logo
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Udgam Portal Link: ನಿಮ್ಮ ದುಡ್ಡು ಬ್ಯಾಂಕ್‌ನವರ ಪಾಲಾಗದಿರಲಿ; ಹಣ ಇಟ್ಟು ಮರೆತವರಿಗೆಂದು ಪೋರ್ಟಲ್ ಆರಂಭಿಸಿದ Rbi

UDGAM portal link: ನಿಮ್ಮ ದುಡ್ಡು ಬ್ಯಾಂಕ್‌ನವರ ಪಾಲಾಗದಿರಲಿ; ಹಣ ಇಟ್ಟು ಮರೆತವರಿಗೆಂದು ಪೋರ್ಟಲ್ ಆರಂಭಿಸಿದ RBI

Umesh Kumar S HT Kannada

Aug 18, 2023 07:57 PM IST

ಬಹು ಬ್ಯಾಂಕುಗಳಲ್ಲಿರುವ ತಮ್ಮ ಕ್ಲೈಮ್ ಮಾಡದ ಠೇವಣಿಗಳನ್ನು ಸುಲಭವಾಗಿ ಪತ್ತೆಹಚ್ಚಲು, ಟ್ರ್ಯಾಕ್ ಮಾಡುವುದಕ್ಕೆ ಯುಡಿಜಿಎಎಂ ಪೋರ್ಟಲ್‍ ಅನ್ನು ಭಾರತೀಯ ರಿಸರ್ವ್ ಬ್ಯಾಂಕ್ ಆರಂಭಿಸಿದೆ.

    • UDGAM RBI portal link: ಬಹು ಬ್ಯಾಂಕುಗಳಲ್ಲಿರುವ ತಮ್ಮ ಕ್ಲೈಮ್ ಮಾಡದ ಠೇವಣಿಗಳನ್ನು ಒಂದೆ ವೇದಿಕೆಯಲ್ಲಿ ಸುಲಭವಾಗಿ ಪತ್ತೆಹಚ್ಚಲು, ಟ್ರ್ಯಾಕ್ ಮಾಡುವುದಕ್ಕೆ ಸಾರ್ವಜನಿಕರಿಗೆ ಅನುಕೂಲವಾಗುವಂತೆ ಯುಡಿಜಿಎಎಂ ಪೋರ್ಟಲ್‍ ಅನ್ನು  ಭಾರತೀಯ ರಿಸರ್ವ್ ಬ್ಯಾಂಕ್ ಆರಂಭಿಸಿದೆ.
ಬಹು ಬ್ಯಾಂಕುಗಳಲ್ಲಿರುವ ತಮ್ಮ ಕ್ಲೈಮ್ ಮಾಡದ ಠೇವಣಿಗಳನ್ನು ಸುಲಭವಾಗಿ ಪತ್ತೆಹಚ್ಚಲು, ಟ್ರ್ಯಾಕ್ ಮಾಡುವುದಕ್ಕೆ ಯುಡಿಜಿಎಎಂ ಪೋರ್ಟಲ್‍ ಅನ್ನು  ಭಾರತೀಯ ರಿಸರ್ವ್ ಬ್ಯಾಂಕ್ ಆರಂಭಿಸಿದೆ.
ಬಹು ಬ್ಯಾಂಕುಗಳಲ್ಲಿರುವ ತಮ್ಮ ಕ್ಲೈಮ್ ಮಾಡದ ಠೇವಣಿಗಳನ್ನು ಸುಲಭವಾಗಿ ಪತ್ತೆಹಚ್ಚಲು, ಟ್ರ್ಯಾಕ್ ಮಾಡುವುದಕ್ಕೆ ಯುಡಿಜಿಎಎಂ ಪೋರ್ಟಲ್‍ ಅನ್ನು ಭಾರತೀಯ ರಿಸರ್ವ್ ಬ್ಯಾಂಕ್ ಆರಂಭಿಸಿದೆ. (REUTERS)

ಭಾರತೀಯ ರಿಸರ್ವ್ ಬ್ಯಾಂಕ್ ಕೇಂದ್ರೀಕೃತ ವೆಬ್ ಪೋರ್ಟಲ್ ಯುಡಿಜಿಎಎಂ (ಅನ್‍ಕ್ಲೈಮ್ಡ್ ಡೆಪಾಸಿಟ್ಸ್ – ಗೇಟ್‍ವೇ ಟು ಆಕ್ಸೆಸ್‍ ಇನ್‍ಫಾರ್ಮೇಶನ್) ಅನ್ನು ಪ್ರಾರಂಭಿಸುವುದಾಗಿ ಹೇಳಿದೆ. ಇದು ಬ್ಯಾಂಕ್‌ಗಳಲ್ಲಿ ಕ್ಲೈಮ್ ಮಾಡದ ಠೇವಣಿಗಳ ಸಮಸ್ಯೆಯನ್ನು ಪರಿಹರಿಸುವಲ್ಲಿ ಮಹತ್ವದ ಹೆಜ್ಜೆಯಾಗಿ ಗುರುತಿಸಲ್ಪಟ್ಟಿದೆ.

