logo
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  News Letter: ಪಿಎಸ್‌ಐ ಮರುಪರೀಕ್ಷೆಯಿಂದ ಹಿಡಿದು ವಿಶ್ವಕಪ್‌ ಕ್ರಿಕೆಟ್ ತನಕ ಗಮನಸೆಳೆದ 7 ವಿಷಯಗಳು

News Letter: ಪಿಎಸ್‌ಐ ಮರುಪರೀಕ್ಷೆಯಿಂದ ಹಿಡಿದು ವಿಶ್ವಕಪ್‌ ಕ್ರಿಕೆಟ್ ತನಕ ಗಮನಸೆಳೆದ 7 ವಿಷಯಗಳು

HT Kannada Desk HT Kannada

Nov 11, 2023 07:08 PM IST

ಪಿಎಸ್‌ಐ ಮರುಪರೀಕ್ಷೆಯಿಂದ ಹಿಡಿದು ವಿಶ್ವಕಪ್‌ ಕ್ರಿಕೆಟ್ ತನಕ ಗಮನಸೆಳೆದ ದಿನದ 7 ವಿಷಯಗಳು

  • ದಿನದ ವಿದ್ಯಮಾನಗಳ ಪೈಕಿ ಹಿಂದೂಸ್ತಾನ್ ಟೈಮ್ಸ್ ಕನ್ನಡ ವೆಬ್‌ತಾಣದಲ್ಲಿ ಈ ದಿನ (ನ.11) ಇದುವರೆಗೆ ಹೆಚ್ಚು ಗಮನಸೆಳೆದ ಸುದ್ದಿ, ವಿಚಾರಗಳ ಅವಲೋಕನ ಒದಗಿಸುವ ಪ್ರಯತ್ನ ಇದು. ಇದರಲ್ಲಿ ಪಿಎಸ್‌ಐ ಮರುಪರೀಕ್ಷೆ, ಕಾಸರಗೋಡಿನ ಅನಂತಪುರ ದೇಗುಲದಲ್ಲಿ ಹೊಸ ಮೊಸಳೆ ಪ್ರತ್ಯಕ್ಷ ದಿಂದ ಹಿಡಿದು ವಿಶ್ವಕಪ್‌ ವಿಚಾರಗಳು ಸೇರಿಕೊಂಡಿವೆ.

ಪಿಎಸ್‌ಐ ಮರುಪರೀಕ್ಷೆಯಿಂದ ಹಿಡಿದು ವಿಶ್ವಕಪ್‌ ಕ್ರಿಕೆಟ್ ತನಕ ಗಮನಸೆಳೆದ ದಿನದ 7 ವಿಷಯಗಳು
ಪಿಎಸ್‌ಐ ಮರುಪರೀಕ್ಷೆಯಿಂದ ಹಿಡಿದು ವಿಶ್ವಕಪ್‌ ಕ್ರಿಕೆಟ್ ತನಕ ಗಮನಸೆಳೆದ ದಿನದ 7 ವಿಷಯಗಳು

ಭಾರತ ಉದ್ದಗಲಕ್ಕೂ ದೀಪಾವಳಿ ಹಬ್ಬದ ಸಂಭ್ರಮ, ಸಡಗರ ನೆಲೆಸತೊಡಗಿದೆ. ಈ ದಿನ ಹಿಂದೂಸ್ತಾನ್ ಟೈಮ್ಸ್ ಕನ್ನಡದಲ್ಲಿ ಇದುವರೆಗೆ ಓದುಗರ ಗಮನಸೆಳೆದ ವಿಚಾರಗಳ ಪೈಕಿ ಏಳನ್ನು ಇಲ್ಲಿ ಒಂದೇ ಕಡೆ ಒದಗಿಸುವ ಪ್ರಯತ್ನ ಇದು.

