logo
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Gold Price Today March 30: ಶ್ರೀರಾಮ ನವಮಿ ದಿನವೇ ಏರಿಕೆಯಾದ ಚಿನ್ನ, ಬೆಳ್ಳಿ ದರ: ಜೋರಾದ ಚಿನಿವಾರ ಪೇಟೆ ಸದ್ದು

Gold Price Today March 30: ಶ್ರೀರಾಮ ನವಮಿ ದಿನವೇ ಏರಿಕೆಯಾದ ಚಿನ್ನ, ಬೆಳ್ಳಿ ದರ: ಜೋರಾದ ಚಿನಿವಾರ ಪೇಟೆ ಸದ್ದು

HT Kannada Desk HT Kannada

Mar 30, 2023 06:06 AM IST

ಸಾಂದರ್ಭಿಕ ಚಿತ್ರ

  • ಇಂದು(ಮಾ.30-ಗುರುವಾರ) ದೇಶೀಯ ಮಾರುಕಟ್ಟೆಗೆ ಅನುಗುಣವಾಗಿ ದೇಶದ ಪ್ರಮುಖ ನಗರಗಳಲ್ಲಿ, ಚಿನ್ನದ ದರದಲ್ಲಿ ಕೊಂಚ ಏರಿಕೆ ಮತ್ತು ಬೆಳ್ಳಿ ದರಗಳಲ್ಲಿ ಕೆಲವು ನಗರಗಳಲ್ಲಿ ಏರಿಕೆ ಹಾಗೂ ಇನ್ನೂ ಕೆಲವು ನಗರಗಳಲ್ಲಿ ತಟಸ್ಥವಾಗಿದೆ. ರಾಜ್ಯ ರಾಜಧಾನಿ ಬೆಂಗಳೂರು ಸೇರಿದಂತೆ ದೇಶದ ಇತರ ಮಹಾನಗರಗಳಲ್ಲಿ ಚಿನ್ನ ಹಾಗೂ ಬೆಳ್ಳಿ ದರಗಳ ಕುರಿತು ಇಲ್ಲಿದೆ ಮಾಹಿತಿ.

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ (HT)

ನವದೆಹಲಿ: ಇಂದು(ಮಾ.30-ಗುರುವಾರ) ದೇಶೀಯ ಮಾರುಕಟ್ಟೆಗೆ ಅನುಗುಣವಾಗಿ ದೇಶದ ಪ್ರಮುಖ ನಗರಗಳಲ್ಲಿ, ಚಿನ್ನದ ದರದಲ್ಲಿ ಕೊಂಚ ಏರಿಕೆ ಮತ್ತು ಬೆಳ್ಳಿ ದರಗಳಲ್ಲಿ ಕೆಲವು ನಗರಗಳಲ್ಲಿ ಏರಿಕೆ ಹಾಗೂ ಇನ್ನೂ ಕೆಲವು ನಗರಗಳಲ್ಲಿ ತಟಸ್ಥವಾಗಿದೆ. ರಾಜ್ಯ ರಾಜಧಾನಿ ಬೆಂಗಳೂರು ಸೇರಿದಂತೆ ದೇಶದ ಇತರ ಮಹಾನಗರಗಳಲ್ಲಿ ಚಿನ್ನ ಹಾಗೂ ಬೆಳ್ಳಿ ದರಗಳ ಕುರಿತು ಇಲ್ಲಿದೆ ಮಾಹಿತಿ.

ನಿಮ್ಮ ನಗರದಲ್ಲಿ ಇಂದಿನ ಚಿನ್ನದ ಧಾರಣೆ ಎಷ್ಟಿದೆ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ
ಟ್ರೆಂಡಿಂಗ್​ ಸುದ್ದಿ

ಫೋರ್ಬ್ಸ್‌ 30 ಅಂಡರ್ 30 ಏಷ್ಯಾ ಲಿಸ್ಟ್‌ನಲ್ಲಿ ಐವರು ಬೆಂಗಳೂರಿಗರು, ಯುವ ಸಾಧಕರ ವಿವರ ಹೀಗಿದೆ

ಸಾಯಿ ಬಾಬಾ ಮತ್ತೆ ಹುಟ್ಟಿದ್ರಾ, ಈ ಬಾಲಕ ಅವರ ಪುನರವತಾರವೇ, ಏನಿದು ವಿದೇಶೀಯರ ವರ್ತನೆ! - ವೈರಲ್ ವಿಡಿಯೋ

