logo
ಕನ್ನಡ ಸುದ್ದಿ  /  Nation And-world  /  How To Use Gold Atm: Gold Atm Has Launched In Hyderabad Now You Can Buy Gold At Atms How To Buy Gold At Atm

How to use gold ATM: ಹೈದರಾಬಾದಲ್ಲಿ ಚಿನ್ನದ ಎಟಿಎಂ ಬಂದಾಯಿತು; ATMನಲ್ಲಿ ಚಿನ್ನ ಖರೀದಿಸುವುದು ಹೇಗೆ? ಫೋಟೋ ಮತ್ತು ವಿಡಿಯೋ ಇಲ್ಲಿದೆ ನೋಡಿ

HT Kannada Desk HT Kannada

Dec 08, 2022 10:17 AM IST

ಹೈದರಾಬಾದ್‌ನಲ್ಲಿ ಸ್ಥಾಪನೆ ಆಗಿರುವ ಗೋಲ್ಡ್‌ ಎಟಿಎಂ

  • How to use gold ATM: ಹೈದರಾಬಾದ್‌ನಲ್ಲಿ ಚಿನ್ನದ ಎಟಿಎಂ ಬಂತು. ಈ ಎಟಿಎಂನಲ್ಲಿ ಹಣದ ಬದಲು ಚಿನ್ನ ಲಭ್ಯವಿದೆ. ಇದು ಹೇಗೆ ಕೆಲಸ ಮಾಡುತ್ತೆ, ಇದರಿಂದ ಚಿನ್ನ ಖರೀದಿಸುವುದು ಹೇಗೆ? ಇಲ್ಲಿದೆ ಫೋಟೋ ವರದಿ ಮತ್ತು ಪೂರಕ ವಿಡಿಯೋ. 

ಹೈದರಾಬಾದ್‌ನಲ್ಲಿ ಸ್ಥಾಪನೆ ಆಗಿರುವ ಗೋಲ್ಡ್‌ ಎಟಿಎಂ
ಹೈದರಾಬಾದ್‌ನಲ್ಲಿ ಸ್ಥಾಪನೆ ಆಗಿರುವ ಗೋಲ್ಡ್‌ ಎಟಿಎಂ

ಹೈದರಾಬಾದ್‌ನಲ್ಲಿ ಚಿನ್ನದ ಎಟಿಎಂ ಸ್ಥಾಪನೆ ಆಗಿರುವ ಸುದ್ದಿ ಕಳೆದ ಎರಡು ದಿನಗಳಿಂದ ದೇಶದಲ್ಲಿ ಮನೆಮಾತಾಗಿದೆ. ಇದು ಚಿನ್ನವನ್ನು ಕೊಡುವ ಎಟಿಎಂ. ಹೈದರಾಬಾದ್ ಮೂಲದ ಗೋಲ್ಡ್‌ಸಿಕ್ಕಾ ಪ್ರೈವೇಟ್ ಲಿಮಿಟೆಡ್ ಈ ಚಿನ್ನದ ಎಟಿಎಂ ಅನ್ನು ಸ್ಥಾಪಿಸಿದೆ.

ನಿಮ್ಮ ನಗರದಲ್ಲಿ ಇಂದಿನ ಚಿನ್ನದ ಧಾರಣೆ ಎಷ್ಟಿದೆ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ
ಟ್ರೆಂಡಿಂಗ್​ ಸುದ್ದಿ

Closing Bell: ಮುಂಬೈ ಷೇರುಪೇಟೆಯ ವಾರಾಂತ್ಯದಲ್ಲಿ ಸೆನ್ಸೆಕ್ಸ್ 732 ಅಂಕಗಳ ಕುಸಿತ; ಈ ಪರಿ ಮಾರುಕಟ್ಟೆ ತಲ್ಲಣಕ್ಕೆ ಕಾರಣವೇನು

ತಿರುಮಲ ತಿರುಪತಿ ಜುಲೈ ತಿಂಗಳ ವಿಶೇಷ ಪ್ರವೇಶ ಟಿಕೆಟ್, ಟಿಟಿಡಿ ವೆಬ್‌ಸೈಟ್ ಮೂಲಕ 300 ರೂಪಾಯಿ ಟಿಕೆಟ್‌

