logo
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Canada: ಭಾರತದ ಗ್ಯಾಂಗ್​​ಸ್ಟರ್​ಗಳಿಗೆ, ಖಲಿಸ್ತಾನಿ ಉಗ್ರರಿಗೆ ಸುರಕ್ಷಿತ ಸ್ಥಳವಾಗುತ್ತಿದೆಯಾ ಕೆನಡಾ?

Canada: ಭಾರತದ ಗ್ಯಾಂಗ್​​ಸ್ಟರ್​ಗಳಿಗೆ, ಖಲಿಸ್ತಾನಿ ಉಗ್ರರಿಗೆ ಸುರಕ್ಷಿತ ಸ್ಥಳವಾಗುತ್ತಿದೆಯಾ ಕೆನಡಾ?

Meghana B HT Kannada

Jul 25, 2022 10:00 PM IST

ಗೋಲ್ಡಿ ಬ್ರಾರ್‌ ಹಾಗೂ ಹರ್ದೀಪ್ ಸಿಂಗ್ ನಿಜ್ಜರ್​

    • ಭಾರತದಲ್ಲಿ ಕೊಲೆಗಳು ಸೇರಿದಂತೆ ಹಲವಾರು ಕ್ರಿಮಿನಲ್ ಚಟುವಟಿಕೆಗಳಲ್ಲಿ ತೊಡಗಿರುವ ಖಲಿಸ್ತಾನಿ ಭಯೋತ್ಪಾದಕರು ಮತ್ತು ಗ್ಯಾಂಗ್​ಸ್ಟರ್​​ಗಳಿಗೆ ಕೆನಡಾ ಸುರಕ್ಷಿತ ಸ್ಥಳವಾಗುತ್ತಿದೆ ಎಂದು ಹೇಳಲಾಗುತ್ತಿದೆ.
ಗೋಲ್ಡಿ ಬ್ರಾರ್‌ ಹಾಗೂ ಹರ್ದೀಪ್ ಸಿಂಗ್ ನಿಜ್ಜರ್​
ಗೋಲ್ಡಿ ಬ್ರಾರ್‌ ಹಾಗೂ ಹರ್ದೀಪ್ ಸಿಂಗ್ ನಿಜ್ಜರ್​

ನವದೆಹಲಿ: ಭಾರತದಲ್ಲಿ ಕೊಲೆಗಳು ಸೇರಿದಂತೆ ಹಲವಾರು ಕ್ರಿಮಿನಲ್ ಚಟುವಟಿಕೆಗಳಲ್ಲಿ ತೊಡಗಿರುವ ಖಲಿಸ್ತಾನಿ ಭಯೋತ್ಪಾದಕರು ಮತ್ತು ಗ್ಯಾಂಗ್​ಸ್ಟರ್​​ಗಳಿಗೆ ಕೆನಡಾ ಸುರಕ್ಷಿತ ಸ್ಥಳವಾಗುತ್ತಿದೆ ಎಂದು ಹೇಳಲಾಗುತ್ತಿದೆ.

ಟ್ರೆಂಡಿಂಗ್​ ಸುದ್ದಿ

Gold Rate Today: ಶುಕ್ರವಾರವೂ ಏರಿಕೆಯಾದ ಚಿನ್ನ, ಬೆಳ್ಳಿ ದರ; ದೇಶದಲ್ಲಿಂದು ಆಭರಣ ದರ ಎಷ್ಟಾಗಿದೆ ಗಮನಿಸಿ

ಇಪಿಎಫ್‌ಒ; ಈ 3 ಕಾರಣ ನೀಡಿದ್ರೆ ಇಪಿಎಫ್‌ ಹಣ ಬೇಗ ಹಿಂಪಡೆಯಬಹುದು, ಹಂತ ಹಂತದ ಮಾರ್ಗದರ್ಶಿ ಇಲ್ಲಿದೆ ನೋಡಿ

