logo
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Har Payment Digital: ಪ್ರತಿ ಪಾವತಿಯೂ ಡಿಜಿಟಲ್‌ ಆಗಲಿ; ಈ ವಾರ ಡಿಜಿಟಲ್‌ ಪಾವತಿ ಜಾಗೃತಿ ವಾರ

Har Payment Digital: ಪ್ರತಿ ಪಾವತಿಯೂ ಡಿಜಿಟಲ್‌ ಆಗಲಿ; ಈ ವಾರ ಡಿಜಿಟಲ್‌ ಪಾವತಿ ಜಾಗೃತಿ ವಾರ

HT Kannada Desk HT Kannada

Mar 06, 2023 04:51 PM IST

google News

ಆರ್‌ಬಿಐ (ಸಾಂಕೇತಿಕ ಚಿತ್ರ)

  • Digital Payments Awareness Week: ಇಂದಿನಿಂದ ಮಾರ್ಚ್‌ 12 ರ ತನಕ ಡಿಜಿಟಲ್ ಪಾವತಿಗಳ ಜಾಗೃತಿ ವಾರ (ಡಿಪಿಎಡಬ್ಲ್ಯು) 2023 ನಡೆಯಲಿದೆ. ಡಿಜಿಟಲ್ ಪೇಮೆಂಟ್‌ ಅಪ್ನಾವೋ, ಔರಾನ್ ಕೊ ಭಿ ಸಿಖಾವೋ (ಡಿಜಿಟಲ್ ಪಾವತಿಗಳನ್ನು ಅಳವಡಿಸಿಕೊಳ್ಳಿ ಮತ್ತು ಇತರರಿಗೂ ಕಲಿಸಿ) ಎಂಬುದು ಈ ಜಾಗೃತಿ ಸಪ್ತಾಹದ ಥೀಮ್ ಎಂದು ಆರ್‌ಬಿಐ ಹೇಳಿದೆ.

ಆರ್‌ಬಿಐ (ಸಾಂಕೇತಿಕ ಚಿತ್ರ)
ಆರ್‌ಬಿಐ (ಸಾಂಕೇತಿಕ ಚಿತ್ರ) (REUTERS)

ಮುಂಬಯಿ: ಡಿಜಿಟಲ್ ಪಾವತಿಗಳ ಜಾಗೃತಿ ವಾರ (ಡಿಪಿಎಡಬ್ಲ್ಯು) 2023 ಇಂದಿನಿಂದ ಮಾರ್ಚ್‌ 12 ರ ತನಕ ನಡೆಯಲಿದೆ. ತನ್ನಿಮಿತ್ತವಾಗಿ ಪ್ರತಿಯೊಬ್ಬ ನಾಗರಿಕರನ್ನು ಡಿಜಿಟಲ್ ಪಾವತಿಯ ಬಳಕೆದಾರರನ್ನಾಗಿ ಮಾಡುವ ಉದ್ದೇಶದಿಂದ ಭಾರತೀಯ ರಿಸರ್ವ್ ಬ್ಯಾಂಕ್ ಗವರ್ನರ್ ಶಕ್ತಿಕಾಂತ ದಾಸ್ ಸೋಮವಾರ “ಮಿಷನ್ ಹರ್ ಪೇಮೆಂಟ್ ಡಿಜಿಟಲ್ (Har Payment Digital)” ಅನ್ನು ಪ್ರಾರಂಭಿಸಿದರು.

ಡಿಜಿಟಲ್ ಪೇಮೆಂಟ್‌ ಅಪ್ನಾವೋ, ಔರಾನ್ ಕೊ ಭಿ ಸಿಖಾವೋ (ಡಿಜಿಟಲ್ ಪಾವತಿಗಳನ್ನು ಅಳವಡಿಸಿಕೊಳ್ಳಿ ಮತ್ತು ಇತರರಿಗೂ ಕಲಿಸಿ) ಎಂಬುದು ಈ ಜಾಗೃತಿ ಸಪ್ತಾಹದ ಥೀಮ್ ಎಂದು ಆರ್‌ಬಿಐ ಹೇಳಿದೆ.

