logo
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Gold Rate: ಗಣರಾಜ್ಯೋತ್ಸವದಂದು ಮತ್ತೆ ಇಳಿಕೆ ಆಯ್ತು ಚಿನ್ನ, ಬೆಳ್ಳಿ ತಟಸ್ಥ: ಇಂದಿನ ರೇಟ್‌ ಹೀಗಿದೆ

Gold Rate: ಗಣರಾಜ್ಯೋತ್ಸವದಂದು ಮತ್ತೆ ಇಳಿಕೆ ಆಯ್ತು ಚಿನ್ನ, ಬೆಳ್ಳಿ ತಟಸ್ಥ: ಇಂದಿನ ರೇಟ್‌ ಹೀಗಿದೆ

Rakshitha Sowmya HT Kannada

Jan 26, 2024 06:00 AM IST

ಜ 26, ಚಿನ್ನ, ಬೆಳ್ಳಿ ಬೆಲೆ

  • Gold Rate: ಒಂದೆಡೆ ದೇಶಾದ್ಯಂತ ಗಣರಾಜ್ಯೋತ್ಸವದ ಸಂಭ್ರಮ. ಮತ್ತೊಂದೆಡೆ ಆಭರಣಪ್ರಿಯರು ಇಂದು ಚಿನ್ನ ಕೊಳ್ಳಲು ಅಂಗಡಿಗೆ ಹೋಗುವ ಪ್ಲ್ಯಾನ್‌ನಲ್ಲಿದ್ದಾರೆ. ಸೋಮವಾರದಿಂದ 4 ದಿನಗಳ ಕಾಲ ತಟಸ್ಥವಾಗಿದ್ದ ಚಿನ್ನ ಗುರುವಾರ ಇಳಿಕೆ ಕಂಡಿತ್ತು, ಶುಕ್ರವಾರ ಮತ್ತೆ ಇಳಿಕೆ ಆಗಿದೆ. ಬೆಳ್ಳಿ ಬೆಲೆ ತಟಸ್ಥವಾಗಿದೆ.

ಜ 26, ಚಿನ್ನ, ಬೆಳ್ಳಿ ಬೆಲೆ
ಜ 26, ಚಿನ್ನ, ಬೆಳ್ಳಿ ಬೆಲೆ

Gold Rate: ವಾರದ ಆರಂಭದ ದಿನಗಳಲ್ಲಿ ಸತತವಾಗಿ 4 ದಿನಗಳ ಕಾಲ ತಟಸ್ಥವಾಗಿದ್ದ ಚಿನ್ನ ಗುರುವಾರದಿಂದ ಇಳಿಯುತ್ತಲೇ ಇದೆ. ಜ 25 ರಂದು 1 ಗ್ರಾಂ ಚಿನ್ನದ ಬೆಲೆ 5 ರೂ. ಇಳಿಕೆಯಾಗಿತ್ತು. ಇಂದು ಕೂಡಾ ಚಿನ್ನ ಇಳಿಕೆ ಕಂಡಿದ್ದು ಜನರು ಚಿನ್ನದ ಅಂಗಡಿಯತ್ತ ಮುಖ ಮಾಡಿದ್ದಾರೆ. ಇಂದು ರಾಜ್ಯ ಹಾಗೂ ಹೊರ ರಾಜ್ಯಗಳಲ್ಲಿ ಚಿನ್ನದ ಬೆಲೆ ಹೀಗಿದೆ.

ನಿಮ್ಮ ನಗರದಲ್ಲಿ ಇಂದಿನ ಚಿನ್ನದ ಧಾರಣೆ ಎಷ್ಟಿದೆ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ
ಟ್ರೆಂಡಿಂಗ್​ ಸುದ್ದಿ

ಗುವಾಹಟಿ ಬೀದಿಯಲ್ಲಿ ಸೋಷಿಯಲ್ ಮೀಡಿಯಾ ಪ್ರಭಾವಿಯ ಮಂಜುಲಿಕಾ ನೃತ್ಯನಾಟಕ, ದಂಗಾಗಿ ನೋಡುತ್ತ ನಿಂತ ಜನ-ವೈರಲ್ ವಿಡಿಯೋ

