logo
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Delhi Exit Poll: ದೆಹಲಿ ಮಹಾನಗರ ಬಿಜೆಪಿ ಕೈತಪ್ಪಲಿದೆಯೇ? ಚುನಾವಣಾ ಸಮೀಕ್ಷೆಗಳು ಏನು ಹೇಳುತ್ತಿವೆ?

Delhi Exit Poll: ದೆಹಲಿ ಮಹಾನಗರ ಬಿಜೆಪಿ ಕೈತಪ್ಪಲಿದೆಯೇ? ಚುನಾವಣಾ ಸಮೀಕ್ಷೆಗಳು ಏನು ಹೇಳುತ್ತಿವೆ?

HT Kannada Desk HT Kannada

Dec 05, 2022 09:53 PM IST

Delhi Exit Poll: ದೆಹಲಿ ಮಹಾನಗರ ಬಿಜೆಪಿ ಕೈತಪ್ಪಲಿದೆಯೇ? ಚುನಾವಣಾ ಸಮೀಕ್ಷೆಗಳು ಹೇಳಿದ್ದೇನು

    • ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮಿ ಪಕ್ಷ(ಎಎಪಿ) ಭರ್ಜರಿ ಬಹುಮತದೊಂದಿಗೆ ಅಧಿಕಾರಕ್ಕೆ ಬರಲಿದೆ. ಈ ಮೂಲಕ ಬಿಜೆಪಿಯ 15 ವರ್ಷಗಳ ಆಡಳಿತ ಅಂತ್ಯವಾಗಲಿದೆ ಎಂದು ಚುನಾವಣೋತ್ತರ ಸಮೀಕ್ಷೆಗಳು ಭವಿಷ್ಯ ನುಡಿದಿವೆ.
Delhi Exit Poll: ದೆಹಲಿ ಮಹಾನಗರ ಬಿಜೆಪಿ ಕೈತಪ್ಪಲಿದೆಯೇ? ಚುನಾವಣಾ ಸಮೀಕ್ಷೆಗಳು ಹೇಳಿದ್ದೇನು
Delhi Exit Poll: ದೆಹಲಿ ಮಹಾನಗರ ಬಿಜೆಪಿ ಕೈತಪ್ಪಲಿದೆಯೇ? ಚುನಾವಣಾ ಸಮೀಕ್ಷೆಗಳು ಹೇಳಿದ್ದೇನು (PTI)

ನವದೆಹಲಿ: ಚುನಾವಣೆಗಳು ಮುಗಿದ ತಕ್ಷಣ ಪ್ರಕಟವಾಗುವ ವಿವಿಧ ಚುನಾವಣೋತ್ತರ ಸಮೀಕ್ಷೆಗಳು ಹೊರಬರುತ್ತಿವೆ. ಆ ಪಕ್ಷ ಗೆಲ್ಲಬಹುದು? ಈ ಪಕ್ಷ ಸೋಲಬಹುದು ಎಂದು ಚರ್ಚೆಗಳಾಗುತ್ತಿವೆ. ಇದೀಗ ದೆಹಲಿ ಮಹಾನಗರ ಪಾಲಿಕೆ ಚುನಾವಣೆಯ ಚುನಾವಣೋತ್ತರ ಸಮೀಕ್ಷೆಗಳು ಹೊರಬಿದ್ದಿದ್ದು, ಅಚ್ಚರಿಯ ಫಲಿತಾಂಶಗಳ ಮುನ್ನೋಟ ನೀಡಿದೆ.

ಟ್ರೆಂಡಿಂಗ್​ ಸುದ್ದಿ

ಇಪಿಎಫ್‌ಒ; ಈ 3 ಕಾರಣ ನೀಡಿದ್ರೆ ಇಪಿಎಫ್‌ ಹಣ ಬೇಗ ಹಿಂಪಡೆಯಬಹುದು, ಹಂತ ಹಂತದ ಮಾರ್ಗದರ್ಶಿ ಇಲ್ಲಿದೆ ನೋಡಿ

ಗುವಾಹಟಿ ಬೀದಿಯಲ್ಲಿ ಸೋಷಿಯಲ್ ಮೀಡಿಯಾ ಪ್ರಭಾವಿಯ ಮಂಜುಲಿಕಾ ನೃತ್ಯನಾಟಕ, ದಂಗಾಗಿ ನೋಡುತ್ತ ನಿಂತ ಜನ-ವೈರಲ್ ವಿಡಿಯೋ

Gold Rate Today: ಬಂಗಾರ ಪ್ರಿಯರಿಗೆ ಮತ್ತೆ ನಿರಾಸೆ; ತುಸು ಕಡಿಮೆಯಾಗಿ ಪುನಃ ಹೆಚ್ಚಾದ ಚಿನ್ನದ ದರ, ಬೆಳ್ಳಿ ಬೆಲೆಯೂ ಏರಿಕೆ

SBI FD Rate Hike: ಸ್ಥಿರ ಠೇವಣಿಗಳ ಬಡ್ಡಿದರ ಹೆಚ್ಚಿಸಿದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ; ಎಸ್‌ಬಿಐ ಎಫ್‌ಡಿಗಳ ಬಡ್ಡಿದರ ವಿವರ ಹೀಗಿದೆ

ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮಿ ಪಕ್ಷ(ಎಎಪಿ) ಭರ್ಜರಿ ಬಹುಮತದೊಂದಿಗೆ ಅಧಿಕಾರಕ್ಕೆ ಬರಲಿದೆ. ಈ ಮೂಲಕ ಬಿಜೆಪಿಯ 15 ವರ್ಷಗಳ ಆಡಳಿತ ಅಂತ್ಯವಾಗಲಿದೆ ಎಂದು ಸಮೀಕ್ಷೆಗಳು ಭವಿಷ್ಯ ನುಡಿದಿವೆ.