Gold Rate Today: ವಾರಾಂತ್ಯದಲ್ಲಿ ತುಸು ಇಳಿಕೆಯಾದ ಹಳದಿ ಲೋಹದ ಬೆಲೆ; ಶನಿವಾರ ಬೆಳ್ಳಿ ದರ ತಟಸ್ಥ

Gold Rate Today: ಶುಕ್ರವಾರವೂ ಏರಿಕೆಯಾದ ಚಿನ್ನ, ಬೆಳ್ಳಿ ದರ; ದೇಶದಲ್ಲಿಂದು ಆಭರಣ ದರ ಎಷ್ಟಾಗಿದೆ ಗಮನಿಸಿ

ಗುರುವಾರದ ಮಾರುಕಟ್ಟೆ ಪರಿಸ್ಥಿತಿಯನ್ನು ಅವಲೋಕಿಸಿದರೆ, ದೇಶದಲ್ಲಿ 1 ಗ್ರಾಂ (24 ಕ್ಯಾರಟ್‌) ಬಂಗಾರದ ಬೆಲೆ 5,967 ರೂ. ದಾಖಲಾಗಿದೆ. ನಿನ್ನೆ (ಮಾ.29-ಬುಧವಾರ) ಇದರ ಬೆಲೆ 5,945 ರೂ. ಆಗಿತ್ತು. ಅಂದರೆ ಒಂದು ದಿನದಲ್ಲಿ 22 ರೂ. ಏರಿಕೆ ಕಂಡುಬಂದಿದೆ. ಅದರಂತೆ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ 1 ಗ್ರಾಂ (24 ಕ್ಯಾರಟ್‌) ಚಿನ್ನದ ಬೆಲೆ 5,972 ರೂ. ನಿಗದಿಯಾಗಿದೆ. ನಿನ್ನೆ (ಮಾ.29-ಬುಧವಾರ) ಇದರ ಬೆಲೆ 5,950 ರೂ. ಆಗಿತ್ತು. ಅಂದರೆ ಒಂದು ದಿನದಲ್ಲಿ 22 ರೂ. ಏರಿಕೆ ಕಂಡುಬಂದಿದೆ.

ಇನ್ನು ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ 10 ಗ್ರಾಂ (22 ಕ್ಯಾರಟ್‌) ಚಿನ್ನದ ಬೆಲೆ 54,750 ರೂ. ಆಗಿದ್ದು, ನಿನ್ನೆ (ಮಾ.29-ಬುಧವಾರ) ಇದರ ಬೆಲೆ 54,550 ರೂ. ಆಗಿತ್ತು ಅಂದರೆ ಒಂದು ದಿನದಲ್ಲಿ 200 ರೂ. ಏರಿಕೆ ಕಂಡುಬಂದಿದೆ. ಇನ್ನು 10 ಗ್ರಾಂ ಅಪರಂಜಿ ಚಿನ್ನದ (24 ಕ್ಯಾರಟ್‌) ಬೆಲೆ 59,720 ರೂ. ಆಗಿದೆ. ನಿನ್ನೆ (ಮಾ.29-ಬುಧವಾರ) ಇದರ ಬೆಲೆ 59,500 ರೂ. ಆಗಿತ್ತು. ಅಂದರೆ ಒಂದು ದಿನದಲ್ಲಿ 220 ರೂ. ಏರಿಕೆ ಕಂಡುಬಂದಿದೆ.

ದೇಶದ ಮಹಾನಗರಗಳಲ್ಲಿ ಇಂದಿನ ಚಿನ್ನದ ದರವನ್ನು ನೋಡುವುದಾದರೆ..(10 ಗ್ರಾಂ)

ನವದೆಹಲಿ: 54,850 ರೂ.(22 ಕ್ಯಾರಟ್‌) ಮತ್ತು 59,820 ರೂ. (24 ಕ್ಯಾರಟ್‌)

ಮುಂಬೈ: 54,700 ರೂ.(22 ಕ್ಯಾರಟ್‌) ಮತ್ತು 59,670 ರೂ. (24 ಕ್ಯಾರಟ್‌)

ಕೋಲ್ಕತ್ತಾ: 54,700 ರೂ.(22 ಕ್ಯಾರಟ್‌) ಮತ್ತು 59,670 ರೂ. (24 ಕ್ಯಾರಟ್

ಚೆನ್ನೈ: 55,450 ರೂ.(22 ಕ್ಯಾರಟ್‌) ಮತ್ತು 60,490 ರೂ. (24 ಕ್ಯಾರಟ್‌)

