logo
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /   Sudan News: ಸೇನೆ ಮತ್ತು ಅರೆಸೇನಾ ಪಡೆ ನಡುವೆ ಭೀಕರ ಕಾದಾಟ, ಸುಡಾನ್‌ನಲ್ಲಿರುವ ಭಾರತೀಯರಿಗೆ ಸುರಕ್ಷಿತವಾಗಿರಲು ಸೂಚನೆ | ಸಂಘರ್ಷದ ವಿಡಿಯೋ

Sudan News: ಸೇನೆ ಮತ್ತು ಅರೆಸೇನಾ ಪಡೆ ನಡುವೆ ಭೀಕರ ಕಾದಾಟ, ಸುಡಾನ್‌ನಲ್ಲಿರುವ ಭಾರತೀಯರಿಗೆ ಸುರಕ್ಷಿತವಾಗಿರಲು ಸೂಚನೆ | ಸಂಘರ್ಷದ ವಿಡಿಯೋ

Praveen Chandra B HT Kannada

Apr 15, 2023 06:47 PM IST

Sudan News: ಸೇನೆ ಮತ್ತು ಅರೆಸೇನಾ ಪಡೆ ನಡುವೆ ಭೀಕರ ಕಾದಾಟ, ಸುಡಾನ್‌ನಲ್ಲಿರುವ ಭಾರತೀಯರಿಗೆ ಸುರಕ್ಷಿತವಾಗಿರಲು ಸೂಚನೆ | ಸಂಘರ್ಷದ ವಿಡಿಯೋ

  • ಸುಡಾನ್‌ ದೇಶದಲ್ಲಿ ಅಲ್ಲಿನ ಸೇನೆ ಮತ್ತು ಅರೆ ಸೇನಾಪಡೆ ನಡುವಿನ ದೀರ್ಘಕಾಲದ ಸಂಘರ್ಷವು ಹಿಂಸೆಗೆ ತಿರುಗಿದೆ. ಸೇನೆ ಮತ್ತು ಅರೆಸೇನಾಪಡೆಯ ಸಂಘರ್ಷದಲ್ಲಿ ನಾಗರಿಕರು ತಮ್ಮ ಪ್ರಾಣ ಉಳಿಸಲು ಪರದಾಡುತ್ತಿದ್ದಾರೆ. 

Sudan News: ಸೇನೆ ಮತ್ತು ಅರೆಸೇನಾ ಪಡೆ ನಡುವೆ ಭೀಕರ ಕಾದಾಟ, ಸುಡಾನ್‌ನಲ್ಲಿರುವ ಭಾರತೀಯರಿಗೆ ಸುರಕ್ಷಿತವಾಗಿರಲು ಸೂಚನೆ  | ಸಂಘರ್ಷದ ವಿಡಿಯೋ
Sudan News: ಸೇನೆ ಮತ್ತು ಅರೆಸೇನಾ ಪಡೆ ನಡುವೆ ಭೀಕರ ಕಾದಾಟ, ಸುಡಾನ್‌ನಲ್ಲಿರುವ ಭಾರತೀಯರಿಗೆ ಸುರಕ್ಷಿತವಾಗಿರಲು ಸೂಚನೆ | ಸಂಘರ್ಷದ ವಿಡಿಯೋ (AFP)

ಸುಡಾನ್‌: ಸುಡಾನ್‌ ದೇಶದಲ್ಲಿ ಅಲ್ಲಿನ ಸೇನೆ ಮತ್ತು ಅರೆ ಸೇನಾಪಡೆ ನಡುವಿನ ದೀರ್ಘಕಾಲದ ಸಂಘರ್ಷವು ಹಿಂಸೆಗೆ ತಿರುಗಿದೆ. ಸೇನೆ ಮತ್ತು ಅರೆಸೇನಾಪಡೆಯ ಸಂಘರ್ಷದಲ್ಲಿ ನಾಗರಿಕರು ತಮ್ಮ ಪ್ರಾಣ ಉಳಿಸಲು ಪರದಾಡಬೇಕಾಯಿತು. ಇದರಿಂದ ಸಾಕಷ್ಟು ಜನರು ದಿಗ್ಭಂಧನಕ್ಕೆ ಒಳಗಾಗಿದ್ದಾರೆ. ಅಲ್ಲಿ ಭಾರತೀಯರೂ ಇದ್ದಾರೆ. ಸುಡಾನ್‌ ರಾಜಧಾನಿಯಲ್ಲಿ ಸಿಲುಕಿರುವ ಹಲವು ಜನರು ವೈಮಾನಿಕ ದಾಳಿ ಮತ್ತು ಗುಂಡಿನ ದಾಳಿಯ ವಿಡಿಯೋಗಳನ್ನು ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿದ್ದಾರೆ.

