logo
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  ಇಂದಿರಾ ಗಾಂಧಿ ಭದ್ರತಾಧಿಕಾರಿಯಾಗಿದ್ದ ಲಾಲ್ದುಹೋಮ ಈಗ ಮಿಜೋರಾಂ ಮುಖ್ಯಮಂತ್ರಿ; ರಾಜಕೀಯ ಹೋರಾಟದ ಹಾದಿ ಹೀಗಿತ್ತು

ಇಂದಿರಾ ಗಾಂಧಿ ಭದ್ರತಾಧಿಕಾರಿಯಾಗಿದ್ದ ಲಾಲ್ದುಹೋಮ ಈಗ ಮಿಜೋರಾಂ ಮುಖ್ಯಮಂತ್ರಿ; ರಾಜಕೀಯ ಹೋರಾಟದ ಹಾದಿ ಹೀಗಿತ್ತು

Raghavendra M Y HT Kannada

Dec 06, 2023 07:59 PM IST

ಜೋರಂ ಪೀಪಲ್ಸ್ ಮೂಮೆಂಟ್-ಝಡ್‌ಪಿಎಂ ಪಕ್ಷದ ಮುಖ್ಯಸ್ಥ ಹಾಗೂ ಮಿಜೋರಾಂ ಮುಖ್ಯಮಂತ್ರಿಯಾಗಿ ಆಯ್ಕೆಯಾಗಿರುವ ಲಾಲ್ದುಹೋಮಾ (ಪಿಟಿಐ)

  • ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರ ಭದ್ರತಾಧಿಕಾರಿಯಾಗಿದ್ದ ಲಾಲ್ದುಹೋಮ ಮಿಜೋರಾಂ ಮುಖ್ಯಮಂತ್ರಿಯಾಗಿ ಆಯ್ಕೆ ಯಾಗಿದ್ದಾರೆ. ಅವರ ರಾಜಕೀಯ ಹೋರಾಟದ ಚಿತ್ರಣ ಇಲ್ಲಿದೆ.

ಜೋರಂ ಪೀಪಲ್ಸ್ ಮೂಮೆಂಟ್-ಝಡ್‌ಪಿಎಂ ಪಕ್ಷದ ಮುಖ್ಯಸ್ಥ ಹಾಗೂ ಮಿಜೋರಾಂ ಮುಖ್ಯಮಂತ್ರಿಯಾಗಿ ಆಯ್ಕೆಯಾಗಿರುವ ಲಾಲ್ದುಹೋಮಾ (ಪಿಟಿಐ)
ಜೋರಂ ಪೀಪಲ್ಸ್ ಮೂಮೆಂಟ್-ಝಡ್‌ಪಿಎಂ ಪಕ್ಷದ ಮುಖ್ಯಸ್ಥ ಹಾಗೂ ಮಿಜೋರಾಂ ಮುಖ್ಯಮಂತ್ರಿಯಾಗಿ ಆಯ್ಕೆಯಾಗಿರುವ ಲಾಲ್ದುಹೋಮಾ (ಪಿಟಿಐ)

ಮಿಜೋರಾಂ ಮುಖ್ಯಮಂತ್ರಿಯಾಗಿ ಜೋರಾಂ ಪೀಪಲ್ಸ್ ಮೂಮೆಂಟ್-ಝಡ್‌ಪಿಎಂ ಪಕ್ಷದ ಮುಖ್ಯಸ್ಥ ಲಾಲ್ದುಹೋಮ ಅವರು ಆಯ್ಕೆಯಾಗಿದ್ದಾರೆ. ಡಿಸೆಂಬರ್ 4 ರಂದು ಪ್ರಕಟವಾಗಿದ್ದ ಮಿಜೋರಾಂ ಚುನಾವಣಾ ಫಲಿತಾಂಶದಲ್ಲಿ ಝಡ್‌ಪಿಎಂ 27 ಸ್ಥಾನಗಳನ್ನು ಗೆಲ್ಲುವ ಮೂಲಕ ಆಡಳಿತಾರೂಢ ಮಿಜೋರಾಂ ನ್ಯಾಷನಲ್ ಫ್ರಂಟ್-ಝಡ್‌ಎನ್‌ಎಫ್ ಹಾಗೂ ಕಾಂಗ್ರೆಸ್ ಪಕ್ಷಕ್ಕೆ ಮಣ್ಣು ಮುಕ್ಕಿಸಿ ಜಯಭೇರಿ ಬಾರಿಸಿದೆ.

