logo
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  ಈರುಳ್ಳಿ ರಫ್ತು ನಿಷೇಧ ಸಡಿಲಿಕೆ; ಈರುಳ್ಳಿ ಬೆಲೆ ಏರಿಕೆ ತಡೆಗೆ ಕ್ರಮ ತಗೊಂಡಿದ್ದ ಭಾರತ ಸರ್ಕಾರ, ಈ ದೇಶಗಳಿಗಿನ್ನು ಈರುಳ್ಳಿ ಕಳುಹಿಸಬಹುದು

ಈರುಳ್ಳಿ ರಫ್ತು ನಿಷೇಧ ಸಡಿಲಿಕೆ; ಈರುಳ್ಳಿ ಬೆಲೆ ಏರಿಕೆ ತಡೆಗೆ ಕ್ರಮ ತಗೊಂಡಿದ್ದ ಭಾರತ ಸರ್ಕಾರ, ಈ ದೇಶಗಳಿಗಿನ್ನು ಈರುಳ್ಳಿ ಕಳುಹಿಸಬಹುದು

Umesh Kumar S HT Kannada

Feb 20, 2024 11:36 AM IST

ಈರುಳ್ಳಿ ರಫ್ತು ನಿಷೇಧ ಸಡಿಲಿಕೆ ಮಾಡಿರುವ ಭಾರತ ಸರ್ಕಾರವು ಈರುಳ್ಳಿ ಬೆಲೆ ಏರಿಕೆ ತಡೆಗೆ ಕ್ರಮ ತಗೊಂಡಿತ್ತು. ಭಾರತ ಸರ್ಕಾರದ ಹೊಸ ಆದೇಶ ಪ್ರಕಾರ ನೇಪಾಳ, ಭೂತಾನ್ ಸೇರಿದಂತೆ ಕೆಲವು ದೇಶಗಳಿಗಿನ್ನು ಸರ್ಕಾರದ ಮಟ್ಟದಲ್ಲಿ ಈರುಳ್ಳಿ ಕಳುಹಿಸಬಹುದು. (ಸಾಂಕೇತಿಕ ಚಿತ್ರ)

  • ಈರುಳ್ಳಿ ರಫ್ತು ನಿಷೇಧ ಸಡಿಲಿಕೆ ಮಾಡಿರುವ ಭಾರತ ಸರ್ಕಾರ ಈ ಹಿಂದೆ ಈರುಳ್ಳಿ ಬೆಲೆ ಏರಿಕೆ ತಡೆಗೆ ಕ್ರಮ ತಗೊಂಡಿತ್ತು. ಹೊಸ ಆದೇಶ ಪ್ರಕಾರ, ಸರ್ಕಾರದ ಮಟ್ಟದಲ್ಲಿ ಈ ದೇಶಗಳಿಗಿನ್ನು ಈರುಳ್ಳಿ ಕಳುಹಿಸಬಹುದು. ಭಾರತದಲ್ಲಿ ಈರುಳ್ಳಿ ರಫ್ತು ನಿಷೇಧ ಮಾಡಿದ್ದರಿಂದ ದೇಶೀಯ ಮಾರುಕಟ್ಟೆಗೆ ಉತ್ತಮ ಫಲ ನೀಡಿದೆ.

ಈರುಳ್ಳಿ ರಫ್ತು ನಿಷೇಧ ಸಡಿಲಿಕೆ ಮಾಡಿರುವ ಭಾರತ ಸರ್ಕಾರವು ಈರುಳ್ಳಿ ಬೆಲೆ ಏರಿಕೆ ತಡೆಗೆ ಕ್ರಮ ತಗೊಂಡಿತ್ತು. ಭಾರತ ಸರ್ಕಾರದ ಹೊಸ ಆದೇಶ ಪ್ರಕಾರ ನೇಪಾಳ, ಭೂತಾನ್ ಸೇರಿದಂತೆ ಕೆಲವು ದೇಶಗಳಿಗಿನ್ನು ಸರ್ಕಾರದ ಮಟ್ಟದಲ್ಲಿ ಈರುಳ್ಳಿ ಕಳುಹಿಸಬಹುದು. (ಸಾಂಕೇತಿಕ ಚಿತ್ರ)
ಈರುಳ್ಳಿ ರಫ್ತು ನಿಷೇಧ ಸಡಿಲಿಕೆ ಮಾಡಿರುವ ಭಾರತ ಸರ್ಕಾರವು ಈರುಳ್ಳಿ ಬೆಲೆ ಏರಿಕೆ ತಡೆಗೆ ಕ್ರಮ ತಗೊಂಡಿತ್ತು. ಭಾರತ ಸರ್ಕಾರದ ಹೊಸ ಆದೇಶ ಪ್ರಕಾರ ನೇಪಾಳ, ಭೂತಾನ್ ಸೇರಿದಂತೆ ಕೆಲವು ದೇಶಗಳಿಗಿನ್ನು ಸರ್ಕಾರದ ಮಟ್ಟದಲ್ಲಿ ಈರುಳ್ಳಿ ಕಳುಹಿಸಬಹುದು. (ಸಾಂಕೇತಿಕ ಚಿತ್ರ)

