logo
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Gold Rate Today: ತಾಪಮಾನ ಏರಿಕೆಯಂತೆ ಹೆಚ್ಚುತ್ತಿದೆ ಚಿನ್ನ, ಬೆಳ್ಳಿ ದರ; ಇಂದು ಬೆಳ್ಳಿ ಕೆಜಿಗೆ 1500ರೂ ಹೆಚ್ಚಳ

Gold Rate Today: ತಾಪಮಾನ ಏರಿಕೆಯಂತೆ ಹೆಚ್ಚುತ್ತಿದೆ ಚಿನ್ನ, ಬೆಳ್ಳಿ ದರ; ಇಂದು ಬೆಳ್ಳಿ ಕೆಜಿಗೆ 1500ರೂ ಹೆಚ್ಚಳ

Reshma HT Kannada

May 08, 2024 06:00 AM IST

ತಾಪಮಾನ ಏರಿಕೆಯಂತೆಯೇ ಹೆಚ್ಚುತ್ತಿದೆ ಚಿನ್ನ, ಬೆಳ್ಳಿ ದರ; ಇಂದು ಬೆಳ್ಳಿ ಕೆಜಿಗೆ 1500ರೂ ಹೆಚ್ಚಳ

    • ದೇಶದಲ್ಲಿ ದಿನೇ ದಿನೇ ತಾಪಮಾನ ಏರಿಕೆಯಾಗುತ್ತಿರುವಂತೆ ಚಿನ್ನ, ಬೆಳ್ಳಿ ದರ ಕೂಡ ಹೆಚ್ಚಳವಾಗುತ್ತಿದೆ. ಇಂದು ಚಿನ್ನ 10 ಗ್ರಾಂ ಮೇಲೆ 300 ರೂ ಹೆಚ್ಚಾದ್ರೆ, ಬೆಳ್ಳಿ ಕೆಜಿ ಮೇಲೆ 1500 ರೂ ಏರಿಕೆಯಾಗಿದೆ. ಕರ್ನಾಟಕ ಸೇರಿದಂತೆ ದೇಶದ ವಿವಿಧ ಭಾಗಗಳಲ್ಲಿ ಚಿನ್ನ, ಬೆಳ್ಳಿ ದರ ಎಷ್ಟಿದೆ ಗಮನಿಸಿ.
ತಾಪಮಾನ ಏರಿಕೆಯಂತೆಯೇ ಹೆಚ್ಚುತ್ತಿದೆ ಚಿನ್ನ, ಬೆಳ್ಳಿ ದರ; ಇಂದು ಬೆಳ್ಳಿ ಕೆಜಿಗೆ 1500ರೂ ಹೆಚ್ಚಳ
ತಾಪಮಾನ ಏರಿಕೆಯಂತೆಯೇ ಹೆಚ್ಚುತ್ತಿದೆ ಚಿನ್ನ, ಬೆಳ್ಳಿ ದರ; ಇಂದು ಬೆಳ್ಳಿ ಕೆಜಿಗೆ 1500ರೂ ಹೆಚ್ಚಳ

ಬೆಂಗಳೂರು: ಏಪ್ರಿಲ್‌ನಿಂದ ಮೇ ತಿಂಗಳ ಆರಂಭದವರೆಗೆ ಸಾಲು ಸಾಲು ಫಂಕ್ಷನ್‌ಗಳು ನಡೆದಿದ್ದವು. ಇದೀಗ ಫಂಕ್ಷನ್‌ಗಳು ಕಡಿಮೆಯಾಗಿದೆ. ಹಸ್ತ ಇರುವ ಕಾರಣ ಮದುವೆ ಮುಂಜಿಯಂತಹ ಕಾರ್ಯಕ್ರಮಗಳಿಗೆ ಸದ್ಯ ಬ್ರೇಕ್‌ ಸಿಕ್ಕಿದೆ. ಇನ್ನಾದ್ರೂ ಚಿನ್ನ, ಬೆಳ್ಳಿ ದರ ಇಳಿಕೆಯಾಗಬಹುದು ಎಂದು ನೀವು ಯೋಚಿಸಿದ್ರೆ ಖಂಡಿತ ನಿಮಗೆ ನಿರಾಸೆ ಕಾಡುತ್ತದೆ. ಯಾಕೆಂದರೆ ಆಭರಣ ಬೆಲೆ ತಗ್ಗುತ್ತಿಲ್ಲ. ಇಂದು ದೇಶದಲ್ಲಿ ಚಿನ್ನ ಹಾಗೂ ಬೆಳ್ಳಿ ದರ ಹೆಚ್ಚಾಗಿದೆ.

