logo
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  China Mobiles Ban: ಚೀನಾಗೆ ಮತ್ತೊಂದು ಶಾಕ್; ಭಾರತದಲ್ಲಿ 12,000 ರೂ.ಒಳಗಿನ ಫೋನ್ ಬ್ಯಾನ್!

China Mobiles Ban: ಚೀನಾಗೆ ಮತ್ತೊಂದು ಶಾಕ್; ಭಾರತದಲ್ಲಿ 12,000 ರೂ.ಒಳಗಿನ ಫೋನ್ ಬ್ಯಾನ್!

HT Kannada Desk HT Kannada

Aug 09, 2022 09:18 AM IST

ಭಾರತದಲ್ಲಿ 12,000 ರೂಪಾಯಿಗಿಂತ ಕಡಿಮೆ ಬೆಲೆಯ ಚೀನಾ ಫೋನ್ ಬ್ಯಾನ್ ಮಾಡುವ ಸಾಧ್ಯತೆ ಇದೆ (ಫೋಟೋ-ಸಂಗ್ರಹ)

  • ಚೀನಾದ ಮೊಬೈಲ್ ಕಂಪನಿಗಳಿಗೆ ಕಡಿವಾಣ ಹಾಕಲಿದೆಯೇ ಕೇಂದ್ರ?.12,000 ರೂಪಾಯಿಗಿಂತ ಕಡಿಮೆ ಫೋನ್ ಮಾರಾಟಕ್ಕೆ ನಿರ್ಬಂಧ ಹೇರಲಿದೆಯೇ? ಹೌದು ಎನ್ನುತ್ತಿವೆ ಅಧಿಕೃತ ಮೂಲಗಳು.

ಭಾರತದಲ್ಲಿ 12,000 ರೂಪಾಯಿಗಿಂತ ಕಡಿಮೆ ಬೆಲೆಯ ಚೀನಾ ಫೋನ್ ಬ್ಯಾನ್ ಮಾಡುವ ಸಾಧ್ಯತೆ ಇದೆ (ಫೋಟೋ-ಸಂಗ್ರಹ)
ಭಾರತದಲ್ಲಿ 12,000 ರೂಪಾಯಿಗಿಂತ ಕಡಿಮೆ ಬೆಲೆಯ ಚೀನಾ ಫೋನ್ ಬ್ಯಾನ್ ಮಾಡುವ ಸಾಧ್ಯತೆ ಇದೆ (ಫೋಟೋ-ಸಂಗ್ರಹ)

ನವದೆಹಲಿ: ಗಡಿಯಲ್ಲಿ ಪದೇ ಪದೇ ಕಿರಿಕ್ ಮಾಡುತ್ತಿರುವ ಚೀನಾಗೆ ಭಾರತ ಮತ್ತೊಂದು ಹೊಡೆತ ನೀಡುತ್ತಿದೆ. ಭದ್ರತೆಯ ಕಾರಣದಿಂದಾಗಿ ಚೀನಾದ ಹಲವು ಆ್ಯಪ್ ಗಳನ್ನು ಬಂದ್ ಮಾಡಲಾಗಿತ್ತು. ಇದೀಗ ಮೊಬೈಲ್ ಫೋನ್ ಗಳ ಸರಣಿಯಾಗಿದೆ.

ಟ್ರೆಂಡಿಂಗ್​ ಸುದ್ದಿ

Gold Rate Today: ಶುಕ್ರವಾರವೂ ಏರಿಕೆಯಾದ ಚಿನ್ನ, ಬೆಳ್ಳಿ ದರ; ದೇಶದಲ್ಲಿಂದು ಆಭರಣ ದರ ಎಷ್ಟಾಗಿದೆ ಗಮನಿಸಿ

ಇಪಿಎಫ್‌ಒ; ಈ 3 ಕಾರಣ ನೀಡಿದ್ರೆ ಇಪಿಎಫ್‌ ಹಣ ಬೇಗ ಹಿಂಪಡೆಯಬಹುದು, ಹಂತ ಹಂತದ ಮಾರ್ಗದರ್ಶಿ ಇಲ್ಲಿದೆ ನೋಡಿ

