ಕನ್ನಡ ಸುದ್ದಿ  /  Nation And-world  /  Pm Narendra Modi To Dgps : Tackle External Threats Be Sensitive Internally Uks

PM Modi to DGPs: ಬಾಹ್ಯ ಬೆದರಿಕೆಯನ್ನು ಸಮರ್ಥವಾಗಿ ನಿಭಾಯಿಸಿ, ಆಂತರಿಕ ವಿಚಾರದಲ್ಲಿ ಸೂಕ್ಷ್ಮವಾಗಿರಿ; ಡಿಜಿಪಿಗಳಿಗೆ ಪ್ರಧಾನಿ ಮೋದಿ ಸೂಚನೆ

PM Modi to DGPs: ಬೆಳೆಯುತ್ತಿರುವ ಧಾರ್ಮಿಕ ಉಗ್ರವಾದ, ರಾಜಕೀಯ ಅಸ್ಥಿರತೆ, ಉಗ್ರ ಸಂಘಟನೆಗಳ ಅನಿಯಂತ್ರಿತ ಚಟುವಟಿಕೆ ಮತ್ತು ನೆರೆಹೊರೆಯಲ್ಲಿ ವಿಫಲವಾದ ಆರ್ಥಿಕತೆಗಳು ದೇಶಕ್ಕೆ ಭದ್ರತಾ ಸವಾಲನ್ನು ಒಡ್ಡುತ್ತಿರುವ ಸಂದರ್ಭ ಇದು. ಇದೇ ವೇಳೆ, ನಮ್ಮ ದೇಶದ ಪೊಲೀಸ್‌ ಮತ್ತು ಗುಪ್ತಚರ ವಿಭಾಗದ ಉನ್ನತಾಧಿಕಾರಿಗಳ ಮೂರು ದಿನಗಳ ವಾರ್ಷಿಕ ಸಮಾವೇಶ ದೆಹಲಿಯಲ್ಲಿ ನಡೆಯಿತು.

ಪ್ರಧಾನ ಮಂತ್ರಿ ನರೇಂದ್ರ ಮೋದಿ
ಪ್ರಧಾನ ಮಂತ್ರಿ ನರೇಂದ್ರ ಮೋದಿ (ANI / PIB)

ಬಾಹ್ಯ ಬೆದರಿಕೆಗಳನ್ನು ಎದುರಿಸುವ ನಿಟ್ಟಿನಲ್ಲಿ ಗುಪ್ತಚರ ಪ್ರಯತ್ನಗಳನ್ನು ಶ್ಲಾಘಿಸಿದ ಪ್ರಧಾನಿ ನರೇಂದ್ರ ಮೋದಿ, ನಾಗರಿಕರ ವಿಚಾರದಲ್ಲಿ ಪೊಲೀಸ್ ಪಡೆಗಳನ್ನು ಹೆಚ್ಚು ಸೂಕ್ಷ್ಮ ಸಂವೇದನೆ ಅಳವಡಿಸಿಕೊಳ್ಳಬೇಕು. ಹೊಸ ತಂತ್ರಜ್ಞಾನಗಳ ಬಳಕೆಯಲ್ಲಿ ತರಬೇತಿ ಪಡೆಯಬೇಕು ಎಂದು ಸಲಹೆ ನೀಡಿದರು.

ಅವರು, ದೆಹಲಿಯಲ್ಲಿ ನಡೆದ ಪೊಲೀಸ್‌ ಮತ್ತು ಗುಪ್ತಚರ ವಿಭಾಗದ ಉನ್ನತಾಧಿಕಾರಿಗಳ ಸಮಾವೇಶದಲ್ಲಿ ಶನಿವಾರ ಮತ್ತು ಭಾನುವಾರ ಈ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿದರು ಎಂದು ವಿದ್ಯಮಾನದ ಅರಿವು ಹೊಂದಿದ ಮೂಲಗಳು ತಿಳಿಸಿರುವುದಾಗಿ HT ಕನ್ನಡ ತಾಣದ ಮೂಲ ತಾಣ ಹಿಂದುಸ್ತಾನ್‌ ಟೈಮ್ಸ್‌ ವರದಿ ಮಾಡಿದೆ.

ಬೆಳೆಯುತ್ತಿರುವ ಧಾರ್ಮಿಕ ಉಗ್ರವಾದ, ರಾಜಕೀಯ ಅಸ್ಥಿರತೆ, ಉಗ್ರ ಸಂಘಟನೆಗಳ ಅನಿಯಂತ್ರಿತ ಚಟುವಟಿಕೆ ಮತ್ತು ನೆರೆಹೊರೆಯಲ್ಲಿ ವಿಫಲವಾದ ಆರ್ಥಿಕತೆಗಳು ದೇಶಕ್ಕೆ ಭದ್ರತಾ ಸವಾಲನ್ನು ಒಡ್ಡುತ್ತಿರುವ ಸಂದರ್ಭ ಇದು. ಇದೇ ವೇಳೆ, ನಮ್ಮ ದೇಶದ ಪೊಲೀಸ್‌ ಮತ್ತು ಗುಪ್ತಚರ ವಿಭಾಗದ ಉನ್ನತಾಧಿಕಾರಿಗಳ ಮೂರು ದಿನ (ಶುಕ್ರವಾರ, ಶನಿವಾರ, ಭಾನುವಾರ)ದ ವಾರ್ಷಿಕ ಸಮಾವೇಶ ದೆಹಲಿಯಲ್ಲಿ ನಡೆಯಿತು.

