logo
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  ಕೇಂದ್ರ ಬಜೆಟ್‌ 2024: ಈ 5 ಆದಾಯ ತೆರಿಗೆ ಸುಧಾರಣೆ ಜಾರಿಗೆ ತನ್ನಿ , ನಿರ್ಮಲಾ ಸೀತಾರಾಮನ್‌ಗೆ ಮಧ್ಯಮ ವರ್ಗದವರ ಬೇಡಿಕೆ

ಕೇಂದ್ರ ಬಜೆಟ್‌ 2024: ಈ 5 ಆದಾಯ ತೆರಿಗೆ ಸುಧಾರಣೆ ಜಾರಿಗೆ ತನ್ನಿ , ನಿರ್ಮಲಾ ಸೀತಾರಾಮನ್‌ಗೆ ಮಧ್ಯಮ ವರ್ಗದವರ ಬೇಡಿಕೆ

Praveen Chandra B HT Kannada

Feb 01, 2024 09:27 AM IST

ನಿರ್ಮಲಾ ಸೀತಾರಾಮನ್‌ಗೆ ಮಧ್ಯಮ ವರ್ಗದವರ ಬಜೆಟ್‌ ಬೇಡಿಕೆ

  • ಕೇಂದ್ರ ಬಜೆಟ್‌ 2024ರಲ್ಲಿ ಮಧ್ಯಮ ವರ್ಗದ ಜನತೆಯು ಕೆಲವೊಂದು ಆದಾಯ ತೆರಿಗೆ ಸುಧಾರಣೆ ಬಯಸಿದ್ದಾರೆ. ಈ ತೆರಿಗೆ ಸುಧಾರಣೆಯು ಮಿಡಲ್‌ ಕ್ಲಾಸ್‌ ಜನರ ಟ್ಯಾಕ್ಸ್‌ ಪ್ರಾಬ್ಲಂ ಅನ್ನು ತುಸು ಕಡಿಮೆ ಮಾಡುತ್ತದೆ. ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಮಂಡಿಸುವ ಬಜೆಟ್‌ನಲ್ಲಿ ಈ ಮುಂದಿನ 5 ಸುಧಾರಣೆಗಳು ಇರಬಹುದೇ? ಕಾದು ನೋಡೋಣ.

ನಿರ್ಮಲಾ ಸೀತಾರಾಮನ್‌ಗೆ ಮಧ್ಯಮ ವರ್ಗದವರ ಬಜೆಟ್‌ ಬೇಡಿಕೆ
ನಿರ್ಮಲಾ ಸೀತಾರಾಮನ್‌ಗೆ ಮಧ್ಯಮ ವರ್ಗದವರ ಬಜೆಟ್‌ ಬೇಡಿಕೆ