ಗುವಾಹಟಿ ಬೀದಿಯಲ್ಲಿ ಸೋಷಿಯಲ್ ಮೀಡಿಯಾ ಪ್ರಭಾವಿಯ ಮಂಜುಲಿಕಾ ನೃತ್ಯನಾಟಕ, ದಂಗಾಗಿ ನೋಡುತ್ತ ನಿಂತ ಜನ-ವೈರಲ್ ವಿಡಿಯೋ

Gold Rate Today: ಬಂಗಾರ ಪ್ರಿಯರಿಗೆ ಮತ್ತೆ ನಿರಾಸೆ; ತುಸು ಕಡಿಮೆಯಾಗಿ ಪುನಃ ಹೆಚ್ಚಾದ ಚಿನ್ನದ ದರ, ಬೆಳ್ಳಿ ಬೆಲೆಯೂ ಏರಿಕೆ

ಚೀನಾದ ಮೊಬೈಲ್ ಕಂಪನಿಗಳಿಗೆ ಕಡಿವಾಣ ಹಾಕಲಿದೆಯೇ ಕೇಂದ್ರ?12,000 ರೂಪಾಯಿಗಿಂತ ಕಡಿಮೆ ಫೋನ್ ಮಾರಾಟಕ್ಕೆ ನಿರ್ಬಂಧ ಹೇರಲಿದೆಯೇ? ಹೌದು ಎನ್ನುತ್ತಿವೆ ಅಧಿಕೃತ ಮೂಲಗಳು. ಭಾರತವು ಎರಡನೇ ಅತಿದೊಡ್ಡ ಮೊಬೈಲ್ ಮಾರುಕಟ್ಟೆಯಾಗಿದ್ದರೂ, ಈ ಮಾರುಕಟ್ಟೆಯನ್ನು ಕಳೆದುಕೊಳ್ಳುವುದು ಚೀನಾದ ಕಂಪನಿಗಳಿಗೆ ದೊಡ್ಡ ಹೊಡೆತವಾಗಲಿದೆ ಎಂದು ವಿಶ್ಲೇಷಕರು ಹೇಳುತ್ತಾರೆ.

12,000 ($150) ಒಳಗಿನ ಸೆಲ್‌ಫೋನ್‌ಗಳು ದೇಶೀಯವಾಗಿ ಹೆಚ್ಚು ಮಾರಾಟವಾಗಿವೆ. ಈ ಮಾದರಿಗಳನ್ನು ಸ್ಥಳೀಯ ಸಂಸ್ಥೆಗಳು ಸಹ ಉತ್ಪಾದಿಸುತ್ತವೆ, ಅವುಗಳು ಸ್ಥಳೀಯ ಜೋಡಣೆ/ತಯಾರಿಕೆಯನ್ನು ಕೈಗೊಳ್ಳುತ್ತವೆ. ಆದರೆ Xiaomi, Vivo, Oppo ಮತ್ತು Realme ನಂತಹ ಚೀನಾದ ಕಂಪನಿಗಳ ಆಕ್ರಮಣಶೀಲತೆಯಿಂದ, ಲಾವಾ ಮತ್ತು ಮೈಕ್ರೋಮ್ಯಾಕ್ಸ್‌ನಂತಹ ದೇಶೀಯ ಕಂಪನಿಗಳು ಬದುಕಲು ಹೆಣಗಾಡುತ್ತಿವೆ. ಬಿಡಿಭಾಗಗಳು ಸೇರಿದಂತೆ ಫೋನ್‌ಗಳನ್ನು ತಯಾರಿಸಲು ಬೃಹತ್ ಸ್ಥಾವರಗಳನ್ನು ಹೊಂದಿರುವ ಚೀನಾದ ಕಂಪನಿಗಳೊಂದಿಗೆ ಸ್ಪರ್ಧಿಸಲು ಸಾಧ್ಯವಾಗದೆ, ಅನೇಕ ದೇಶೀಯ ಕಂಪನಿಗಳು ತಮ್ಮ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸುತ್ತಿವೆ.