Gold Rate Today: ಬಂಗಾರ ಪ್ರಿಯರಿಗೆ ಮತ್ತೆ ನಿರಾಸೆ; ತುಸು ಕಡಿಮೆಯಾಗಿ ಪುನಃ ಹೆಚ್ಚಾದ ಚಿನ್ನದ ದರ, ಬೆಳ್ಳಿ ಬೆಲೆಯೂ ಏರಿಕೆ

SBI FD Rate Hike: ಸ್ಥಿರ ಠೇವಣಿಗಳ ಬಡ್ಡಿದರ ಹೆಚ್ಚಿಸಿದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ; ಎಸ್‌ಬಿಐ ಎಫ್‌ಡಿಗಳ ಬಡ್ಡಿದರ ವಿವರ ಹೀಗಿದೆ

Monsoon2024: ಮೇ19ಕ್ಕೆ ಮಾನ್ಸೂನ್ ಭಾರತ ಪ್ರವೇಶ, ಬೇಗನೇ ಮಳೆ ಆರಂಭದ ಮುನ್ಸೂಚನೆ ನೀಡಿದ ಹವಾಮಾನ ಇಲಾಖೆ

22 ಕ್ಯಾರೆಟ್‌ ಚಿನ್ನದ ಬೆಲೆ

ಇಂದು 22 ಕ್ಯಾರೆಟ್‌ ಚಿನ್ನದ ಬೆಲೆ 1 ಗ್ರಾಂಗೆ 5,770 ಇದೆ, ನಿನ್ನೆ ಇದರ ಬೆಲೆ 5,775 ರೂ ಇತ್ತು. 8 ಗ್ರಾಂಗೆ 46,160 ರೂ. ಬೆಲೆ ಇದೆ. ನಿನ್ನೆ ಇದರ ಬೆಲೆ 46,200 ರೂ ಇತ್ತು. ಹಾಗೇ 10 ಗ್ರಾಂಗೆ ಇಂದು 57,700 ರೂ. 100 ಗ್ರಾಂಗೆ 5,77,000 ಬೆಲೆ ಫಿಕ್ಸ್‌ ಆಗಿದೆ. ನಿನ್ನೆಗೆ ಹೋಲಿಸಿದರೆ 10 ಗ್ರಾಂಗೆ ಇಂದು ಮತ್ತೆ 50 ರೂ. ಇಳಿಕೆ ಆಗಿದೆ.

24 ಕ್ಯಾರೆಟ್‌ ಚಿನ್ನದ ದರ

ಇಂದು 24 ಕ್ಯಾರೆಟ್‌ ಚಿನ್ನದ ಬೆಲೆ 1 ಗ್ರಾಂಗೆ 6,295 ಇದೆ, ನಿನ್ನೆ ಇದರ ಬೆಲೆ 6,300 ರೂ ಇತ್ತು. 8 ಗ್ರಾಂಗೆ 50,360 ರೂ. ಬೆಲೆ ಇದೆ. ನಿನ್ನೆ ಇದರ ಬೆಲೆ 50,400 ರೂ ಇತ್ತು. ಹಾಗೇ 10 ಗ್ರಾಂಗೆ ಇಂದು 62,950 ರೂ. 100 ಗ್ರಾಂಗೆ 6,29,500 ಬೆಲೆ ಫಿಕ್ಸ್‌ ಆಗಿದೆ.

ಕರ್ನಾಟಕದಲ್ಲಿ ಇಂದಿನ ಚಿನ್ನದ ದರ (10 ಗ್ರಾಂಗೆ)

ಬೆಂಗಳೂರಿನಲ್ಲಿ ಇಂದಿನ ಚಿನ್ನದ ಬೆಲೆ 22 ಕ್ಯಾರೆಟ್‌ ಚಿನ್ನಕ್ಕೆ 57,700 ರೂ. 24 ಕ್ಯಾರೆಟ್‌ಗೆ 62,950 ರೂ. ಬೆಲೆ ನಿಗದಿ ಆಗಿದೆ. ಮಂಗಳೂರು, ಮೈಸೂರು, ದಾವಣಗೆರೆ, ಬಳ್ಳಾರಿ ಸೇರಿದಂತೆ ರಾಜ್ಯದ ಪ್ರಮುಖ ನಗರಗಳಲ್ಲಿ ಇದೇ ಬೆಲೆ ಇರಲಿದೆ. ಆದರೆ ಮಜೂರಿ, ಇತರೆ ಶುಲ್ಕ ಹಾಗೂ ಇನ್ನಿತರ ದರಗಳು ವಿವಿಧ ನಗರಗಳಲ್ಲಿ ವ್ಯತ್ಯಾಸವಿರಬಹುದು.

