logo
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Explainer: ಭಾರತದ ಚಿಲ್ಲರೆ ಹಣದುಬ್ಬರ 15 ತಿಂಗಳ ಗರಿಷ್ಠ ಮಟ್ಟಕ್ಕೆ ನೆಗೆದಿರುವುದೇಕೆ, ತರಕಾರಿ ದರ ಕಡಿಮೆಯಾಗಬಹುದೇ, ಇಲ್ಲಿದೆ ವಿವರ

Explainer: ಭಾರತದ ಚಿಲ್ಲರೆ ಹಣದುಬ್ಬರ 15 ತಿಂಗಳ ಗರಿಷ್ಠ ಮಟ್ಟಕ್ಕೆ ನೆಗೆದಿರುವುದೇಕೆ, ತರಕಾರಿ ದರ ಕಡಿಮೆಯಾಗಬಹುದೇ, ಇಲ್ಲಿದೆ ವಿವರ

Praveen Chandra B HT Kannada

Aug 15, 2023 05:11 PM IST

15 ತಿಂಗಳ ಗರಿಷ್ಠ ಮಟ್ಟ ತಲುಪಿದ ಭಾರತದ ಚಿಲ್ಲರೆ ಹಣದುಬ್ಬರ

    • India Inflation Rate: ಭಾರತದ ಚಿಲ್ಲರೆ ಹಣದುಬ್ಬರವು ಜುಲೈ ತಿಂಗಳಿನಲ್ಲಿ ಶೇಕಡ 7.44ಕ್ಕೆ ನೆಗೆದಿದೆ. ಚಿಲ್ಲರೆ ಹಣದುಬ್ಬರ ದರ 15 ತಿಂಗಳ ಗರಿಷ್ಠ ಮಟ್ಟಕ್ಕೆ ನೆಗೆಯಲು ಕಾರಣವಾದ ಅಂಶಗಳು ಯಾವುವು, ಭಾರತದಲ್ಲಿ ತರಕಾರಿ ದರ ಕಡಿಮೆಯಾಗುವುದೇ ಇತ್ಯಾದಿ ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ.
15 ತಿಂಗಳ ಗರಿಷ್ಠ ಮಟ್ಟ ತಲುಪಿದ ಭಾರತದ ಚಿಲ್ಲರೆ ಹಣದುಬ್ಬರ
15 ತಿಂಗಳ ಗರಿಷ್ಠ ಮಟ್ಟ ತಲುಪಿದ ಭಾರತದ ಚಿಲ್ಲರೆ ಹಣದುಬ್ಬರ

ಇತ್ತೀಚೆಗೆ ಹಿಂದೂಸ್ತಾನ್‌ ಟೈಮ್ಸ್‌ ಕನ್ನಡದ ಸಹೋದರಿ ಪತ್ರಿಕೆ ದಿ ಮಿಂಟ್‌ನ 19 ಆರ್ಥಿಕ ತಜ್ಞರ ಮತಗಣನೆಯು ಜುಲೈ ತಿಂಗಳಲ್ಲಿ ಚಿಲ್ಲರೆ ಹಣದುಬ್ಬರವು ಶೇಕಡ 6.50 ಇರಲಿದೆ ಅಂದಾಜಿಸಿತ್ತು. ಇದು ಜೂನ್‌ ತಿಂಗಳ ಚಿಲ್ಲರೆ ಹಣದುಬ್ಬರ ಶೇಕಡ 4.81ಕ್ಕಿಂತಲೂ ಅತ್ಯಧಿಕ ಹೆಚ್ಚಳವಾಗಿದೆ. ಆದರೆ, ನಿನ್ನೆ ಬಿಡುಗಡೆಯಾದ ಹಣದುಬ್ಬರ ದರವೂ ಇದಕ್ಕಿಂತಲೂ ಹೆಚ್ಚಾಗಿದೆ. ಭಾರತದ ಗ್ರಾಹಕ ಸೇವಾ ಸೂಚ್ಯಂಕ (ಸಿಪಿಐ) ಆಧರಿತ ಚಿಲ್ಲರೆ ಹಣದುಬ್ಬರವು 15 ತಿಂಗಳ ಗರಿಷ್ಠ ಮಟ್ಟಕ್ಕೆ ತಲುಪಿದೆ. ಶೇಕಡ 7.44ಕ್ಕೆ ನೆಗೆದಿದೆ.

