logo
ಕನ್ನಡ ಸುದ್ದಿ  /  Nation And-world  /  Gurugram Woman Tracks Stolen Mobile Phone Through Smartwatch, Punches Thief To Retrieve It

Tracks stolen mobile phone: ಮೊಬೈಲ್‌ ಕಳ್ಳನ ಸ್ಮಾರ್ಟ್‌ವಾಚ್‌ ಮೂಲಕ ಪತ್ತೆಹಚ್ಚಿ ಬೆಂಡೆತ್ತಿದ ಮಹಿಳೆ, ಕಳ್ಳ ಸಿಕ್ರೂ ಆಕೆಗೆ 50 ಸಾವಿರ ರೂ

HT Kannada Desk HT Kannada

Oct 05, 2022 08:09 PM IST

ಮೊಬೈಲ್‌ ಕಳ್ಳನ ಸ್ಮಾರ್ಟ್‌ವಾಚ್‌ ಮೂಲಕ ಪತ್ತೆಹಚ್ಚಿ ಬೆಂಡೆತ್ತಿದ ಮಹಿಳೆ (Getty Images/iStockphoto)

    • ಈಕೆ ಕಳ್ಳನನ್ನು ಪತ್ತೆಹಚ್ಚಿರುವುದು ಯಾವುದೇ ಸಿನಿಮಾಕ್ಕಿಂತಲೂ ಕಡಿಮೆಯಿಲ್ಲ. ಪೊಲೀಸರ ಪ್ರಕಾರ, ಈಕೆಯು ತನ್ನ ಸ್ಮಾರ್ಟ್‌ವಾಚ್‌ ಮೂಲಕ ಆಕೆಯ ಕಳ್ಳತನಗೊಂಡಿದ್ದ ಸ್ಮಾರ್ಟ್‌ಫೋನ್‌ನನ್ನು ಪತ್ತೆಹಚ್ಚಿದ್ದಾಳೆ.
ಮೊಬೈಲ್‌ ಕಳ್ಳನ ಸ್ಮಾರ್ಟ್‌ವಾಚ್‌ ಮೂಲಕ ಪತ್ತೆಹಚ್ಚಿ ಬೆಂಡೆತ್ತಿದ ಮಹಿಳೆ (Getty Images/iStockphoto)
ಮೊಬೈಲ್‌ ಕಳ್ಳನ ಸ್ಮಾರ್ಟ್‌ವಾಚ್‌ ಮೂಲಕ ಪತ್ತೆಹಚ್ಚಿ ಬೆಂಡೆತ್ತಿದ ಮಹಿಳೆ (Getty Images/iStockphoto)

ಗುರುಗ್ರಾಮ(ಗುರ್‌ಗಾಂವ್‌): ಇಲ್ಲಿನ ಮಹಿಳೆಯೊಬ್ಬರು ಪೊಲೀಸರು ಅಥವಾ ಇನ್ಯಾರ ನೆರವು ಇಲ್ಲದೆ ಸ್ಮಾರ್ಟ್‌ಫೋನ್‌ ಕಳ್ಳನನ್ನು ಸ್ಮಾರ್ಟ್‌ ಆಗಿ ಸ್ಮಾರ್ಟ್‌ವಾಚ್‌ ಮೂಲಕ ಹಿಡಿದು ಭೇಷ್‌ ಎನಿಸಿಕೊಂಡಿದ್ದಾರೆ. ಈಕೆ ಕಳ್ಳನನ್ನು ಪತ್ತೆಹಚ್ಚಿರುವುದು ಯಾವುದೇ ಸಿನಿಮಾಕ್ಕಿಂತಲೂ ಕಡಿಮೆಯಿಲ್ಲ. ಪೊಲೀಸರ ಪ್ರಕಾರ, ಈಕೆಯು ತನ್ನ ಸ್ಮಾರ್ಟ್‌ವಾಚ್‌ ಮೂಲಕ ಕಳ್ಳತನಗೊಂಡಿದ್ದ ಸ್ಮಾರ್ಟ್‌ಫೋನ್‌ ಪತ್ತೆಹಚ್ಚಿದ್ದಾಳೆ.

