logo
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Eknath Shinde: ದ್ರೋಹ ಮಾಡಿಲ್ಲ, ಅನ್ಯಾಯದ ವಿರುದ್ಧ ಬಂಡಾಯ ಎದ್ದೆ ಅಷ್ಟೇ - ಏಕನಾಥ್ ಶಿಂಧೆ

Eknath Shinde: ದ್ರೋಹ ಮಾಡಿಲ್ಲ, ಅನ್ಯಾಯದ ವಿರುದ್ಧ ಬಂಡಾಯ ಎದ್ದೆ ಅಷ್ಟೇ - ಏಕನಾಥ್ ಶಿಂಧೆ

HT Kannada Desk HT Kannada

Jul 04, 2022 05:34 PM IST

ಮಹಾರಾಷ್ಟ್ರದ ನೂತನ ಮುಖ್ಯಮಂತ್ರಿ ಏಕನಾಥ್ ಶಿಂಧೆ

    • ವಿಶ್ವಾಸ ಮತಯಾಚನೆಯಲ್ಲಿ ಗೆದ್ದ ಬಳಿಕ ಮಾತನಾಡಿದ ಶಿಂಧೆ, ನಾನು ಯಾರಿಗೂ ಯಾವುದೇ ದ್ರೋಹ ಮಾಡಿಲ್ಲ, ಅನ್ಯಾಯದ ವಿರುದ್ಧ ಬಂಡಾಯ ಎದ್ದೆ ಅಷ್ಟೇ ಎಂದು ಹೇಳಿದರು.
ಮಹಾರಾಷ್ಟ್ರದ ನೂತನ ಮುಖ್ಯಮಂತ್ರಿ ಏಕನಾಥ್ ಶಿಂಧೆ
ಮಹಾರಾಷ್ಟ್ರದ ನೂತನ ಮುಖ್ಯಮಂತ್ರಿ ಏಕನಾಥ್ ಶಿಂಧೆ

ಮುಂಬೈ (ಮಹಾರಾಷ್ಟ್ರ): ನಾನು ಯಾರಿಗೂ ಯಾವುದೇ ದ್ರೋಹ ಮಾಡಿಲ್ಲ, ಅನ್ಯಾಯದ ವಿರುದ್ಧ ಬಂಡಾಯ ಎದ್ದೆ ಅಷ್ಟೇ ಎಂದು ಮಹಾರಾಷ್ಟ್ರದ ನೂತನ ಮುಖ್ಯಮಂತ್ರಿ ಏಕನಾಥ್ ಶಿಂಧೆ ಹೇಳಿದರು.

ಟ್ರೆಂಡಿಂಗ್​ ಸುದ್ದಿ

Gold Rate Today: ವಾರಾಂತ್ಯದಲ್ಲಿ ತುಸು ಇಳಿಕೆಯಾದ ಹಳದಿ ಲೋಹದ ಬೆಲೆ; ಶನಿವಾರ ಬೆಳ್ಳಿ ದರ ತಟಸ್ಥ

Gold Rate Today: ಶುಕ್ರವಾರವೂ ಏರಿಕೆಯಾದ ಚಿನ್ನ, ಬೆಳ್ಳಿ ದರ; ದೇಶದಲ್ಲಿಂದು ಆಭರಣ ದರ ಎಷ್ಟಾಗಿದೆ ಗಮನಿಸಿ

ಇಪಿಎಫ್‌ಒ; ಈ 3 ಕಾರಣ ನೀಡಿದ್ರೆ ಇಪಿಎಫ್‌ ಹಣ ಬೇಗ ಹಿಂಪಡೆಯಬಹುದು, ಹಂತ ಹಂತದ ಮಾರ್ಗದರ್ಶಿ ಇಲ್ಲಿದೆ ನೋಡಿ

ಗುವಾಹಟಿ ಬೀದಿಯಲ್ಲಿ ಸೋಷಿಯಲ್ ಮೀಡಿಯಾ ಪ್ರಭಾವಿಯ ಮಂಜುಲಿಕಾ ನೃತ್ಯನಾಟಕ, ದಂಗಾಗಿ ನೋಡುತ್ತ ನಿಂತ ಜನ-ವೈರಲ್ ವಿಡಿಯೋ

ಸದನದ ಎರಡು ದಿನಗಳ ವಿಶೇಷ ಅಧಿವೇಶನದ ಕೊನೆಯ ದಿನವಾದ ಇಂದು ವಿಶ್ವಾಸ ಮತಯಾಚನೆಯಲ್ಲಿ ಗೆದ್ದ ಬಳಿಕ ಮಾತನಾಡಿದ ಶಿಂಧೆ, ನನ್ನೊಂದಿಗೆ ಬರುವಂತೆ ನಾನು ಯಾರನ್ನೂ ಒತ್ತಾಯಿಸಿಲ್ಲ. ನಾನು ಯಾವ ದ್ರೋಹದಲ್ಲಿಯೂ ಭಾಗಿಯಾಗಿಲ್ಲ. ನಾವು ಶಿವಸೇನೆ ಕಾರ್ಯಕರ್ತರು ಮತ್ತು ಹಾಗೆಯೇ ಉಳಿಯುತ್ತೇವೆ ಎಂದರು.