ಟ್ರೆಂಡಿಂಗ್​ ಸುದ್ದಿ

Gold Rate Today: ಶುಕ್ರವಾರವೂ ಏರಿಕೆಯಾದ ಚಿನ್ನ, ಬೆಳ್ಳಿ ದರ; ದೇಶದಲ್ಲಿಂದು ಆಭರಣ ದರ ಎಷ್ಟಾಗಿದೆ ಗಮನಿಸಿ

ಇಪಿಎಫ್‌ಒ; ಈ 3 ಕಾರಣ ನೀಡಿದ್ರೆ ಇಪಿಎಫ್‌ ಹಣ ಬೇಗ ಹಿಂಪಡೆಯಬಹುದು, ಹಂತ ಹಂತದ ಮಾರ್ಗದರ್ಶಿ ಇಲ್ಲಿದೆ ನೋಡಿ

ಗುವಾಹಟಿ ಬೀದಿಯಲ್ಲಿ ಸೋಷಿಯಲ್ ಮೀಡಿಯಾ ಪ್ರಭಾವಿಯ ಮಂಜುಲಿಕಾ ನೃತ್ಯನಾಟಕ, ದಂಗಾಗಿ ನೋಡುತ್ತ ನಿಂತ ಜನ-ವೈರಲ್ ವಿಡಿಯೋ

Gold Rate Today: ಬಂಗಾರ ಪ್ರಿಯರಿಗೆ ಮತ್ತೆ ನಿರಾಸೆ; ತುಸು ಕಡಿಮೆಯಾಗಿ ಪುನಃ ಹೆಚ್ಚಾದ ಚಿನ್ನದ ದರ, ಬೆಳ್ಳಿ ಬೆಲೆಯೂ ಏರಿಕೆ

ಬಹು ಬ್ಯಾಂಕುಗಳಲ್ಲಿರುವ ತಮ್ಮ ಕ್ಲೈಮ್ ಮಾಡದ ಠೇವಣಿಗಳನ್ನು ಒಂದೆ ವೇದಿಕೆಯಲ್ಲಿ ಸುಲಭವಾಗಿ ಪತ್ತೆಹಚ್ಚಲು, ಟ್ರ್ಯಾಕ್ ಮಾಡುವುದಕ್ಕೆ ಸಾರ್ವಜನಿಕರಿಗೆ ಅನುಕೂಲವಾಗುವಂತೆ ಭಾರತೀಯ ರಿಸರ್ವ್ ಬ್ಯಾಂಕ್ ಈ ವೆಬ್‍ ಪೋರ್ಟಲ್ ಅನ್ನು ಆರಂಭಿಸಿದೆ.

ಕ್ಲೈಮ್ ಮಾಡದ ಠೇವಣಿಗಳು ಎಂದರೆ

ಅನ್‍ಕ್ಲೈಮ್ಡ್ ಡೆಪಾಸಿಟ್ಸ್ ಅಥವಾ ಕ್ಲೈಮ್ ಮಾಡದ ಠೇವಣಿ ಎಂದರೆ ಉಳಿತಾಯ ಅಥವಾ ಚಾಲ್ತಿ ಖಾತೆಗಳು 10 ವರ್ಷದಿಂದ ಬಳಕೆಯಲ್ಲಿ ಇಲ್ಲದೇ ಇದ್ದರೆ ಮತ್ತು ಅವಧಿ ಠೇವಣಿಗಳು ಮೆಚುರಿಟಿ ದಿನಾಂಕದ ಬಳಿಕ 10 ವರ್ಷದ ಒಳಗೆ ಖಾತೆದಾರರಿಗೆ ಪಾವತಿ ಆಗಿರದೇ ಇದ್ದರೆ ಅಂಥವು ಎಂದು ಭಾರತೀಯ ರಿಸರ್ವ್ ಬ್ಯಾಂಕ್ ವಿವರಿಸಿದೆ.

ಯುಡಿಜಿಎಎಂ ಪೋರ್ಟಲ್‍ನಲ್ಲಿ ಕ್ಲೈಮ್ ಮಾಡದ ಠೇವಣಿ ಹುಡುಕಲು ರಿಜಿಸ್ಟರ್ ಮಾಡುವುದು ಹೇಗೆ

ಹಂತ 1- ಯುಡಿಜಿಎಎಂ ವೆಬ್‍ಸೈಟ್‍ಗೆ (https://udgam.rbi.org.in/unclaimed-deposits/#/register) ಭೇಟಿ ನೀಡಿ.

ಹಂತ 2 – ನಿಮ್ಮ ಫೋನ್ ನಂಬರ್, ನಿಮ್ಮ ಹೆಸರನ್ನು ನಮೂದಿಸಿ.

ಹಂತ 3 – ಪಾಸ್‍ವರ್ಡ್ ಕೊಡಿ ಮತ್ರತು ಕ್ಯಾಪ್ಚಾ ಕೋಡ್‍ ನಮೂದಿಸಿ.

