logo
ಕನ್ನಡ ಸುದ್ದಿ  /  Nation And-world  /  Har Ghar Tiranga: National Flag Hoisted In Ram Janmabhoomi Temple Complex In Ayodhya

Har Ghar Tiranga: ಅಯೋಧ್ಯೆ ರಾಮಜನ್ಮ ಭೂಮಿಯಲ್ಲಿ ಹರ್‌ ಘರ್‌ ತಿರಂಗ ಸಂಭ್ರಮ

HT Kannada Desk HT Kannada

Aug 14, 2022 07:45 AM IST

ಅಯೋಧ್ಯೆ ರಾಮಜನ್ಮ ಭೂಮಿಯಲ್ಲಿ ಹರ್‌ ಘರ್‌ ತಿರಂಗ ಸಂಭ್ರಮ

    • ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ದೇಶಾದ್ಯಂತ ನಡೆಯುತ್ತಿರುವ ಹರ್‌ ಘರ್‌ ತಿರಂಗದ ಅಂಗವಾಗಿ ಅಯೋಧ್ಯೆಯ ಶ್ರೀ ರಾಮಭೂಮಿಯಲ್ಲಿ ರಾಮ ಮಂದಿರ ನಿರ್ಮಾಣ ಮಾಡುತ್ತಿರುವ ಕೆಲಸಗಾರರು ರಾಷ್ಟ್ರೀಯ ಧ್ವಜದೊಂದಿಗೆ ಸಂಭ್ರಮಿಸಿದ್ದಾರೆ. ರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್‌ನ ಅಧಿಕಾರಿಗಳು ಮತ್ತು ಮಂದಿರ ನಿರ್ಮಾಣದ ಕೆಲಸಗಾರರು ಈ ಅಭಿಯಾನದ ಭಾಗವಾಗಿ ಸಂಭ್ರಮಿಸಿದ್ದಾರೆ
ಅಯೋಧ್ಯೆ ರಾಮಜನ್ಮ ಭೂಮಿಯಲ್ಲಿ ಹರ್‌ ಘರ್‌ ತಿರಂಗ ಸಂಭ್ರಮ
ಅಯೋಧ್ಯೆ ರಾಮಜನ್ಮ ಭೂಮಿಯಲ್ಲಿ ಹರ್‌ ಘರ್‌ ತಿರಂಗ ಸಂಭ್ರಮ

ಅಯೋಧ್ಯೆ: ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ದೇಶಾದ್ಯಂತ ನಡೆಯುತ್ತಿರುವ ಹರ್‌ ಘರ್‌ ತಿರಂಗದ ಅಂಗವಾಗಿ ಅಯೋಧ್ಯೆಯ ಶ್ರೀ ರಾಮಜನ್ಮ ಭೂಮಿಯಲ್ಲಿ ರಾಮ ಮಂದಿರ ನಿರ್ಮಾಣ ಮಾಡುತ್ತಿರುವ ಕೆಲಸಗಾರರು ರಾಷ್ಟ್ರೀಯ ಧ್ವಜದೊಂದಿಗೆ ಸಂಭ್ರಮಿಸಿದ್ದಾರೆ. ರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್‌ನ ಅಧಿಕಾರಿಗಳು ಮತ್ತು ಮಂದಿರ ನಿರ್ಮಾಣದ ಕೆಲಸಗಾರರು ಈ ಅಭಿಯಾನದ ಭಾಗವಾಗಿ ಸಂಭ್ರಮಿಸಿದ್ದಾರೆ.

ಟ್ರೆಂಡಿಂಗ್​ ಸುದ್ದಿ

Gold Rate: ಬಡವರಿಗೆ ಗಗನ ಕುಸುಮವಾಯ್ತು ಚಿನ್ನ; ಮತ್ತಷ್ಟು ಹೆಚ್ಚಾಯ್ತು ಬೆಳ್ಳಿ , ಬಂಗಾರದ ಬೆಲೆ

ಇವಿಎಂ ವಿವಿಪ್ಯಾಟ್ ಪ್ರಕರಣ; ಅಡ್ಡ ಪರಿಶೀಲನೆ ಮಾಡಿ ಎಂದವರ ವಿರುದ್ಧ ಸುಪ್ರೀಂ ಕೋರ್ಟ್ ಗರಂ, ಎಲ್ಲಾ ಅರ್ಜಿಗಳು ವಜಾ

ರಸ್ತೆ ಮೇಲೆ ಕಾಣಸಿಕ್ತು ತಲೆಕೆಳಗಾದ ಕಾರು, ಅಪಘಾತವಾಗಿಲ್ಲ, ಪಲ್ಟಿಯಾಗಿಲ್ಲ, ಕುತೂಹಲ ಕೆರಳಿಸಿದೆ ಈ ವೈರಲ್ ವಿಡಿಯೋ

