logo
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Nsg Calendar 2023: ಎನ್‌ಎಸ್‌ಜಿ ಕಮಾಂಡೋಗಳು ನಮ್ಮ ಹೀರೋಗಳಾ? ಕಾರ್ಯಾಚರಣೆ ಫೋಟೋ ಮನೆಯಲ್ಲಿರಬೇಕಾ? ಇಲ್ಲಿದೆ ಕ್ಯಾಲೆಂಡರ್‌!

NSG Calendar 2023: ಎನ್‌ಎಸ್‌ಜಿ ಕಮಾಂಡೋಗಳು ನಮ್ಮ ಹೀರೋಗಳಾ? ಕಾರ್ಯಾಚರಣೆ ಫೋಟೋ ಮನೆಯಲ್ಲಿರಬೇಕಾ? ಇಲ್ಲಿದೆ ಕ್ಯಾಲೆಂಡರ್‌!

HT Kannada Desk HT Kannada

Jan 18, 2023 11:43 AM IST

ಎನ್‌ಎಸ್‌ಜಿ ಕ್ಯಾಲೆಂಡರ್‌ 2023

  • Blackcats in action: ಎನ್‌ಎಸ್‌ಜಿ ಪಡೆ ಅಂದರೇನೇ ಏನೋ ಒಂದು ಆಕರ್ಷಣೆ. ಎನ್‌ಎಸ್‌ಜಿ ಕಮಾಂಡೋಗಳ ಕಾರ್ಯಾಚರಣೆ ದೃಶ್ಯ ಇಂದಿನ ಯುವಮಾನಸದಲ್ಲಿ ಅಚ್ಚಳಿಯದೇ ನಿಲ್ಲತೊಡಗಿದೆ. ಹೌದಲ್ವ… ಅವರು ನಮ್ಮ ಹೀರೋಗಳಾಗುತ್ತಿದ್ದಾರೆ. ಅನೇಕರು ಅವರ ಕಾರ್ಯಾಚರಣೆ ಫೋಟೋಗಳನ್ನು ಸಂಗ್ರಹಿಸುತ್ತಿದ್ದಾರೆ. ಆ ಕೆಲಸವನ್ನು ಎನ್‌ಎಸ್‌ಜಿ ಈ ಸಲ ಸುಲಭ ಮಾಡಿದೆ. ಇಲ್ಲಿದೆ ಕ್ಯಾಲೆಂಡರ್‌!

ಎನ್‌ಎಸ್‌ಜಿ ಕ್ಯಾಲೆಂಡರ್‌ 2023
ಎನ್‌ಎಸ್‌ಜಿ ಕ್ಯಾಲೆಂಡರ್‌ 2023 (NSG )

ಕಾಲಚಕ್ರ ಉರುಳುತ್ತಲೇ ಇದೆ. ನಮ್ಮ ದೇಶ ಭಾರತ ಮತ್ತೆ ಜಗತ್ತಿನ ಗಮನ ಸೆಳೆಯತೊಡಗಿದೆ. ಸಿನಿಮಾ ಹೀರೋಗಳನ್ನು ಆದರ್ಶಪ್ರಾಯರು ಎಂಬ ಆರಾಧನೆಯ ಭಾವ ಕ್ಷೀಣಿಸತೊಡಗಿದೆ. ದಾಸ್ಯದ ಮನೋಭಾವ ತೊರೆದು, ಜಗತ್ತಿಗೆ ದಾರಿದೀಪವಾಗುವ ಕಡೆಗೆ ನಾವು ಮುನ್ನಡೆಯುತ್ತಿದ್ದೇವೆ. ದೇಶದ ಶಕ್ತಿ ಸಾಮರ್ಥ್ಯಗಳು ವೃದ್ಧಿಸುತ್ತಿವೆ.

ಟ್ರೆಂಡಿಂಗ್​ ಸುದ್ದಿ

ಹೆಲಿಕಾಪ್ಟರ್ ಅಪಘಾತದಲ್ಲಿ ಇರಾನ್ ಅಧ್ಯಕ್ಷ ಇಬ್ರಾಹಿಂ ರೈಸಿ ನಿಧನ; ಕಾಪ್ಟರ್ ಅಪಘಾತಕ್ಕೆ ಸಂಬಂಧಿಸಿದ 10 ಅಪ್ಡೇಟ್ಸ್‌

ಪ್ರಧಾನಿ ಮೋದಿ ಮತ್ತೆ ಅಧಿಕಾರ ಚುಕ್ಕಾಣಿ ಹಿಡಿದರೆ, ಯಾವ ವಲಯದ ಷೇರುಗಳು ಲಾಭದಾಯಕವಾಗಲಿವೆ, ಇಲ್ಲಿದೆ ಪರಿಣತರ ಅಭಿಪ್ರಾಯದ ನೋಟ

ತರಗತಿ ವೇಳೆ ಸ್ನೇಹಿತನೊಂದಿಗೆ ಮಾತು, ಕಿವಿ ಕೇಳಿಸದ ಹಾಗೆ ಬಾರಿಸಿದ ಶಿಕ್ಷಕನ ವಿರುದ್ದ ಎಫ್‌ಐಆರ್

Crime News: ಪ್ರೀತಿ ನಿರಾಕರಣೆ, ಪ್ರಿಯತಮೆ ಜತೆಗೆ ಇಡೀ ಕುಟುಂಬವನ್ನೇ ಕೊಂದು ಹಾಕಿದ ಯುವಕ ಆತ್ಮಹತ್ಯೆ!

