logo
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Itr Extention: ಆದಾಯ ತೆರಿಗೆ ರಿಟರ್ನ್‌ ಸಲ್ಲಿಕೆ ಅವಧಿ ಮುಕ್ತಾಯ, 6.7 ಕೋಟಿ ಜನರಿಂದ ಸಲ್ಲಿಕೆ, ಐಟಿಆರ್‌ ಫೈಲಿಂಗ್‌ ದಿನಾಂಕ ವಿಸ್ತರಣೆಯಿಲ್ಲ

ITR Extention: ಆದಾಯ ತೆರಿಗೆ ರಿಟರ್ನ್‌ ಸಲ್ಲಿಕೆ ಅವಧಿ ಮುಕ್ತಾಯ, 6.7 ಕೋಟಿ ಜನರಿಂದ ಸಲ್ಲಿಕೆ, ಐಟಿಆರ್‌ ಫೈಲಿಂಗ್‌ ದಿನಾಂಕ ವಿಸ್ತರಣೆಯಿಲ್ಲ

Praveen Chandra B HT Kannada

Aug 01, 2023 10:16 AM IST

ಐಟಿಆರ್‌ ಫೈಲಿಂಗ್‌ ದಿನಾಂಕ ವಿಸ್ತರಣೆಯಿಲ್ಲ (iStockphoto)

    • Business News Income Tax Return Date Extension: ಆದಾಯ ತೆರಿಗೆ ಇಲಾಖೆಯ ವೆಬ್‌ಸೈಟ್‌ನಲ್ಲಿ (incometax.gov.in) ದಂಡರಹಿತವಾಗಿ ಐಟಿ ರಿಟರ್ನ್‌ ಸಲ್ಲಿಸುವ ಅವಧಿ ಮುಕ್ತಾಯಗೊಂಡಿದೆ. ಈ ಬಾರಿ ಐಟಿ ರಿಟರ್ನ್‌ ಸಲ್ಲಿಕೆ ಅವಧಿ ವಿಸ್ತರಣೆ ಮಾಡುವುದಿಲ್ಲ ಎಂದು ಹಣಕಾಸು ಇಲಾಖೆ ತಿಳಿಸಿದೆ. ಇನ್ನೂ ಐಟಿಆರ್‌ ಫೈಲ್‌ ಮಾಡದೆ ಇರುವವರು ಏನು ಮಾಡಬಹುದು?
ಐಟಿಆರ್‌ ಫೈಲಿಂಗ್‌ ದಿನಾಂಕ ವಿಸ್ತರಣೆಯಿಲ್ಲ  (iStockphoto)
ಐಟಿಆರ್‌ ಫೈಲಿಂಗ್‌ ದಿನಾಂಕ ವಿಸ್ತರಣೆಯಿಲ್ಲ (iStockphoto) (MINT_PRINT)

ಆದಾಯ ತೆರಿಗೆ ಇಲಾಖೆಯ ವೆಬ್‌ಸೈಟ್‌ನಲ್ಲಿ (incometax.gov.in) ದಂಡರಹಿತವಾಗಿ ಐಟಿ ರಿಟರ್ನ್‌ ಸಲ್ಲಿಸುವ ಅವಧಿ ಮುಕ್ತಾಯಗೊಂಡಿದೆ. ಈ ಬಾರಿ ಐಟಿ ರಿಟರ್ನ್‌ ಸಲ್ಲಿಕೆ ಅವಧಿ ವಿಸ್ತರಣೆ ಮಾಡುವುದಿಲ್ಲ ಎಂದು ಹಣಕಾಸು ಇಲಾಖೆ ತಿಳಿಸಿದೆ. ಜುಲೈ 31ರ ವೇಳೆಗೆ 6.50 ಕೋಟಿ ಜನರು ಐಟಿಆರ್‌ ಸಲ್ಲಿಸಿದ್ದಾರೆ. ಇವರಲ್ಲಿ ಕೇವಲ ನಿನ್ನೆ ಮಾತ್ರ (ಸಂಜೆ 6 ಗಂಟೆಯವರೆಗೆ) 36.91 ಲಕ್ಷ ಜನರು ಐಟಿಆರ್‌ ಸಲ್ಲಿಸಿದ್ದರು. "ಸೋಮವಾರ ಸಂಜೆ 6 ಗಂಟೆಯವರೆಗೆ 1.78 ಕೋಟಿಗೂ ಹೆಚ್ಚು ಜನರು ಇಪೋರ್ಟಲ್‌ಗೆ ಯಶಸ್ವಿಯಾಗಿ ಲಾಆಗಿನ್‌ ಆಗಿದ್ದಾರೆ. ಐಟಿಆರ್‌ ಸಲ್ಲಿಸಲು ಅನುಕೂಲಕವಾಗುವಂತೆ ನಮ್ಮ ಸಹಾಯವಾಣಿ ಸಂಖ್ಯೆಯು ದಿನದ 24 ಗಂಟೆಯೂ ಕಾರ್ಯನಿರ್ವಹಿಸುತ್ತಿತ್ತು. ನಾವು ಕಾಲ್‌ ಮಾಡಿದವರಿಗೆ, ಲೈವ್‌ ಚಾಟ್‌ನಲ್ಲಿ ಪ್ರಶ್ನೆ ಕೇಳಿದವರಿಗೆ ಉತ್ತರಿಸಿದ್ದೇವೆ" ಎಂದು ಹಣಕಾಸು ಇಲಾಖೆ ಟ್ವೀಟ್‌ ಮಾಡಿದೆ.