ಹೈದರಾಬಾದ್:‌ 54,700 ರೂ.(22 ಕ್ಯಾರಟ್‌) ಮತ್ತು 59,670 ರೂ. (24 ಕ್ಯಾರಟ್‌)

ಇನ್ನು ಬೆಳ್ಳಿ ದರದತ್ತ ಗಮನಹರಿಸುವುದಾದರೆ, ದೇಶದಲ್ಲಿ ಬೆಳ್ಳಿ ಬೆಲೆ ಒಂದು ಕೆಜಿಗೆ 73,000 ರೂ. ಆಗಿದೆ. ನಿನ್ನೆ (ಮಾ.29-ಬುಧವಾರ)ಯೂ ಇದರ ಬೆಲೆ 73,000 ರೂ. ಆಗಿತ್ತು. ಅಂದರೆ ಒಂದು ದಿನದಲ್ಲಿ ಯಾವುದೇ ವ್ಯತ್ಯಾಸ ಕಂಡುಬಂದಿಲ್ಲ. ಆದರೆ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಒಂದು ಕೆಜಿ ಬೆಳ್ಳಿ ಬೆಲೆ 76,000 ರೂ. ಆಗಿದ್ದು, ನಿನ್ನೆ (ಮಾ.29-ಬುಧವಾರ) ಒಂದು ಕೆಜಿ ಬೆಳ್ಳಿ ಬೆಲೆ 75,700 ರೂ. ಆಗಿತ್ತು. ಅಂದರೆ ಒಂದು ದಿನದಲ್ಲಿ 300 ರೂ. ಏರಿಕೆ ಕಂಡುಬಂದಿದೆ.

ದೇಶದ ಮಹಾನಗರಗಳಲ್ಲಿ ಇಂದಿನ ಬೆಳ್ಳಿ ದರವನ್ನು ನೋಡುವುದಾದರೆ..

ನವದೆಹಲಿ: 73,000 ರೂ. (ಒಂದು ಕೆಜಿ)

ಮುಂಬೈ: 73,000 ರೂ. (ಒಂದು ಕೆಜಿ)

ಕೋಲ್ಕತ್ತಾ: 73,000 ರೂ. (ಒಂದು ಕೆಜಿ)

ಚೆನ್ನೈ: 76,000 ರೂ. (ಒಂದು ಕೆಜಿ)

ಹೈದರಾಬಾದ್:‌ 76,000 ರೂ. (ಒಂದು ಕೆಜಿ)

ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿನ ದರ ವ್ಯತ್ಯಾಸ ಮತ್ತು ದೇಶೀಯ ಬೇಡಿಕೆಗಳಿಗೆ ಅನುಗುಣವಾಗಿ, ದೇಶೀಯ ಮಾರುಕಟ್ಟೆಯಲ್ಲಿ ಚಿನ್ನ ಹಾಗೂ ಬೆಳ್ಳಿ ದರಗಳಲ್ಲಿ ಕೊಂಚ ಏರಿಕೆ ಕಂಡುಬಂದಿದೆ. ದೇಶದ ಎಲ್ಲಾ ಮಹಾನಗರಗಳಲ್ಲಿ ಚಿನ್ನದ ದರದಲ್ಲಿ ಏರಿಕೆ ಕಂಡುಬಂದಿದ್ದರೆ, ಬೆಳ್ಳಿ ಬೆಲೆಯಲ್ಲಿ ಕೆಲವು ನಗರಗಳಲ್ಲಿ ಏರಿಕೆ ಹಾಗೂ ಇನ್ನೂ ಕೆಲವು ನಗರಗಳಲ್ಲಿ ತಟಸ್ಥವಾಗಿರುವುದು ಗಮನಿಸಬೇಕಾದ ಸಂಗತಿ.

ಅಂತಾರಾಷ್ಟ್ರೀಯ ಮಾರುಕಟ್ಟೆ ಪರಿಸ್ಥಿತಿ, ಚಿನ್ನದ ಮೇಲಿನ ಆಮದು ಸುಂಕ ಮತ್ತು ಡಾಲರ್ ಎದುರು ರೂಪಾಯಿ ಮೌಲ್ಯವನ್ನು ಆಧರಿಸಿ, ಚಿನ್ನ ಹಾಗೂ ಬೆಳ್ಳಿ ಮೇಲಿನ ದೈನಂದಿನ ಬೆಲೆಯನ್ನು ನಿರ್ಧಾರ ಮಾಡಲಾಗುತ್ತದೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