ಟ್ರೆಂಡಿಂಗ್​ ಸುದ್ದಿ

Gold Rate Today: ಶುಕ್ರವಾರವೂ ಏರಿಕೆಯಾದ ಚಿನ್ನ, ಬೆಳ್ಳಿ ದರ; ದೇಶದಲ್ಲಿಂದು ಆಭರಣ ದರ ಎಷ್ಟಾಗಿದೆ ಗಮನಿಸಿ

ಇಪಿಎಫ್‌ಒ; ಈ 3 ಕಾರಣ ನೀಡಿದ್ರೆ ಇಪಿಎಫ್‌ ಹಣ ಬೇಗ ಹಿಂಪಡೆಯಬಹುದು, ಹಂತ ಹಂತದ ಮಾರ್ಗದರ್ಶಿ ಇಲ್ಲಿದೆ ನೋಡಿ

ಗುವಾಹಟಿ ಬೀದಿಯಲ್ಲಿ ಸೋಷಿಯಲ್ ಮೀಡಿಯಾ ಪ್ರಭಾವಿಯ ಮಂಜುಲಿಕಾ ನೃತ್ಯನಾಟಕ, ದಂಗಾಗಿ ನೋಡುತ್ತ ನಿಂತ ಜನ-ವೈರಲ್ ವಿಡಿಯೋ

Gold Rate Today: ಬಂಗಾರ ಪ್ರಿಯರಿಗೆ ಮತ್ತೆ ನಿರಾಸೆ; ತುಸು ಕಡಿಮೆಯಾಗಿ ಪುನಃ ಹೆಚ್ಚಾದ ಚಿನ್ನದ ದರ, ಬೆಳ್ಳಿ ಬೆಲೆಯೂ ಏರಿಕೆ

ಜುಲೈ ತಿಂಗಳಲ್ಲಿ ದೇಶದ ಹಣದುಬ್ಬರ ಹೆಚ್ಚಾಗಿರುವುದೇಕೆ?

ಜುಲೈ ತಿಂಗಳಿನಲ್ಲಿ ಸಿಪಿಐ ಹಣದುಬ್ಬರವು ತರಕಾರಿ, ಬೇಳೆಕಾಳುಗಳು, ಮಸಾಲೆ ಮತ್ತು ಧಾನ್ಯಗಳಂತಹ ಕೆಲವು ಆಹಾರ ಪದಾರ್ಥಗಳ ದರ ಹೆಚ್ಚಳದಿಂದ ಕಾರಣದಿಂದಾಗಿ ಹೆಚ್ಚಳವಾಗಿದೆ. ಜೂನ್‌ 2023ರಲ್ಲಿ ಚಿಲ್ಲರೆ ಹಣದುಬ್ಬರವು ಶೇಕಡ 4.9 ಆಗಿತ್ತು. ಆದರೆ, ಜುಲೈ ತಿಂಗಳಲ್ಲಿ ಇದು ಶೇಕಡ 7.44ಕ್ಕೆ ನೆಗೆದಿದೆ. ಎಲ್ಲಾದರೂ ತರಕಾರಿ ಹೊರತುಪಡಿಸಿ ನೋಡುವುದಾದರೆ ಸಿಪಿಐ ಹಣದುಬ್ಬರವು ತುಲನಾತ್ಮಕವಾಗಿ ಸಹಿಸಿಕೊಳ್ಳುವ ಮಟ್ಟದಲ್ಲಿದೆ. ತರಕಾರಿ ಹೊರಗಿಟ್ಟು ನೋಡಿದರೆ ಚಿಲ್ಲರೆ ಹಣದುಬ್ಬರವು ಶೇಕಡ 5.4ಕ್ಕೆ ತಲುಪಿದೆ. ಇದು ಜೂನ್‌ ತಿಂಗಳಲ್ಲಿ ಶೇಕಡ 5.2 ಆಗಿತ್ತು. ಆಹಾರ ಮತ್ತು ಪಾನೀಯ ಹೊರತುಪಡಿಸಿ ಇತರೆ ಗುಂಪುಗಳ ಹಣದುಬ್ಬರವು ಜೂನ್‌ 2023ಕ್ಕೆ ಹೋಲಿಸಿದರೆ ಜುಲೈ 2023ರಲ್ಲಿ ಕಡಿಮೆಯಾಗಿದೆ. ಕೋರ್‌ ಹಣದುಬ್ಬರ ಅಂದರೆ ಆಹಾರ, ಪಾನೀಯ, ಇಂಧನ ಮತ್ತು ಬೆಳಕು, ಪೆಟ್ರೊಲ್‌, ಡೀಸೆಲ್‌ ಹೊರತುಪಡಿಸಿದ ಹಣದುಬ್ಬರವು ಜುಲೈ ತಿಂಗಳಲ್ಲಿ 21 ತಿಂಗಳ ಕನಿಷ್ಠ ಮಟ್ಟ ಶೇಕಡ 5.1ಕ್ಕೆ ತಲುಪಿದೆ.