ಚೆನ್ನೈನಲ್ಲಿ ವಂದೇ ಮೆಟ್ರೋ ರೈಲು ಅನಾವರಣ; ಭಾರತೀಯ ರೈಲ್ವೆ ಮಹತ್ವದ ಮೈಲಿಗಲ್ಲು, ಜುಲೈನಲ್ಲಿ ಮೊದಲ ಪ್ರಾಯೋಗಿಕ ಸಂಚಾರ

ರಣಬಿಸಿಲಿನಿಂದ ರಕ್ಷಣೆಗೆ ಟ್ರಾಫಿಕ್‌ ಸಿಗ್ನಲ್ ಸಮೀಪ ಹಸಿರು ನೆರಳು ಬಲೆ; ಪುದುಚೇರಿ ಪಿಡಬ್ಲ್ಯುಡಿ ಇಲಾಖೆ ಉಪಕ್ರಮಕ್ಕೆ ವ್ಯಾಪಕ ಮೆಚ್ಚುಗೆ

ಇದು ದೇಶದ ಮೊದಲ ರಿಯಲ್‌ ಟೈಮ್‌ ಚಿನ್ನ ವಿತರಣಾ ಯಂತ್ರ ಎಂದು ಹೇಳಲಾಗುತ್ತಿದೆ. ದೇಶಾದ್ಯಂತ ಈ ಎಟಿಎಂ ಸ್ಥಾಪನೆಯಾಗುವ ನಿರೀಕ್ಷೆ ಇದೆ. ಗ್ರಾಹಕರು ನಗದು ಹಣವನ್ನು ಎಟಿಎಂನಿಂದ ಪಡೆದ ರೀತಿಯಲ್ಲೇ 24 ಕ್ಯಾರೆಟ್‌ ಅಪರಂಜಿ ಚಿನ್ನವನ್ನು ಇದರಿಂದ ಪಡೆಯಬಹುದು.

ಈಗಾಗಲೇ ಜ್ಯೂಸ್‌, ಚಾಕೊಲೇಟ್‌ ವೆಂಡಿಂಗ್‌ ಮಷಿನ್‌ಗಳನ್ನು ಗಮನಿಸಿರಬಹುದು. ಅದೇ ಮಾದರಿಯಲ್ಲಿ ಈಗ ಚಿನ್ನ ಮಾರಾಟವೂ ಶುರುವಾಗಿದೆ ಎಂದು ಬೇಕಾದರೂ ಹೇಳಬಹುದು. ಈ ಎಟಿಎಂನಿಂದ ಚಿನ್ನ ಖರೀದಿಸಲು ಬಯಸುವವರು ತಮ್ಮ ಕ್ರೆಡಿಟ್‌ ಅಥವಾ ಡೆಬಿಟ್‌ ಕಾರ್ಡ್‌ ಬಳಸಿ ಹಣ ಪಾವತಿಸಿದರೆ, ನಗದು ಹಣ ಬರುವ ಜಾಗದಲ್ಲಿ ಚಿನ್ನದ ಚಿಕ್ಕ ಬಿಸ್ಕೆಟ್‌ ಅಥವಾ ನಾಣ್ಯ ಬರುತ್ತದೆ.

ಹೈದರಾಬಾದ್‌ನ ಬೇಗಂಪೇಟ್‌ನ ಅಶೋಕಾ ರಘುಪತಿ ಚೇಂಬರ್ಸ್‌ನಲ್ಲಿ ಕಂಪನಿಯ ಹೆಡ್‌ ಆಫೀಸ್‌ ಇದ್ದು, ಅಲ್ಲಿಯೇ ಈ ಚಿನ್ನದ ಎಟಿಎಂ ಇದೆ. ಇದರ ಬಳಕೆ ಹೇಗೆ ಎಂಬ ಕುತೂಹಲ ಅನೇಕರದ್ದು. ಆ ಕುತೂಹಲ ತಣಿಸುವ ಪ್ರಯತ್ನ ಇದು.

ಚಿನ್ನದ ಎಟಿಎಂ ಹೇಗೆ ಕೆಲಸ ಮಾಡುತ್ತದೆ? ಅಥವಾ ಇದನ್ನು ಬಳಸುವುದು ಹೇಗೆ?

