logo
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Karanpur Bypoll: ಕರಣ್‌ಪುರ ಉಪಚುನಾವಣೇಲಿ ಬಿಜೆಪಿ ಸಚಿವ ಸುರೇಂದ್ರ ಪಾಲ್‌ಗೆ 11261 ಮತಗಳ ಸೋಲು; ಸಚಿವ ಸ್ಥಾನಕ್ಕೆ ರಾಜೀನಾಮೆ

Karanpur ByPoll: ಕರಣ್‌ಪುರ ಉಪಚುನಾವಣೇಲಿ ಬಿಜೆಪಿ ಸಚಿವ ಸುರೇಂದ್ರ ಪಾಲ್‌ಗೆ 11261 ಮತಗಳ ಸೋಲು; ಸಚಿವ ಸ್ಥಾನಕ್ಕೆ ರಾಜೀನಾಮೆ

HT Kannada Desk HT Kannada

Jan 09, 2024 07:27 AM IST

ಬಿಜೆಪಿಯ ಸುರೇಂದ್ರ ಪಾಲ್ ಸಿಂಗ್‌ ಟಿಟಿ ಮತ್ತು ಕಾಂಗ್ರೆಸ್‌ನ ರೂಪಿಂದರ್ ಸಿಂಗ್ ಕೊನೂರ್

  • ರಾಜಸ್ಥಾನದಲ್ಲಿ ಆಡಳಿತಾರೂಢ ಬಿಜೆಪಿ ಕರಣಪುರ ಉಪಚುನಾವಣೆಯಲ್ಲಿ ಭಾರಿ ಮುಖಭಂಗಕ್ಕೆ ಒಳಗಾಗಿದೆ. ಡಿಸೆಂಬರ್ 30ರಂದು ಸಚಿವರಾಗಿ ಸಂಪುಟ ಸೇರಿದ್ದ ಸುರೇಂದ್ರ ಪಾಲ್ ಸಿಂಗ್‌ ಟಿಟಿ ಅವರು ಕಾಂಗ್ರೆಸ್ ಅಭ್ಯರ್ಥಿ ರೂಪಿಂದರ್ ಸಿಂಗ್ ಕೊನೂರ್ ವಿರುದ್ಧ 11261 ಮತಗಳ ಸೋಲು ಅನುಭವಿಸಿದ್ದು, ಸಚಿವ ಸ್ಥಾನಕ್ಕೂ ರಾಜೀನಾಮೆ ನೀಡುವ ಪ್ರಸಂಗ ಉಂಟಾಯಿತು. 

ಬಿಜೆಪಿಯ ಸುರೇಂದ್ರ ಪಾಲ್ ಸಿಂಗ್‌ ಟಿಟಿ ಮತ್ತು ಕಾಂಗ್ರೆಸ್‌ನ ರೂಪಿಂದರ್ ಸಿಂಗ್ ಕೊನೂರ್
ಬಿಜೆಪಿಯ ಸುರೇಂದ್ರ ಪಾಲ್ ಸಿಂಗ್‌ ಟಿಟಿ ಮತ್ತು ಕಾಂಗ್ರೆಸ್‌ನ ರೂಪಿಂದರ್ ಸಿಂಗ್ ಕೊನೂರ್ (HT News/ X-TAMIL__Selvan)

ರಾಜಸ್ಥಾನದಲ್ಲಿ ಇತ್ತೀಚೆಗೆ ರಚನೆಯಾದ ಭಜನ್‌ ಲಾಲ್ ಶರ್ಮಾ ನೇತೃತ್ವದ ಬಿಜೆಪಿ ಸರ್ಕಾರದ ಸಚಿವ ಸುರೇಂದ್ರ ಪಾಲ್ ಸಿಂಗ್ ಟಿಟಿ ಅವರಿಗೆ ಕರಣ್‌ಪುರ ಉಪಚುನಾವಣೆಯಲ್ಲಿ ಸೋಲಾಗಿದೆ. ಸಚಿವರಾಗಿ ಅಧಿಕಾರ ಸ್ವೀಕರಿಸಿ 10 ದಿನಗಳಲ್ಲಿ ಸಚಿವ ಸ್ಥಾನಕ್ಕೂ ರಾಜೀನಾಮೆ ನೀಡಬೇಕಾಗಿ ಬಂತು.

