logo
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  ಗಂಟೆಗೆ 230 ಕಿಮೀ ಸ್ಪೀಡ್​ನಲ್ಲಿದ್ದ ಐಷಾರಾಮಿ ಕಾರು; ಆಯಿಲ್ ಟ್ಯಾಂಕರ್‌ಗೆ ರೋಲ್ಸ್ ರಾಯ್ಸ್ ಡಿಕ್ಕಿ, ಇಬ್ಬರು ಸಾವು

ಗಂಟೆಗೆ 230 ಕಿಮೀ ಸ್ಪೀಡ್​ನಲ್ಲಿದ್ದ ಐಷಾರಾಮಿ ಕಾರು; ಆಯಿಲ್ ಟ್ಯಾಂಕರ್‌ಗೆ ರೋಲ್ಸ್ ರಾಯ್ಸ್ ಡಿಕ್ಕಿ, ಇಬ್ಬರು ಸಾವು

Meghana B HT Kannada

Aug 25, 2023 11:42 AM IST

ರೋಲ್ಸ್ ರಾಯ್ಸ್ ಕಾರು (ಎಡಚಿತ್ರ-ಸಂಗ್ರಹ ಚಿತ್ರ), ಅಪಘಾತದ ಫೋಟೋ (ಬಲ ಚಿತ್ರ)

    • 10 ಕೋಟಿ ರೂಪಾಯಿ ಬೆಲೆಯ ರೋಲ್ಸ್ ರಾಯ್ಸ್ ಫ್ಯಾಂಟಮ್ ಕಾರು ಗಂಟೆಗೆ 230 ಕಿಮೀ ವೇಗದಲ್ಲಿ ಕ್ರಮಿಸಿ ಇಬ್ಬರು ಅಮಾಯಕರ ಸಾವಿಗೆ ಕಾರಣವಾಗಿದೆ. 
ರೋಲ್ಸ್ ರಾಯ್ಸ್ ಕಾರು (ಎಡಚಿತ್ರ-ಸಂಗ್ರಹ ಚಿತ್ರ), ಅಪಘಾತದ ಫೋಟೋ (ಬಲ ಚಿತ್ರ)
ರೋಲ್ಸ್ ರಾಯ್ಸ್ ಕಾರು (ಎಡಚಿತ್ರ-ಸಂಗ್ರಹ ಚಿತ್ರ), ಅಪಘಾತದ ಫೋಟೋ (ಬಲ ಚಿತ್ರ)

ಹರಿಯಾಣ: ಐಷಾರಾಮಿ ರೋಲ್ಸ್ ರಾಯ್ಸ್ ಕಾರು ಓಡಿಸಬೇಕೆಂಬುದು ಎಷ್ಟೋ ಜನರ ಕನಸು. ದಿರ ಬೆಲೆಯೂ ಕೋಟಿಗಟ್ಟಲೆ. ಇದೇ ಕಾರು ಇದೀಗ ಅಪಘಾತಕ್ಕೊಳಗಾಗಿ ಸುಟ್ಟು ಭಸ್ಮವಾಗಿದ್ದು, ಇಬ್ಬರು ಮೃತಪಟ್ಟಿದ್ದಾರೆ.

ಟ್ರೆಂಡಿಂಗ್​ ಸುದ್ದಿ

ತಿರುಮಲ ತಿರುಪತಿ ಶ್ರೀವಾರಿ ಆರ್ಜಿತ ಸೇವಾ ದರ್ಶನ ಟಿಕೆಟ್ ಬಿಡುಗಡೆ, ಆಗಸ್ಟ್‌ ತಿಂಗಳ ಕೋಟಾ ಹಂಚಿಕೆಗೆ ಅರ್ಜಿ ಸಲ್ಲಿಕೆ ಶುರು

Gold Rate Today: ತುಸು ಇಳಿಕೆಯ ಬೆನ್ನಲ್ಲೇ ಭಾನುವಾರ ದುಪ್ಪಟ್ಟು ಏರಿಕೆಯಾಯ್ತು ಬಂಗಾರದ ಬೆಲೆ; ಇಂದು ಬೆಳ್ಳಿ ದರವೂ ಹೆಚ್ಚಳ

ಫೋರ್ಬ್ಸ್‌ 30 ಅಂಡರ್ 30 ಏಷ್ಯಾ ಲಿಸ್ಟ್‌ನಲ್ಲಿ ಐವರು ಬೆಂಗಳೂರಿಗರು, ಯುವ ಸಾಧಕರ ವಿವರ ಹೀಗಿದೆ

ಸಾಯಿ ಬಾಬಾ ಮತ್ತೆ ಹುಟ್ಟಿದ್ರಾ, ಈ ಬಾಲಕ ಅವರ ಪುನರವತಾರವೇ, ಏನಿದು ವಿದೇಶೀಯರ ವರ್ತನೆ! - ವೈರಲ್ ವಿಡಿಯೋ

ಹರಿಯಾಣದ ನುಹ್‌ನ ದೆಹಲಿ- ಮುಂಬೈ ಎಕ್ಸ್‌ಪ್ರೆಸ್‌ವೇನಲ್ಲಿ ಆಯಿಲ್ ಟ್ಯಾಂಕರ್‌ಗೆ ರೋಲ್ಸ್ ರಾಯ್ಸ್ ಫ್ಯಾಂಟಮ್ ಕಾರು ಡಿಕ್ಕಿಹೊಡೆದಿದೆ. ಘಟನೆಯಲ್ಲಿ ಐಷಾರಾಮಿ ಕಾರು ಹಾಗೂ ಟ್ಯಾಂಕರ್ ಸಂಪೂರ್ಣ ಸುಟ್ಟು ಭಸ್ಮವಾಗಿದೆಯಾದರೂ ಮೃಪಟ್ಟಿದ್ದು ಮಾತ್ರ ಟ್ಯಾಂಕರ್​ನಲ್ಲಿದ್ದವರು.