ಗೋಲ್ಡ್‌ ಎಟಿಎಂಗಳುಇತರೆ ಎಟಿಎಂಗಳಂತೆಯೇ ಇರುವ ಮಷಿನ್‌. ಬಳಕೆದಾರರು ತಮ್ಮ ಡೆಬಿಟ್‌, ಕ್ರೆಡಿಟ್‌ ಕಾರ್ಡ್‌ ಬಳಸಿಕೊಂಡು ಗೋಲ್ಡ್‌ ಎಟಿಎಂನಲ್ಲಿ ಚಿನ್ನ ಖರೀದಿ ಮಾಡಬಹುದು.

ಗೋಲ್ಡ್‌ ಎಟಿಎಂನ ಪರದೆ

ಎಟಿಎಂನ ಪರದೆಯ ಮೇಲೆ ಆ ದಿನದ ಚಿನ್ನದ ದರ ಗೋಚರಿಸುತ್ತಿರುತ್ತದೆ. ಬಳಕೆದಾರರು ತಮ್ಮ ಡೆಬಿಟ್‌ ಅಥವಾ ಕ್ರೆಡಿಟ್‌ ಕಾರ್ಡನ್ನು ನಿಗದಿತ ಪ್ರದೇಶದಲ್ಲಿ ಇನ್‌ಸರ್ಟ್‌ ಮಾಡಬೇಕು. ಬಳಿಕ ಕ್ಲಿಕ್‌ ಹಿಯರ್‌ ಟು ಬೈ ಗೋಲ್ಡ್‌ ಎಂಬ ಬರೆಹ ಇರುವ ಜಾಗವನ್ನು ಕ್ಲಿಕ್‌ ಮಾಡಬೇಕು. ಬಳಿಕ PIN ನಮೂದಿಸಬೇಕು. ಅದಾದ ಬಳಿಕ ಎಷ್ಟು ಚಿನ್ನದ ನಾಣ್ಯ ಬೇಕೋ ಅಷ್ಟಕ್ಕೆ ಇರುವ ಮೊತ್ತವನ್ನು ಪಾವತಿಸಬೇಕು. ಇಷ್ಟಾಗುತ್ತಲೇ, ಚಿನ್ನದ ನಾಣ್ಯದ ಪ್ಯಾಕ್‌ ಎಟಿಎಂನಲ್ಲಿ ಹೊರಬರುತ್ತದೆ.

ಗೋಲ್ಡ್‌ ಎಟಿಎಂನಲ್ಲಿ ಕ್ರೆಡಿಟ್‌ ಅಥವಾ ಡೆಬಿಟ್‌ ಕಾರ್ಡ್‌ ಇನ್‌ಸರ್ಟ್‌ ಮಾಡುವ ಜಾಗ

0.5 ಗ್ರಾಂನಿಂದ 100 ಗ್ರಾಂ ತನಕದ ಚಿನ್ನದ ನಾಣ್ಯ, ಬಿಸ್ಕೆಟ್‌ ಲಭ್ಯ

ಗೋಲ್ಡ್‌ ಸಿಕ್ಕಾ ಕಂಪನಿಯ ಉಪಾಧ್ಯಕ್ಷ ಪ್ರತಾಪ್‌ ಅವರು ಎಎನ್‌ಐಗೆ ನೀಡಿದ ಸಂದರ್ಶನದಲ್ಲಿ ಹೇಳಿರುವುದು ಇಷ್ಟು - ಪ್ರತಿಯೊಂದು ಎಟಿಎಂನಲ್ಲೂ 5 ಕಿಲೋ ಚಿನ್ನ ಇರಿಸಬಹುದು. ಇದರ ಮೌಲ್ಯ ಅಂದಾಜು 2ರಿಂದ 3 ಕೋಟಿ ರೂಪಾಯಿ. ಬಳಕೆದಾರರ ಬೇಡಿಕೆಗೆ ಅನುಗುಣವಾಗಿ ಎಟಿಎಂ 0.5 ಗ್ರಾಂನಿಂದ 100 ಗ್ರಾಂ ತನಕದ ಚಿನ್ನದ ಗಟ್ಟಿಗಳನ್ನು ನೀಡುತ್ತದೆ. 0.5 ಗ್ರಾಂ. 1 ಗ್ರಾಂ, 2 ಗ್ರಾಂ, 5 ಗ್ರಾಂ, 10 ಗ್ರಾಂ, 20 ಗ್ರಾಂ, 50 ಗ್ರಾಂ ಮತ್ತು 100 ಗ್ರಾಂಗಳ ಚಿನ್ನದ ನಾಣ್ಯ, ಬಿಸ್ಕೆಟ್‌ ಈ ಎಟಿಎಂಗಳಲ್ಲಿ ಲಭ್ಯ ಇವೆ.