ಜೂನ್‌ ತಿಂಗಳ ನಿರೀಕ್ಷೆ ಏನಾಗಿತ್ತು?

ಜುಲೈ ತಿಂಗಳಲ್ಲಿ ಹಣದುಬ್ಬರವು ಗಮನಾರ್ಹ ಪ್ರಮಾಣದಲ್ಲಿ ಹೆಚ್ಚಳವಾಗಲಿದೆ ಎಂದು ಹಿಂದೂಸ್ತಾನ್‌ ಟೈಮ್ಸ್‌ ಕನ್ನಡದ ಸಹೋದರಿ ಪತ್ರಿಕೆ ದಿ ಮಿಂಟ್‌ನ 19 ಆರ್ಥಿಕ ತಜ್ಞರ ಮತಗಣನೆಯಿಂದ ತಿಳಿದುಬಂದಿತ್ತು. ತರಕಾರಿ ದರ ದುಬಾರಿಯಾಗಿರುವುದೇ ಇದಕ್ಕೆ ಕಾರಣ ಎಂದು ಅರ್ಥಶಾಸ್ತ್ರಜ್ಞರು ಅಭಿಪ್ರಾಯಪಟ್ಟಿದ್ದರು. ಈ ಪೋಲ್‌ನಲ್ಲಿ ಹಣದುಬ್ಬರ ದರವು ಶೇಕಡ 5.5-7.5 ಇರುವ ಅಂದಾಜಿತ್ತು.

ಆಹಾರ ಹಣದುಬ್ಬರ ದರ ಯಾವಾಗ ಕಡಿಮೆಯಾಗಬಹುದು?

ಆಗಸ್ಟ್‌ ತಿಂಗಳ ಆಹಾರ ದರದ ಕುರಿತು ಮಾನ್ಸೂನ್‌ ಡೇಟಾವು ಭರವಸೆ ನೀಡುವಂತೆ ಇಲ್ಲ. ಆಗಸ್ಟ್‌ ತಿಂಗಳಿನಲ್ಲಿ ಸಿಪಿಐ ಹಣದುಬ್ಬರವು ಶೇಕಡ 6.5ಕ್ಕಿಂತ ಮೇಲ್ಮಟ್ಟದಲ್ಲಿರಲಿದೆ ಎಂದು ಅರ್ಥಶಾಸ್ತ್ರಜ್ಞರು ಅಭಿಪ್ರಾಯಪಟ್ಟಿದ್ದಾರೆ. ಸೆಪ್ಟೆಂಬರ್‌ನಲ್ಲಿ ತರಕಾರಿ ದರ ಕಡಿಮೆಯಾಗಬಹುದು. ಮುಂದಿನ ಸುಗ್ಗಿಯ ಮೊದಲು ತರಕಾರಿ ದರವೂ ಕಡಿಮೆಯಾಗುವ ಸೂಚನೆಯಿಲ್ಲ. ಆಗಸ್ಟ್‌ ತಿಂಗಳಲ್ಲಿ ಮಳೆಯೂ ಕೃಷಿಗೆ ಸಂಕೀರ್ಣವಾಗಿದೆ. ಇದು ಆಹಾರ ದರಗಳ ಮೇಲೆ ಇನ್ನಷ್ಟು ಒತ್ತಡ ಹಾಕಬಹುದು. ಮಳೆಯ ಕೊರತೆಯು ಖಾರೀಫ್‌ ಬಿತ್ತನೆಯ ಮೇಲೆ ಪರಿಣಾಮ ಬೀರಲಿದೆ.

ಆರ್‌ಬಿಐ ಹಣಕಾಸು ನೀತಿ ಪರಿಣಾಮ

ಈ ತಿಂಗಳ ಆರಂಭದಲ್ಲಿ ರಿಸರ್ವ್‌ ಬ್ಯಾಂಕ್‌ ಆಫ್‌ ಇಂಡಿಯಾವು ರೆಪೊ ದರವನ್ನು ಬದಲಾಯಿಸಿರಲಿಲ್ಲ. ತರಕಾರಿ ದರ ಗಗನಕ್ಕೆ ನೆಗೆದಿರುವ ಕಾರಣ ಆರ್‌ಬಿಐಯು ರೆಪೊ ದರವನ್ನು ಬದಲಾಯಿಸಲು ಹೋಗಿರಲಿಲ್ಲ. ಪೂರೈಕೆ ಮತ್ತು ಬೇಡಿಕೆಯ ನಡುವೆ ಸಮತೋಲನ ಇಲ್ಲದೆ ಇರುವ ಕಾರಣ ಈ ನಿರ್ಧಾರ ತೆಗೆದುಕೊಂಡಿತ್ತು.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