ಬೆಂಗಳೂರು: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಇಂದು (ಫೆಬ್ರವರಿ 1) ಮಧ್ಯಂತರ ಬಜೆಟ್ 2024 ಮಂಡಿಸಲಿದ್ದಾರೆ. ಈ ವರ್ಷ ಏಪ್ರಿಲ್-ಮೇ ತಿಂಗಳಲ್ಲಿ ಸರ್ಕಾರವು ಸಾರ್ವತ್ರಿಕ ಚುನಾವಣೆಯನ್ನು ಎದುರಿಸುತ್ತಿರುವುದರಿಂದ ಈ ಬಜೆಟ್ 'ಮಧ್ಯಂತರ' ಆಗಿರುತ್ತದೆ. ಜುಲೈ ತಿಂಗಳಲ್ಲಿ ಮತ್ತೆ ಕೇಂದ್ರ ಬಜೆಟ್‌ ಮಂಡನೆಯಾಗಲಿದೆ. ಹೀಗಾಗಿ ಈ ವರ್ಷ ಜನರಿಗೆ ಡಬಲ್‌ ಬಜೆಟ್‌. ಇದೇ ಸಮಯದಲ್ಲಿ ಮಧ್ಯಮ ವರ್ಗದ ಜನರಿಗೆ ಒಂದಿಷ್ಟು ಬೇಡಿಕೆಗಳು ಇವೆ. ವಿಶೇಷವಾಗಿ ತಮ್ಮ ತೆರಿಗೆ ವೆಚ್ಚ ಕಡಿತಕ್ಕೆ ಅನುಕೂಲವಾಗುವಂತಹ ಕೆಲವೊಂದು ಆದಾಯ ತೆರಿಗೆ ಸುಧಾರಣೆಗಳ ನಿರೀಕ್ಷೆಯಲ್ಲಿದೆ. ಸೆಕ್ಷನ್ 80 ಸಿ ಮತ್ತು ಸೆಕ್ಷನ್ 80 ಡಿ ನಂತಹ ವಿವಿಧ ವಿಭಾಗಗಳ ಅಡಿಯಲ್ಲಿ ಲಭ್ಯವಿರುವ ಕೆಲವು ತೆರಿಗೆ ವಿನಾಯಿತಿ ಮಿತಿ ಇನ್ನಷ್ಟು ಏರಿಕೆಯಾಗಬಹುದು ಎಂದು ಮಧ್ಯಮ ವರ್ಗ ನಿರೀಕ್ಷಿಸುತ್ತದೆ.

ಟ್ರೆಂಡಿಂಗ್​ ಸುದ್ದಿ

ಇಪಿಎಫ್‌ಒ; ಈ 3 ಕಾರಣ ನೀಡಿದ್ರೆ ಇಪಿಎಫ್‌ ಹಣ ಬೇಗ ಹಿಂಪಡೆಯಬಹುದು, ಹಂತ ಹಂತದ ಮಾರ್ಗದರ್ಶಿ ಇಲ್ಲಿದೆ ನೋಡಿ

ಗುವಾಹಟಿ ಬೀದಿಯಲ್ಲಿ ಸೋಷಿಯಲ್ ಮೀಡಿಯಾ ಪ್ರಭಾವಿಯ ಮಂಜುಲಿಕಾ ನೃತ್ಯನಾಟಕ, ದಂಗಾಗಿ ನೋಡುತ್ತ ನಿಂತ ಜನ-ವೈರಲ್ ವಿಡಿಯೋ

Gold Rate Today: ಬಂಗಾರ ಪ್ರಿಯರಿಗೆ ಮತ್ತೆ ನಿರಾಸೆ; ತುಸು ಕಡಿಮೆಯಾಗಿ ಪುನಃ ಹೆಚ್ಚಾದ ಚಿನ್ನದ ದರ, ಬೆಳ್ಳಿ ಬೆಲೆಯೂ ಏರಿಕೆ

SBI FD Rate Hike: ಸ್ಥಿರ ಠೇವಣಿಗಳ ಬಡ್ಡಿದರ ಹೆಚ್ಚಿಸಿದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ; ಎಸ್‌ಬಿಐ ಎಫ್‌ಡಿಗಳ ಬಡ್ಡಿದರ ವಿವರ ಹೀಗಿದೆ

1) ಆದಾಯ ತೆರಿಗೆ ಸ್ಲ್ಯಾಬ್‌ಗಳಲ್ಲಿ ರಿಯಾಯಿತಿ

ಮಧ್ಯಮ ವರ್ಗವು ಆದಾಯ ತೆರಿಗೆ ವಿನಾಯಿತಿ ಮಿತಿಯನ್ನು ಸರಕಾರ 2.5 ಲಕ್ಷ ರೂ.ಗಳಿಂದ 5 ಲಕ್ಷ ರೂ.ಗೆ ಬದಲಾಯಿಸುವ ನಿರೀಕ್ಷೆಯಲ್ಲಿದೆ. ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಕಳೆದ ವರ್ಷ ಮಂಡಿಸಿದ ಬಜೆಟ್‌ನಲ್ಲಿ ಹೊಸ ಆದಾಯ ತೆರಿಗೆ ಪದ್ಧತಿ ಆರಿಸಿಕೊಳ್ಳುವ ಜನರಿಗೆ ಸ್ಲ್ಯಾಬ್‌ ದರವನ್ನು ಬದಲಾಯಿಸಿದ್ದರು.