ಟ್ರೆಂಡಿಂಗ್​ ಸುದ್ದಿ

ಇಪಿಎಫ್‌ಒ; ಈ 3 ಕಾರಣ ನೀಡಿದ್ರೆ ಇಪಿಎಫ್‌ ಹಣ ಬೇಗ ಹಿಂಪಡೆಯಬಹುದು, ಹಂತ ಹಂತದ ಮಾರ್ಗದರ್ಶಿ ಇಲ್ಲಿದೆ ನೋಡಿ

ಗುವಾಹಟಿ ಬೀದಿಯಲ್ಲಿ ಸೋಷಿಯಲ್ ಮೀಡಿಯಾ ಪ್ರಭಾವಿಯ ಮಂಜುಲಿಕಾ ನೃತ್ಯನಾಟಕ, ದಂಗಾಗಿ ನೋಡುತ್ತ ನಿಂತ ಜನ-ವೈರಲ್ ವಿಡಿಯೋ

Gold Rate Today: ಬಂಗಾರ ಪ್ರಿಯರಿಗೆ ಮತ್ತೆ ನಿರಾಸೆ; ತುಸು ಕಡಿಮೆಯಾಗಿ ಪುನಃ ಹೆಚ್ಚಾದ ಚಿನ್ನದ ದರ, ಬೆಳ್ಳಿ ಬೆಲೆಯೂ ಏರಿಕೆ

SBI FD Rate Hike: ಸ್ಥಿರ ಠೇವಣಿಗಳ ಬಡ್ಡಿದರ ಹೆಚ್ಚಿಸಿದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ; ಎಸ್‌ಬಿಐ ಎಫ್‌ಡಿಗಳ ಬಡ್ಡಿದರ ವಿವರ ಹೀಗಿದೆ

ಕಾಂಗ್ರೆಸ್‌ ಅಭ್ಯರ್ಥಿ ರೂಪಿಂದರ್ ಸಿಂಗ್ ಕೊನೂರ್ ವಿರುದ್ಧ 11261 ಮತಗಳ ಅಂತರದಲ್ಲಿ ಸುರೇಂದ್ರ ಪಾಲ್ ಸಿಂಗ್ ಸೋಲು ಅನುಭವಿಸಿದ್ದಾರೆ. ಕರಣ್‌ಪುರ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯ ಫಲಿತಾಂಶ ಸೋಮವಾರ (ಜ.8) ಪ್ರಕಟವಾಗಿದೆ. ಸೋಲು ಖಚಿತವಾದ ಕೂಡಲೇ ಸುರೇಂದ್ರ ಪಾಲ್ ಸಿಂಗ್ ಟಿಟಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದರು.

ಸುರೇಂದ್ರ ಪಾಲ್ ಸಿಂಗ್ ಟಿಟಿ ಅವರು ಭಜನ್‌ಲಾಲ್ ಶರ್ಮಾ ಸಚಿವ ಸಂಪುಟದಲ್ಲಿ ಡಿಸೆಂಬರ್ 30ರಂದು ಸ್ವತಂತ್ರ ಹೊಣೆಗಾರಿಕೆಯ ಸಚಿವರಾಗಿ ಪ್ರಮಾಣ ಸ್ವೀಕರಿಸಿದ್ದರು. ಅವರಿಗೆ ಕೃಷಿ ಮಾರುಕಟ್ಟೆ, ಕೃಷಿ ನೀರಾವರಿ ಪ್ರದೇಶ ಅಭಿವೃದ್ಧಿ ಮತ್ತು ನೀರಿನ ಉಪಯೋಗ, ಇಂದಿರಾಗಾಂಧಿ ಕಾಲುವೆ, ಅಲ್ಪಸಂಖ್ಯಾತ ವ್ಯವಹಾರಗಳು ಮತ್ತು ವಕ್ಫ್ ಜವಾಬ್ದಾರಿಯನ್ನು ನೀಡಲಾಗಿತ್ತು.

ಸಚಿವರಾದ ನಂತರ ಸುರೇಂದ್ರ ಪಾಲ್ ಸಿಂಗ್ ತಮ್ಮ ಗೆಲುವಿನ ವಿಶ್ವಾಸದಲ್ಲಿದ್ದರು. ಕರಣ್‌ಪುರದ ಮತದಾರರು ಅತ್ಯಂತ ಬುದ್ಧಿವಂತರು. ಅವರು ಚುನಾವಣೆಯಲ್ಲಿ ಗೆಲ್ಲುತ್ತಾರೆ. ಸಿಖ್ ಸಮುದಾಯವನ್ನು ಗೌರವಿಸಿದೆ. ಬಿಜೆಪಿ ಎಲ್ಲಾ 36 ಸಮುದಾಯಗಳನ್ನು ಜೊತೆಯಲ್ಲಿ ಕರೆದುಕೊಂಡು ಹೋಗುತ್ತದೆ ಎಂದು ಸುರೇಂದ್ರ ಪಾಲ್‌ ಹೇಳಿದ್ದರು. ಆದರೆ, ಉಪ ಚುನಾವಣೆ ಗೆಲ್ಲುವುದಕ್ಕೆ ಬಿಜೆಪಿ ಮಾಡಿದ ಈ ತಂತ್ರಗಾರಿಕೆ ಫಲ ನೀಡಿಲ್ಲ.