ಗೋಲ್ಡ್‌ ಎಟಿಎಂ ಆದ ಕಾರಣ ಸುರಕ್ಷಾ ಫೀಚರ್ಸ್‌ ಕೂಡ ಬಹಳ ಮುಖ್ಯ. ಇದನ್ನು ವಿವರಿಸಿದ ಪ್ರತಾಪ್‌, ಮಷಿನ್‌ನಲ್ಲಿ ಕ್ಯಾಮೆರಾ ಇದೆ. ಅಲರಾಂ ಸಿಸ್ಟಂ ಅಳವಡಿಸಲಾಗಿದೆ. ಹೊರಗೆ ಕೂಡ ಸಿಸಿಟಿವಿ ಕ್ಯಾಮೆರಾಗಳಿವೆ. ಇದಲ್ಲದೆ, ಗ್ರಾಹಕರ ಅನುಕೂಲಕ್ಕಾಗಿ ಕಸ್ಟಮರ್‌ ಸಪೋರ್ಟ್‌ ಟೀಮ್‌ ಕೂಡ ಕೆಲಸ ಮಾಡುತ್ತದೆ ಎಂದು ಹೇಳಿದರು.

ಚಿನ್ನದ ನಾಣ್ಯ ಹೊರಬಾರದೇ ಇದ್ದರೆ?

ಸಾಮಾನ್ಯ ಎಟಿಎಂಗಳಲ್ಲಿ ಆಗುವಂತೆ ಹಣ ನಮೂದಿಸಿ, ಪಿನ್‌ ಹಾಕಿದ ಮೇಲೆ ನಗದು ಹಣ ಹೊರಬಾರದೆ ಇರುವಂಥ ಸಮಸ್ಯೆ ಗೋಲ್ಡ್‌ ಎಟಿಎಂನಲ್ಲಿ ಇದೆಯಾ? ಅಕಸ್ಮಾತ್‌ ಗೋಲ್ಡ್‌ ಎಟಿಎಂನಲ್ಲಿ ಹಣ ಪಾವತಿಯಾದ ಬಳಿಕ ಚಿನ್ನ ಹೊರಗೆ ಬಾರದೇ ಇದ್ದರೆ ಆಗ, 24 ಗಂಟೆಯ ಒಳಗೆ ಹಣ ಬಳಕೆದಾರರ ಖಾತೆಗೆ ಮರುಪಾವತಿ ಆಗುತ್ತದೆ. ಹಾಗಾಗದೇ ಇದ್ದರೆ ಕಸ್ಟಮರ್‌ ಸಪೋರ್ಟ್‌ಗೆ ದೂರು ಸಲ್ಲಿಸಬೇಕು ಎಂದು ಪ್ರತಾಪ್‌ ವಿವರಿಸಿದ್ದಾರೆ.

ಗೋಲ್ಡ್‌ ಎಟಿಎಂನಲ್ಲಿ ಚಿನ್ನ ಖರೀದಿಗೆ ಇರುವ ಹಂತಗಳಿವು

  • ಗೋಲ್ಡ್‌ ಎಟಿಎಂನಲ್ಲಿ ಡೆಬಿಟ್‌ ಅಥವಾ ಕ್ರೆಡಿಟ್‌ ಅಥವಾ ಸ್ಮಾರ್ಟ್‌ ಕಾರ್ಡ್‌ ಇನ್‌ಸರ್ಟ್‌ ಮಾಡಿ
  • ಚಿನ್ನ ಖರೀದಿಸಲು ಇರುವ ಆಪ್ಶನ್‌ ಆಯ್ಕೆ ಮಾಡಿ
  • ಬಳಿಕ ದರ ಮತ್ತು ಚಿನ್ನದ ಪ್ರಮಾಣ ಆಯ್ಕೆ ಮಾಡಿ
  • ಬಳಿಕ ಸೆಕ್ಯುರಿಟಿ ಪಿನ್‌ ನಮೂದಿಸಿ
  • ಇಷ್ಟಾದ ಬಳಿಕ ಗೋಲ್ಡ್‌ ಕಾಯಿನ್‌ ಎಟಿಎಂನಲ್ಲಿ ಹೊರಬರುತ್ತದೆ.

    ಹಂಚಿಕೊಳ್ಳಲು ಲೇಖನಗಳು