0- 3 ಲಕ್ಷ ರೂ.ವರೆಗೆ: ಯಾವುದೇ ಆದಾಯ ತೆರಿಗೆ ಇಲ್ಲ

3 ಲಕ್ಷ ರೂ.ನಿಂದ 6 ಲಕ್ಷ ರೂ.ವರೆಗೆ: 5%

6 ಲಕ್ಷ ರೂ.ನಿಂದ 9 ಲಕ್ಷ ರೂ.ವರೆಗೆ: 10%

9 ಲಕ್ಷ ರೂ.ನಿಂದ 12 ಲಕ್ಷ ರೂ.ವರೆಗೆ: 15%

12 ಲಕ್ಷ ರೂ.ನಿಂದ 15 ಲಕ್ಷ ರೂ.ವರೆಗೆ: 20%

15 ಲಕ್ಷ ರೂ.ಗಿಂತ ಹೆಚ್ಚು ಆದಾಯ ಇರುವವರಿಗೆ: 30%

2) ಸೆಕ್ಷನ್ 80 ಸಿ ಮಿತಿಯಲ್ಲಿ ಹೆಚ್ಚಳ

ಸೆಕ್ಷನ್ 80 ಸಿ ಅಡಿಯಲ್ಲಿ ಈಗ ಹೂಡಿಕೆ ಕಡಿತ ಮಿತಿ 1.5 ಲಕ್ಷ ರೂ.ವರೆಗೆ ಇದೆ. ಇದು ಕಳೆದ ಒಂದು ದಶಕದಿಂದ ಬದಲಾವಣೆಯಾಗಿಲ್ಲ. ಇದನ್ನು ಹೆಚ್ಚಿಸಬೇಕು. "ಈ ಹಿಂದೆ 2003ರಲ್ಲಿ 1 ಲಕ್ಷ ರೂ.ಗಳ ಮಿತಿ ನಿಗದಿಪಡಿಸಲಾಗಿತ್ತು. ಮೂಲ ಮಿತಿಯನ್ನು 1 ಲಕ್ಷ ರೂಪಾಯಿಗೆ ನಿಗದಿಗೊಳಿಸಿ ಹದಿನೆಂಟು ವರ್ಷಗಳಾಗಿವೆ. ಇದನ್ನು 2014ರಲ್ಲಿ ಶೇಕಡ 50ರಷ್ಟು ಹೆಚ್ಚಿಸಲಾಗಿದೆ. ಈ ಹೆಚ್ಚಳವು ಹಣದುಬ್ಬರ ಸರಾಸರಿಗೆ ಸಮನಾಗಿಲ್ಲ. ನನ್ನ ಪ್ರಕಾರ ಇದನ್ನು ಕನಿಷ್ಠ 2.50 ಲಕ್ಷ ರೂಪಾಯಿಗೆ ಹೆಚ್ಚಿಸಬೇಕು" ಎಂದು ಮುಂಬೈ ಮೂಲದ ತೆರಿಗೆ ಮತ್ತು ಹೂಡಿಕೆ ತಜ್ಞ ಬಲ್ವಂತ್ ಜೈನ್ ಹೇಳಿದ್ದಾರೆ