ಈರುಳ್ಳಿ ರಫ್ತು ನಿಷೇಧ ಸಡಿಲಿಕೆ ಮಾಡಲು ಕೇಂದ್ರ ಸರ್ಕಾರ ಕ್ರಮ ತೆಗೆದುಕೊಂಡಿದೆ. ಈ ಹಿಂದೆ, ದೇಶದಲ್ಲಿ ಈರುಳ್ಳಿ ಬೆಲೆ ಏರಿಕೆ ತಡೆಗೆ ಕ್ರಮ ತಗೊಂಡಿದ್ದ ಭಾರತ ಸರ್ಕಾರ, ಈ ದೇಶಗಳಿಗಿನ್ನು ಸೀಮಿತ ಪ್ರಮಾಣದ ಈರುಳ್ಳಿ ಕಳುಹಿಸಬಹುದು ಎಂದು ಹೇಳಿದೆ.

ಟ್ರೆಂಡಿಂಗ್​ ಸುದ್ದಿ

ಫೋರ್ಬ್ಸ್‌ 30 ಅಂಡರ್ 30 ಏಷ್ಯಾ ಲಿಸ್ಟ್‌ನಲ್ಲಿ ಐವರು ಬೆಂಗಳೂರಿಗರು, ಯುವ ಸಾಧಕರ ವಿವರ ಹೀಗಿದೆ

ಸಾಯಿ ಬಾಬಾ ಮತ್ತೆ ಹುಟ್ಟಿದ್ರಾ, ಈ ಬಾಲಕ ಅವರ ಪುನರವತಾರವೇ, ಏನಿದು ವಿದೇಶೀಯರ ವರ್ತನೆ! - ವೈರಲ್ ವಿಡಿಯೋ

Gold Rate Today: ವಾರಾಂತ್ಯದಲ್ಲಿ ತುಸು ಇಳಿಕೆಯಾದ ಹಳದಿ ಲೋಹದ ಬೆಲೆ; ಶನಿವಾರ ಬೆಳ್ಳಿ ದರ ತಟಸ್ಥ

Gold Rate Today: ಶುಕ್ರವಾರವೂ ಏರಿಕೆಯಾದ ಚಿನ್ನ, ಬೆಳ್ಳಿ ದರ; ದೇಶದಲ್ಲಿಂದು ಆಭರಣ ದರ ಎಷ್ಟಾಗಿದೆ ಗಮನಿಸಿ

ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಶಿಫಾರಸಿನ ಮೇರೆಗೆ ಭಾರತ ಸರ್ಕಾರವು, ಕೆಲವು ದೇಶಗಳಿಗೆ ಸರ್ಕಾರದ ಮಟ್ಟದಲ್ಲಿ ಈರುಳ್ಳಿ ರಫ್ತು ಮಾಡಲು ಅವಕಾಶ ನೀಡಿದೆ ಎಂದು ಈ ವಿದ್ಯಮಾನದ ಅರಿವು ಇರುವಂಥವರು ತಿಳಿಸಿರುವುದಾಗಿ ಎಕನಾಮಿಕ್ ಟೈಮ್ಸ್ ವರದಿ ಮಾಡಿದೆ.

ದ್ವಿಪಕ್ಷೀಯ ಉದ್ದೇಶಗಳಿಗಾಗಿ ಸೀಮಿತ ಪ್ರಮಾಣದ ಈರುಳ್ಳಿ ರಫ್ತು ಮಾಡುವುದಕ್ಕೆ ಭಾರತ ಸರ್ಕಾರ ಅನುಮತಿ ನೀಡಿದೆ. ಈರುಳ್ಳಿ ರಫ್ತು ನಿಷೇಧವನ್ನು ಸಂಪೂರ್ಣವಾಗಿ ತೆರವುಗೊಳಿಸುವ ಯಾವುದೇ ನಿರ್ಧಾರವನ್ನು ಭಾರತ ಸರ್ಕಾರ ತೆತಗೆದುಕೊಂಡಿಲ್ಲ. ಈಗ ರಫ್ತು ಮಾಡುವುದಕ್ಕೆ ಅವಕಾಶ ನೀಡಲಾಗಿದೆ ಎಂಬ ವಿವರ ಬಿಟ್ಟರೆ, ರಫ್ತು ಮಾಡುವ ಏಜೆನ್ಸಿಯ ವಿವರಗಳನ್ನು ಬಹಿರಂಗ ಪಡಿಸಲಾಗಿಲ್ಲ ಎಂದು ವರದಿ ವಿವರಿಸಿದೆ.

