logo
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Crypto Assets Action Plan: ಕ್ರಿಪ್ಟೋ ಅಸೆಟ್ಸ್‌ ನಿರ್ವಹಣೆಗೆ ಐಎಂಎಫ್‌ 9 ಅಂಶಗಳ ಕ್ರಿಯಾ ಯೋಜನೆ; ಸದಸ್ಯ ರಾಷ್ಟ್ರಗಳಿಗೆ ರವಾನೆ

Crypto assets action plan: ಕ್ರಿಪ್ಟೋ ಅಸೆಟ್ಸ್‌ ನಿರ್ವಹಣೆಗೆ ಐಎಂಎಫ್‌ 9 ಅಂಶಗಳ ಕ್ರಿಯಾ ಯೋಜನೆ; ಸದಸ್ಯ ರಾಷ್ಟ್ರಗಳಿಗೆ ರವಾನೆ

HT Kannada Desk HT Kannada

Feb 24, 2023 10:02 AM IST

ಐಎಂಎಫ್‌

  • Crypto assets action plan: ʻಎಲಮೆಂಟ್ಸ್‌ ಆಫ್‌ ಇಫೆಕ್ಟಿವ್‌ ಪಾಲಿಸೀಸ್‌ ಫಾರ್‌ ಕ್ರಿಪ್ಟೋ ಅಸೆಟ್ಸ್‌ʼ ಎಂಬ ಶೀರ್ಷಿಕೆಯ ಪೇಪರ್‌ ಬಗ್ಗೆ ಸುದೀರ್ಘ ಚರ್ಚೆ ನಡೆಯಿತು. ಕ್ರಿಪ್ಟೋ ಅಸೆಟ್ಸ್‌ಗೆ ಸೂಕ್ತ ನೀತಿ ಕುರಿತಾದ ಪ್ರಮುಖ ಅಂಶಗಳ ಬಗ್ಗೆ ಐಎಂಎಫ್‌ ಸದಸ್ಯರಾಷ್ಟ್ರಗಳಿಗೆ ಆ ಪೇಪರ್‌ ಮಾರ್ಗದರ್ಶನ ನೀಡುತ್ತದೆ ಎಂದು ಅಂತಾರಾಷ್ಟ್ರೀಯ ಹಣಕಾಸು ನಿಧಿ ಹೇಳಿದೆ.

ಐಎಂಎಫ್‌
ಐಎಂಎಫ್‌ (REUTERS)

ಕ್ರಿಪ್ಟೋ ಅಸೆಟ್ಸ್‌ ಅನ್ನು ಯಾವ ರೀತಿ ನಿರ್ವಹಿಸಬೇಕು ಎಂಬುದಕ್ಕೆ ಸಂಬಂಧಿಸಿ ಒಂಬತ್ತು ಅಂಶಗಳ ಕ್ರಿಯಾ ಯೋಜನೆಯನ್ನು ಅಂತಾರಾಷ್ಟ್ರೀಯ ಹಣಕಾಸು ನಿಧಿ (International Monetary Fund) ರೂಪಿಸಿದೆ. ಬಿಟ್‌ಕಾಯಿನ್‌ಗೆ ನೀಡಿದಂತೆ ಕಾನೂನುಬದ್ಧ ಮಾನ್ಯತೆಯನ್ನು ಯಾವುದೇ ಕ್ರಿಪ್ಟೋ ಅಸೆಟ್ಸ್‌ಗೆ ಒದಗಿಸಬೇಡಿ ಎಂದು ಸದಸ್ಯ ರಾಷ್ಟ್ರಗಳಿಗೆ ಅದು ಮನವಿ ಮಾಡಿದೆ.