3) ಸ್ಟ್ಯಾಂಡರ್ಡ್ ಡಿಡಕ್ಷನ್ ಮಿತಿ ಹೆಚ್ಚ

ಹಣಕಾಸು ಕಾಯಿದೆ 2018ರಲ್ಲಿ 40,000 ವೇತನದಲ್ಲಿ ಸ್ಟಾಂಡರ್ಡ್‌ ಡಿಡಕ್ಷನ್‌ ಮಾಡುವುದನ್ನು ಪರಿಚಯಿಸಲಾಯಿತು. 2019ರಲ್ಲಿ ಇದನ್ನು 50 ಸಾವಿರ ರೂ.ಗೆ ಹೆಚ್ಚಿಸಲಾಗಿತ್ತು. ಈಗ ವೈದ್ಯಕೀಯ ವೆಚ್ಚಗಳು ಮತ್ತು ಇಂಧನದ ವೆಚ್ಚಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ಸ್ಟ್ಯಾಂಡರ್ಡ್ ಡಿಡಕ್ಷನ್ ಮಿತಿಯನ್ನು 50,000 ರೂ.ಗಳಿಂದ 1 ಲಕ್ಷ ರೂ.ಗೆ ಹೆಚ್ಚಿಸಬೇಕಿದೆ.

4) ಮನೆ ಖರೀದಿದಾರರಿಗೆ ಪರಿಹಾರ

ಈಗಿನ ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 80 ಸಿ ಯ ನಿಬಂಧನೆಗಳ ಪ್ರಕಾರ ಮನೆ ನಿರ್ಮಾಣಕ್ಕಾಗಿ ತೆಗೆದುಕೊಂಡ ಗೃಹಸಾಲದ ಮೊತ್ತವನ್ನು ಮರುಪಾವತಿಸುವಾಗ ತೆರಿಗೆಗೆ ಒಳಪಡುವ ಆದಾಯದಿಂದ 1.5 ಲಕ್ಷ ರೂ.ಗಳವರೆಗೆ ಕಡಿತ ಪಡೆಯಲು ಅವಕಾಶವಿದೆ. ಜೀವ ವಿಮಾ ಪ್ರೀಮಿಯಂಗಳು, ಬೋಧನಾ ಶುಲ್ಕಗಳು, ಭವಿಷ್ಯ ನಿಧಿ ಮತ್ತು ಸಾರ್ವಜನಿಕ ಭವಿಷ್ಯ ನಿಧಿ ಮತ್ತು ಇಪಿಎಫ್‌ನಲ್ಲಿನ ಹೂಡಿಕೆ, ರಾಷ್ಟ್ರೀಯ ಉಳಿತಾಯ ಪ್ರಮಾಣಪತ್ರಗಳು, ತೆರಿಗೆ ಉಳಿತಾಯ ಬ್ಯಾಂಕ್ ಎಫ್‌ಡಿ ಮುಂತಾದವುಗಳ ಜತೆ ಈ ಕಡಿತ ಲಭ್ಯವಿದೆ. ಇದನ್ನು ಹೆಚ್ಚಿಸಬೇಕು ಎಂದು ಬಲ್ವಂತ್‌ ಜೈನ್‌ ಹೇಳಿದ್ದಾರೆ.

5) 80ಡಿ ಕಡಿತ ಮಿತಿ ಹೆಚ್ಚಳ

ವೈದ್ಯಕೀಯ ವಿಮಾ ಪ್ರೀಮಿಯಂಗಳಿಗೆ ಸೆಕ್ಷನ್ 80 ಡಿ ಅಡಿಯಲ್ಲಿ ಕಡಿತ ಮಿತಿಯನ್ನು ವ್ಯಕ್ತಿಗಳಿಗೆ 25,000 ರೂ.ಗಳಿಂದ 50,000 ರೂ.ಗೆ ಮತ್ತು ಹಿರಿಯ ನಾಗರಿಕರಿಗೆ 50,000 ರೂ.ಗಳಿಂದ 75,000 ರೂ.ಗೆ ಹೆಚ್ಚಿಸಬೇಕು ಎಂದು ಕ್ಲಿಯರ್ ಟ್ಯಾಕ್ಸ್ ಸಂಸ್ಥಾಪಕ ಮತ್ತು ಸಿಇಒ ಅರ್ಚಿತ್ ಗುಪ್ತಾ ಹೇಳಿದ್ದಾರೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