logo
ಕನ್ನಡ ಸುದ್ದಿ  /  Nation And-world  /  Illegal Dargah In Mumbai's Mahim Demolished After Raj Thackeray Warning

Dargah Demolition: ರಾಜ್ ಠಾಕ್ರೆ ವಾರ್ನಿಂಗ್​ ನೀಡಿದ 24 ಗಂಟೆಯೊಳಗೆ ದರ್ಗಾ ಕೆಡವಿದ ಮುಂಬೈ

HT Kannada Desk HT Kannada

Mar 23, 2023 02:06 PM IST

ದರ್ಗಾ ಕೆಡವಿದ ಮುಂಬೈ ಪಾಲಿಕೆ

  • ನಿನ್ನೆಯಷ್ಟೇ ಮಹಾರಾಷ್ಟ್ರ ನವನಿರ್ಮಾಣ ಸೇನಾ ಮುಖ್ಯಸ್ಥ ರಾಜ್ ಠಾಕ್ರೆ ಅವರು, ಮುಂಬೈನ ಮಾಹಿಮ್ ಸಮುದ್ರದಲ್ಲಿ 'ಅಕ್ರಮ ದರ್ಗಾ' ಕಟ್ಟಲಾಗಿದೆ. ಇದನ್ನು ಕೆಡವದಿದ್ದರೆ ಇದೇ ಜಾಗದಲ್ಲಿ ಗಣಪತಿ ದೇವಸ್ಥಾನ ಕಟ್ಟುತ್ತೇನೆ ಎಂದು ಎಚ್ಚರಿಕೆ ನೀಡಿದ್ದರು. ಇವರು ಎಚ್ಚರಿಕೆ ನೀಡಿದ 24 ಗಂಟೆಗಳೊಳಗಾಗಿ ದರ್ಗಾ ಹಾಗೂ ದರ್ಗಾ ಅತಿಕ್ರಮಿತ ಸ್ಥಳವನ್ನು ಬೃಹನ್​ಮುಂಬೈ ಮಹಾನಗರ ಪಾಲಿಕೆ (ಬಿಎಂಸಿ) ಧ್ವಂಸ ಮಾಡಿದೆ.

ದರ್ಗಾ ಕೆಡವಿದ ಮುಂಬೈ ಪಾಲಿಕೆ
ದರ್ಗಾ ಕೆಡವಿದ ಮುಂಬೈ ಪಾಲಿಕೆ

ಮುಂಬೈ (ಮಹಾರಾಷ್ಟ್ರ): ನಿನ್ನೆಯಷ್ಟೇ ಮಹಾರಾಷ್ಟ್ರ ನವನಿರ್ಮಾಣ ಸೇನಾ ಮುಖ್ಯಸ್ಥ ರಾಜ್ ಠಾಕ್ರೆ ಅವರು, ಮುಂಬೈನ ಮಾಹಿಮ್ ಸಮುದ್ರದಲ್ಲಿ 'ಅಕ್ರಮ ದರ್ಗಾ' ಕಟ್ಟಲಾಗಿದೆ. ಇದನ್ನು ಕೆಡವದಿದ್ದರೆ ಇದೇ ಜಾಗದಲ್ಲಿ ಗಣಪತಿ ದೇವಸ್ಥಾನ ಕಟ್ಟುತ್ತೇನೆ ಎಂದು ಎಚ್ಚರಿಕೆ ನೀಡಿದ್ದರು. ಇವರು ಎಚ್ಚರಿಕೆ ನೀಡಿದ 24 ಗಂಟೆಗಳೊಳಗಾಗಿ ದರ್ಗಾ ಹಾಗೂ ದರ್ಗಾ ಅತಿಕ್ರಮಿತ ಸ್ಥಳವನ್ನು ಬೃಹನ್​ಮುಂಬೈ ಮಹಾನಗರ ಪಾಲಿಕೆ (ಬಿಎಂಸಿ) ಧ್ವಂಸ ಮಾಡಿದೆ.