ಟ್ರೆಂಡಿಂಗ್​ ಸುದ್ದಿ

ಸಾಯಿ ಬಾಬಾ ಮತ್ತೆ ಹುಟ್ಟಿದ್ರಾ, ಈ ಬಾಲಕ ಅವರ ಪುನರವತಾರವೇ, ಏನಿದು ವಿದೇಶೀಯರ ವರ್ತನೆ! - ವೈರಲ್ ವಿಡಿಯೋ

Gold Rate Today: ವಾರಾಂತ್ಯದಲ್ಲಿ ತುಸು ಇಳಿಕೆಯಾದ ಹಳದಿ ಲೋಹದ ಬೆಲೆ; ಶನಿವಾರ ಬೆಳ್ಳಿ ದರ ತಟಸ್ಥ

Gold Rate Today: ಶುಕ್ರವಾರವೂ ಏರಿಕೆಯಾದ ಚಿನ್ನ, ಬೆಳ್ಳಿ ದರ; ದೇಶದಲ್ಲಿಂದು ಆಭರಣ ದರ ಎಷ್ಟಾಗಿದೆ ಗಮನಿಸಿ

ಇಪಿಎಫ್‌ಒ; ಈ 3 ಕಾರಣ ನೀಡಿದ್ರೆ ಇಪಿಎಫ್‌ ಹಣ ಬೇಗ ಹಿಂಪಡೆಯಬಹುದು, ಹಂತ ಹಂತದ ಮಾರ್ಗದರ್ಶಿ ಇಲ್ಲಿದೆ ನೋಡಿ

ಖರ್ತೋಮ್‌ ವಿಮಾನನಿಲ್ದಾಣದಲ್ಲಿ ತಮ್ಮ ಪ್ರಾಣ ಉಳಿಸಲು ಪ್ರಯಾಣಿಕರು ನೆಲದ ಮೇಲೆ ಬಿದ್ದುಕೊಂಡಿರುವ ವಿಡಿಯೋ ಇಲ್ಲಿದೆ. ಈ ವಿಡಿಯೋವನ್ನು @NadaWanni ಎಂಬ ಟ್ವಿಟ್ಟರ್‌ ಖಾತೆಯಿಂದ ಹಂಚಿಕೊಳ್ಳಲಾಗಿದೆ. ವಿಮಾನ ನಿಲ್ದಾಣದಲ್ಲಿ ಪ್ರಾಣ ಭಯದಲ್ಲಿರುವ ಪ್ರಯಾಣಿಕರನ್ನು ಈ ವಿಡಿಯೋದಲ್ಲಿ ನೋಡಬಹುದು.

ಆರ್‌ಎಸ್‌ಎಫ್‌ ಪಡೆಯು ಖರ್ತೋಮ್‌ ವಿಮಾನ ನಿಲ್ದಾಣವನ್ನು ವಶಕ್ಕೆ ಪಡೆದುಕೊಂಡ ಬಳಿಕ ಹಲವು ವಿಮಾನಗಳು ಅಲ್ಲಿ ಇಳಿಯದೆ ವಾಪಸ್‌ ಹೋದವು. ಬಹುತೇಕ ವಿಮಾನಗಳು ಖರ್ತೋಮ್‌ ವಿಮಾನ ನಿಲ್ದಾಣದಿಂದ ಪಲಾಯನ ಮಾಡಿದವು. ಹಲವು ವಿಮಾನಗಳು ಸಂಘರ್ಷದಲ್ಲಿ ಬೆಂಕಿಗೆ ಆಹುತಿಯಾಗಿವೆ.

ಖತ್ರೋಮ್‌ ವಿಮಾನ ನಿಲ್ದಾಣದ ಹಲವು ಚಿತ್ರಗಳು ಸೋಷಿಯಲ್‌ ಮೀಡಿಯಾದಲ್ಲಿ ಹರಿದಾಡುತ್ತಿವೆ. ಸುಡಾನಿನ ಅರೆಸೇನಾಪಡೆಯಾದ ರ್ಯಾಪಿಡ್‌ ಸಪೋರ್ಟ್‌ ಪೋರ್ಸ್‌ನಿಂದ ಆದ ಅನಾಹುತಗಳನ್ನು ಹಲವು ಚಿತ್ರಗಳು ಸೋಷಿಯಲ್‌ ಮೀಡಿಯಾದಲ್ಲಿ ಹರಿದಾಡುತ್ತಿವೆ. ಈ ವಿಮಾನ ನಿಲ್ದಾಣವನ್ನು ಅರೆಸೇನಾಪಡೆಯು ನಿಯಂತ್ರಣಕ್ಕೆ ತೆಗೆದುಕೊಂಡಿದೆ.