ನವೋದ್ಯಮ, ವಿಜ್ಞಾನ-ತಂತ್ರಜ್ಞಾನ, ಯೋಗ- ಆರೋಗ್ಯ, ಆರ್ಥಿಕತೆ ಹೀಗೆ ಎಲ್ಲದರಲ್ಲೂ ನಮ್ಮ ದೇಶ ಮುನ್ನಡೆಯುತ್ತಿದೆ. ರಕ್ಷಣಾ ಕ್ಷೇತ್ರದಲ್ಲೂ ಸ್ವಾವಲಂಬನೆಯ ಹಾದಿಯಲ್ಲಿ ಮುಂದಡಿ ಇಡುತ್ತಿರುವ ಕಾಲಘಟ್ಟ ಇದು. ಭಾರತೀಯ ಸೇನೆ, ಸಶಸ್ತ್ರ ಪಡೆಗಳು ಕೂಡ ಕೆಚ್ಚೆದೆಯಿಂದ ದೇಶ ಕಾಯುವ ಕೆಲಸವನ್ನು ಹಿಂದೆಂದಿಗಿಂತಲೂ ಈಗ ಇನ್ನಷ್ಟು ಉಮೇದಿನಿಂದ ಮಾಡುತ್ತಿವೆ. ಈ ನಡುವೆ

ಎನ್‌ಎಸ್‌ಜಿ (NSG) ಅಂದರೆ ನ್ಯಾಷನಲ್‌ ಸೆಕ್ಯುರಿಟಿ ಗಾರ್ಡ್‌ - ಇದು ಕೇಂದ್ರ ಸರ್ಕಾರದ ಅಧೀನ ಸಂಸ್ಥೆ. ವಿಶ್ವ ದರ್ಜೆಯ ಶೂನ್ಯ ದೋಷ ಪಡೆ. ಭಯೋತ್ಪಾದನಾ ನಿಗ್ರಹ ಚಟುವಟಿಕೆ ಇದ ಕಾರ್ಯ. ಇದಕ್ಕಾಗಿ ವಿಶೇಷ ತರಬೇತಿ ಪಡೆದು ಸಜ್ಜಾಗಿರುವ ಪಡೆ ಇದು. ಅಸಾಧಾರಣ ಸಂದರ್ಭದಲ್ಲಷ್ಟೆ ಈ ಪಡೆಯ ಕಾರ್ಯಾಚರಣೆ ನಡೆಯುತ್ತದೆ.

ಎನ್‌ಎಸ್‌ಜಿಯ ಇತಿಹಾಸ (History of NSG)

ಕೇಂದ್ರ ಸಚಿವ ಸಂಪುಟವು 1984 ರಲ್ಲಿ ಸಿಬ್ಬಂದಿಯನ್ನು ಒಳಗೊಂಡ ಫೆಡರಲ್ ಕಂಟಿಜೆನ್ಸಿ ಫೋರ್ಸ್ ರಚಿಸಲು ತೀರ್ಮಾನಿಸಿತು. ಭಯೋತ್ಪಾದನೆಯ ವಿವಿಧ ವಿವಿಧ ಅಭಿವ್ಯಕ್ತಿಗಳನ್ನು ನಿಗ್ರಹಿಸುವುದಕ್ಕೆ ಹೆಚ್ಚು ಪ್ರೇರಿತ, ವಿಶೇಷವಾಗಿ ಸಜ್ಜುಗೊಂಡ ಮತ್ತು ಉತ್ತಮ ತರಬೇತಿ ಪಡೆದವರನ್ನು ಒಳಗೊಂಡ ಪಡೆ ಇದಾಗಿರಬೇಕು ಎಂಬ ಇರಾದೆಯೂ ಸರ್ಕಾರಕ್ಕೆ ಇತ್ತು. ಕೊನೆಗೆ 1986ರಲ್ಲಿ ಸಂಸತ್‌ನಲ್ಲಿ ಮಸೂದೆ ಮಂಡಿಸಿ ರಾಷ್ಟ್ರೀಯ ಭದ್ರತಾ ಸಿಬ್ಬಂದಿ (ಎನ್‌ಎಸ್‌ಜಿ) ಸಂಸ್ಥೆಯನ್ನು ಔಪಚಾರಿಕವಾಗಿ ರೂಪಿಸಲಾಯಿತು. ಕ್ಷಿಪ್ರ ಕಾರ್ಯಾಚರಣೆ ಇದರ ಮೂಲತತ್ತ್ವ. ಬ್ರಿಟನ್‌ನ ಎಸ್‌ಎಎಸ್‌ ಮತ್ತು ಜರ್ಮನಿಯ ಜಿಎಸ್‌ಜಿ -9 ಮಾದರಿಯಲ್ಲಿ ನಮ್ಮ ದೇಶದ ಎನ್‌ಎಸ್‌ಜಿಯನ್ನು ರೂಪಿಸಲಾಗಿದೆ.