ಟ್ರೆಂಡಿಂಗ್​ ಸುದ್ದಿ

ಹೆಲಿಕಾಪ್ಟರ್ ಅಪಘಾತದಲ್ಲಿ ಇರಾನ್ ಅಧ್ಯಕ್ಷ ಇಬ್ರಾಹಿಂ ರೈಸಿ ನಿಧನ; ಕಾಪ್ಟರ್ ಅಪಘಾತಕ್ಕೆ ಸಂಬಂಧಿಸಿದ 10 ಅಪ್ಡೇಟ್ಸ್‌

ಪ್ರಧಾನಿ ಮೋದಿ ಮತ್ತೆ ಅಧಿಕಾರ ಚುಕ್ಕಾಣಿ ಹಿಡಿದರೆ, ಯಾವ ವಲಯದ ಷೇರುಗಳು ಲಾಭದಾಯಕವಾಗಲಿವೆ, ಇಲ್ಲಿದೆ ಪರಿಣತರ ಅಭಿಪ್ರಾಯದ ನೋಟ

ತರಗತಿ ವೇಳೆ ಸ್ನೇಹಿತನೊಂದಿಗೆ ಮಾತು, ಕಿವಿ ಕೇಳಿಸದ ಹಾಗೆ ಬಾರಿಸಿದ ಶಿಕ್ಷಕನ ವಿರುದ್ದ ಎಫ್‌ಐಆರ್

Crime News: ಪ್ರೀತಿ ನಿರಾಕರಣೆ, ಪ್ರಿಯತಮೆ ಜತೆಗೆ ಇಡೀ ಕುಟುಂಬವನ್ನೇ ಕೊಂದು ಹಾಕಿದ ಯುವಕ ಆತ್ಮಹತ್ಯೆ!

ʻಎಲಮೆಂಟ್ಸ್‌ ಆಫ್‌ ಇಫೆಕ್ಟಿವ್‌ ಪಾಲಿಸೀಸ್‌ ಫಾರ್‌ ಕ್ರಿಪ್ಟೋ ಅಸೆಟ್ಸ್‌ʼ ಎಂಬ ಶೀರ್ಷಿಕೆಯ ಪೇಪರ್‌ ಬಗ್ಗೆ ತನ್ನ ಕಾರ್ಯನಿರ್ವಾಹಕ ಮಂಡಳಿ ಸುದೀರ್ಘ ಚರ್ಚೆ ನಡೆಸಿತು. ಕ್ರಿಪ್ಟೋ ಅಸೆಟ್ಸ್ ನಿರ್ವಹಣೆಗೆ ಸಂಬಂಧಿಸಿ ಸೂಕ್ತ ನೀತಿಗಳ ಕುರಿತಾದ ಪ್ರಮುಖ ಅಂಶಗಳ ಬಗ್ಗೆ ಐಎಂಎಫ್‌ ಸದಸ್ಯರಾಷ್ಟ್ರಗಳಿಗೆ ಆ ಪೇಪರ್‌ ಮಾರ್ಗದರ್ಶನ ನೀಡುತ್ತದೆ ಎಂದು ಅಂತಾರಾಷ್ಟ್ರೀಯ ಹಣಕಾಸು ನಿಧಿ ಹೇಳಿದೆ.

ಇಂತಹ ಪ್ರಯತ್ನಗಳು ಪ್ರಾಧಿಕಾರಗಳಿಗೆ ಆದ್ಯತೆಯಾಗಿ ಮಾರ್ಪಟ್ಟಿವೆ. ಕಳೆದ ಎರಡು ವರ್ಷಗಳಿಂದ ಹಲವಾರು ಕ್ರಿಪ್ಟೋ ಎಕ್ಸ್‌ಚೇಂಜ್‌ಗಳು ಮತ್ತು ಅಸೆಟ್ಸ್‌ ದೊಡ್ಡ ಪ್ರಮಾಣದ ಕುಸಿತಕ್ಕೆ ಒಳಗಾಗಿ ನಷ್ಟ ಉಂಟುಮಾಡಿವೆ. ಅದರ ವಿರುದ್ಧ ಏನನ್ನೂ ಮಾಡಲಾಗದೇ ಇರುವುದು ಈಗ “ಅನುಕೂಲಕರ”ವಾಗಿದೆ ಎಂದು ಐಎಂಎಫ್‌ ಹೇಳಿದೆ.