ಮತ್ತೊಂದು ವಿಡಿಯಾದಲ್ಲಿ ಸುಡಾನಿನ ಸೇನೆ ಮತ್ತು ವಾಯುಪಡೆಯ ಯುದ್ಧವಿಮಾನಗಳು ಸುಡಾನ್‌ನ ವಸತಿ ಪ್ರದೇಶಗಳ ಮೇಲೆ ಹಾರಾಡುತ್ತಿರುವುದನ್ನು ನೋಡಬಹುದು. ಈ ಯುದ್ಧ ವಿಮಾನಗಳು ಸುಡಾನ್‌ನ ಅರೆಸೇನಾಪಡೆಯ ಜೆಟ್‌ ವಿಮಾನಗಳು ಮತ್ತು ಸಿಬ್ಬಂದಿಗಳನ್ನು ಗುರಿಯಾಗಿಸಿಕೊಂಡು ಹಾರಾಡುತ್ತಿವೆ. ಈ ವಿಡಿಯೋ ಇಲ್ಲಿದೆ ನೋಡಿ.

ದೇಶವೊಂದರ ರಕ್ಷಣೆಯನ್ನು ವಹಿಸಬೇಕಾದ ಎರಡು ಪ್ರಮುಖ ಪಡೆಗಳ ನಡುವಿನ ಸಂಘರ್ಷವು ಸುಡಾನ್‌ನಲ್ಲಿ ಆತಂಕವನ್ನು ಉಂಟು ಮಾಡಿದೆ. ಸುಡಾನ್‌ನ ಖರ್ತೋಮ್‌ನಲ್ಲಿ ಈಗಲೂ ಜನರಿಗೆ ಯುದ್ಧ ವಿಮಾನಗಳು, ಬಾಂಬ್‌ಗಳ ಸದ್ದು ಕೇಳಿಸುತ್ತಿದೆ. ಅಲ್ಲಿರುವ ಭಾರತೀಯರಿಗೆ ಸುರಕ್ಷಿತವಾಗಿರುವಂತೆ ಸೂಚಿಸಲಾಗಿದೆ.

ಸುಡಾನ್‌ನಲ್ಲಿ ಸಂಘರ್ಷ ನಡೆಯುತ್ತಿದ್ದು, ಯಾರೂ ಮನೆಯಿಂದ ಹೊರಕ್ಕೆ ಬರಬೇಡಿ, ಮನೆಯಲ್ಲಿಯೇ ಇದ್ದು ಸುರಕ್ಷಿತವಾಗಿರಿ ಎಂದು ಭಾರತೀಯ ರಾಯಭಾರ ಕಚೇರಿಯು ಟ್ವೀಟ್‌ ಮಾಡಿದೆ. ಸುಡಾನ್ ಸೇನೆಯ ನಾಯಕ ಅಬ್ದೆಲ್ ಫತ್ತಾಹ್ ಅಲ್-ಬುರ್ಹಾನ್ ಮತ್ತು ಅರೆಸೈನಿಕ ಕಮಾಂಡರ್ ಮೊಹಮ್ಮದ್ ಹಮ್ದಾನ್ ಡಾಗ್ಲೋ ನಡುವಿನ ಸಂಘರ್ಷವು ಇದೀಗ ಎರಡು ಸೇನಾಪಡೆಗಳ ನಡುವಿನ ಸಂಘರ್ಷವಾಗಿ ಮಾರ್ಪಟ್ಟಿದೆ.

ಅರೆಸೇನಾಪಡೆಯನ್ನು ಸೇನೆಯ ಜತೆ ಸಂಯೋಜನೆ ಮಾಡುವ ಯೋಜನೆಯು ಈ ವಿವಾದಕ್ಕೆ ಮೂಲ ಕಾರಣ ಎನ್ನಲಾಗಿದೆ. ಈ ಕುರಿತು ಈ ಎರಡು ಸೇನಾಪಡೆಗಳ ನಾಯಕರ ನಡುವೆ ಸಂಘರ್ಷ ಏರ್ಪಟ್ಟಿದೆ. ಈ ಕುರಿತು ಒಪ್ಪಂದವೊಂದನ್ನು ಮಾಡಿಕೊಳ್ಳಲಾಗಿತ್ತು. ಇವೆರಡರ ಸಂಯೋಜನೆಗೆ ಎರಡು ಪಡೆಗಳ ಮುಖ್ಯಸ್ಥರು ಒಪ್ಪಿಗೆ ನೀಡಿಲ್ಲ. ಇದೀಗ ಈ ಎರಡು ಪಡೆಗಳು ದೇಶದಲ್ಲಿ ಆಂತರಿಕ ಯುದ್ಧಕ್ಕೆ ಕಾರಣವಾಗಿದೆ. ಸುಡಾನ್‌ನಲ್ಲಿ ಭಾರತೀಯರು ಸೇರಿದಂತೆ ಸಾಕಷ್ಟು ವಿದೇಶಿ ಪ್ರಜೆಗಳಿದ್ದು, ಆತಂಕದಲ್ಲಿದ್ದಾರೆ.

 

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