ಅದಕ್ಕಾಗಿಯೇ ದೇಶೀಯ ತಯಾರಕರನ್ನು ರಕ್ಷಿಸುವ ಸಲುವಾಗಿ 12,000 ರೂಪಾಯಿಗಿಂತ ಕಡಿಮೆ ಬೆಲೆಯ ಚೀನಾ ಕಂಪನಿಗಳ ಫೋನ್‌ಗಳ ಮಾರಾಟದ ಮೇಲೆ ನಿರ್ಬಂಧಗಳನ್ನು ಹೇರಲು ಸರ್ಕಾರ ಸಿದ್ಧತೆ ನಡೆಸುತ್ತಿದೆ ಎಂದು ವರದಿಯೊಂದು ಬಹಿರಂಗಪಡಿಸಿದೆ.

ವಿಶ್ವದ ಎರಡನೇ ಅತಿದೊಡ್ಡ ಮೊಬೈಲ್ ಮಾರುಕಟ್ಟೆಯಾಗಿರುವ ನಮ್ಮ ದೇಶದಲ್ಲಿ ಈ ವಿಭಾಗವನ್ನು ಕಳೆದುಕೊಳ್ಳಬೇಕಾದರೆ ಚೀನಾದ ಕಂಪನಿಗಳಿಗೆ ಹೊಡೆತ ಬೀಳೋದು ಅಂತೂ ಗ್ಯಾರೆಂಟಿ. ದೇಶೀಯವಾಗಿ ಮಾರಾಟವಾಗುವ ಈ ಫೋನ್‌ಗಳಲ್ಲಿ 80 ಪ್ರತಿಶತ ಚೀನೀ ಕಂಪನಿಗಳಿಗೆ ಸೇರಿವೆ. ಚೀನಾ ಕಂಪನಿಗಳ ನಡವಳಿಕೆ ಪಾರದರ್ಶಕವಾಗಿಲ್ಲ ಎಂದು ಐಟಿ ಖಾತೆ ರಾಜ್ಯ ಸಚಿವ ರಾಜೀವ್ ಚಂದ್ರಶೇಖರ್ ಇತ್ತೀಚೆಗೆ ಹೇಳಿಕೆ ನೀಡಿರುವುದು ಗಮನಾರ್ಹವಾಗಿದೆ.

ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಈ ನಿಟ್ಟಿನಲ್ಲಿ ವಿಶೇಷ ನೀತಿ ಅನುಸರಿಸುತ್ತದೆಯೇ? ಅಥವಾ ಚೀನಾದ ಕಂಪನಿಗಳಿಗೆ ಈ ವಿಷಯವನ್ನು ಅನೌಪಚಾರಿಕವಾಗಿ ತಿಳಿಸುತ್ತದೆಯೇ ಎಂಬುದನ್ನು ಕಾದು ನೋಡಬೇಕಿದೆ ಎಂದು ಈ ಬೆಳವಣಿಗೆಗೆ ಸಂಬಂಧಿಸಿದ ಮೂಲಗಳು ತಿಳಿಸಿವೆ.

ಮಾರುಕಟ್ಟೆ ಸಂಶೋಧನಾ ಸಂಸ್ಥೆ IDC ಪ್ರಕಾರ, ಚೀನಾ ಕಂಪನಿಗಳು ಇಲ್ಲಿ 12,000 ರೂಪಾಯಿಗಿಂತ ಕಡಿಮೆ ಫೋನ್‌ಗಳನ್ನು ಮಾರಾಟ ಮಾಡುವುದನ್ನು ನಿಷೇಧಿಸಿದರೆ Xiaomi ಸ್ಮಾರ್ಟ್‌ಫೋನ್ ವಹಿವಾಟು ಈ ವರ್ಷ ಶೇ.11-14 (2-2.5 ಕೋಟಿ) ರಷ್ಟು ಕುಸಿಯುವ ಸಾಧ್ಯತೆಯಿದೆ. Xiaomi ಯ 66 ಪ್ರತಿಶತದಷ್ಟು ಸ್ಮಾರ್ಟ್‌ಫೋನ್‌ಗಳು 12,000 ರೂಪಾಯಿಗಿಂತ ಕಡಿಮೆ ಇವೆ.