ಕಾಂಗ್ರೆಸ್​​ ಮತ್ತು ಎನ್​​ಸಿಪಿಯೊಂದಿಗಿನ ಮೈತ್ರಿಯ ನಂತರ ಶಿವಸೇನೆಯ ಶಾಸಕರು ತಮ್ಮ ಭವಿಷ್ಯದ ಬಗ್ಗೆ ಚಿಂತಿತರಾಗಿದ್ದರು. ಅವರು ಪಕ್ಷದ ನಿಜವಾದ ಮಿತ್ರ ಬಿಜೆಪಿಯೊಂದಿಗೆ ಮರಳಲು ಬಯಸಿದ್ದರು. ಹೀಗಾಗಿ ನನ್ನೊಂದಿಗೆ ಬಂದರು. ನಾವು ಗುಜರಾತ್​ಗೆ ಹೋಗದಂತೆ ನಮ್ಮನ್ನು ತಡೆಯಲು ಪ್ರಯತ್ನಿಸಲಾಯಿತು. ಪೊಲೀಸರು ರಸ್ತೆಯನ್ನು ನಿರ್ಬಂಧಿಸಲು ಪ್ರಯತ್ನಿಸಿದರು ಆದರೆ ತಪ್ಪಿಸಿಕೊಳ್ಳುವುದು ಹೇಗೆ ಎಂದು ನಮಗೆ ತಿಳಿದಿತ್ತು ಎಂದು ಇದೇ ವೇಳೆ ಶಿಂಧೆ ಹೇಳಿದರು.

ಪ್ರಜಾಪ್ರಭುತ್ವದಲ್ಲಿ ಒಬ್ಬರು ಗೌರವಿಸಬೇಕಾದದ್ದು ಬಹುಮತವನ್ನ. ನಮಗೆ ಬಹುಮತವಿದೆ, ನೀವು ಅದನ್ನು ಒಪ್ಪಿಕೊಳ್ಳಬೇಕು. ಫಡ್ನವೀಸ್ ಮತ್ತು ನನ್ನ ಸಾರಥ್ಯದಲ್ಲಿ ಮುಂದೆ ನಡೆಯುವ ಚುನಾವಣೆಯಲ್ಲಿ 200 ಮಂದಿ ಆಯ್ಕೆಯಾಗುತ್ತೇವೆ ಎಂದರು. ಶೀಘ್ರದಲ್ಲೇ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ವ್ಯಾಟ್ ಅನ್ನು ಕಡಿಮೆ ಮಾಡುವುದಾಗಿ ಭರವಸೆ ನೀಡಿದ ಅವರು, ಈ ಬಗ್ಗೆ ಸಂಪುಟ ಸಭೆಯಲ್ಲಿ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಇದೇ ವೇಳೆ ಶಿಂಧೆ ಹೇಳಿದರು.

ವಿಶ್ವಾಸ ಮತಯಾಚನೆಯಲ್ಲಿ ಶಿಂಧೆಗೆ ಗೆಲುವು

ವಿಶ್ವಾಸ ಮತಯಾಚನೆಯಲ್ಲಿ ಗೆಲುವು ಸಾಧಿಸುವಲ್ಲಿ ಏಕನಾಥ್​ ಶಿಂಧೆ ಯಶಸ್ವಿಯಾಗಿದ್ದು, ಮಹಾರಾಷ್ಟ್ರ ರಾಜಕೀಯ ಹೈಡ್ರಾಮಕ್ಕೆ ಕೊನೆಗೂ ತೆರೆ ಬಿದ್ದಿದೆ. ಶಿವಸೇನೆ-ಬಿಜೆಪಿ ಮೈತ್ರಿಯ ನೂತನ ಮಹಾರಾಷ್ಟ್ರ ಸರ್ಕಾರ ಬಹುಮತ ಸಾಬೀತು ಪಡಿಸುವ ಮೂಲಕ ರಾಜ್ಯದ ಮುಖ್ಯಮಂತ್ರಿ ಮತ್ತು ಶಿವಸೇನೆಯ ನಾಯಕರಾಗಿ ಶಿಂಧೆ ಅವರ ಸ್ಥಾನ ಭದ್ರವಾಯಿತು. 288 ಸದಸ್ಯ ಬಲದ ಮಹಾರಾಷ್ಟ್ರ ವಿಧಾನಸಭೆಯಲ್ಲಿ ಶಿಂಧೆ ಪರವಾಗಿ 164 ಮತಗಳು ಚಲಾವಣೆಗೊಂಡರೆ, ಹೊಸದಾಗಿ ಅಸ್ತಿತ್ವಕ್ಕೆ ಬಂದ ಬಿಜೆಪಿ-ಶಿಂಧೆ ಪಾಳಯ ಒಕ್ಕೂಟದ ವಿರುದ್ಧ 99 ಮತಗಳು ಚಲಾವಣೆಗೊಂಡಿವೆ. ಒಟ್ಟು ಮೂವರು ಸದಸ್ಯರು ಮತದಾನದಿಂದ ದೂರ ಉಳಿದಿದ್ದರು..