ಟ್ರೆಂಡಿಂಗ್​ ಸುದ್ದಿ

ಹೆಲಿಕಾಪ್ಟರ್ ಅಪಘಾತದಲ್ಲಿ ಇರಾನ್ ಅಧ್ಯಕ್ಷ ಇಬ್ರಾಹಿಂ ರೈಸಿ ನಿಧನ; ಕಾಪ್ಟರ್ ಅಪಘಾತಕ್ಕೆ ಸಂಬಂಧಿಸಿದ 10 ಅಪ್ಡೇಟ್ಸ್‌

ಪ್ರಧಾನಿ ಮೋದಿ ಮತ್ತೆ ಅಧಿಕಾರ ಚುಕ್ಕಾಣಿ ಹಿಡಿದರೆ, ಯಾವ ವಲಯದ ಷೇರುಗಳು ಲಾಭದಾಯಕವಾಗಲಿವೆ, ಇಲ್ಲಿದೆ ಪರಿಣತರ ಅಭಿಪ್ರಾಯದ ನೋಟ

ತರಗತಿ ವೇಳೆ ಸ್ನೇಹಿತನೊಂದಿಗೆ ಮಾತು, ಕಿವಿ ಕೇಳಿಸದ ಹಾಗೆ ಬಾರಿಸಿದ ಶಿಕ್ಷಕನ ವಿರುದ್ದ ಎಫ್‌ಐಆರ್

Crime News: ಪ್ರೀತಿ ನಿರಾಕರಣೆ, ಪ್ರಿಯತಮೆ ಜತೆಗೆ ಇಡೀ ಕುಟುಂಬವನ್ನೇ ಕೊಂದು ಹಾಕಿದ ಯುವಕ ಆತ್ಮಹತ್ಯೆ!

ಕ್ರಿಶ್ಚಿಯನ್ ಬಹುಸಂಖ್ಯಾತರ ಗುಡ್ಡಗಾಡು ರಾಜ್ಯದಲ್ಲಿ ರಾಷ್ಟ್ರೀಯ ಪಕ್ಷಗಳಾದ ಕಾಂಗ್ರೆಸ್ ಮತ್ತು ಬಿಜೆಪಿಯನ್ನು ಅಲ್ಲಿನ ಜನ ತಿರಸ್ಕರಿಸಿದ್ದಾರೆ. ಸಿಎಂ ಹುದ್ದೆಗೇರುತ್ತಿರುವ ಝಡ್‌ಪಿಎಂ ನಾಯಕ ಲಾಲ್ದುಹೋಮ ಅವರು ರಾಜಕೀಯಕ್ಕೆ ಬರುವುದಕ್ಕೂ ಮುನ್ನ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರ ಭದ್ರತಾಧಿಕಾರಿಯಾಗಿದ್ದವರು. ಲಾಲ್ದು ಅವರು ಐಪಿಎಸ್ ಹುದ್ದೆಗೆ ರಾಜೀನಾಮೆ ನೀಡಿ ಕೊಟ್ಟು ರಾಜಕೀಯಕ್ಕೆ ಇಳಿದಿದ್ದು ಹೇಗೆ, ರಾಜಕೀಯ ಹಾದಿ ಹಿಡಿಯಲು ಕಾರವೇನನು ಅನ್ನೋದನ್ನು ತಿಳಿಯೋಣ.