ಟ್ರೆಂಡಿಂಗ್​ ಸುದ್ದಿ

Gold Rate Today: ಶುಕ್ರವಾರವೂ ಏರಿಕೆಯಾದ ಚಿನ್ನ, ಬೆಳ್ಳಿ ದರ; ದೇಶದಲ್ಲಿಂದು ಆಭರಣ ದರ ಎಷ್ಟಾಗಿದೆ ಗಮನಿಸಿ

ಇಪಿಎಫ್‌ಒ; ಈ 3 ಕಾರಣ ನೀಡಿದ್ರೆ ಇಪಿಎಫ್‌ ಹಣ ಬೇಗ ಹಿಂಪಡೆಯಬಹುದು, ಹಂತ ಹಂತದ ಮಾರ್ಗದರ್ಶಿ ಇಲ್ಲಿದೆ ನೋಡಿ

ಗುವಾಹಟಿ ಬೀದಿಯಲ್ಲಿ ಸೋಷಿಯಲ್ ಮೀಡಿಯಾ ಪ್ರಭಾವಿಯ ಮಂಜುಲಿಕಾ ನೃತ್ಯನಾಟಕ, ದಂಗಾಗಿ ನೋಡುತ್ತ ನಿಂತ ಜನ-ವೈರಲ್ ವಿಡಿಯೋ

Gold Rate Today: ಬಂಗಾರ ಪ್ರಿಯರಿಗೆ ಮತ್ತೆ ನಿರಾಸೆ; ತುಸು ಕಡಿಮೆಯಾಗಿ ಪುನಃ ಹೆಚ್ಚಾದ ಚಿನ್ನದ ದರ, ಬೆಳ್ಳಿ ಬೆಲೆಯೂ ಏರಿಕೆ

ಪಿಎಸ್‌ಐ ಮರುಪರೀಕ್ಷೆಗೆ ಹೈಕೋರ್ಟ್‌ ಸೂಚನೆ ನೀಡಿದ್ದು, ಶೃಂಗೇರಿಯ ಮಾರುತಿ ಬೆಟ್ಟದಲ್ಲಿ ಬೃಹತ್ ಶಂಕರಾಚಾರ್ಯರ ಪ್ರತಿಮೆ ಅನಾವರಣ, ಕಾಸರಗೋಡಿನ ಅನಂತಪುರ ದೇವಸ್ಥಾನದಲ್ಲಿ ಹೊಸ ಮೊಸಳೆ ಕಂಡುಬಂದಿರುವುದು, ದೀಪಾವಳಿ ಪೂಜೆ ವಿಚಾರ, ಪಾಸ್‌ವರ್ಡ್‌ಗೆ ಪರ್ಯಾಯ ಮಾರ್ಗವಾಗುತ್ತಾ ಬಳಕೆಗೆ ಬಂದಿರುವ ಪಾಸ್‌ಕೀ ಎಂದರೇನು ಎಂಬಿತ್ಯಾದಿ ವಿಚಾರಗಳು ಸೇರಿಕೊಂಡಿವೆ.

1.ಪಿಎಸ್‌ಐ ಮರು ಪರೀಕ್ಷೆ ನಡೆಸುವ ಹೈಕೋರ್ಟ್‌ ಆದೇಶ ಮೂಡಿಸಿದ ಸಂಚಲನ

ಪಿಎಸ್‌ಐ ಮರು ಪರೀಕ್ಷೆ ನಡೆಸುವ ಹೈಕೋರ್ಟ್‌ ಆದೇಶ ಪರೀಕ್ಷಾರ್ಥಿಗಳಲ್ಲಿ ಸಂಚಲನ ಮೂಡಿಸಿತ್ತು. ಈ ಅಕ್ರಮ ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ನಡೆದಿತ್ತು. ಅಂದು ಇದನ್ನು ನಡೆಸಿದ್ದ ರುದ್ರಗೌಡ ಪಾಟೀಲ್‌ ಬಂಧನಕ್ಕೆ ಒಳಗಾಗಿ ಬಿಡುಗಡೆಯಾಗಿದ್ದ. ನಂತರ ಇತ್ತೀಚೆಗೆ ನಡೆದ ಕೆಇಎ ಪರೀಕ್ಷಾ ಅಕ್ರಮ ನಡೆಸಿದ್ದ ಪ್ರಮುಖ ಆರೋಪಿ ರುದ್ರಗೌಡ ಪಾಟೀಲ್‌ನನ್ನು ಪೊಲೀಸರು ಮತ್ತೆ ಬಂಧಿಸಿದ್ದರು. ವಿವರ ಓದಿಗೆ - ಪಿಎಸ್‌ಐ ಮರು ಪರೀಕ್ಷೆ ನಡೆಸುವ ಹೈಕೋರ್ಟ್‌ ಆದೇಶ ಸ್ವಾಗತಿಸಿದ ಪ್ರಿಯಾಂಕ್​ ಖರ್ಗೆ; ಇದು ಆಕಾಂಕ್ಷಿಗಳ ಗೆಲುವು ಎಂದ ಸಚಿವ