ಟ್ರೆಂಡಿಂಗ್​ ಸುದ್ದಿ

Lok Sabha Elections: ಲೈಂಗಿಕ ದೌರ್ಜನ್ಯ ಪ್ರಕರಣ ಆರೋಪಿ ಸಂಸದ ಬದಲು ಮಗನಿಗೆ ಟಿಕೆಟ್‌ ನೀಡಿದ ಬಿಜೆಪಿ

20 ವರ್ಷಗಳಲ್ಲಿ 115 ಐಐಟಿ ವಿದ್ಯಾರ್ಥಿಗಳ ಆತ್ಮಹತ್ಯೆ; ಅಗ್ರ ಸ್ಥಾನದಲ್ಲಿರುವ ಮದ್ರಾಸ್‌ನಲ್ಲಿ 26 ಸಾವು, ಆರ್‌ಟಿಐನಿಂದ ಮಾಹಿತಿ ಬಹಿರಂಗ

ತಿರುಮಲ ತಿರುಪತಿ ದೇವಸ್ಥಾನದಲ್ಲಿ ವಿಶೇಷ ಉತ್ಸವಗಳು, ಮೇ ತಿಂಗಳ ಉತ್ಸವ ವೇಳಾಪಟ್ಟಿ ಪ್ರಕಟಿಸಿದ ಟಿಟಿಡಿ

Gold Rate Today: ಚಿನ್ನಾಭರಣ ಪ್ರಿಯರಿಗೆ ಇಲ್ಲಿದೆ ಗುಡ್‌ನ್ಯೂಸ್‌; 10ಗ್ರಾಂ ಚಿನ್ನಕ್ಕೆ 1000 ರೂ ಇಳಿಕೆ, ಬೆಳ್ಳಿ ದರವೂ ಕುಸಿತ

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಮಹಾರಾಷ್ಟ್ರ ಸಚಿವ ದೀಪಕ್ ಕೇಸರ್ಕರ್, ಈಗ ಬಾಳಾಸಾಹೇಬ್ ಠಾಕ್ರೆ ಅವರ ಹಾದಿಯಲ್ಲಿ ನಡೆಯುವ ಸರ್ಕಾರವಿದೆ. ಈ ಹಿಂದೆ ಬಾಳಾಸಾಹೇಬ್ ಠಾಕ್ರೆ ಪ್ರಸ್ತಾಪಿಸಿದ ವಿಷಯವನ್ನು ರಾಜ್ ಠಾಕ್ರೆ ಈಗ ಪ್ರಸ್ತಾಪಿಸಿದ್ದರು. ಕರಾವಳಿ ನಿಯಂತ್ರಣ ವಲಯ (CRZ) ಅಡಿಯಲ್ಲಿ ಧ್ವಂಸ ಪ್ರಕ್ರಿಯೆಗಳನ್ನು ಪ್ರಾರಂಭಿಸಲಾಗಿದೆ ಮತ್ತು ಸಮುದ್ರದಲ್ಲಿ ಯಾವುದೇ ರೀತಿಯ ನಿರ್ಮಾಣವನ್ನು ಮಾಡಬೇಕಾದರೆ ಸಿಆರ್​ಜೆಡ್​ ಅಡಿಯಲ್ಲಿ ಅನುಮತಿ ತೆಗೆದುಕೊಳ್ಳಬೇಕು ಎಂದು ಹೇಳಿದ್ದಾರೆ.

ಕಂದಾಯ ಇಲಾಖೆಯ ಭೂಮಿಯಲ್ಲಿ ಅಕ್ರಮವಾಗಿ ದರ್ಗಾ ನಿರ್ಮಿಸಲಾಗಿದ್ದು, ಅದರ ಸುತ್ತಲಿನ ಪ್ರದೇಶವನ್ನು ಅತಿಕ್ರಮಣ ಮಾಡಲಾಗಿದೆ ಎಂಬ ಮಾಹಿತಿ ಬಂದಿದೆ. ಬೃಹನ್‌ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ (ಬಿಎಂಸಿ) ಮತ್ತು ಮುಂಬೈ ಪೊಲೀಸರ ಸಹಾಯದಿಂದ ಆರು ಸದಸ್ಯರ ತಂಡವನ್ನು ಅದನ್ನು ಕೆಡವಲು ರಚಿಸಲಾಗಿದೆ ಎಂದು ಮುಂಬೈ ಸಿಟಿ ರೆಸಿಡೆಂಟ್​ ಕಲಕ್ಟರ್​ ಸದಾನಂದ ಜಾಧವ್ ತಿಳಿಸಿದ್ದಾರೆ.