ಕೆಲವೇ ಕೆಲವು ದೇಶಗಳಿಗೆ ಸರ್ಕಾರದ ಮಟ್ಟದಲ್ಲಿ ಈರುಳ್ಳಿ ರಫ್ತು ಮಾಡಲು ಕ್ರಮ

ಬಾಂಗ್ಲಾದೇಶ, ಶ್ರೀಲಂಕಾ, ಮಾರಿಷಸ್, ಬಹ್ರೇನ್, ಭೂತಾನ್ ಮತ್ತು ನೇಪಾಳಗಳು ಸೇರಿ ಕೆಲವೇ ಕೆಲವು ದೇಶಗಳಿಗೆ ಮಾತ್ರವೇ ಸೀಮಿತ ಪ್ರಮಾಣದಲ್ಲಿ ಈರುಳ್ಳಿ ರಫ್ತು ಮಾಡಲು ಸರ್ಕಾರ ಅನುಮತಿ ನೀಡಿದೆ. ಭಾರತವು ವಿಶ್ವದ ಎರಡನೇ ಅತಿದೊಡ್ಡ ಈರುಳ್ಳಿ ರಫ್ತುದಾರ ದೇಶವಾಗಿದೆ.

ಭಾರತದೊಳಗೆ ಈರುಳ್ಳಿ ಬೆಲೆ ಏರಿಕೆಗೆ ಕಡಿವಾಣ ಹಾಕುವುದಕ್ಕಾಗಿ 2023ರ ಡಿಸೆಂಬರ್‌ನಿಂದ 2024ರ ಮಾರ್ಚ್‌ ಅಂತ್ಯದ ತನಕ ಈರುಳ್ಳಿ ರಫ್ತು ನಿಷೇಧವನ್ನು ಕೇಂದ್ರ ಸರ್ಕಾರ ಹೇರಿತ್ತು. ಭಾರತದ ಈ ಕ್ರಮದಿಂದ ಪ್ರಾದೇಶಿಕವಾಗಿ ಬೆಲೆ ಏರಿಕೆ ನಿಯಂತ್ರಣಕ್ಕೆ ಬಂತಾದರೂ, ನೆರೆಯ ದೇಶಗಳಲ್ಲಿ ಈರುಳ್ಳಿ ಬೆಲೆ ಹೆಚ್ಚಳಕ್ಕೆ ಕಾರಣವಾಯಿತು ಎಂದು ಈ ವಿದ್ಯಮಾನದ ಅರಿವು ಇರುವಂತಹ ಇನ್ನೊಬ್ಬ ಅಧಿಕಾರಿ ತಿಳಿಸಿದ್ದಾಗಿ ವರದಿ ಹೇಳಿದೆ.

ಮಾರ್ಚ್‌ 2024ರ ತನಕ ಈರುಳ್ಳಿ ರಫ್ತು ನಿಷೇಧ

ಭಾರತೀಯ ಮಾರುಕಟ್ಟೆಯಲ್ಲಿ 2023 ರ ಆಗಸ್ಟ್‌ನಲ್ಲಿ ಈರುಳ್ಳಿ ಬೆಲೆ ಏರತೊಡಗಿದಾಗ, ಅದರ ಸಾಗಣೆಯನ್ನು ಮೊಟಕುಗೊಳಿಸಲು ಹಣಕಾಸು ಸಚಿವಾಲಯವು ಈರುಳ್ಳಿ ರಫ್ತು ಮಾಡುವಾಗ ಅದರ ಮೇಲೆ ಶೇಕಡ 40 ತೆರಿಗೆ ವಿಧಿಸಿತು. ಇದು ಅಪೇಕ್ಷಿತ ಪರಿಣಾಮ ಬೀರದ ಕಾರಣ, ಅಕ್ಟೋಬರ್ 28ರಂದು ಮತ್ತೆ ಪ್ರತಿ ಟನ್ ಈರುಳ್ಳಿ ರಫ್ತು ಮಾಡುವುದಕ್ಕೆ ಕನಿಷ್ಠ ದರ 800 ಡಾಲರ್ ಎಂದು ದರ ನಿಗದಿ ಮಾಡಿತು.