ಗುವಾಹಟಿ ಬೀದಿಯಲ್ಲಿ ಸೋಷಿಯಲ್ ಮೀಡಿಯಾ ಪ್ರಭಾವಿಯ ಮಂಜುಲಿಕಾ ನೃತ್ಯನಾಟಕ, ದಂಗಾಗಿ ನೋಡುತ್ತ ನಿಂತ ಜನ-ವೈರಲ್ ವಿಡಿಯೋ

Gold Rate Today: ಬಂಗಾರ ಪ್ರಿಯರಿಗೆ ಮತ್ತೆ ನಿರಾಸೆ; ತುಸು ಕಡಿಮೆಯಾಗಿ ಪುನಃ ಹೆಚ್ಚಾದ ಚಿನ್ನದ ದರ, ಬೆಳ್ಳಿ ಬೆಲೆಯೂ ಏರಿಕೆ

ಪಂಜಾಬಿ ಗಾಯಕ ಸಿಧು ಮೂಸೆ ವಾಲಾ ಹತ್ಯೆ ಪ್ರಕರಣದ ಪ್ರಮುಖ ಆರೋಪಿಗಳಲ್ಲಿ ಒಬ್ಬನಾದ ಸತೀಂದರ್‌ಜೀತ್ ಸಿಂಗ್ ಅಲಿಯಾಸ್ ಗೋಲ್ಡಿ ಬ್ರಾರ್‌ ಕೂಡ ಕೆನಡಾದಲ್ಲಿ ತಲೆಮರೆಸಿಕೊಂಡಿದ್ದಾನೆ. ಕೆನಡಾದ ಅಧಿಕಾರಿಗಳು ಸಹಕರಿಸದ ಕಾರಣ ಆತನನ್ನು ಭಾರತಕ್ಕೆ ಮರಳಿ ತರಲು ಸಾಧ್ಯವಾಗುತ್ತಿಲ್ಲ.

ಇತ್ತ ಪಂಜಾಬ್‌ನ ಜಲಂಧರ್‌ನಲ್ಲಿ ಹಿಂದೂ ಅರ್ಚಕನನ್ನು ಹತ್ಯೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಖಲಿಸ್ತಾನ್ ಟೈಗರ್​ ಫೋರ್ಸ್ (ಕೆಟಿಎಫ್​) ಮುಖ್ಯಸ್ಥ ಹರ್ದೀಪ್ ಸಿಂಗ್ ನಿಜ್ಜರ್​ ಕೂಡ ಪ್ರಸ್ತುತ ಕೆನಡಾದಲ್ಲಿದ್ದಾನೆ. ಈತನ ಬಗ್ಗೆ ಸುಳಿವು ನೀಡಿದವರಿಗೆ ಅಥವಾ ಈತನನ್ನು ಹುಡುಕಿ ಕೊಟ್ಟವರಿಗೆ 10 ಲಕ್ಷ ರೂಪಾಯಿ ಬಹುಮಾನ ನೀಡುವುದಾಗಿ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಘೋಷಿಸಿದೆ.

ಕೆನಡಾ ಮೂಲದ ಮತ್ತೊಬ್ಬ ಖಲಿಸ್ತಾನಿ ಭಯೋತ್ಪಾದಕ ಗುರುಪತ್‌ವಂತ್ ಸಿಂಗ್ ಪನ್ನುನ್, 'ನ್ಯಾಯಕ್ಕಾಗಿ ಸಿಖ್' ಎಂಬ ಆಂದೋಲನವನ್ನು ನಡೆಸುತ್ತಿದ್ದು, ಭಾರತದಲ್ಲಿ ಭಯೋತ್ಪಾದನೆಯನ್ನು ಹರಡುವ ಗುರಿಯನ್ನು ಹೊಂದಿದ್ದಾನೆ. ಈತ ರೈತರ ಆಂದೋಲನದ ಸಂದರ್ಭದಲ್ಲಿ ಕೆಂಪು ಕೋಟೆ ಸೇರಿದಂತೆ ಸರ್ಕಾರಿ ಕಟ್ಟಡಗಳ ಮೇಲೆ ದಾಳಿ ಮಾಡಲು ಜನರನ್ನು ಪ್ರಚೋದಿಸುವ ಹಲವಾರು ವೀಡಿಯೊಗಳನ್ನು ಬಿಡುಗಡೆ ಮಾಡಿದ್ದನು.