ಮೃತರನ್ನು ಟ್ಯಾಂಕರ್ ಚಾಲಕ ರಾಮಪ್ರೀತ್ ಮತ್ತು ಆತನ ಸಹಾಯಕ ಕುಲದೀಪ್ ಎಂದು ಗುರುತಿಸಲಾಗಿದೆ. ಡಿಕ್ಕಿಯ ರಭಸಕ್ಕೆ ಎರಡೂ ವಾಹನಗಳಿಗೆ ಬೆಂಕಿ ಹೊತ್ತಿಕೊಂಡಿದ್ದು ಟ್ಯಾಂಕರ್​ನಲ್ಲಿದ್ದವರಿಗೆ ತಪ್ಪಿಸಿಕೊಳ್ಳಲು ಸಹಾಯವಾಗಿಲ್ಲ. ರೋಲ್ಸ್ ರಾಯ್ಸ್ ಕಾರಿನಲ್ಲಿದ್ದ ಎಲ್ಲಾ ಐವರನ್ನು ಹಿಂದೆ ಬರುತ್ತಿದ್ದ ಮತ್ತೊಂದು ಕಾರಿನಲ್ಲಿದ್ದ ಅವರ ಸಂಬಂಧಿಕರು ರಕ್ಷಿಸಿದ್ದಾರೆ. ರೋಲ್ಸ್ ರಾಯ್ಸ್ ಕಾರಿನಲ್ಲಿದ್ದ ಐವರ ಪೈಕಿ ಮೂವರು ಗಾಯಗೊಂಡಿದ್ದು, ಗುರುಗಾಂವ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

230 ಕಿಮೀ ಸ್ಪೀಡ್​ನಲ್ಲಿದ್ದ ಕಾರು

10 ಕೋಟಿ ರೂಪಾಯಿ ಬೆಲೆಯ ರೋಲ್ಸ್ ರಾಯ್ಸ್ ಫ್ಯಾಂಟಮ್ ಕಾರು ಅಪಘಾತದ ಸಮಯದಲ್ಲಿ ಗಂಟೆಗೆ 230 ಕಿಮೀ ಸ್ಪೀಡ್​ನಲ್ಲಿತ್ತು. ಅಪಘಾತಕ್ಕೊಳಗಾದ ರೋಲ್ಸ್ ರಾಯ್ಸ್ ಕಾರು ಹಾಗೂ ಅದರ ಹಿಂದಿದ್ದ ಎಲ್ಲಾ ಐದಾರು ಕಾರುಗಳು ಐಷಾರಾಮಿ ಕಾರುಗಳು ಆಗಿದ್ದವು. ಕಾರು ಚಾಲಕನ ಅತಿಯಾದ ವೇಗವೇ ಅಪಘಾತಕ್ಕೆ ಕಾರಣ, ಆದರೆ ಅಪಘಾತಕ್ಕೆ ಟ್ಯಾಂಕರ್ ಚಾಲಕನನ್ನು ಹೊಣೆಗಾರರನ್ನಾಗಿ ಮಾಡಲಾಗುತ್ತಿದೆ. ಪಾಪ ಅವರು ಬಡವರು ಜೀವನೋಪಾಯಕ್ಕಾಗಿ ಕೆಲಸ ಮಾಡುತ್ತಿದ್ದವರು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

ಟ್ಯಾಂಕರ್‌ನಲ್ಲಿದ್ದವರು ಈ ಮಾರ್ಗದಲ್ಲಿ ಪ್ರತಿದಿನ ಸಂಚರಿಸುತ್ತಾರೆ. ಅಪಘಾತ ಸಂಭವಿಸಿದಾಗ ಎರಡೂ ವಾಹನಗಳು ದೆಹಲಿಯಿಂದ ಬರುತ್ತಿದ್ದವು. ಅಪಘಾತದ ಸ್ಥಳದಲ್ಲಿ ಯು-ಟರ್ನ್ ಮಾಡಲು ಜಾಗವಿತ್ತು. ಅಲ್ಲಿ ಟ್ಯಾಂಕರ್​ ಯು-ಟರ್ನ್ ತೆಗೆದುಕೊಳ್ಳುತ್ತಿದ್ದಾಗ ಕಾರು ಡಿಕ್ಕಿ ಹೊಡೆದಿದೆ. ಘಟನೆ ಸಂಬಂಧ ತನಿಖೆ ನಡೆಯುತ್ತಿದೆ ಎಂದು ನುಹ್ ಪೊಲೀಸ್ ಸಹಾಯಕ ಸಬ್ ಇನ್ಸ್‌ಪೆಕ್ಟರ್ ಅಶೋಕ್ ಕುಮಾರ್ ತಿಳಿಸಿದ್ದಾರೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