"ವಿತ್ತೀಯ ನೀತಿಯ ಚೌಕಟ್ಟುಗಳನ್ನು ಬಲಪಡಿಸುವ ಮೂಲಕ ವಿತ್ತೀಯ ಸಾರ್ವಭೌಮತ್ವ ಮತ್ತು ಸ್ಥಿರತೆಯನ್ನು ಕಾಪಾಡುವುದು ಆದ್ಯತೆಯ ವಿಚಾರವಾಗಿರಲಿ. ಕ್ರಿಪ್ಟೋ ಅಸೆಟ್ಸ್‌ಗೆ ಅಧಿಕೃತ ಕರೆನ್ಸಿ ಅಥವಾ ಕಾನೂನು ಮಾನ್ಯತೆ ನೀಡಬೇಡಿ" ಎಂಬುದು ಪೇಪರ್‌ನಲ್ಲಿರುವ ಗರಿಷ್ಠ ಆದ್ಯತೆಯ ಶಿಫಾರಸು.

ಸೆಂಟ್ರಲ್‌ ಅಮೆರಿಕದ ಎಲ್‌ ಸಾಲ್ವಡಾರ್‌ ದೇಶವು ಬಿಟ್‌ ಕಾಯಿನ್‌ಗೆ ಕಾನೂನು ಮಾನ್ಯತೆ ನೀಡಿದ ಅಧಿಕೃತ ಕರೆನ್ಸಿ ಎಂದು ಘೋಷಿಸಿ ಅಳವಡಿಸಿಕೊಂಡಿತ್ತು. ಈ ರೀತಿ ಮಾಡಿದ ಮೊದಲ ದೇಶ ಇದು. ಇದನ್ನು ಸೆಂಟ್ರಲ್‌ ಆಫ್ರಿಕನ್‌ ರಿಪಬ್ಲಿಕ್‌ ಅನುಸರಿಸಿದೆ. 2021ರ ಕೊನೆಯ ಭಾಗದಲ್ಲಿ ಎಲ್‌ ಸಾಲ್ವಡಾರ್‌ ಕ್ರಮವನ್ನು ಐಎಂಎಫ್‌ ಕಟುವಾಗಿ ಟೀಕಿಸಿ ವಿರೋಧಿಸಿತ್ತು.

G20 ರಾಷ್ಟ್ರಗಳ ನೀತಿ ನಿರೂಪಕರು ಭಾರತದಲ್ಲಿ ಗುರುವಾರ ನಡೆದ ಸಭೆಯ ಕಾರ್ಯಸೂಚಿಯಲ್ಲಿದ್ದ ಪ್ರಕಾರ, ಅತಿಯಾದ ಬಂಡವಾಳ ಹರಿವಿನ ವಿರುದ್ಧ ರಕ್ಷಣೆ, ಕ್ರಿಪ್ಟೋ ಅಸೆಟ್ಸ್‌ ಸುತ್ತ ನಿಸ್ಸಂದಿಗ್ಧವಾದ ತೆರಿಗೆ ನಿಯಮಗಳು ಮತ್ತು ಕಾನೂನುಗಳನ್ನು ಅಳವಡಿಸಿಕೊಳ್ಳುವುದು ಮತ್ತು ಎಲ್ಲಾ ಕ್ರಿಪ್ಟೋ ಮಾರುಕಟ್ಟೆ ವಹಿವಾಟುದಾರರಿಗೆ ಮೇಲ್ವಿಚಾರಣೆಯ ಅಗತ್ಯಗಳನ್ನು ಅಭಿವೃದ್ಧಿಪಡಿಸುವುದು ಮತ್ತು ಜಾರಿಗೊಳಿಸುವುದು ಚರ್ಚೆಗೆ ಒಳಗಾಗಿದೆ.