2. ಶೃಂಗೇರಿ ಮಾರುತಿ ಬೆಟ್ಟದಲ್ಲಿ 32 ಅಡಿ ಶಂಕರಾಚಾರ್ಯರ ಪ್ರತಿಮೆ ಅನಾವರಣ

ಶಾರದಾಂಬೆ ಕ್ಷೇತ್ರ ಚಿಕ್ಕಮಗಳೂರಿನ ಶೃಂಗೇರಿ ಶಾರದಾ ಮಠದಿಂದ 2 ಕಿಲೋ ಮೀಟರ್ ದೂರದ ಮಾರುತಿ ಬೆಟ್ಟದಲ್ಲಿ ಆದಿ ಶಂಕರಾಚಾರ್ಯರ 32 ಅಡಿ ಎತ್ತರದ ಭವ್ಯ ಪ್ರತಿಮೆ ಅನಾವರಣಗೊಂಡಿದೆ. ಪೂರ್ಣ ವರದಿಗೆ - VIDEO ಶೃಂಗೇರಿಯ ಮಾರುತಿ ಬೆಟ್ಟದಲ್ಲಿ 32 ಅಡಿ ಎತ್ತರದ ಶಂಕರಾಚಾರ್ಯರ ಪ್ರತಿಮೆ ಅನಾವರಣ

3 ದೀಪಾವಳಿ ಅಮಾವಾಸ್ಯೆಗೆ ಕುಬೇರ ಲಕ್ಷ್ಮೀ ಪೂಜೆ ಮಾಡುವ ವಿಧಾನ

ದೀಪಾವಳಿಯ ಅಮಾವಾಸ್ಯೆಗೆ ಲಕ್ಷ್ಮಿ ಪೂಜೆ ಮಾಡಲಾಗುತ್ತದೆ. ಇದನ್ನು ಧನಲಕ್ಷ್ಮಿ ಪೂಜೆ ಎಂದು ಕರೆಯುತ್ತೇವೆ ಇತ್ತೀಚಿನ ದಿನಗಳಲ್ಲಿ ಇದೇ ಪೂಜೆ ಕುಬೇರ ಲಕ್ಷ್ಮಿ ಪೂಜೆ ಎಂಬ ಹೆಸರಿನಿಂದ ಜನಪ್ರಿಯವಾಗಿದೆ. ಇದರ ವಿವರ ಓದಿಗೆ - ದೀಪಾವಳಿ ಅಮಾವಾಸ್ಯೆಯಂದು ಕುಬೇರ ಲಕ್ಷ್ಮೀ ಪೂಜೆ ಮಾಡುವ ವಿಧಾನ ಹೀಗಿದೆ; ಅನುಸರಿಸಿ, ಲಕ್ಷ್ಮೀಕೃಪೆಗೆ ಪಾತ್ರರಾಗಿ

4 ದೇವರ ಮೊಸಳೆ ಬಬಿಯಾ ನಿಧನವಾಗಿ 13 ತಿಂಗಳ ಬಳಿಕ ಅನಂತಪುರದಲ್ಲಿ ಹೊಸ ಮೊಸಳೆ ಪ್ರತ್ಯಕ್ಷ

ಕೇರಳದ ಕಾಸರಗೋಡು ಜಿಲ್ಲೆಯ ಅನಂತಪುರ ಶ್ರೀ ಅನಂತಪದ್ಮನಾಭ ದೇವಸ್ಥಾನದಲ್ಲಿ ಬಬಿಯಾ ನಿಧನವಾಗಿ 13 ತಿಂಗಳ ನಂತರ ಹೊಸ ಮೊಸಳೆ ಪ್ರತ್ಯಕ್ಷವಾಗಿದೆ. 2022ರ ಅಕ್ಟೋಬರ್ 9 ರಂದು ಬಬಿಯಾ ಮೊಸಳೆ ನಿಧನವಾಗಿತ್ತು. ಇದರ ವಿವರ ಓದಿಗಾಗಿ - ಬಬಿಯಾ ನಿಧನದ 13 ತಿಂಗಳ ಬಳಿಕ ಅನಂತಪುರ ದೇವಸ್ಥಾನದಲ್ಲಿ ಹೊಸ ಮೊಸಳೆ ಪ್ರತ್ಯಕ್ಷ!