ಶಿವಸೇನೆ, ಎನ್​ಸಿಪಿ ಮತ್ತು ಕಾಂಗ್ರೆಸ್​ ಮೈತ್ರಿಯ ಮಹಾ ವಿಕಾಸ್ ಅಘಾಡಿ (ಎಂವಿಎ) ಸರ್ಕಾರದ ವಿರುದ್ಧ ಶಾಸಕರನ್ನು ಬಂಡಾಯ ಏಳುವಂತೆ ಮಾಡಿ, ಸರ್ಕಾರವನ್ನು ಪತನಗೊಳಿಸಿ, ಉದ್ಧವ್​ ಠಾಕ್ರೆಯನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಿ, ಜೂನ್​ 30 ರಂದು ಮಹಾರಾಷ್ಟ್ರದ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸುವಲ್ಲಿ ಏಕನಾಥ್ ಶಿಂಧೆ ಯಶಸ್ವಿಯಾಗಿದ್ದರು. ಅಂದೇ ಬಿಜೆಪಿ ನಾಯಕ, ಮಹಾರಾಷ್ಟ್ರ ಮಾಜಿ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್​ ಉಪ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದರು.

ವಿಶ್ವಾಸಮತ ಯಾಚನೆ ಶಿವಸೇನೆ-ಬಿಜೆಪಿ ಮೈತ್ರಿಯ ನೂತನ ಸಮ್ಮಿಶ್ರ ಸರ್ಕಾರಕ್ಕೆ ದೊಡ್ಡ ಸವಾಲೇನೂ ಆಗಿರಲಿಲ್ಲ. ಏಕೆಂದರೆ 288 ಸದಸ್ಯ ಬಲದ ಮಹಾರಾಷ್ಟ್ರ ವಿಧಾನಸಭೆಯಲ್ಲಿ 50ಕ್ಕೂ ಹೆಚ್ಚು ಶಾಸಕರು ಶಿಂಧೆ ಬಣದೊಂದಿಗೆ ಬೆಂಬಲವಾಗಿ ನಿಂತಿದ್ದರು. ಮತ್ತೊಂದೆಡೆ 106 ಶಾಸಕರು ಬಿಜೆಪಿಯವರಾಗಿದ್ದಾರೆ. ಹೀಗಾಗಿ ಈ ಎರಡು ವರ್ಗದ ಬೆಂಬಲ ಸೇರಿದರೆ 156 ಸದಸ್ಯರ ಬೆಂಬಲ ಸಿಕ್ಕಂತಾಗುತ್ತದೆ. ಬಹುಮತಕ್ಕೆ ಇಲ್ಲಿ 145 ಸದಸ್ಯರ ಬೆಂಬಲ ಸಾಕು. ಇದೀಗ 164 ಮತಗಳನ್ನು ಶಿಂಧೆ ಪಡೆದುಕೊಂಡಿದ್ದಾರೆ. ಇನ್ನು ವಿಶ್ವಾಸ ಮತಯಾಚನೆ ಆರಂಭಕ್ಕೂ ಮುನ್ನ ಶಿವಸೇನೆಯ ಮತ್ತೊಬ್ಬರು ಶಾಸಕರಾದ ಸಂತೋಷ್​ ಬಂಗಾರ್ ಹಾಗೂ ಶ್ಯಾಮಸುಂದರ್ ಶಿಂಧೆ ಅವರು ಏಕನಾಥ್​​ ಶಿಂಧೆ ಬಣವನ್ನು ಸೇರಿಕೊಳ್ಳುವ ಮೂಲಕ ಉದ್ಧವ್ ಠಾಕ್ರೆಗೆ ಶಾಕ್ ನೀಡಿದರು.

ವಿಭಾಗ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