ರಾಜಸ್ಥಾನದ ವಿಧಾನ ಸಭಾ ಚುನಾವಣೆ ನಡೆಯುತ್ತಿದ್ದಾಗ, ನವೆಂಬರ್ 15ರಂದು ಅಂದಿನ ಶಾಸಕ ಮತ್ತು ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿದ್ದ ಗುರ್ಮೀತ್ ಸಿಂಗ್ ಕೊನೂರ್ (75) ನಿಧನದಿಂದಾಗಿ ಈ ಕ್ಷೇತ್ರದ ಚುನಾವಣೆ ಮುಂದೂಡಲ್ಪಟ್ಟಿತ್ತು. ಕಾಂಗ್ರೆಸ್ ಪಕ್ಷ ಅನುಕಂಪದ ಲೆಕ್ಕಚಾರದಲ್ಲಿ ಈ ಕ್ಷೇತ್ರದಲ್ಲಿ ಗುರ್ಮೀತ್ ಸಿಂಗ್ ಕೊನೂರ್ ಅವರ ಪುತ್ರ ರೂಪಿಂದರ್ ಸಿಂಗ್ ಕೊನೂರ್ ಅವರನ್ನೇ ಕಣಕ್ಕೆ ಇಳಿಸಿತ್ತು. ಬಿಜೆಪಿ ಎರಡು ಸಲ ಶಾಸಕರಾಗಿದ್ದ ಸುರೇಂದ್ರ ಪಾಲ್ ಸಿಂಗ್ ಟಿಟಿ ಅವರನ್ನೇ ಕಣಕ್ಕೆ ಇಳಿಸಿತ್ತು.

ಚುನಾವಣೆ ಪ್ರಕ್ರಿಯೆ ಚಾಲ್ತಿಯಲ್ಲಿರುವಾಗ ಡಿಸೆಂಬರ್ 30ರಂದು ಸುರೇಂದ್ರ ಪಾಲ್ ಸಿಂಗ್ ಅವರನ್ನು ಸಚಿವ ಸಂಪುಟಕ್ಕೆ ಸೇರ್ಪಡೆಗೊಳಿಸಿದ ಕ್ರಮ ವಿವಾದಕ್ಕೀಡಾಗಿತ್ತು. ಚುನಾವಣೆಯ ಸೋಲು - ಗೆಲುವು ನಿರ್ಧಾರವಾಗದೇ ಇದ್ದಾಗ ಸುರೇಂದ್ರ ಪಾಲ್ ಸಿಂಗ್ ಅವರನ್ನು ಸಚಿವರನ್ನಾಗಿ ನೇಮಕ ಮಾಡಲಾಗಿದೆ. ಕಾಂಗ್ರೆಸ್‌ ಪಕ್ಷ ಈ ಕ್ರಮವನ್ನು ಮಾದರಿ ನೀತಿ ಸಂಹಿತೆಯ ಉಲ್ಲಂಘನೆ ಎಂದು ಆರೋಪಿಸಿತ್ತು.

ಕರಣ್‌ಪುರ ಕ್ಷೇತ್ರದ ಉಪಚುನಾವಣೆ ಜನವರಿ 5ರಂದು ನಡೆಯಿತು. ಅದರ ಫಲಿತಾಂಶ ಸೋಮವಾರ (ಜ.8) ಪ್ರಕಟವಾದಾಗ ರೂಪಿಂದರ್ ಸಿಂಗ್ ಕೊನೂರ್ ಅವರು 94,761 ಮತ ಗಳಿಸಿದ್ದರು. ಸುರೇಂದ್ರ ಪಾಲ್ ಸಿಂಗ್ ಟಿಟಿ ಅವರು 83,500 ಮತಗಳಿಸಿದ್ದರು. ಕರಣಪುರ ಚುನಾವಣಾ ಗೆಲುವಿನೊಂದಿಗೆ ರಾಜಸ್ಥಾನದ ವಿಧಾನಸಭೆಯಲ್ಲಿ ಕಾಂಗ್ರೆಸ್ ಪಕ್ಷದ ಸ್ಥಾನ ಬಲ 70ಕ್ಕೆ ಏರಿಕೆಯಾಗಿದೆ. ಬಿಜೆಪಿ ಈಗಾಗಲೇ 115 ಸ್ಥಾನಗಳಲ್ಲಿ ಗೆಲುವು ದಾಖಲಿಸಿತ್ತು.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