ಎನ್‌ಎಸ್‌ಜಿ ಕ್ಯಾಲೆಂಡರ್‌ 2023 (NSG Calendar 2023)

ಎನ್‌ಎಸ್‌ಇ ಇದೇ ಮೊದಲ ಸಲ ವಾರ್ಷಿಕ ಕ್ಯಾಲೆಂಡರ್‌ ಸಿದ್ಧಪಡಿಸಿ ಪರಿಚಯಿಸಿದೆ. ಪಿಡಿಎಫ್‌ ರೂಪದಲ್ಲಿ ಈ ಕ್ಯಾಲೆಂಡರ್‌ ಅನ್ನು ಟ್ವಿಟರ್‌ನಲ್ಲಿ ಶೇರ್‌ ಮಾಡಿದೆ.

ʻBlackcats in actionʼ ಎಂಬುದು ಕ್ಯಾಲೆಂಡರ್‌ನ ವಿಶೇಷತೆ. ವಿವಿಧ ಕಾರ್ಯಾಚರಣೆಗಳಲ್ಲಿ ಬ್ಲ್ಯಾಕ್‌ ಕ್ಯಾಟ್‌ ಕಮಾಂಡೋಗಳು ಭಾಗವಹಿಸಿದ ಚಿತ್ರಣಗಳು ಕ್ಯಾಲೆಂಡರ್‌ನಲ್ಲಿವೆ. ಪ್ರಸಿದ್ಧ ಛಾಯಾಗ್ರಾಹಕ ಪ್ರವೀಣ್‌ ತಾಲನ್‌ ಕ್ಲಿಕ್ಕಿಸಿದ ಫೋಟೋಗಳು ಕ್ಯಾಲೆಂಡರ್‌ನಲ್ಲಿವೆ.

ಜಿ20ಗೆ ಭಾರತದ ಅಧ್ಯಕ್ಷತೆ ಲಭಿಸಿದ್ದು, ಅದನ್ನು ಸ್ಮರಣೀಯವಾಗಿಸುವ ಎಲ್ಲ ಪ್ರಯತ್ನಗಳೂ ನಡೆಯುತ್ತಿದೆ. ಜಿ20ಗೆ ಭಾರತದ ಅ‍ಧ್ಯಕ್ಷತೆಯ ಲಾಂಛನವೂ ಈ ಕ್ಯಾಲೆಂಡರ್‌ನಲ್ಲಿ ವಿಶೇಷವಾಗಿ ಗಮನಸೆಳೆಯುತ್ತಿದೆ.

ಆರಂಭದಲ್ಲಿ ಎನ್‌ಎಸ್‌ಜಿ ಕುರಿತು ಕಿರು ಪರಿಚಯವಿದೆ. ಬಳಿಕ ಜನವರಿ ತಿಂಗಳ ಕ್ಯಾಲೆಂಡರ್‌, ಫೆಬ್ರವರಿ ಹೀಗೆ 12 ತಿಂಗಳ ದಿನಾಂಕಗಳ ವಿವರ ಇದೆ. ವಿಶೇಷ ದಿನಗಳನ್ನು ಗುರುತಿಸಲಾಗಿದೆ.

ಒಂದಕ್ಕಿಂತ ಒಂದು ಫೋಟೋಗಳು ಆಕರ್ಷಕವಾಗಿದ್ದು, ಕ್ಯಾಲೆಂಡರ್‌ನ ಅಂದವನ್ನು ಹೆಚ್ಚಿಸಿದೆ. ಸಂಗ್ರಹಯೋಗ್ಯವಾಗಿಸಿವೆ. ಈ ಕ್ಯಾಲೆಂಡರ್‌ ಅನ್ನು ಡೌನ್‌ಲೋಡ್‌ ಮಾಡಿಕೊಂಡು ಮುದ್ರಿಸಿಕೊಳ್ಳಬಹುದು ಕೂಡ. ಅಥವಾ ಪಿಡಿಎಫ್‌ ಅನ್ನು ಹಾಗೆಯೇ ಸೇವ್‌ ಮಾಡಿಟ್ಟುಕೊಳ್ಳಬಹುದು.

ಇಲ್ಲಿದೆ ಎನ್‌ಎಸ್‌ಜಿ ಕ್ಯಾಲೆಂಡರ್‌ ಡೌನ್‌ಲೋಡ್‌ ಮಾಡಿಕೊಳ್ಳುವ ಲಿಂಕ್‌ - NSG ಕ್ಯಾಲೆಂಡರ್‌ 2023 ಕ್ಲಿಕ್‌ ಮಾಡಿ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