ಟ್ರೆಂಡಿಂಗ್​ ಸುದ್ದಿ

Lok Sabha Election 2024: ಪ್ರಧಾನಿ ಮೋದಿ ವಿರುದ್ಧ ವಾರಣಾಸಿಯಲ್ಲಿ ಸ್ಪರ್ಧಿಸುತ್ತಿರುವ ಶ್ಯಾಮ್ ರಂಗೀಲ ಯಾರು; 10 ಪ್ರಮುಖ ಅಂಶಗಳಿವು

20 ವರ್ಷಗಳಲ್ಲಿ 115 ಐಐಟಿ ವಿದ್ಯಾರ್ಥಿಗಳ ಆತ್ಮಹತ್ಯೆ; ಅಗ್ರ ಸ್ಥಾನದಲ್ಲಿರುವ ಮದ್ರಾಸ್‌ನಲ್ಲಿ 26 ಸಾವು, ಆರ್‌ಟಿಐನಿಂದ ಮಾಹಿತಿ ಬಹಿರಂಗ

ತಿರುಮಲ ತಿರುಪತಿ ದೇವಸ್ಥಾನದಲ್ಲಿ ವಿಶೇಷ ಉತ್ಸವಗಳು, ಮೇ ತಿಂಗಳ ಉತ್ಸವ ವೇಳಾಪಟ್ಟಿ ಪ್ರಕಟಿಸಿದ ಟಿಟಿಡಿ

Gold Rate Today: ಚಿನ್ನಾಭರಣ ಪ್ರಿಯರಿಗೆ ಇಲ್ಲಿದೆ ಗುಡ್‌ನ್ಯೂಸ್‌; 10ಗ್ರಾಂ ಚಿನ್ನಕ್ಕೆ 1000 ರೂ ಇಳಿಕೆ, ಬೆಳ್ಳಿ ದರವೂ ಕುಸಿತ

ಗುರುಗ್ರಾಮದ ಸೆಕ್ಟರ್‌ 23 ಪಾಲಮ್‌ ವಿಹಾರ್‌ನಲ್ಲಿ ಈಕೆಯ ಸ್ಮಾರ್ಟ್‌ಫೋನ್‌ ಅನ್ನು ಕಳ್ಳ ಎಗರಿಸಿದ್ದ. ಈ ಘಟನೆ ಕಳೆದ ತಿಂಗಳು ನಡೆದಿತ್ತು. ಆದರೆ, ಎಫ್‌ಐಆರ್‌ ಇತ್ತೀಚೆಗೆ ದಾಖಲಿಸಲಾಗಿದೆ. ಪಲ್ಲವಿ ಕೌಶಿಕೆ ಎಂಬವರು ಹುಡಾ ಮಾರುಕಟ್ಟೆಯಲ್ಲಿ ಶಾಪಿಂಗ್‌ ಮಾಡುತ್ತಿದ್ದಾಗ ಒಬ್ಬ ವ್ಯಕ್ತಿಯು ಈಕೆಯ ಮೊಬೈಲ್‌ ಎಗರಿಸಿದ್ದಾನೆ. ಯುಪಿಐ ಮೂಲಕ ಬಿಲ್‌ ಪಾವತಿಸುವಾಗಲೇ ಆಕೆಯ ಮೊಬೈಲ್‌ ಫೋನ್‌ ಎಗರಿಸಿದ್ದಾನೆ.

ಆಕೆಗೆ ಆ ಸಂದರ್ಭದಲ್ಲಿ ನೆರವು ನೀಡುವವರು ಅಲ್ಲಿ ಯಾರೂ ಇರಲಿಲ್ಲ. ಕಳ್ಳನ ಹಿಂದೆಯೇ ಸುಮಾರು ಇನ್ನೂರು ಮೀಟರ್‌ ಓಡಿದರೂ ಪ್ರಯೋಜನವಾಗಲಿಲ್ಲ. ಕಳ್ಳನ ಸ್ಥಳವನ್ನು ಸ್ಮಾರ್ಟ್‌ವಾಚ್‌ ಮೂಲಕ ಟ್ರ್ಯಾಕ್‌ ಮಾಡಬಹುದೆಂದು ಬಳಿಕ ಆಕೆಗೆ ಅರಿವಾಗಿದೆ. ಎಲ್ಲೋ ಹತ್ತಿರದಲ್ಲಿಯೇ ಕಳ್ಳ ಇರುವುದನ್ನು ಸ್ಮಾರ್ಟ್‌ವಾಚ್‌ ತೋರಿಸಿದೆ.