Chicken or Egg: ಕೋಳಿ ಮೊದಲಾ ಅಥವಾ ಮೊಟ್ಟೆ ಮೊದಲಾ; ದಶಕಗಳ ಪ್ರಶ್ನೆಗೆ ಕೊನೆಗೂ ಸಿಕ್ಕಿದೆ ಉತ್ತರ

ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಕಾರ್ಯ ಭರದಿಂದ ಸಾಗುತ್ತಿದೆ. 2023ರ ವರ್ಷಾಂತ್ಯದೊಳಗೆ ಭಕ್ತರಿಗೆ ದರ್ಶನದ ಅವಕಾಶ ಕಲ್ಪಿಸಲು ನಿರ್ಧರಿಸಲಾಗಿದೆ. ಆ ಹೊತ್ತಿಗೆ ಮಂದಿರ ಆವರಣದಲ್ಲಿ ಹಲವು ನಿರ್ಮಾಣ ಕಾಮಗಾರಿಗಳು ಬಾಕಿ ಉಳಿದರೂ, ಮಂದಿರ ಭೇಟಿಗೆ ಅವಕಾಶ ನೀಡಲು ನಿರ್ಧರಿಸಲಾಗಿದೆ.

<p>ಅಯೋಧ್ಯೆ ರಾಮಜನ್ಮ ಭೂಮಿಯಲ್ಲಿ ಹರ್‌ ಘರ್‌ ತಿರಂಗ ಸಂಭ್ರಮ</p>

ರಾಮ ಮಂದಿರ ಸಂಕೀರ್ಣದ ನಿರ್ಮಾಣ 2025ರ ಒಳಗಾಗಿ ಮುಕ್ತಾಯಗೊಳ್ಳಲಿದೆ ಎಂದು ಅಂದಾಜಿಸಲಾಗಿದೆ. ಮಂದಿರದ ಸುಭದ್ರ ಅಡಿಪಾಯದ ಕಾಮಗಾರಿ ಈ ವರ್ಷವೇ ಸೆಪ್ಟೆಂಬರ್‌ ಅಂತ್ಯಕ್ಕೆ ಪೂರ್ಣಗೊಳ್ಳುವ ನಿರೀಕ್ಷೆ ಇದೆ. ಭವ್ಯವಾದ ಮಂದಿರ ನಿರ್ಮಾಣಕ್ಕಾಗಿ ಕಳೆದ ವರ್ಷ ಆಗಸ್ಟ್‌ 5ರಂದು ಪ್ರಧಾನಿ ನರೇಂದ್ರ ಮೋದಿ ಅವರು ಶಿಲಾನ್ಯಾಸ ನಡೆಸಿದ್ದರು.

2022ರ ಜನವರಿ 14ರ ಮಕರ ಸಂಕಾಂತ್ರಿಯಂದೇ ಅಯೋಧ್ಯೆಯ ರಾಮಮಂದಿರ ನಿರ್ಮಾಣ ಕಾರ್ಯದ ಮೊದಲ ಹಂತವಾದ ತಳಪಾಯ ನಿರ್ಮಾಣ ಕಾರ್ಯ ಮುಕ್ತಾಯವಾಗಿದೆ. ಈಗ ತಳಪಾಯದ ಮೇಲೆ ಕಲ್ಲುಗಳನ್ನು ಜೋಡಿಸಿ ಮುಂದಿನ ಹಂತದಲ್ಲಿ ದೇವಾಲಯ ನಿರ್ಮಾಣ ಮಾಡುವ ಕೆಲಸ ನಡೆಯುತ್ತಿದೆ. ರಾಮಮಂದಿರ ನಿರ್ಮಾಣ ಕಾರ್ಯವನ್ನು ಎಲ್ ಅಂಡ್ ಟಿ ಕಂಪನಿ ಮಾಡುತ್ತಿದ್ದು, ಟಾಟಾ ಕಂಪನಿಯು ಟೆಕ್ನಿಕಲ್ ಕನ್ಸಲ್ಟೆನ್ಸಿ ಜವಾಬ್ದಾರಿ ಹೊತ್ತುಕೊಂಡಿದೆ.