ಕಳೆದ ಕೆಲವು ವರ್ಷಗಳಿಂದ, ಭಾರತದಲ್ಲಿ ಡಿಜಿಟಲ್ ಪಾವತಿಗಳ ಬಳಕೆಯು ದೊಡ್ಡ ಪ್ರಮಾಣದ ಬೆಳವಣಿಗೆಯನ್ನು ಕಂಡಿದೆ. ದೇಶದ ನಾಗರಿಕರು ಅದು ನೀಡುವ ವೇಗ, ಅನುಕೂಲತೆ ಮತ್ತು ಭದ್ರತೆಗಾಗಿ ಡಿಜಿಟಲ್ ಪಾವತಿಗಳನ್ನು ಸ್ವೀಕರಿಸಿದ್ದಾರೆ. ಆದಾಗ್ಯೂ, ಜನಸಂಖ್ಯೆಯ ಗಮನಾರ್ಹ ಭಾಗವು ಇನ್ನೂ ಡಿಜಿಟಲ್ ಪಾವತಿಗಳ ಬಗ್ಗೆ ತಿಳಿದಿಲ್ಲ ಅಥವಾ ತಿಳಿದಿಲ್ಲ. ಅರಿವಿದ್ದರೂ ಅವುಗಳನ್ನು ಬಳಸುವುದು ಎಂದು ಆರ್‌ಬಿಐ ಹೇಳಿಕೆಯಲ್ಲಿ ತಿಳಿಸಿದೆ.

ಡಿಜಿಟಲ್ ಪಾವತಿಯಿಂದ ದೇಶಕ್ಕೆ ಆಗುವ ಪ್ರಯೋಜನಗಳನ್ನು ಪರಿಗಣಿಸಿ, ಹೆಚ್ಚಿನ ಜಾಗೃತಿ ಮೂಡಿಸುವುದು ಮತ್ತು ಡಿಜಿಟಲ್ ಪಾವತಿಗಳ ಬಳಕೆಯನ್ನು ಇನ್ನಷ್ಟು ಹೆಚ್ಚಿಸುವುದು ಅಗತ್ಯವಾಗಿದೆ. ಈ ಉದ್ದೇಶದೊಂದಿಗೆ, ರಿಸರ್ವ್ ಬ್ಯಾಂಕ್ ಆರ್ಥಿಕ ಜಾಗೃತಿಯನ್ನು ಹೆಚ್ಚಿಸುವ ನಿರಂತರ ಪ್ರಯತ್ನಗಳ ಭಾಗವಾಗಿ ಪ್ರತಿ ವರ್ಷವೂ ಉದ್ದೇಶಿತ ಡಿಜಿಟಲ್ ಪಾವತಿಗಳ ಜಾಗೃತಿ ವಾರ (ಡಿಪಿಎಡಬ್ಲ್ಯು)ವನ್ನು ಆಚರಿಸುತ್ತಿದೆ ಎಂದು ಹೇಳಿದೆ.

ಇತ್ತೀಚೆಗೆ 90,000 ಪ್ರತಿಸ್ಪಂದಕರನ್ನು ಒಳಗೊಂಡ ಸಮೀಕ್ಷಾ ವರದಿಯನ್ನು ಆರ್‌ಬಿಐ ಪ್ರಕಟಿಸಿದೆ. ಇದರಲ್ಲಿ 42 ಪ್ರತಿಶತ ಪ್ರತಿಕ್ರಿಯಿಸಿದವರು ಡಿಜಿಟಲ್ ಪಾವತಿಗಳನ್ನು ಬಳಸುವುದನ್ನು ಖಚಿತಪಡಿಸಿದ್ದಾರೆ. ಶೇಕಡ 35 ಜನರು ಡಿಜಿಟಲ್ ಪಾವತಿಗಳ ಬಗ್ಗೆ ತಿಳಿದಿದ್ದರೂ ಬಳಕೆದಾರರಲ್ಲ. ಅದೇ ರೀತಿ, 23 ಪ್ರತಿಶತದಷ್ಟು ಜನರಿಗೆ ಡಿಜಿಟಲ್‌ ಪಾವತಿ ತಿಳಿದಿಲ್ಲ ಎಂದು ಸಮೀಕ್ಷಾ ವರದಿ ಹೇಳಿದೆ.