ಐಪಿಎಸ್ ಹುದ್ದೆ ತೊರೆದು ಇಂದಿರಾ ಗಾಂಧಿ ಟಾಸ್ಕ್ ಪೂರೈಸಿದ್ದ ಲಾಲ್ದುಹೋಮ

1977ರಲ್ಲಿ ಐಪಿಎಸ್ ಹುದ್ದೆಗೆ ಸೇರಿದ್ದ ಲಾಲ್ದುಹೋಮ ಅವರು ಕೇವಲ ಏಳೇ ವರ್ಷಗಳಲ್ಲಿ ಅಂದರೆ 1984ರಲ್ಲಿ ಅಂದಿನ ಪ್ರಧಾನಿ ಇಂದಿರಾ ಗಾಂಧಿ ಅವರ ಭದ್ರತಾ ಅಧಿಕಾರಿಯಾಗಿ ಜವಾಬ್ದಾರಿಯನ್ನು ವಹಿಸಿಕೊಂಡಿದ್ದರು. ಯುವ ಐಪಿಎಸ್‌ ಅಧಿಕಾರಿಯಾಗಿದ್ದ ಇವರಿಗೆ ಇಂದಿರಾ ಅವರು ನಾಗರಿಕಾ ಸೇವೆಯನ್ನು ತ್ಯಜಿಸಿ ಪ್ರಮುಖ ಟಾಸ್ಕ್‌ಗಳನ್ನು ನಿರ್ವಹಿಸುವಂತೆ ಸೂಚಿಸುತ್ತಾರೆ. ಇದರಲ್ಲಿ ಪ್ರಮುಖವಾಗಿ ಅಂದಿನ ಬಂಡುಕೋರ ಸಂಘಟನೆಯಾಗಿದ್ದ ಮಿಜೋ ನ್ಯಾಷನಲ್ ಫ್ರಂಟ್‌ನ ಮುಖ್ಯಸ್ಥ ಲಾಲ್ಡೆಂಗಾ ಅವರೊಂದಿಗೆ ಶಾಂತಿ ಮಾತುಕತೆ ನಡೆಸುವುದು ಕೂಡ ಸೇರಿತ್ತು.

ಇಂದಿರಾ ಗಾಂಧಿ ಅವರ ಸೂಚನೆಯಂತೆ ನಾಗರಿಕ ಸೇವೆಯನ್ನು ತ್ಯಜಿಸಿದ ಲಾಲ್ದುಹೋಮ ಅವರು ಕಾಂಗ್ರೆಸ್ ಪಕ್ಷ ಸೇರುತ್ತಾರೆ. ಇದಾದ ಬಳಿಕ ಗಾಂಧಿ ಅವರ ಸೂಚನೆಯಂತೆ ಒಂದಾಂಗಿ ಪ್ರಮುಖ ಕೆಲಸವನ್ನು ನಿರ್ವಹಿಸುತ್ತಾರೆ. ಮಿಜೋ ನ್ಯಾಷನಲ್ ಫ್ರಂಟ್‌ನ ಮುಖ್ಯಸ್ಥ ಲಾಲ್ಡೆಂಗಾ ಅವರೊಂದಿಗೆ ಶಾಂತಿ ಮಾತುಕತೆಗಾಗಿ ಲಂಡನ್‌ಗೆ ಹಾರುತ್ತಾರೆ. ಲಂಡನ್‌ನಲ್ಲಿ ನೆಲೆಸಿದ್ದ ಲಾಲ್ಡೆಂಗಾ ಅವರೊಂದಿಗೆ ಮಾತುಕತೆ ಯಶಸ್ವಿಯಾಗುತ್ತದೆ.