ಮೇಲ್ವಿಚಾರಣೆಯನ್ನು ಹೆಚ್ಚಿಸಲು ಮತ್ತು ನಿಯಮಗಳನ್ನು ಜಾರಿಗೊಳಿಸಲು ದೇಶಗಳು ಅಂತಾರಾಷ್ಟ್ರೀಯ ವ್ಯವಸ್ಥೆಗಳನ್ನು ಸ್ಥಾಪಿಸಬೇಕು. ಹಾಗೆಯೇ ಜಾಗತಿಕ ವಿತ್ತೀಯ ವ್ಯವಸ್ಥೆಯ ಸ್ಥಿರತೆಯ ಮೇಲೆ ಕ್ರಿಪ್ಟೋದ ಪ್ರಭಾವವನ್ನು ಮೇಲ್ವಿಚಾರಣೆ ಮಾಡುವ ಮಾರ್ಗಗಳನ್ನು ಹೊಂದಿಸುವುದು ಅವಶ್ಯಕತೆ ಇದೆ ಎಂದು ಐಎಂಎಫ್‌ ಹೇಳಿದೆ.

ಕ್ರಿಪ್ಟೋ ಅಸೆಟ್ಸ್‌‌ ಪಕ ಅಳವಡಿಕೆಯ ಕಾರಣ ಹಣಕಾಸು ನೀತಿಯ ಪರಿಣಾಮಕಾರಿತ್ವವನ್ನು ದುರ್ಬಲಗೊಳಿಸಬಹುದು, ಬಂಡವಾಳ ಹರಿವಿನ ನಿರ್ವಹಣಾ ಕ್ರಮಗಳನ್ನು ತಪ್ಪಿಸಬಹುದು ಮತ್ತು ಹಣಕಾಸಿನ ಅಪಾಯಗಳನ್ನು ಉಲ್ಬಣಗೊಳಿಸಬಹುದು ಎಂದು ಅದರ ಕಾರ್ಯನಿರ್ವಾಹಕ ಮಂಡಳಿಯ ಮೌಲ್ಯಮಾಪನವನ್ನು ವಿವರಿಸುತ್ತಾ, ಐಎಂಎಫ್‌ ನಿರ್ದೇಶಕರು ಪೇಪರ್‌ನಲ್ಲಿದ್ದ ಪ್ರಸ್ತಾವನೆಗಳನ್ನು ಸ್ವಾಗತಿಸಿದರು.

ಕ್ರಿಪ್ಟೋ ಸ್ವತ್ತುಗಳಿಗೆ ಅಧಿಕೃತ ಕರೆನ್ಸಿ ಅಥವಾ ಕಾನೂನು ಟೆಂಡರ್ ಸ್ಥಿತಿಯನ್ನು ನೀಡಬಾರದು ಎಂಬ ವಿಚಾರವನ್ನು ಎಲ್ಲರೂ "ಜನರಲ್‌ ಆಗಿ ಒಪ್ಪಿಕೊಂಡರು". ಅದೇ ರೀತಿ ಅಸೆಟ್ಸ್‌ ಮೇಲಿನ ಕಟ್ಟುನಿಟ್ಟಾದ ನಿಷೇಧ ಕ್ರಮವು "ಮೊದಲ-ಉತ್ತಮ ಆಯ್ಕೆ ಅಲ್ಲʼ ಎಂಬ ಅಭಿಪ್ರಾಯ ವ್ಯಕ್ತಪಡಿಸಿದರು. ಆದರೂ, ಕೆಲವು ನಿರ್ದೇಶಕರು ಅವುಗಳನ್ನು ತಳ್ಳಿಹಾಕಬಾರದು ಎಂದು ಹೇಳಿಕೊಂಡಿದ್ದಾರೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