ಟ್ರೆಂಡಿಂಗ್​ ಸುದ್ದಿ

Gold Rate Today: ವಾರಾಂತ್ಯದಲ್ಲಿ ತುಸು ಇಳಿಕೆಯಾದ ಹಳದಿ ಲೋಹದ ಬೆಲೆ; ಶನಿವಾರ ಬೆಳ್ಳಿ ದರ ತಟಸ್ಥ

Gold Rate Today: ಶುಕ್ರವಾರವೂ ಏರಿಕೆಯಾದ ಚಿನ್ನ, ಬೆಳ್ಳಿ ದರ; ದೇಶದಲ್ಲಿಂದು ಆಭರಣ ದರ ಎಷ್ಟಾಗಿದೆ ಗಮನಿಸಿ

ಇಪಿಎಫ್‌ಒ; ಈ 3 ಕಾರಣ ನೀಡಿದ್ರೆ ಇಪಿಎಫ್‌ ಹಣ ಬೇಗ ಹಿಂಪಡೆಯಬಹುದು, ಹಂತ ಹಂತದ ಮಾರ್ಗದರ್ಶಿ ಇಲ್ಲಿದೆ ನೋಡಿ

ಗುವಾಹಟಿ ಬೀದಿಯಲ್ಲಿ ಸೋಷಿಯಲ್ ಮೀಡಿಯಾ ಪ್ರಭಾವಿಯ ಮಂಜುಲಿಕಾ ನೃತ್ಯನಾಟಕ, ದಂಗಾಗಿ ನೋಡುತ್ತ ನಿಂತ ಜನ-ವೈರಲ್ ವಿಡಿಯೋ

ನಿನ್ನೆ ಒಂದೇ ದಿನ ಅತ್ಯಧಿಕ ಜನರು ಐಟಿಆರ್‌ ಫೈಲ್‌ ಮಾಡಲು ಆದಾಯ ತೆರಿಗೆ ಇಲಾಖೆಯ ವೆಬ್‌ಸೈಟ್‌ಗೆ ದಾಂಗುಡಿ ಇಟ್ಟಿದ್ದಾರೆ. ಇದರಿಂದ ಸಾಕಷ್ಟು ಜನರು ವೆಬ್‌ಸೈಟ್‌ನ ತಾಂತ್ರಿಕ ತೊಂದರೆಗಳನ್ನು ಅನುಭವಿಸಿದ್ದರು. ಸಾಕಷ್ಟು ಜನರಿಗೆ ಐಟಿಆರ್‌ ಫೈಲ್‌ ಮಾಡಲು ಸಾಧ್ಯವಾಗಿರಲಿಲ್ಲ. ಕೊನೆಯ ದಿನದವರೆಗೆ ಐಟಿಆರ್‌ ಫೈಲ್‌ ಮಾಡಲು ಕಾಯಬೇಡಿ ಎಂದು ತಿಳಿಸಿದ್ದರೂ ಹಲವು ಲಕ್ಷ ಜನರು ಕೊನೆಯ ದಿನದಂದೇ ಆದಾಯ ತೆರಿಗೆ ರಿಟರ್ನ್‌ ಸಲ್ಲಿಸಲು ಬಂದಿದ್ದರು. ಇದರಿಂದ ವೆಬ್‌ಸೈಟ್‌ನಲ್ಲಿ ಕೆಲವರಿಗೆ ತಾಂತ್ರಿಕ ತೊಂದರೆಗಳು ಕಾಣಿಸಿಕೊಂಡಿತ್ತು. ಸೋಷಿಯಲ್‌ ಮೀಡಿಯಾದಲ್ಲಿ ಈ ಕುರಿತು ಸಾಕಷ್ಟು ಜನರು ತಮ್ಮ ಸಂಕಷ್ಟಗಳನ್ನು ತೋಡಿಕೊಂಡಿದ್ದರು.

ಐಟಿಆರ್‌ ಸಲ್ಲಿಸದೆ ಇರುವವರು ಏನು ಮಾಡಬಹುದು?