ಇನ್ನೊಂದೆಡೆ, ನವೆಂಬರ್ ಋತುವಿನಲ್ಲಿ ಮಹಾರಾಷ್ಟ್ರ ಮಾರುಕಟ್ಟೆಗೆ ಈರುಳ್ಳಿ ಆಗಮನ ಪ್ರಮಾಣ ಕಡಿಮೆ ಆಯಿತು. ಬೆಲೆ ಹೆಚ್ಚಳವಾದಾಗ ಭಾರತ ಸರ್ಕಾರ ಅನಿವಾರ್ಯವಾಗಿ ಈರುಳ್ಳಿ ರಫ್ತು ನಿಷೇಧವನ್ನು ಡಿಸೆಂಬರ್ 8ರಿಂದ ಜಾರಿಗೆ ಬರುವಂತೆ ಆದೇಶ ಹೊರಡಿಸಿತು. ಈ ನಿಷೇಧವು 2024ರ ಮಾರ್ಚ್‌ ಅಂತ್ಯದ ತನಕ ಚಾಲ್ತಿಯಲ್ಲಿರಲಿದೆ. ಈ ಕ್ರಮದಿಂದಾಗಿ ನಾಸಿಕ್‌ನಲ್ಲಿ ಸಗಟು ದರ ಕಿಲೋಗೆ 40 ರೂಪಾಯಿಯಿಂದ 13 ರೂಪಾಯಿಗೆ ಕುಸಿಯಿತು. ಇದನ್ನು ವಿರೋಧಿಸಿ ಈರುಳ್ಳಿ ಬೆಳೆಗಾರರು ಎರಡು ತಿಂಗಳು ಪ್ರತಿಭಟನೆ ನಡೆಸಿದರು.

ಲೋಕಸಭೆ ಚುನಾವಣೆಗೆ ಮುನ್ನ ಹಣದುಬ್ಬರ ನಿಯಂತ್ರಿಸುವ ಪ್ರಯತ್ನ

ಹಣದುಬ್ಬರದ ವಿಚಾರದಲ್ಲಿ ತರಕಾರಿಗಳ ಪಾಲಿನಲ್ಲಿ ಶೇಕಡ 10 ಮತ್ತು ಒಟ್ಟಾರೆ ಹಣದುಬ್ಬದಲ್ಲಿ ಶೇಕಡ 0.6 ಪಾಲು ಈರುಳ್ಳಿ ಬೆಲೆಯದ್ದು. ಈರುಳ್ಳಿ ಬೆಲೆ ಏರಿಕೆಯಾದರೆ ತನ್ನಿಂತಾನೇ ಆಹಾರ ಹಣದುಬ್ಬರ ಹೆಚ್ಚಳವಾಗುತ್ತದೆ. ಇದು ಸರ್ಕಾರವನ್ನು ಚಿಂತೆಗೀಡು ಮಾಡುವಂಥದ್ದು. ಈಗ ಲೋಕಸಭೆ ಚುನಾವಣೆ ಸಮೀಪದಲ್ಲೇ ಇರುವ ಕಾರಣ, ಬಹಳ ಎಚ್ಚರಿಕೆಯ ಕ್ರಮಗಳನ್ನು ಕೇಂದ್ರ ಸರ್ಕಾರ ತೆಗೆದುಕೊಳ್ಳುತ್ತಿದೆ.

ಈ ವರ್ಷದ ಫೆಬ್ರವರಿ ಆರಂಭದಲ್ಲಿ, ಕೇಂದ್ರ ಸರ್ಕಾರದ ಅಧಿಕಾರಿಗಳ ತಂಡವು ಮಹಾರಾಷ್ಟ್ರದ ಈರುಳ್ಳಿ ಬೆಳೆಯುವ ಪ್ರದೇಶಗಳಿಗೆ ಭೇಟಿ ನೀಡಿತು. ರಫ್ತು ನಿಷೇಧಕ್ಕೆ ಸಂಬಂಧಿಸಿ ಈ ತಂಡವು ಸರ್ಕಾರಕ್ಕೆ ಶಿಫಾರಸು ಮಾಡುವ ನಿರೀಕ್ಷೆಯಿದೆ. ಇನ್ನೊಂದೆಡೆ, ಕೆಲವು ದೊಡ್ಡ ಪ್ರಮಾಣದ ರಫ್ತುದಾರರು ಸರ್ಕಾರಕ್ಕೆ ಭಾನುವಾರ ಪತ್ರ ಬರೆದಿದ್ದು, ಈರುಳ್ಳಿ ರಫ್ತುಗಳನ್ನು ಸಂಪೂರ್ಣವಾಗಿ ನಿಷೇಧಿಸುವ ಬದಲು, ಸರ್ಕಾರವು ನಿರ್ಬಂಧಿತ ರೀತಿಯಲ್ಲಿ ರಫ್ತು ಮಾಡಲು ಅವಕಾಶ ನೀಡಬೇಕು ಎಂದು ಕೋರಿದ್ದರು ಎಂದು ವರದಿ ವಿವರಿಸಿದೆ.

(This copy first appeared in Hindustan Times Kannada website. To read more like this please logon to kannada.hindustantimes.com)

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