ಅಯೋಧ್ಯೆಯಲ್ಲಿ ನಿರ್ಮಾಣಗೊಳ್ಳುತ್ತಿರುವ ರಾಮ ಮಂದಿರವು 161 ಅಡಿ ಎತ್ತರ ಇರಲಿದೆ. ನಗರಶೈಲಿಯಲ್ಲಿ ಮಂದಿರ ನಿರ್ಮಾಣಗೊಳ್ಳುತ್ತಿದೆ. ಓಟ್ಟು ಮೂರು ಮಹಡಿಗಳನ್ನು ಹೊಂದಿರಲಿದೆ. ಮಂದಿರದಲ್ಲಿ ಒಂದು ಮಂಟಪದಲ್ಲಿ ತಲಾ ಐದು ಗುಮ್ಮಟಗಳನ್ನು ಮತ್ತು ಗರ್ಭಗುಡಿ ಒಂದು ಗುಮ್ಮಟವನ್ನು ಹೊಂದಿರುತ್ತದೆ.

ಮಂದಿರದ ಎಲ್ಲಾ ಮಂಟಪಗಳಲ್ಲಿ ಕನಿಷ್ಠ 50,000 ಭಕ್ತರಿಗೆ ಆತಿಥ್ಯ ವಹಿಸಲು ಸಾಧ್ಯವಾಗುತ್ತದೆ. ಮೂರು ಮಹಡಿಗಳಲ್ಲಿ 318 ಸ್ತಂಭಗಳು ಇರಲಿವೆ. ಮೆಟ್ಟಿಲುಗಳ ಅಗಲ 16 ಅಡಿ ಇರುತ್ತದೆ.

4 ಸಣ್ಣ ದೇವಾಲಯಗಳು ಮುಖ್ಯ ರಚನೆಯನ್ನು ಸುತ್ತುವರೆದಿವೆ. ಮಂದಿರ ನಿರ್ಮಾಣ ವೆಚ್ಚ 300 ಕೋಟಿ ರೂಪಾಯಿ ಎಂದು ಅಂದಾಜಿಸಲಾಗಿದೆ.

75ನೇ ವರ್ಷದ ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ಹರ್‌ ಘರ್‌ ತಿರಂಗ ಅಭಿಯಾನಕ್ಕೆ ಜನರಿಂದ ಭರ್ಜರಿ ಸ್ಪಂದನೆ ದೊರಕಿದೆ. ಮನೆಮನೆಯಲ್ಲಿ ತಿರಂಗ ಹಾರಿಸುವ ಈ ಅಭಿಯಾನಕ್ಕೆ ದೇಶದಲ್ಲಿ ಉತ್ತಮ ಪ್ರತಿಕ್ರಿಯೆ ದೊರಕಿದೆ. ಮನೆ, ಕಚೇರಿ, ಮೈದಾನ, ಐತಿಹಾಸಿಕ ಕಟ್ಟಡ, ಜಲಾಶಯ ಸೇರಿದಂತೆ ದೇಶದ ಎಲ್ಲಾ ಭಾಗಗಳಲ್ಲಿ ರಾಷ್ಟ್ರ ಧ್ವಜ ಹಾರಾಡುತ್ತಿದೆ. ದೇಶದಲ್ಲಿ ಹರ್ ಘರ್ ತಿರಂಗ ಅಭಿಯಾನಕ್ಕೆ ವ್ಯಕ್ತವಾಗಿರುವ ಸ್ಪಂದನೆ ಅತೀವ ಸಂತಸ ತಂದಿದೆ. ದೇಶ ಪ್ರೇಮ ಪ್ರತಿಯೊಬ್ಬರ ಮನದಲ್ಲಿ ಎದ್ದುಕಾಣುತ್ತಿದೆ ಎಂದು ನರೇಂದ್ರ ಮೋದಿ ಹರ್ಷ ವ್ಯಕ್ತಪಡಿಸಿದ್ದಾರೆ.

ಹರ್ ಘರ್ ತಿರಂಗಾ ಅಭಿಯಾನದ ಭಾಗವಾಗಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಬೆಂಗಳೂರಿನ ವಿವಿಧೆಡೆ ಪಾದಯಾತ್ರೆ ನಡೆಸಿ ಮನೆ ಮನೆಗೆ ತೆರಳಿ ತ್ರಿವರ್ಣ ಧ್ವಜ ನೀಡಿದ್ದಾರೆ. ತ್ರಿವರ್ಣ ಧ್ವಜ ವಿತರಿಸಲು ಬಂದ ಸಚಿವೆಗೆ ಮಹಿಳೆಯರು ಅರಶಿನ ಕುಂಕುಮ ನೀಡಿ ಸ್ವಾಗತಿಸಿದ್ದರು. ಸಚಿವೆಗೆ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರೇ ಸಾಥ್‌ ನೀಡಿದರು.

    ಹಂಚಿಕೊಳ್ಳಲು ಲೇಖನಗಳು