ದೆಹಲಿ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಎಎಪಿ 149 ರಿಂದ 171 ಸ್ಥಾನ ಪಡೆಯುವ ಮೂಲಕ ಮೊದಲ ಬಾರಿಗೆ ಅಧಿಕಾರಕ್ಕೆ ಬರಲಿದ್ದು, ಆಡಳಿತರೂಢ ಬಿಜೆಪಿಗೆ ತೀವ್ರ ಹಿನ್ನಡೆಯಾಗಲಿದೆ ಎಂದು ಇಂಡಿಯಾ ಟುಡೆ ಸಮೀಕ್ಷೆ ಹೇಳಿದೆ.

ದೆಹಲಿ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಎಎಪಿಯು 146 ರಿಂದ 156 ಸ್ಥಾನ ಪಡೆಯಲಿದ್ದು, ಬಿಜೆಪಿಯು 84 ರಿಂದ 94 ಸ್ಥಾನಕ್ಕೆ ತೃಪ್ತಿ ಪಡಬೇಕಾಗಬಹುದು ಎಂದು

ಟೈಮ್ಸ್‌ ನೌ ಎಕ್ಸಿಟ್‌ ಪೋಲ್ ಸಮೀಕ್ಷೆ ತಿಳಿಸಿದೆ. ಈ ಸಮೀಕ್ಷೆಯ ಪ್ರಕಾರ ಕಾಂಗ್ರೆಸ್‌ ಕೇವಲ 6 ರಿಂದ 10 ಸ್ಥಾನ ಗೆಲ್ಲಲಿದೆ.

ಈ ಚುನಾವಣೆಯಲ್ಲಿ ಎಎಪಿ ಪಕ್ಷವು 159 ರಿಂದ 175 ಸ್ಥಾನಗಳನ್ನು ಗೆಲ್ಲಲಿದೆ ಮತ್ತು 70 ರಿಂದ 92 ಸ್ಥಾನಗಳನ್ನು ಗೆಲ್ಲಬಹುದು ಎಂದು ನ್ಯೂಸ್ ಎಕ್ಸ್‌– ಜನ್‌ ಕೀ ಬಾತ್‌ ತಿಳಿಸಿದೆ. ಕಾಂಗ್ರೆಸ್‌ -04 ರಿಂದ 7 ಸ್ಥಾನಗಳನ್ನು ಮಾತ್ರ ಗೆಲ್ಲಬಹುದೆಂದು ಈ ಸಮೀಕ್ಷೆ ಅಭಿಪ್ರಾಯಪಟ್ಟಿದೆ.

ಡಿಸೆಂಬರ್‌ 4 ರಂದು ದೆಹಲಿ ಪಾಲಿಕೆಯ 250 ಸ್ಥಾನಗಳಿಗೆ ಚುನಾವಣೆ ನಡೆದಿದ್ದು, ಡಿಸೆಂಬರ್ 7 ರಂದು ಫಲಿತಾಂಶ ಪ್ರಕಟವಾಗಲಿದೆ. ಸಮೀಕ್ಷೆಗಳು ಹೇಳಿದಂತೆ ಅಧಿಕಾರವು ಆಪ್‌ ಪಾಲಾಗಲಿದೆಯೇ ಎಂದು ಕಾದು ನೋಡಬೇಕಿದೆ.

ಇಂಡಿಯಾ ಟುಡೆ ಸಮೀಕ್ಷೆ

ಆಮ್ ಆದ್ಮಿ ಪಾರ್ಟಿ: 149 ರಿಂದ 171

ಬಿಜೆಪಿ: 69 ರಿಂದ 91

ಕಾಂಗ್ರೆಸ್: 3 ರಿಂದ 7

ಇತರರ: 5 ರಿಂದ 9

ಟೈಮ್ಸ್‌ ನೌ ಎಕ್ಸಿಟ್‌ ಪೋಲ್

ಎಎಪಿ – 146 ರಿಂದ 156 ಸ್ಥಾನ

ಬಿಜೆಪಿ – 84 ರಿಂದ 94 ಸ್ಥಾನ

ಕಾಂಗ್ರೆಸ್ – 6 ರಿಂದ 10 ಸ್ಥಾನ

ನ್ಯೂಸ್ ಎಕ್ಸ್‌– ಜನ್‌ ಕೀ ಬಾತ್‌

ಎಎಪಿ -159 ರಿಂದ 175 ಸ್ಥಾನಗಳು

ಬಿಜೆಪಿ - 70 ರಿಂದ 92 ಸ್ಥಾನಗಳು

ಕಾಂಗ್ರೆಸ್‌ -04 ರಿಂದ 7 ಸ್ಥಾನಗಳು

ವಿಭಾಗ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