ಪ್ರತಿ ವರ್ಷ ಇಂಟೆಲಿಜೆನ್ಸ್ ಬ್ಯೂರೋ (ಐಬಿ) ಆಯೋಜಿಸುವ ಡಿಜಿಪಿ/ಐಜಿಪಿಗಳ ಸಮ್ಮೇಳನದ ಮಾದರಿಯನ್ನು ರಾಜ್ಯ ಮತ್ತು ಜಿಲ್ಲಾ ಮಟ್ಟದಲ್ಲಿ ಉಂಟಾಗಬಹುದಾದ ಸವಾಲುಗಳನ್ನು ಚರ್ಚಿಸಲು ಮತ್ತು ತಳಮಟ್ಟದಲ್ಲಿ ಕಾರ್ಯನಿರ್ವಹಿಸುವ ತಂಡಗಳಲ್ಲಿ ಉತ್ತಮ ಅಭ್ಯಾಸಗಳನ್ನು ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಇರಲಿ ಎಂದು ಪ್ರಧಾನಿ ಮೋದಿ ಇದೇ ವೇಳೆ ಶಿಫಾರಸು ಮಾಡಿದರು.

ದೇಶದ ಎಲ್ಲ ರಾಜ್ಯ, ಕೇಂದ್ರಾಡಳಿತ ಪ್ರದೇಶಗಳ ಪೊಲೀಸ್‌ ಡಿಜಿ ಮತ್ತು ಐಜಿಗಳು ಈ ಸಮಾವೇಶದಲ್ಲಿ ಭಾಗಿಯಾಗಿದ್ದು, ರಾಷ್ಟ್ರೀಯ ಭದ್ರತೆಗೆ ಬೆದರಿಕೆಯಾಗಿ ಹೊರಹೊಮ್ಮಬಹುದಾದ ಸಾಮೂಹಿಕ ಆಂದೋಲನಗಳಿಗೆ ಜನರನ್ನು ಆನ್‌ಲೈನ್‌ನಲ್ಲಿ ಸಜ್ಜುಗೊಳಿಸುವುದನ್ನು ಎದುರಿಸುವ ಕ್ರಮಗಳ ಬಗ್ಗೆ ಕೂಡ ಚರ್ಚಿಸಿದರು.

ಪೊಲೀಸ್ ಪಡೆಯನ್ನು ಹೆಚ್ಚು ಸಂವೇದನಾಶೀಲವನ್ನಾಗಿ ಮಾಡಲು ಮತ್ತು ಉದಯೋನ್ಮುಖ ತಂತ್ರಜ್ಞಾನಗಳಲ್ಲಿ ಅವರಿಗೆ ತರಬೇತಿ ನೀಡಬೇಕು. ಏಜೆನ್ಸಿಗಳಾದ್ಯಂತ ಡೇಟಾ ವಿನಿಮಯವನ್ನು ಸುಗಮಗೊಳಿಸಲು ರಾಷ್ಟ್ರೀಯ ದತ್ತಾಂಶ ಆಡಳಿತ ಚೌಕಟ್ಟಿನ ಪ್ರಾಮುಖ್ಯತೆ ಬಹಳಷ್ಟಿದೆ ಎಂದು ಪ್ರಧಾನಿ ಹೇಳಿದ್ದಾಗಿ ಪ್ರೆಸ್‌ ಇನ್‌ಫಾರ್ಮೇಶನ್‌ ಬ್ಯೂರೋ (ಪಿಐಬಿ) ಬಾನುವಾರದ ಹೇಳಿಕೆಯಲ್ಲಿ ತಿಳಿಸಿದೆ.

