಬಾರದು.

ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳ ಅಭಿವೃದ್ಧಿಯು ಭಾರತದ ದಾಪುಗಾಲುಗಳಿಗೆ ಹೊಂದಿಕೆಯಾಗಬೇಕು. ಏಕೆಂದರೆ ಅದು ಭಾರತೀಯ ಉಪಖಂಡಕ್ಕೆ ಮಾತ್ರವಲ್ಲದೆ ಜಗತ್ತಿನಾದ್ಯಂತ ಪ್ರತಿಧ್ವನಿಸುವುದರಲ್ಲಿ ಸಂದೇಹವಿಲ್ಲ.