ನಿಮ್ಮ ನಗರದಲ್ಲಿ ಇಂದಿನ ಚಿನ್ನದ ಧಾರಣೆ ಎಷ್ಟಿದೆ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ
ಟ್ರೆಂಡಿಂಗ್​ ಸುದ್ದಿ

ಪತಂಜಲಿಯ ಸೋನ್ ಪಾಪಡಿ ಗುಣಮಟ್ಟ ಪರೀಕ್ಷೆ ಫೇಲು; ಬಾಬಾ ರಾಮ್‌ದೇವ್ ಕಂಪನಿಯ ಇಬ್ಬರು ಅಧಿಕಾರಿಗಳ ಬಂಧನ

ತಿರುಮಲ ತಿರುಪತಿ ಶ್ರೀವಾರಿ ಆರ್ಜಿತ ಸೇವಾ ದರ್ಶನ ಟಿಕೆಟ್ ಬಿಡುಗಡೆ, ಆಗಸ್ಟ್‌ ತಿಂಗಳ ಕೋಟಾ ಹಂಚಿಕೆಗೆ ಅರ್ಜಿ ಸಲ್ಲಿಕೆ ಶುರು

Gold Rate Today: ತುಸು ಇಳಿಕೆಯ ಬೆನ್ನಲ್ಲೇ ಭಾನುವಾರ ದುಪ್ಪಟ್ಟು ಏರಿಕೆಯಾಯ್ತು ಬಂಗಾರದ ಬೆಲೆ; ಇಂದು ಬೆಳ್ಳಿ ದರವೂ ಹೆಚ್ಚಳ

ಫೋರ್ಬ್ಸ್‌ 30 ಅಂಡರ್ 30 ಏಷ್ಯಾ ಲಿಸ್ಟ್‌ನಲ್ಲಿ ಐವರು ಬೆಂಗಳೂರಿಗರು, ಯುವ ಸಾಧಕರ ವಿವರ ಹೀಗಿದೆ

22 ಕ್ಯಾರೆಟ್‌ ಚಿನ್ನದ ಬೆಲೆ

ಇಂದು 1 ಗ್ರಾಂ ಚಿನ್ನಕ್ಕೆ 6,635 ರೂ. ಇದೆ. ನಿನ್ನೆ 6,605 ರೂ ಇದ್ದು, ಈ ದರಕ್ಕೆ ಹೋಲಿಸಿದರೆ 30 ರೂ ಏರಿಕೆಯಾಗಿದೆ. 8 ಗ್ರಾಂ ಚಿನ್ನ ಖರೀದಿ ಮಾಡುವುದಾದರೆ 53,080 ರೂ. ನೀಡಬೇಕು. ನಿನ್ನೆ 52,840 ರೂ ಇದ್ದು, ನಿನ್ನೆ ದರಕ್ಕೆ ಹೋಲಿಸಿದರೆ ಇಂದು 240 ರೂ. ಹೆಚ್ಚಾಗಿದೆ. 10 ಗ್ರಾಂ ಚಿನ್ನಕ್ಕೆ 66,350 ರೂ ಇದೆ. ನಿನ್ನೆ 66,050 ರೂ. ಇತ್ತು. ಈ ದರಕ್ಕೆ ಹೋಲಿಸಿದರೆ 300 ರೂ. ಏರಿಕೆಯಾಗಿದೆ. 100 ಗ್ರಾಂ ಚಿನ್ನ ಖರೀದಿ ಮಾಡುವುದಾದರೆ 6,63,500 ರೂ. ನೀಡಬೇಕು. ನಿನ್ನೆ 6,60,500 ರೂ. ಇದ್ದು ಈ ದರಕ್ಕೆ ಹೋಲಿಸಿದರೆ 3,000 ರೂ. ಏರಿಕೆಯಾಗಿದೆ.

24 ಕ್ಯಾರೆಟ್‌ ಚಿನ್ನದ ಬೆಲೆ

24 ಕ್ಯಾರೆಟ್‌ ಚಿನ್ನಕ್ಕೆ 1 ಗ್ರಾಂಗೆ 7,238 ರೂ. ಇದೆ. ನಿನ್ನೆ 7,205 ರೂ. ಇದು ಈ ದರಕ್ಕೆ ಹೋಲಿಸಿದರೆ 33 ರೂ ಏರಿಕೆಯಾಗಿದೆ. 8 ಗ್ರಾಂ ಚಿನ್ನ ಖರೀದಿ ಮಾಡುವುದಾದರೆ 57,904 ರೂ. ನೀಡಬೇಕು. ನಿನ್ನೆ 57,640 ರೂ. ಇದ್ದು ಈ ದರಕ್ಕೆ ಹೋಲಿಸಿದರೆ 264 ರೂ. ಹೆಚ್ಚಾಗಿದೆ. ಇಂದು 10 ಗ್ರಾಂ ಚಿನ್ನಕ್ಕೆ 72,380 ನೀಡಬೇಕು. ನಿನ್ನೆ 70,050 ರೂ. ಇದ್ದು, ಈ ದರಕ್ಕೆ ಹೋಲಿಸಿದರೆ 330 ರೂ ಏರಿಕೆಯಾಗಿದೆ. 100 ಗ್ರಾಂ ಚಿನ್ನದ ಬೆಲೆ 7,23,800 ರೂ. ಇದೆ. ನಿನ್ನೆ 7,20,500 ರೂ ಇತ್ತು. ಈ ದರಕ್ಕೆ ಹೋಲಿಸಿದರೆ 3,300 ರೂ ಹೆಚ್ಚಾಗಿದೆ.