5. ಪಾಸ್‌ವರ್ಡ್‌ಗೆ ಪರ್ಯಾಯ ಮಾರ್ಗವಾಗುತ್ತಾ ಪಾಸ್‌ಕೀ

ಪಾಸ್‌ವರ್ಡ್‌ ಇದು ನಮಗೆಲ್ಲರಿಗೂ ಪರಿಚಿತ ಪದ. ಯಾವುದೇ ಖಾತೆ ಅಂದರೆ ಅಕೌಂಟ್‌ನ ಭದ್ರತೆಗಾಗಿ ಇಟ್ಟುಕೊಳ್ಳುವಂತಹದ್ದು. ಆದರೆ ಇತ್ತೀಚಿನ ದಿನಗಳಲ್ಲಿ ಪಾಸ್‌ಕೀ ಎಂಬ ಪದ ಹೆಚ್ಚು ಜನಪ್ರಿಯವಾಗುತ್ತಿದೆ. ಹಾಗಾದರೆ ಪಾಸ್‌ಕೀ ಎಂದರೇನು? ಇಲ್ಲಿದೆ ನೋಡಿ ವಿವರ - ಪಾಸ್‌ವರ್ಡ್‌ಗೆ ಪರ್ಯಾಯ ಮಾರ್ಗವಾಗುತ್ತಾ ಪಾಸ್‌ಕೀ?

6 ಜೀ ಕುಟುಂಬ ಅವಾರ್ಡ್ಸ್‌ 2023 ವಿಜೇತರು ಯಾರು ಎಂಬ ಕುತೂಹಲವೇ

ಜೀ ಕನ್ನಡದಲ್ಲಿ ವಾರ್ಷಿಕ ಹಬ್ಬದ ಸಂಭ್ರಮ. ಈ ವರ್ಷವೂ ಅದ್ಧೂರಿಯಾಗಿಯೇ ಜೀ ಕುಟುಂಬ ಅವಾರ್ಡ್‌ ಕಾರ್ಯಕ್ರಮ ಶುರುವಾಗಿದೆ. ಇಲ್ಲಿದೆ ಶುಕ್ರವಾರದ ಜೀ ಕುಟುಂಬ ಅವಾರ್ಡ್‌ ವಿಜೇತರ ಲಿಸ್ಟ್‌. - ಜೀ ಕುಟುಂಬ ಅವಾರ್ಡ್ಸ್‌ 2023 ವಿಜೇತರು ಇವರೇ; ಯಾರಿಗೆ ಯಾವ ಪ್ರಶಸ್ತಿ?

7 ವಿಶ್ವಕಪ್‌ ಕ್ರಿಕೆಟ್ ಕುತೂಹಲದ ಘಟ್ಟಕ್ಕೆ, ಪಾಕಿಸ್ತಾನ ಸೆಮಿಫೈನಲ್ ಪ್ರವೇಶಿಸಬಹುದೇ

ವಿಶ್ವಕಪ್ ಕ್ರಿಕೆಟ್‌ನಲ್ಲಿ ಇಂಗ್ಲೆಂಡ್ ಎದುರು ಟಾಸ್ ಸೋತ ಪಾಕಿಸ್ತಾನಕ್ಕೆ ಈಗಲೂ ಸೆಮಿಫೈನಲ್ ತಲುಪುವ ಅವಕಾಶ ಇದೆ. ಆದರೆ ಇದು ಅಸಾಧ್ಯ ಎಂಬುದು ಎಲ್ಲರಿಗೂ ಗೊತ್ತಿರುವ ಸಂಗತಿ. ಹಾಗಾದರೆ ಪಾಕ್​ ಎಷ್ಟು ಓವರ್​​​ಗಳಲ್ಲಿ ಎಷ್ಟು ರನ್ ಚೇಸ್​ ಮಾಡಿದರೆ ಸೆಮೀಸ್ ಪ್ರವೇಶಿಸಲಿದೆ - ಇಂಗ್ಲೆಂಡ್ ಬೃಹತ್ ಮೊತ್ತ; ಪಾಕಿಸ್ತಾನ ಎಷ್ಟು ಓವರ್​​ಗಳಲ್ಲಿ ಎಷ್ಟು ರನ್​ ಚೇಸ್ ಮಾಡಿದರೆ ಸೆಮಿಫೈನಲ್ ಪ್ರವೇಶಿಸಲಿದೆ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