ಹಂತ 4 – ಚೆಕ್ ಬಾಕ್ಸ್ ಟಿಕ್ ಮಾಡಿ ಮತ್ತು ನೆಕ್ಸ್ಟ್ ಅನ್ನು ಕ್ಲಿಕ್ ಮಾಡಿ. ಒಟಿಪಿ ನಮೂದಿಸಿ ವೆರಿಫೈ ಮಾಡಿಕೊಳ್ಳಿ

ಯುಡಿಜಿಎಎಂ ಪೋರ್ಟಲ್‍ನಲ್ಲಿ ಕ್ಲೈಮ್ ಮಾಡದ ಠೇವಣಿ ಚೆಕ್ ಮಾಡುವುದು ಹೇಗೆ

ಕ್ಲೈಮ್ ಮಾಡದ ಠೇವಣಿ ಚೆಕ್ ಮಾಡಲು ಯುಡಿಜಿಎಂ ಪೋರ್ಟಲ್ ಅನ್ನು ಈ ಕೆಳಗಿನ 5 ಸಿಂಪಲ್‍ ಹಂತಗಳನ್ನು ಅನುಸರಿಸಿದರೆ ಸಾಕು.

ಹಂತ 1- ಯುಡಿಜಿಎಎಂ ವೆಬ್‍ಸೈಟ್‍ಗೆ (https://udgam.rbi.org.in/unclaimed-deposits/#/login) ಭೇಟಿ ನೀಡಿ.

ಹಂತ 2 – ನಿಮ್ಮ ಫೋನ್‍ ನಂಬರ್, ಪಾಸ್‍ವರ್ಡ್, ಕ್ಯಾಪ್ಚಾ ಕೋಡ್‍ ನಮೂದಿಸಿ, ಬಳಿಕ ಬಂದ ಒಟಿಪಿಯನ್ನು ದಾಖಲಿಸಿ.

ಹಂತ 3 – ಮುಂದಿನ ಪುಟದಲ್ಲಿ ಖಾತೆದಾರನ ಹೆಸರು ಕಡ್ಡಾಯವಾಗಿ ನಮೂದಿಸಬೇಕು. ಬ್ಯಾಂಕ್‍ನ ಪಟ್ಟಿಯಿಂದ ಬ್ಯಾಂಕ್‍ ಅನ್ನು ಆಯ್ಕೆ ಮಾಡಬೇಕು.

ಹಂತ 4 – ಕನಿಷ್ಠ ಒಂದು ಇನ್‍ಪುಟ್ ಅನ್ನು ಸರ್ಚ್‍ ಕ್ರೈಟೀರಿಯಾಕ್ಕೆ ನಮೂದಿಸಬೇಕು.

  • ಪ್ಯಾನ್‍
  • ವೋಟರ್ ಐಡಿ
  • ಡ್ರೈವಿಂಗ್ ಲೈಸೆನ್ಸ್ ನಂಬರ್
  • ಪಾಸ್‍ಪೋರ್ಟ್‍ ನಂಬರ್
  • ಜನ್ಮ ದಿನಾಂಕ

ಹಂತ 5 – ಇಷ್ಟಾದ ಬಳಿಕ ಸರ್ಚ್‍ ಆಪ್ಶನ್ ಕ್ಲಿಕ್ ಮಾಡಬೇಕು. ಆಗ ಖಾತೆದಾರನ ಹೆಸರಿನಲ್ಲಿ ಯಾವುದಾದರೂ ಕ್ಲೈಮ್ ಮಾಡದ ಡೆಪಾಸಿಟ್ ಖಾತೆ ಇದ್ದರೆ ಅದು ಪರದೆ ಮೇಲೆ ಕಾಣಿಸುತ್ತದೆ.

ಏಳು ಬ್ಯಾಂಕುಗಳ ವಿವರ

  1. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ
  2. ಪಂಜಾಬ್ ನ್ಯಾಷನಲ್ ಬ್ಯಾಂಕ್
  3. ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ
  4. ಧನಲಕ್ಷ್ಮಿ ಬ್ಯಾಂಕ್ ಲಿಮಿಟೆಡ್
  5. ಸೌತ್ ಇಂಡಿಯನ್ ಬ್ಯಾಂಕ್ ಲಿಮಿಟೆಡ್
  6. ಡಿಬಿಎಸ್‍ ಬ್ಯಾಂಕ್ ಇಂಡಿಯಾ ಲಿಮಿಟೆಡ್
  7. ಸಿಟಿ ಬ್ಯಾಂಕ್

ಸರ್ಚ್ ಆಪ್ಶನ್‍ ನಲ್ಲಿ ಉಳಿದ ಬ್ಯಾಂಕುಗಳು ಹೆಸರುಗಳು ಅಕ್ಟೋಬರ್ 15ರ ವೇಳೆಗೆ ಅಪ್ಡೇಟ್ ಆಗಲಿವೆ.

(Business News, Banking News and Explainers from Hindustan Times Kannada. ಭಾರತದ, ವಿಶ್ವ ವಿದ್ಯಮಾನದ ಮತ್ತಷ್ಟು ಮಾಹಿತಿಗೆ kannada.hindustantimes.com ಜಾಲತಾಣ ನೋಡಿ)

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