ಆ ನಂತರ ಬಂಡುಕೋರ ನಾಯಕ ಲಾಲ್ಡೆಂಗಾ ಅವರನ್ನು ಭಾರತಕ್ಕೆ ಕರೆತಂದು ಐತಿಹಾಸಿಕ ಶಾಂತಿಕ ಒಪ್ಪಂದಕ್ಕೆ ಸಹಿ ಮಾಡಿಸುವಲ್ಲಿ ಯಶಸ್ಸು ಕಾಣುತ್ತಾರೆ. ದಂಗೆಗೆ ತೆರೆ ಬೀಳುತ್ತದೆ. ಎಂಎನ್‌ಎಫ್ ಅನ್ನು ರಾಜಕೀಯಕ್ಕೆ ತರಲಾಗಿತ್ತು. ಕಾಂಗ್ರೆಸ್‌ನಲ್ಲಿ ಲಾಲ್ದುಹೋಮ ಅವರು ಕೆಲ ವರ್ಷಗಳ ಬಳಿಕ ಕಾಂಗ್ರೆಸ್ ತೊರೆಯುತ್ತಾರೆ. 2017ರಲ್ಲಿ ತಮ್ಮದೇ ಆದ ಜೋರಾ ಪೀಪಲ್ಸ್ ಮೂಮೆಂಟ್-ಝಡ್‌ಪಿಎಂ ಎಂಬ ಪಕ್ಷವನ್ನು ಕಟ್ಟಿಕೊಂಡು ಹೋರಾಟ ಮುಂದುವರಿಸಿದ್ದರು. ಇದೀಗ 2023 ಮಿಜೋರಾಂ ವಿಧಾನಸಭೆ ಚುನಾವಣೆಯಲ್ಲಿ ಆಡಳಿತಾರೂಢ ಪಕ್ಷವಾಗಿದ್ದ ಎಂಎನ್‌ಎಫ್‌ ಅನ್ನು ಹೀನಾಯವಾಗಿ ಸೋಲಿಸಿರುವ ಲಾಲ್ದುಹೋಮ ಅವರ ಝಡ್‌ಪಿಎಎಂ ಸ್ಪಷ್ಟಬಹುಮತದೊಂದಿಗೆ ಜಯಭೇರಿ ಬಾರಿಸಿದೆ. ಸರ್ಕಾರ ರಚಿಸಲು ಬೇಕಿರುವ ಎಲ್ಲ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ.

ವಿಶೇಷ ಎಂದರೆ ಬಿಜೆಪಿ ನೇತೃತ್ವದ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ ಮತ್ತು ಈಶಾನ್ಯ ಪ್ರಜಾಸತ್ತಾತ್ಮಕ ಒಕ್ಕೂಟ ಸೇರುವ ಮೂಲಕ ಎಂಎನ್‌ಎಫ್ ತನ್ನ ಪ್ರಾದೇಶಿಕ ಗುರುತನ್ನು ಕಳೆದುಕೊಂಡಿದೆ. ಹೀಗಾಗಿ ಮೀಜೋರಾಂ ಜನ ಆ ಪಕ್ಷವನ್ನು ತಿರಸ್ಕರಿಸಿದ್ದಾರೆ. ಎಂಎನ್‌ಎಫ್ ದುರ್ಬಲವಾಗಲು ಇದೂ ಕೂಡ ಒಂದು ಕಾರಣ ಅಂತ ಲಾಲ್ದುಹೋಮಾ ಹೇಳಿದ್ದಾರೆ.

40 ವಿಧಾನಸಭಾ ಕ್ಷೇತ್ರಗಳ ಮಿಜೋರಾಂ ಚುನಾವಣೆಯಲ್ಲಿ ಝಡ್‌ಪಿಎಂ 27 ಸ್ಥಾನಗಳನ್ನು ಗೆದ್ದುಕೊಂಡಿತ್ತು. ಎಂಎನ್‌ಎಫ್‌ ಕೇವಲ 10 ಸ್ಥಾನಗಳಿಗೆ ತೃಪ್ತಿಪಟ್ಟುಕೊಂಡಿದೆ. ಮಿಜೋರಾಂನ ಮತದಾರರು ಎರಡು ರಾಷ್ಟ್ರೀಯ ಪಕ್ಷಗಳನ್ನು ತಿರಸ್ಕರಿಸಿದ್ದಾರೆ. ಇಲ್ಲಿ ಕಾಂಗ್ರೆಸ್ ಕೇವಲ 2 ಸ್ಥಾನ ಗೆದ್ದರೆ, ಬಿಜೆಪಿ 1 ಸ್ಥಾನಕ್ಕೆ ಮಾತ್ರ ಸಮೀತಿವಾಗಿದೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