ಕೆನಡಾದಲ್ಲಿದ್ದುಕೊಂಡು ದುಷ್ಕರ್ಮಿಗಳು ಭಾರತದಲ್ಲಿ ಅಪರಾಧಗಳನ್ನು ನಿಯಂತ್ರಿಸುತ್ತಿದ್ದಾರೆ ಎಂದು ಗುಪ್ತಚರ ಸಂಸ್ಥೆಗಳು ಮತ್ತು ಪೋಲೀಸ್ ಮೂಲಗಳು ತಿಳಿಸಿವೆ. ಖಲಿಸ್ತಾನಿ ಉಗ್ರರು ಮತ್ತು ವಾಂಟೆಡ್​ ಗ್ಯಾಂಗ್​ಸ್ಟರ್​ಗಳು ಅಲ್ಲಿ ಇರುವ ಬಗ್ಗೆ ಭಾರತವು ಕೆನಡಾಕ್ಕೆ ದಾಖಲೆಗಳನ್ನು ಸಲ್ಲಿಸಿದೆ. ಆದರೆ ಕೆನಡಾ ಅಧಿಕಾರಿಗಳು ಇದುವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ.

ಖಲಿಸ್ತಾನಿ ಭಯೋತ್ಪಾದಕರು ಭಾರತದಲ್ಲಿ ಕೋಮು ಸೌಹಾರ್ದತೆಯನ್ನು ಕದಡಲು ಹಲವಾರು ವ್ಯಕ್ತಿಗಳನ್ನು ಕೊಲ್ಲಲು ಗುತ್ತಿಗೆಯನ್ನು ನೀಡಿದ್ದಾರೆ ಎಂದು ಆರೋಪಿಸಲಾಗಿದೆ. ಅವರು ಭಾರತದಲ್ಲಿನ ತಮ್ಮ ಸಹಾಯಕರಿಗೆ ಕೆನಡಾದ ಪೌರತ್ವವನ್ನು ನೀಡುವ ಭರವಸೆಯನ್ನೂ ನೀಡಿದ್ದಾರೆ ಎಂದು ಹೇಳಲಾಗಿದೆ.

ಸಿಧು ಮೂಸೆ ವಾಲಾ ಹತ್ಯೆ

29 ವರ್ಷದ ಪಂಜಾಬಿ ಗಾಯಕ ಹಾಗೂ ಕಾಂಗ್ರೆಸ್​ ನಾಯಕ ಸಿಧು ಮೂಸೆ ವಾಲಾ (ಶುಭದೀಪ್ ಸಿಂಗ್​ ಸಿಧು)ರಿಗೆ ಪಂಜಾಬ್​ ಸರ್ಕಾರ ನೀಡಿದ್ದ ಭದ್ರತೆ ಹಿಂಪಡೆದ ಮಾರನೇ ದಿನ, ಅಂದರೆ ಮೇ 29ರಂದು ಅವರನ್ನು ಮಾನ್ಸಾ ಜಿಲ್ಲೆಯ ಜವಾಹರ್ಕೆಯಲ್ಲಿ ಗುಂಡಿಕ್ಕಿ ದುಷ್ಕರ್ಮಿಗಳು ಹತ್ಯೆ ಮಾಡಿದ್ದರು. ಹತ್ಯೆ ಪ್ರಕರಣ ಸಂಬಂಧ ಈವರೆಗೆ ಕೆಲ ಆರೋಪಿಗಳನ್ನು ಬಂಧಿಸಲಾಗಿದ್ದು, ಪ್ರಮುಖ ಆರೋಪಿಗಳಲ್ಲಿ ಒಬ್ಬನಾದ ಸತೀಂದರ್‌ಜೀತ್ ಸಿಂಗ್ ಅಲಿಯಾಸ್ ಗೋಲ್ಡಿ ಬ್ರಾರ್‌ ಕೆನಡಾದಲ್ಲಿ ತಲೆಮರೆಸಿಕೊಂಡಿದ್ದಾನೆ.

ವಿಭಾಗ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