ತಾಂತ್ರಿಕ ದೋಷ ಅಥವಾ ಇತರೆ ಕಾರಣದಿಂದ ಐಟಿಆರ್‌ ಸಲ್ಲಿಸದೆ ಇರುವವರು ಇಂದಿನಿಂದ ದಂಡ ಸಹಿತವಾಗಿ ಐಟಿಆರ್‌ ಫೈಲ್‌ ಮಾಡಬಹುದು. ಸೆಕ್ಷನ್‌ 139ರ ಪ್ರಕಾರ ಐಟಿಆರ್‌ ಸಲ್ಲಿಸದೆ ಇರುವವರಿಗೆ ಯಾವುದೇ ದಂಡವಿಲ್ಲ. ಆದರೆ, ಡೆಡ್‌ಲೈನ್‌ ಮುಗಿದ ಬಳಿಕ ಐಟಿಆರ್‌ ಸಲ್ಲಿಸಿದವರಿಗೆ ಸೆಕ್ಷನ್‌ 234ಎಫ್‌ ಅನ್ವಯ 5 ಸಾವಿರ ರೂಪಾಯಿವರೆಗೆ ದಂಡ ಇರುತ್ತದೆ. ಐಟಿಆರ್‌ ಸಲ್ಲಿಸದೆ ಇರುವವರು ಸೆಕ್ಷನ್‌ 139ರ 8ಎಯಡಿ ರಿಟರ್ನ್‌ ಅಪ್‌ಡೇಟ್‌ ಮಾಡಬೇಕು. ಈ ರೀತಿ ಅಪ್‌ಡೇಟೆಡ್‌ ರಿಟರ್ನ್‌ ಸಲ್ಲಿಸಲು 24 ತಿಂಗಳ ಅವಕಾಶವಿರುತ್ತದೆ. ಡೆಡ್‌ಲೈನ್‌ ಬಳಿಕದ ಸಮಯಕ್ಕೆ ನೀವು ದಂಡ ಪಾವತಿಸಬೇಕಾಗುತ್ತದೆ. ನಿಮ್ಮ ಆದಾಯ ಎಲ್ಲಾದರೂ ಐದು ಲಕ್ಷ ರೂಪಾಯಿಗಿಂತ ಹೆಚ್ಚು ಇಲ್ಲದಿದ್ದರೆ ನೀವು 1 ಸಾವಿರ ರೂಪಾಯಿ ದಂಡ ಕಟ್ಟಿದರೆ ಸಾಕು. ತೆರಿಗೆ ತಪ್ಪಿಸುವುದು ಅಥವಾ ಮೋಸ ಮಾಡುವ ಪ್ರಕರಣದಲ್ಲಿ ನೀವು ಸಿಕ್ಕಿ ಬಿದ್ದರೆ ದಂಡ ಮತ್ತು ಜೈಲು ಶಿಕ್ಷೆಯೂ ಇರುತ್ತದೆ. ಹೀಗಾಗಿ, ಪ್ರತಿವರ್ಷ ಐಟಿಆರ್‌ ಫೈಲ್‌ ಮಾಡಲು ಮರೆಯಬೇಡಿ. ನಾಳೆಯಿಂದ ಡಿಸೆಂಬರ್‌ 31ರವರೆಗೆ ದಂಡ ಪಾವತಿಯೊಂದಿಗೆ ಐಟಿಆರ್‌ ಸಲ್ಲಿಸಲು ಅವಕಾಶವಿದೆ.

ಐಟಿಆರ್‌ ಸಲ್ಲಿಕೆ ಅವಧಿ ವಿಸ್ತರಣೆಗೆ ಒತ್ತಾಯ

ಆದಾಯ ತೆರಿಗೆ ರಿಟರ್ನ್‌ ಸಲ್ಲಿಸುವ ಅವಧಿ ವಿಸ್ತರಿಸುವುದಿಲ್ಲ ಎಂದು ಹಣಕಾಸು ಈವರೆಗೆ ತಿಳಿಸಿದೆ. ನಿನ್ನೆ ತಾಂತ್ರಿಕ ದೋಷಗಳಿಂದ ಐಟಿಆರ್‌ ಸಲ್ಲಿಸಲಾಗದೆ ಇರುವವರು ಟ್ವಿಟ್ಟರ್‌ನಲ್ಲಿ "ಐಟಿಆರ್‌ ಸಲ್ಲಿಕೆ ಅವಧಿ ವಿಸ್ತರಿಸಿ" ಎಂದು ಆಗ್ರಹಿಸಿದ್ದರು. "ವೆಬ್‌ಸೈಟ್‌ ಸ್ಲೋ ಇದೆ, ರಿಟರ್ನ್‌ ಸಲ್ಲಿಸಲಾಗುತ್ತಿಲ್ಲ" "ವೆಬ್‌ಸೈಟ್‌ ಎರರ್‌ ಬರುತ್ತಿದೆ" "ವೆಬ್‌ಸೈಟ್‌ನಲ್ಲಿ ದೋಷವಿದೆ" "ದಂಡ ಶುಲ್ಕವಿಲ್ಲದೆ ಐಟಿಆರ್‌ ಸಲ್ಲಿಸಲು ಇನ್ನಷ್ಟು ದಿನ ಅವಕಾಶ ನೀಡಿ" ಎಂದೆಲ್ಲ ಆಗ್ರಹಿಸಿದ್ದರು.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