ಗುಡಿ ಪಾಡ್ವಾ ಅಂಗವಾಗಿ ನಿನ್ನೆ (ಬುಧವಾರ) ಆಯೋಜಿಸಿದ್ದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ರಾಜ್ ಠಾಕ್ರೆ, "ಮುಂಬೈನ ಮಾಹಿಮ್ ಸಮುದ್ರದಲ್ಲಿ ಒಂದು ದರ್ಗಾ ಕಾಣಿಸುತ್ತಿದೆ. "ಇದು ಯಾರ ದರ್ಗಾ? ಇದು ಮೀನಿನದ್ದೇ? ಇದು ಒಂದೆರಡು ವರ್ಷಗಳ ಹಿಂದೆ ಇರಲಿಲ್ಲ. ಅಕ್ರಮ ನಿರ್ಮಾಣವನ್ನು ತಕ್ಷಣವೇ ನೆಲಸಮ ಮಾಡದಿದ್ದರೆ, ಅದೇ ಸ್ಥಳದಲ್ಲಿ ಬೃಹತ್ ಗಣಪತಿ ದೇವಸ್ಥಾನವನ್ನು ನಾವು ನಿರ್ಮಿಸುತ್ತೇವೆ" ಎಂದು ಎಚ್ಚರಿಕೆ ನೀಡಿದ್ದರು.

"ಮಾಹಿಮ್‌ನಲ್ಲಿರುವ ಮಖ್ದುಮ್ ಬಾಬಾ ಅವರ ದರ್ಗಾದ ಬಳಿ ಈ ಅಕ್ರಮ ದರ್ಗಾ ಇದೆ. ನಾನು ದೇಶದ ಸಂವಿಧಾನವನ್ನು ಪಾಲಿಸುವ ಮುಸ್ಲಿಮರನ್ನು ಕೇಳಲು ಬಯಸುತ್ತೇನೆ: ನೀವು ಇದನ್ನು ಒಪ್ಪುತ್ತೀರಾ? ನಾನು ಫ್ಲೆಕ್ಸ್ ಮಾಡಲು ಬಯಸುವುದಿಲ್ಲ, ಆದರೆ ಅಗತ್ಯವಿದ್ದಾಗ ನಾನು ಅದನ್ನು ಮಾಡುತ್ತೇನೆ" ಎಂದು ರಾಜ್ ಠಾಕ್ರೆ ಹೇಳಿದರು

ರಾಜ್ ಠಾಕ್ರೆ ತೋರಿಸದ ವಿಡಿಯೋದಲ್ಲಿ ಮುಂಬೈನ ಮಾಹಿಮ್ ಕರಾವಳಿಯಲ್ಲಿ ದ್ವೀಪ-ಮಾದರಿಯ ಪ್ರದೇಶದಲ್ಲಿ ದರ್ಗಾವೊಂದನ್ನು ನಿರ್ಮಿಸಲಾಗಿದೆ. ಅಲ್ಲಿಗೆ ಜನರು ಬಂದು ಹೋಗುವುದನ್ನು ಕಾಣಬಹುದಾಗಿದೆ. ಅನೇಕ ಸೋಷುಯಲ್​ ಮೀಡಿಯಾ ಬಳಕೆದಾರರು ರಾಜ್ ಠಾಕ್ರೆ ತೋರಿಸಿದ ದೃಶ್ಯಗಳನ್ನು ಹಂಚಿಕೊಂಡಿದ್ದಾರೆ ಮತ್ತು ಕೆಲವರು ಮಾಹಿಮ್‌ನ ರಹಸ್ಯ ದರ್ಗಾ ಗೂಗಲ್ ನಕ್ಷೆಗಳಲ್ಲಿ ಲಭ್ಯವಿದೆ ಎಂದು ಹೇಳಿದ್ದಾರೆ.

ವಿಭಾಗ

    ಹಂಚಿಕೊಳ್ಳಲು ಲೇಖನಗಳು