ಕರ್ನಾಟಕದಲ್ಲಿ ಚಿನ್ನದ ಬೆಲೆ (10 ಗ್ರಾಂ)

ಬೆಂಗಳೂರು ಸೇರಿದಂತೆ ರಾಜ್ಯದ ಪ್ರಮುಖ ನಗರದಲ್ಲಿ ಇಂದು ಚಿನ್ನದ ಬೆಲೆ 22 ಕ್ಯಾರೆಟ್‌ಗೆ 66,350 ರೂ. ಹಾಗೂ 24 ಕ್ಯಾರೆಟ್‌ ಚಿನ್ನದ ಬೆಲೆ 72,380 ರೂ. ಇದೆ. ಮೈಸೂರು, ಮಂಗಳೂರು, ಬಳ್ಳಾರಿ, ದಾವಣಗೆರೆ ಸೇರಿದಂತೆ ರಾಜ್ಯದ ಪ್ರಮುಖ ನಗರಗಳಲ್ಲಿ ಇದೇ ಬೆಲೆ ಇರಲಿದೆ. ಆದರೆ ಮಜೂರಿ, ಇತರೆ ಶುಲ್ಕ ಹಾಗೂ ಇನ್ನಿತರ ದರಗಳು ವಿವಿಧ ನಗರಗಳಲ್ಲಿ ವ್ಯತ್ಯಾಸವಿರಬಹುದು.

ಹೊರ ರಾಜ್ಯಗಳಲ್ಲಿ ಚಿನ್ನದ ದರ (10 ಗ್ರಾಂ)

ಚೆನ್ನೈನಲ್ಲಿ 22 ಕ್ಯಾರೆಟ್‌ ಚಿನ್ನದ ಬೆಲೆ 66,400 ರೂ. 24 ಕ್ಯಾರೆಟ್‌ಗೆ 72,430 ರೂ. ಇದೆ. ಮುಂಬೈನಲ್ಲಿ 22 ಕ್ಯಾರೆಟ್‌ ಚಿನ್ನದ ಬೆಲೆ 66,350 ರೂ. 24 ಕ್ಯಾರೆಟ್‌ಗೆ 72,380 ರೂ. ಇದೆ. ದೆಹಲಿಯಲ್ಲಿ 22 ಕ್ಯಾರೆಟ್‌ ಚಿನ್ನದ ಬೆಲೆ 66,500 ರೂ. 24 ಕ್ಯಾರೆಟ್‌ಗೆ 72,530 ರೂ. ಇದೆ. ಕೊಲ್ಕತ್ತಾದಲ್ಲಿ 22 ಕ್ಯಾರೆಟ್‌ ಚಿನ್ನದ ಬೆಲೆ 66,350 ರೂ. 24 ಕ್ಯಾರೆಟ್‌ಗೆ 72,380 ರೂ. ಇದೆ. ಹೈದರಾಬಾದ್‌ನಲ್ಲಿ 22 ಕ್ಯಾರೆಟ್‌ ಚಿನ್ನದ ಬೆಲೆ 66,350 ರೂ. ಇದ್ದರೆ, 24 ಕ್ಯಾರೆಟ್‌ಗೆ 72,380 ರೂ. ಇದೆ. ಕೇರಳದಲ್ಲಿ 22 ಕ್ಯಾರೆಟ್‌ ಚಿನ್ನದ ಬೆಲೆ 66,350 ರೂ. 24 ಕ್ಯಾರೆಟ್‌ಗೆ 72,380 ರೂ. ಆಗಿದೆ.

ಬೆಳ್ಳಿ ದರ

ಇಂದು ಬೆಳ್ಳಿ ದರ ಏರಿಕೆಯಾಗಿದೆ. ಒಂದು ಗ್ರಾಂ ಬೆಳ್ಳಿಗೆ 84 ರೂ. ಇದೆ. 8 ಗ್ರಾಂಗೆ 672 ರೂ ಇದ್ದರೆ, 10 ಗ್ರಾಂಗೆ 840 ರೂ. ಇದೆ. 100 ಗ್ರಾಂಗೆ 8,400 ರೂ. ಹಾಗೂ 1 ಕಿಲೋಗೆ 84,000 ರೂ. ಬೆಲೆ ನಿಗದಿ ಆಗಿದೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