Xiaomi ಜೊತೆಗೆ Oppo ಮತ್ತು Vivo ಕಂಪನಿಗಳ ಹಣಕಾಸು ಚಟುವಟಿಕೆಗಳ ಮೇಲೆ ಅನುಮಾನಗೊಂಡು ತೆರಿಗೆ ಅಧಿಕಾರಿಗಳು ದಾಳಿ ನಡೆಸಿ ಸಾವಿರಾರು ಕೋಟಿ ರೂಪಾಯಿ ವಶಕ್ಕೆ ಪಡೆದು ನೋಟಿಸ್ ನೀಡಿದ್ದರು. ಈ ಕಂಪನಿಗಳ ವಿರುದ್ಧ ವಿದೇಶಕ್ಕೆ ಅಕ್ರಮವಾಗಿ ನಗದು ವರ್ಗಾವಣೆ ಆರೋಪ ಕೇಳಿಬಂದಿದ್ದು, ಈ ಸಂಬಂಧ ಪ್ರಕರಣಗಳು ದಾಖಲಾಗಿವೆ.

ಈ ಹಿಂದೆ Huawei Technologies Co. ಮತ್ತು ZTE Corp ಗೆ ಸೇರಿದ ಟೆಲಿಕಾಂ ಉಪಕರಣಗಳ ದೇಶೀಯ ಮಾರಾಟವನ್ನು ನಿಷೇಧಿಸಿದಾಗಲೂ ಸರ್ಕಾರವು ಯಾವುದೇ ಔಪಚಾರಿಕ ನೀತಿಯೊಂದಿಗೆ ಬಂದಿರಲಿಲ್ಲ. ಆದರೆ ಇದು ಈ ಸಾಧನಗಳ ಖರೀದಿಯಲ್ಲಿ ಪರ್ಯಾಯಗಳನ್ನು ಪ್ರೋತ್ಸಾಹಿಸಿತ್ತು. ಆ್ಯಪಲ್ ಕಂಪನಿ ತಯಾರಿಸುವ ಐಫೋನ್ ಗಳ ಬೆಲೆ ಹೆಚ್ಚಿರುವುದರಿಂದ ಯಾವುದೇ ತೊಂದರೆ ಇಲ್ಲ. ಸ್ಯಾಮ್‌ಸಂಗ್‌ಗೆ ಯಾವುದೇ ತೊಂದರೆಯಾಗುವುದಿಲ್ಲ.

ಶಿಯೋಮಿ ಷೇರು ಮೌಲ್ಯ ಕುಸಿತ: ಭಾರತದಲ್ಲಿ ಪ್ರವೇಶ ಮಟ್ಟದ ಸ್ಮಾರ್ಟ್‌ಫೋನ್‌ಗಳ ಮಾರಾಟದ ಮೇಲೆ ಸಂಭವನೀಯ ನಿಷೇಧದ ಸುದ್ದಿಯಿಂದಾಗಿ ಹಾಂಗ್ ಕಾಂಗ್ ಷೇರು ಮಾರುಕಟ್ಟೆಯಲ್ಲಿ ಸೋಮವಾರ Xiaomi ಷೇರುಗಳು ಶೇಕಡಾ 3.6 ರಷ್ಟು ಕುಸಿದವು. ಈ ವರ್ಷ ಒಟ್ಟಾರೆ ಷೇರುಗಳ ಮೌಲ್ಯ ಶೇ.35 ರಷ್ಟು ಕುಸಿತ ಕಂಡಂತಾಗಿದೆ.

ವಿಭಾಗ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