ಈ ವರ್ಷ, 'ಹರ್ ಪೇಮೆಂಟ್ ಡಿಜಿಟಲ್' (HPD) ಮಿಷನ್ ಅನ್ನು ಪ್ರಾರಂಭಿಸಲಾಗಿದೆ. ಅದು ವಿಷನ್ 2025 ರ ಅವಧಿಯವರೆಗೆ ಕಾರ್ಯನಿರ್ವಹಿಸುತ್ತದೆ ಮತ್ತು ಈ ಬಳಕೆದಾರರಲ್ಲದವರನ್ನು ಡಿಜಿಟಲ್ ಪಾವತಿಗಳ ಬಳಕೆದಾರರಾಗಿ ಪರಿವರ್ತಿಸಲು ಉದ್ದೇಶಿಸಿದೆ. ವಿಷನ್ 2025ಗೆ “ಪ್ರತಿಯೊಬ್ಬರಿಗೂ, ಎಲ್ಲೆಡೆ ಮತ್ತು ಎಲ್ಲ ಸಮಯದಲ್ಲೂ ಇ-ಪಾವತಿ ಮಾಡುವುದು- ಮತ್ತು ದೇಶದ ನಾಗರಿಕರು ಡಿಜಿಟಲ್ ಪಾವತಿಗಳ ಸಾರ್ವತ್ರಿಕ ಅಳವಡಿಕೆ ಉತ್ತೇಜಿಸುವುದಕ್ಕೆ ಹರ್ ಪೇಮೆಂಟ್ ಡಿಜಿಟಲ್ ಸೂಕ್ತ” ಎಂಬ ಉದ್ದೇಶವನ್ನು ಹೊಂದಿದೆ.

ಇದೇ ವಿಚಾರವಾಗಿ ಗರಿಷ್ಠ ಜನರ ಭಾಗವಹಿಸುವಿಕೆಗೆ ಅನುಕೂಲವಾಗುವಂತೆ ವಿವಿಧ ಚಟುವಟಿಕೆಗಳನ್ನು ಕೇಂದ್ರೀಯ ಬ್ಯಾಂಕ್‌ ಆಯೋಜಿಸುತ್ತಿದೆ. ಜನ ಭಗೀದಾರಿ ಕಾರ್ಯಕ್ರಮಗಳು, 75 ಡಿಜಿಟಲ್ ಗ್ರಾಮಗಳ ಕಾರ್ಯಕ್ರಮ, ಯುವಕರೊಂದಿಗೆ ಸಹಭಾಗಿತ್ವ ಮತ್ತು ಹಳ್ಳಿಗಳಲ್ಲಿ ಜಾಗೃತಿ ಸಂದೇಶ ಈ ಚಟುವಟಿಕೆಗಳಲ್ಲಿ ಒಳಗೊಂಡಿವೆ.

ಜನ್ ಭಾಗಿದರಿ ಕಾರ್ಯಕ್ರಮಗಳು ಎಂದರೆ, ಆರ್‌ಬಿಐನ ಪ್ರಾದೇಶಿಕ ಕಚೇರಿಗಳು ಈ ಕಾರ್ಯಕ್ರಮ ಆಯೋಜಿಸುವಲ್ಲಿ ಮುತುವರ್ಜಿವಹಿಸುತ್ತವೆ. ವಾಕಥಾನ್ / ಮ್ಯಾರಥಾನ್ / ರಸಪ್ರಶ್ನೆ ಅಥವಾ ಶಾಲಾ ಅಥವಾ ಕಾಲೇಜುಗಳಲ್ಲಿ ಚಿತ್ರಕಲೆ ಸ್ಪರ್ಧೆಗಳು / ಟೌನ್‌ಹಾಲ್ ಸಭೆಗಳು / ಪ್ಲಾಂಟೇಶನ್ ಡ್ರೈವ್‌ ಮುಂತಾದ ಚಟುವಟಿಕೆಗಳು ಇದರಲ್ಲಿರುತ್ತವೆ.

75 ಡಿಜಿಟಲ್‌ ಗ್ರಾಮಗಳ ಕಾರ್ಯಕ್ರಮದಲ್ಲಿ, ಪೇಮೆಂಟ್‌ ಸಿಸ್ಟಮ್‌ ಆಪರೇಟರ್‌ಗಳು 75ಗ್ರಾಮಗಳನ್ನು ದತ್ತು ತಗೊಂಡು ಅಲ್ಲಿ ಡಿಜಿಟಲ್‌ ಪಾವತಿ ಸಕ್ರಿಯಗೊಳಿಸುವ ಕೆಲಸವನ್ನು ಮಾಡುತ್ತಾರೆ. ಈ ಗ್ರಾಮಗಳಲ್ಲಿ ಡಿಜಿಟಲ್‌ ಬ್ಯಾಂಕಿಂಗ್‌ ಘಟಕಗಳು, ಡಿಜಿಟಲ್‌ ಪೇಮೆಂಟ್ಸ್‌ ಇಕೋಸಿಸ್ಟಮ್‌ಗಳು ಇರಲಿವೆ.

ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