ಹೊರ ರಾಜ್ಯಗಳಲ್ಲಿ ಚಿನ್ನದ ದರ (10 ಗ್ರಾಂಗೆ)

ಚೆನ್ನೈನಲ್ಲಿ 22 ಕ್ಯಾರೆಟ್‌ಗೆ 58,300 ರೂ. ಹಾಗೂ 24 ಕ್ಯಾರೆಟ್‌ಗೆ 63,600ರೂ. ಇದೆ. ಮುಂಬೈನಲ್ಲಿ 22 ಕ್ಯಾರೆಟ್‌ಗೆ 57,700ರೂ. ಹಾಗೂ 24 ಕ್ಯಾರೆಟ್‌ಗೆ 62,950ರೂ. ದೆಹಲಿಯಲ್ಲಿ 22 ಕ್ಯಾರೆಟ್‌ಗೆ 57,850 ರೂ. ಹಾಗೂ 24 ಕ್ಯಾರೆಟ್‌ಗೆ 63,100 ರೂ. ಕೊಲ್ಕೊತ್ತಾದಲ್ಲಿ 22 ಕ್ಯಾರೆಟ್‌ಗೆ 57,700 ರೂ. ಹಾಗೂ 24 ಕ್ಯಾರೆಟ್‌ಗೆ 62,950 ರೂ. ಹೈದರಾಬಾದ್‌ನಲ್ಲಿ 22 ಕ್ಯಾರೆಟ್‌ಗೆ 57,700 ರೂ. ಹಾಗೂ 24 ಕ್ಯಾರೆಟ್‌ಗೆ 62,950 ರೂ. , ಕೇರಳದಲ್ಲಿ 22 ಕ್ಯಾರೆಟ್‌ಗೆ 57,700 ರೂ. ಹಾಗೂ 24 ಕ್ಯಾರೆಟ್‌ಗೆ 62,950 ರೂ. , ಪುಣೆಯಲ್ಲಿ 22 ಕ್ಯಾರೆಟ್‌ಗೆ 57,700 ರೂ. ಹಾಗೂ 24 ಕ್ಯಾರೆಟ್‌ಗೆ 62,950 ರೂ. , ಅಹಮದಾಬಾದ್‌ನಲ್ಲಿ 22 ಕ್ಯಾರೆಟ್‌ಗೆ 57,750 ರೂ. ಹಾಗೂ 24 ಕ್ಯಾರೆಟ್‌ಗೆ 63,000 ರೂ. ಬೆಲೆ ಇದೆ.

ಬೆಳ್ಳಿ ದರ

ಗುರುವಾರ ಬೆಳ್ಳಿ ಬೆಲೆ 25 ಪೈಸೆ ಇಳಿಕೆಯಾಗಿತ್ತು. ಆದರೆ ಇಂದು ಬೆಳ್ಳಿ ಬೆಲೆ ತಟಸ್ಥವಾಗಿದೆ. ಅದರ ಪ್ರಕಾರ 1 ಗ್ರಾಂ ಬೆಳ್ಳಿಗೆ 72.75 ರೂ. 8 ಗ್ರಾಂ ಬೆಳ್ಳಿಗೆ 582 ರೂ. 10 ಗ್ರಾಂ ಬೆಳ್ಳಿಗೆ 727 ರೂ. 100 ಗ್ರಾಂ ಬೆಳ್ಳಿಗೆ 7,275 ರೂ. ಹಾಗೂ 1 ಕಿಲೋ ಬೆಳ್ಳಿಗೆ 72,750 ರೂ. ನಿಗದಿ ಆಗಿದೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