ಅವರು ಬಳಕೆಯಲ್ಲಿಲ್ಲದ ಕ್ರಿಮಿನಲ್ ಕಾನೂನುಗಳನ್ನು ರದ್ದುಗೊಳಿಸಲು ಮತ್ತು ರಾಜ್ಯಗಳಾದ್ಯಂತ ಪೊಲೀಸ್ ಸಂಸ್ಥೆಗಳಿಗೆ ಮಾನದಂಡಗಳನ್ನು ನಿರ್ಮಿಸುವ ಅಗತ್ಯ ಇದೆ ಎಂದು ಶಿಫಾರಸು ಮಾಡಿದರು. ಜೈಲು ನಿರ್ವಹಣೆಯನ್ನು ಸುಧಾರಿಸಲು ಜೈಲು ಸುಧಾರಣೆಗಳನ್ನು ಅವರು ಸೂಚಿಸಿದರು. ಕೇಂದ್ರೀಯ ತನಿಖಾ ಏಜೆನ್ಸಿ ಮತ್ತು ರಾಜ್ಯ ಪೊಲೀಸರ ನಡುವೆ ಸಹಕಾರ ಬೇಕು.ಅಧಿಕಾರಿಗಳ ಆಗಾಗ್ಗೆ ಭೇಟಿಗಳನ್ನು ಆಯೋಜಿಸುವ ಮೂಲಕ ಗಡಿ ಮತ್ತು ಕರಾವಳಿ ಭದ್ರತೆಯನ್ನು ಬಲಪಡಿಸುವ ಬಗ್ಗೆಯೂ ಪ್ರಧಾನಿ ಮೋದಿ ಗಮನಸೆಳೆದರು.

ಸಭೆಯಲ್ಲಿ ಭಾಗವಹಿಸಿದ್ದ ಉಗ್ರ ನಿಗ್ರಹ ವಿಭಾಗದ ಹಿರಿಯ ಅಧಿಕಾರಿ ಸಭೆಯಲ್ಲಿ ಚರ್ಚಿಸಲ್ಪಟ್ಟ ವಿಷಯಗಳ ಬಗ್ಗೆ ತಿಳಿಸಿರುವುದು ಇಷ್ಟು - ಕಳೆದ 10 ವರ್ಷ ಗಮನಿಸಿದರೆ ಭಾರತದ ನೆರೆಹೊರೆಯಲ್ಲಿ ಉಗ್ರ ಚಟುವಟಿಕೆ ಗಮನಾರ್ಹ ಏರಿಕೆ ಕಂಡಿದೆ. ಈ ಬೆಳವಣಿಗೆಯು ಇನ್ನು ಮುಂದೆ ಪಾಕಿಸ್ತಾನ ಮತ್ತು ಬಾಂಗ್ಲಾದೇಶಕ್ಕೆ ಸೀಮಿತವಾಗಿರುವುದಿಲ್ಲ. ಈಗಾಗಲೇ ಇದು ನಮ್ಮ ನೆರೆಹೊರೆಯಲ್ಲಿ ವಿವಿಧ ರೂಪಗಳಲ್ಲಿ ಹರಡಿದೆ. ಇದು ನಮ್ಮ ಆಂತರಿಕ ಮತ್ತು ಬಾಹ್ಯ ಭದ್ರತಾ ವಿಚಾರಗಳಿಗೆ ಎರಡಕ್ಕೂ ಗಂಭೀರ ಬೆದರಿಕೆಯನ್ನು ಸೃಷ್ಟಿಸಿದೆ. ಬೆಳೆಯುತ್ತಿರುವ ಧಾರ್ಮಿಕ ಉಗ್ರವಾದ, ರಾಜಕೀಯ ಅಸ್ಥಿರತೆ, ಭಯೋತ್ಪಾದಕ ಸಂಘಟನೆಗಳ ಅನಿಯಂತ್ರಿತ ಚಟುವಟಿಕೆಗಳು ಮತ್ತು ವಿಫಲ ಆರ್ಥಿಕತೆಗಳು ಈ ದೇಶಗಳಲ್ಲಿ ಉಗ್ರ ಚಟುವಟಿಕೆ ಬೆಳವಣಿಗೆಗೆ ಉತ್ತೇಜನ ನೀಡುತ್ತಿವೆ ಎಂಬಿತ್ಯಾದಿ ವಿಚಾರಗಳು ಗಮನಸೆಳೆದಿವೆ.

ಭಾರತವು, ದಕ್ಷಿಣ ಏಷ್ಯಾದ ದೇಶಗಳಲ್ಲಿ ಹೆಚ್ಚು ಉತ್ತಮ ಪ್ರದರ್ಶನ ನೀಡುತ್ತಿರುವ ಕಾರಣ, ಈ ದೇಶಗಳು ತಮ್ಮ ವೈಫಲ್ಯಗಳನ್ನು ಭಾರತದ ಕಡೆಗೆ ತಿರುಗಿಸಲು ಕಾರಣಗಳನ್ನು ಹುಡುಕುತ್ತವೆ. ಇದು ಈ ದೇಶಗಳಲ್ಲಿ ಅಥವಾ ಇಲ್ಲಿ ದೇಶೀಯವಾಗಿ ಯಾವುದೇ ಹಠಾತ್ ಪ್ರಚೋದನೆಯು ನಮ್ಮ ಭದ್ರತೆಗೆ ನೇರವಾಗಿ ಬೆದರಿಕೆ ಹಾಕುವ ಘಟನೆಗಳನ್ನು ಉಂಟುಮಾಡುವ ಪರಿಸ್ಥಿತಿಯನ್ನು ಸೃಷ್ಟಿಸುತ್ತದೆ ಎಂದು ಅಧಿಕಾರಿ ಹೇಳಿದರು.

IPL_Entry_Point