ಸ್ಮಾರ್ಟ್‌ವಾಚ್‌ ತೋರಿಸಿದ ಲೊಕೆಷನ್‌ಗಳಲ್ಲಿ ಸೆಕ್ಟರ್‌ 23ರಲ್ಲಿ ಈ ಕಳ್ಳನನ್ನು ಸುಮಾರು ಮೂರು ಗಂಟೆಗಳ ಕಾಲ ಹುಡುಕಿದ್ದಾಳೆ. ರಾತ್ರಿ ಒಂಬತ್ತು ಗಂಟೆಯ ವೇಳೆಗೆ ಕಳ್ಳ ಇರುವ ಖಚಿತ ಸ್ಥಳ ಪತ್ತೆಯಾಗಿದೆ. ಆ ಕಳ್ಳ ಬೈಕ್‌ನಲ್ಲಿ ಕುಳಿತು ಈಕೆಯ ಮೊಬೈಲ್‌ ಬಳಸುತ್ತಿದ್ದ.

"ಈ ಫೋನ್‌ನಲ್ಲಿ ನನ್ನ ಎಲ್ಲಾ ಕಾಂಟ್ಯಾಕ್ಟ್‌ಗಳಿದ್ದವು. ಉದ್ಯೋಗ ವಿಷಯಕ್ಕೆ ಸಂಬಂಧಪಟ್ಟ ಪ್ರಮುಖ ಮಾಹಿತಿಗಳು, ದಾಖಲೆಗಳು ಇದ್ದವು. ವಾಚ್‌ ಲೊಕೆಷನ್‌ ಮೂಲಕವೇ ಆತನನ್ನು ಹಿಂಬಾಲಿಸಿ ಆತನನ್ನು ಪತ್ತೆಹಚ್ಚಿದೆʼʼ ಎಂದು ಪಲ್ಲವಿ ಹೇಳಿದ್ದಾರೆ.

ಪಲ್ಲವಿಯು ಆ ವ್ಯಕ್ತಿಯ ಹಿಂದೆ ಹೋಗಿ ಹಿಂದಿನಿಂದ ತಲೆಗೆ ಜೋರಾಗಿ ಹೊಡೆದಿದ್ದಾಳೆ. ಆತ ಕೆಳಕ್ಕೆ ಬಿದ್ದಿದ್ದಾನೆ. ಆತನ ಕೈಯಿಂದ ಮೊಬೈಲ್‌ ಬಿದ್ದಿದೆ. ಆ ಫೋನ್‌ ಎತ್ತಿಕೊಂಡು ವಾಪಸ್‌ ಬಂದಿದ್ದಾಳೆ. ಆದರೆ, ದುರಾದೃಷ್ಟವಶಾತ್‌ ಎಂದರೆ ಮನೆಗೆ ಬಂದು ನೋಡಿದಾಗ ಆಕೆಗೆ 50 ಸಾವಿರ ರೂ. ನಷ್ಟವಾಗಿರುವುದು ತಿಳಿದಿದೆ.

ಆತ ಈಕೆಯ ಮೊಬೈಲ್‌ ದೊರಕಿದ ತಕ್ಷಣ ಈಕೆಯ ಯುಪಿಐ ಬಳಿಸಿ ಬೇರೆ ಖಾತೆಗೆ 50 ಸಾವಿರ ವರ್ಗಾಯಿಸಿಕೊಂಡಿದ್ದ. ಈ ಕುರಿತು ಆಕೆ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದು, ಆಕೆಯ ಸಾಹಸ ಬೆಳಕಿಗೆ ಬಂದಿದೆ. ಆ ವ್ಯಕ್ತಿಯ ವಿರುದ್ಧ ಸೆಕ್ಷನ್‌ 379(ಕಳ್ಳತನ), 379ಎ (ಸ್ನಾಚಿಂಗ್‌) ಮತ್ತು 420(ಮೋಸ) ದೂರು ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ವಿಭಾಗ

    ಹಂಚಿಕೊಳ್ಳಲು ಲೇಖನಗಳು